ಬ್ರೇಕಿಂಗ್ ನ್ಯೂಸ್
27-01-24 12:27 pm HK News Desk ಕರ್ನಾಟಕ
ಗದಗ, ಜ.27: 2024ರಲ್ಲಿ ಜಗತ್ತಿಗೆ ಒಳ್ಳೆಯ ದಿನಗಳಿಲ್ಲ. ಜಗತ್ತಿನ ಪ್ರಭಾವಿ ಸಂತರೊಬ್ಬರು ಹಾಗೂ ಎರಡು ದೇಶದ ಪ್ರಧಾನಿಗಳಿಬ್ಬರು ಸಾವಿಗೀಡಾಗಲಿದ್ದಾರೆ. ಭೀಕರ ಯುದ್ಧ ಸಂಭವಿಸುವ ಸಾಧ್ಯತೆ ಇದೆ ಎಂದು ಕೋಡಿಮಠದ ಶಿವಾನಂದ ಶಿವಯೋಗಿರಾಜೇಂದ್ರ ಸ್ವಾಮೀಜಿ ಭವಿಷ್ಯ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀಗಳು, 2024ರಲ್ಲಿ ಅಕಾಲಿಕ ಮಳೆ, ಭೂಕಂಪ, ಜಲಕಂಟಕ, ಅಣು ಬಾಂಬ್ ಸ್ಪೋಟದಂತಹ ಸನ್ನಿವೇಶಗಳು ಮತ್ತು ಯುದ್ಧದ ಭೀತಿಯಿಂದ ಜಗತ್ತು ತಲ್ಲಣಗೊಳ್ಳುವಂತಹ ಸ್ಥಿತಿ ನಿರ್ಮಾಣವಾಗಲಿದೆ ಎಂದು ಹೇಳಿದರು. ಭಾರತೀಯ ಸಂಸ್ಕೃತಿ, ಪರಂಪರೆಯಲ್ಲಿ ದೇವರು, ಧರ್ಮ, ಸತ್ಯ, ನಂಬಿಕೆ ವಿಚಾರದಲ್ಲಿ ಜನರು ಪ್ರಬುದ್ಧರಾಗಲಿದ್ದಾರೆ. ದೇಶದ ಹಲವಾರು ಕಡೆಗಳಲ್ಲಿ ದೈವಾಂಶ ಸಂಭೂತರ ಹೆಸರಿನಲ್ಲಿ ದೇವಸ್ಥಾನ, ಗುಡಿ, ಗೋಪುರಗಳನ್ನು ನಿರ್ಮಿಸಿ ಸ್ಮರಣೆ ಮಾಡುವುದು ಹೆಚ್ಚಲಿದೆ. ಆ ದಿಸೆಯಲ್ಲಿ ಶ್ರೀರಾಮನ ದೇವಸ್ಥಾನ ಲೋಕಾರ್ಪಣೆಗೊಂಡಿರುವುದು ಧಾರ್ಮಿಕ ಪ್ರತೀಕವಾಗಿದೆ ಎಂದು ಹೇಳಿದರು.
ಭಾರತೀಯರಲ್ಲಿ ಆಧ್ಯಾತ್ಮಿಕ ಚಿಂತನೆ ಹೆಚ್ಚಿರುವುದು ಒಳ್ಳೆಯ ಬೆಳವಣಿಗೆ. ಶ್ರೀರಾಮನ ಜನ್ಮಸ್ಥಳದಲ್ಲಿ ಬೃಹತ್ ದೇಗುಲ ನಿರ್ಮಾಣಗೊಂಡಿರುವುದು ಒಳ್ಳೆಯ ಸೂಚನೆ ಸಿಕ್ಕಂತಾಗಿದೆ. ಹಾಗಂತ, ರಾಜಕೀಯದಲ್ಲಿ ಧಾರ್ಮಿಕತೆ ಬೆರೆಸುವುದು ಸೂಕ್ತವಲ್ಲ ಎಂದು ಹೇಳಿದರು.
ದೇಶ ಹಾಗೂ ರಾಜ್ಯ ರಾಜಕೀಯ ಕುರಿತು ಮಾತನಾಡಿದ ಶ್ರೀಗಳು, ಸಾಮಾನ್ಯವಾಗಿ ಸಂಕ್ರಾಂತಿ ಹಾಗೂ ಯುಗಾದಿ ನಂತರ ಭವಿಷ್ಯ ಹೇಳಲಾಗುತ್ತದೆ. ಸಂಕ್ರಾಂತಿ ನಂತರ ವ್ಯಾಪಾರ, ವಾಣಿಜ್ಯ ಲಾಭ ನಷ್ಟದ ಬಗ್ಗೆ, ಯುಗಾದಿ ನಂತರ ದೇಶದ ಸಮಗ್ರ ಮಳೆ, ಬೆಳೆ, ಜನರು, ರಾಜಕೀಯದ ಬಗ್ಗೆ ಹೇಳಲಾಗುತ್ತದೆ. ಈಗ ರಾಜಕೀಯ ಕುರಿತು ಹೇಳುವುದು ಸ್ತುತ್ಯರ್ಹವಲ್ಲ. ಯುಗಾದಿ ನಂತರ ರಾಜಕೀಯದಲ್ಲಾಗುವ ಬದಲಾವಣೆಗಳ ಕುರಿತು ಭವಿಷ್ಯ ಹೇಳಲು ಸಾಧ್ಯವಾಗುತ್ತದೆ ಎಂದು ಹೇಳಿದರು.
Dr. Sri Shivananda Shivayogirajendra Swamiji of Kodi Mutt in Gadag has predicted this. Kodisri has predicted the year 2024. There will be untimely rain. There are no good days for the world in 2024.
19-05-25 04:00 pm
HK News Desk
Bjp, Radha Mohan Das Agarwal: 1971ರ ಯುದ್ಧ ಗೆಲ...
17-05-25 01:44 pm
Santