ಬ್ರೇಕಿಂಗ್ ನ್ಯೂಸ್
29-01-24 09:10 pm HK News Desk ಕರ್ನಾಟಕ
ಬೀದರ್, ಜ.29: ಬೀದರ್ ಜಿಲ್ಲಾ ಬಿಜೆಪಿ ನೂತನ ಜಿಲ್ಲಾಧ್ಯಕ್ಷರ ಪದಗ್ರಹಣ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷರ ಅಭಿನಂದನಾ ಸಮಾರಂಭದ ವೇದಿಕೆ ಭಾರೀ ಹೈಡ್ರಾಮಾಗೆ ಸಾಕ್ಷಿಯಾಗಿದೆ. ಬೀದರ್ ಲೋಕಸಭಾ ಕ್ಷೇತ್ರದ ಟಿಕೆಟ್ ಹಾಲಿ ಸಂಸದ ಭಗವಂತ ಖೂಬಾಗೆ ನೀಡಬಾರದೆಂದು ಹೇಳಿ ಮಾಜಿ ಸಚಿವ ಪ್ರಭು ಚೌಹಾಣ್ ರಾಜ್ಯಾಧ್ಯಕ್ಷ ವಿಜಯೇಂದ್ರ ಕಾಲಿಗೆ ಬಿದ್ದು ಹೈಡ್ರಾಮಾ ಮಾಡಿದ್ದಾರೆ.
ಕೆಲ ದಿನಗಳ ಹಿಂದಷ್ಟೇ ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ ತನ್ನ ವಿರುದ್ಧ ಪ್ರಭು ಚೌಹಾಣ್ ಆರೋಪ ಮಾಡಿದ್ದರಿಂದ ಕೇಂದ್ರ ಸಚಿವ ಭಗವಂತ ಖೂಬಾ ಸಭೆಯಿಂದ ಅರ್ಧಕ್ಕೆ ಹೊರನಡೆದಿದ್ದ ಘಟನೆ ನಡೆದಿತ್ತು. ಈಗ ಮತ್ತೆ ಅದೇ ರೀತಿಯ ಘಟನೆ ನಡೆದಿದ್ದು, ಸಾರ್ವಜನಿಕರ ಮುಂದೆಯೆ ಮಾಜಿ ಸಚಿವ ಪ್ರಭು ಚೌಹಾಣ್ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಕಾಲಿಗೆ ಬಿದ್ದು, ಈ ಬಾರಿಯ ಬೀದರ್ ಲೋಕಸಭಾ ಕ್ಷೇತ್ರಕ್ಕೆ ಹೊಸಬರಿಗೆ ಟಿಕೆಟ್ ನೀಡುವಂತೆ ಬೇಡಿಕೆ ಇಟ್ಟಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷರಾಗಿ ಆಯ್ಕೆ ಆದ ಬಳಿಕ ಮೊದಲ ಬಾರಿಗೆ ಬೀದರ್ ಜಿಲ್ಲೆಗೆ ಆಗಮಿಸಿದ್ದ ಬಿವೈ ವಿಜಯೇಂದ್ರ ಅವರನ್ನು ಅದ್ದೂರಿ ಸ್ವಾಗತ ಕೋರಲಾಗಿತ್ತು. ವೇದಿಕೆಯೇರುತ್ತಲೇ ಮಾಜಿ ಸಚಿವ ಪ್ರಭು ಚೌಹಾಣ್, ಅಸಮಧಾನ ಹೊರ ಹಾಕಿದ್ದು, ಕಳೆದ 10 ವರ್ಷಗಳಿಂದ ಸಂಸದರಿಂದ ಕಾರ್ಯಕರ್ತಗೆ ಆನ್ಯಾಯವಾಗಿದೆ. ಕಾರ್ಯಕರ್ತರ ಮೇಲೆಯೇ ಅವರು ಪ್ರಕರಣ ದಾಖಲಿಸಿದ್ದಾರೆ. ಇಂತಹ ನಾಯಕರು ನಮ್ಮ ಬಿಜೆಪಿ ಕಾರ್ಯಕರ್ತರಿಗೆ ಬೇಡಾ, ದಯವಿಟ್ಡು ಈ ಬಾರಿ ಬೀದರ್ ಲೋಕಸಭಾ ಕ್ಷೇತ್ರದ ಟಿಕೆಟ್ ಅನ್ನು ಹೊಸಬರಿಗೆ ನೀಡಿ ಎಂದು ವಿಜಯೇಂದ್ರ ಕಾಲಿಗೆ ಬಿದ್ದು ಮನವಿ ಮಾಡಿದ್ದಾರೆ.
ಪ್ರಭು ಚೌಹಾಣ್ ಹೇಳಿಕೆಗೆ ಕೇಂದ್ರ ಸಚಿವ ಭಗವಂತ ಖೂಬಾ, ನನ್ನ ವಿರುದ್ಧ 10 ವರ್ಷಗಳಿಂದ ಷಡ್ಯಂತ್ರ ಮಾಡುತ್ತಲೇ ಬಂದಿದ್ದಾರೆ. ಆದ್ರೆ ನಾನು ಯಾರಿಗೂ ಕೆಟ್ಟದ್ದು ಬಯಸಿಲ್ಲ. ನನ್ನ ವಿರುದ್ದ ಹಲವರನ್ನ ಎತ್ತಿ ಕಟ್ಟಿ ಟಿಕೆಟ್ ಆಸೆ ಹುಟ್ಟಿಸಿದ್ದಾರೆ. ನನ್ನ ವಿರುದ್ದ ಏನೇ ಅಸಮಧಾನ ಇದ್ರೂ ಅದನ್ನ ವರಿಷ್ಠರ ಮುಂದೆ ಹೇಳಬೇಕು. ನಮ್ಮದು ಶಿಸ್ತಿನ ಪಕ್ಷ ಈ ರೀತಿ ಮಾಡಿದ್ದು ಅಕ್ಷಮ್ಯ ಅಪರಾಧ, ಅವರೇ ತಾಯಿಗೆ ದ್ರೋಹ ಮಾಡಿದ್ದಾರೆ. ಅವರು ಬೆಂಗಳೂರಿನಲ್ಲಿ ಯಾವ ಹೊಟೆಲ್‌ನಲ್ಲಿ ಯಾವ ಕಾಂಗ್ರೆಸ್ ನಾಯಕರ ಜೊತೆ ಸಭೆ ನಡೆಸಿದ್ದಾರೆ ಅನ್ನೋದನ್ನ ಮುಂದಿನ ದಿನಗಳಲ್ಲಿ ವರಿಷ್ಠರಿಗೆ ತಿಳಿಸ್ತೇನೆ ಎಂದು ಖುಬಾ ಟಾಂಗ್ ನೀಡಿದ್ದಾರೆ.
ಇಬ್ಬರು ನಾಯಕರ ಬಗ್ಗೆಯೂ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಗರಂ ಆಗಿದ್ದು, ಇಲ್ಲಿ ಕುಳಿತ ಮುಖಂಡರು ಕಾರ್ಯಕರ್ತರ ಬೆಲೆ ಏನೆಂಬುದನ್ನು ಮೆರೆತಿದ್ದಾರೆ. ಕಾರ್ಯಕರ್ತರು ಗೌರವ ಕೊಟ್ಟು ವೇದಿಕೆ ಮೇಲೆ ಕುಳ್ಳಿರಿಸಿದ್ದಾರೆ ಅನ್ನೋದನ್ನ ಮರೆಯಬಾರದು. ನಾಯಕರು ಹುಟ್ಟಿದ ಮೇಲೆ ಬಿಜೆಪಿ ಪಕ್ಷ ಹುಟ್ಟಿಲ್ಲ. ಬಿಜಪಿ ಪಕ್ಷದ ಮೇಲೆ ನಾಯಕರು ಹುಟ್ಟಿದ್ದಾರೆ. ಈ ಹಿಂದೆ ಬೀದರ್ ಜಿಲ್ಲೆಯಿಂದ ರಾಮಚಂದ್ರ ವೀರಪ್ಪಾ ಅವರು, ಐದು ಬಾರಿ ಸಂಸದರಾಗಿ ಪಕ್ಷಕ್ಕೆ ಭದ್ರ ಬುನಾದಿ ಹಾಕಿದ್ದಾರೆ ಅನ್ನೋದನ್ನ ಯಾವ ನಾಯಕರೂ ಮರೆಯಬಾರದು ಎಂದು ಇಬ್ಬರು ನಾಯಕರ ಬಗ್ಗೆಯೂ ಟಾಂಗ್ ನೀಡಿದರು.
The stage for the swearing-in ceremony of the new district president of bidar district BJP and the felicitation ceremony of the bjp state president witnessed high drama. Former minister Prabhu Chauhan fell at the feet of state president Vijayendra, saying that the ticket for bidar Lok Sabha seat should not be given to sitting MP Bhagwant Khuba.
27-08-25 03:17 pm
HK News Desk
Kannada Anchor Anushree, Marriage, Mangalore:...
27-08-25 02:51 pm
ಚಾಮುಂಡಿ ಬೆಟ್ಟ ಪಕ್ಕಾ ಹಿಂದೂಗಳ ಸ್ವತ್ತು, ಮುಸ್ಲಿಮರ...
27-08-25 12:33 pm
Dk Shivakumar, Chamundi Hill: ಚಾಮುಂಡಿ ಬೆಟ್ಟ ಹ...
27-08-25 11:48 am
R Ashok, Dharmasthala: ಬುರುಡೆ ಕಥೆ ಹೊರಗಡೆ ಬಂದ...
26-08-25 10:47 pm
26-08-25 09:02 pm
HK News Desk
ಜಮ್ಮು ಭಾರಿ ಮಳೆಗೆ ಒಂಬತ್ತು ಮಂದಿ ಬಲಿ ; ಹಲವೆಡೆ ಭೂ...
26-08-25 07:39 pm
Trump Immigrant Population: ಟ್ರಂಪ್ ಸಾಮ್ರಾಜ್ಯದ...
24-08-25 01:47 pm
Actor Vijay, Thalapathy; ಟಿವಿಕೆ ಮುಖ್ಯಸ್ಥ, ನಟ...
23-08-25 04:58 pm
Mp Brijesh Chowta, Mangalore: ಆನ್ಲೈನ್ ಗೇಮಿಂಗ್...
22-08-25 10:00 pm
26-08-25 10:57 pm
Mangalore Correspondent
Vasanth Giliyar Hate speech, Case: ಬೆಳ್ತಂಗಡಿ...
26-08-25 10:18 pm
Dharmasthala case, Chinmaya, Mahesh Shetty: ದ...
26-08-25 10:36 am
Mangalore, Rushabh Rao: ವಿಯಟ್ನಾಂ ಫ್ಯಾಷನ್ ಶೋ ಸ...
25-08-25 10:59 pm
Mangalore, Esyasoft, AI, Bajpe: ಬಜ್ಪೆ ; ಎಸ್ಯಾ...
25-08-25 10:44 pm
26-08-25 10:39 pm
HK News Desk
ಟೆಕ್ನಾಲಜಿಯಲ್ಲಿ ಮುಂದಿರುವ ಅಮೆರಿಕದ ಪ್ರಜೆಗಳನ್ನೇ ಯ...
26-08-25 05:24 pm
ದುಬೈನಲ್ಲಿ ಗಂಡ, ಮೈಸೂರಿನಲ್ಲಿ ಪತ್ನಿಯ ಲವ್ವಿ ಡವ್ವಿ...
25-08-25 08:29 pm
ಶಿಕ್ಷಣ ಸಚಿವ ಮಧು ಬಂಗಾರಪ್ಪ ಪಿಎ ಹೆಸರಲ್ಲಿ ವಸೂಲಿ ;...
25-08-25 07:42 pm
How Did Pastor John Shamine and Criminal Mada...
25-08-25 07:31 pm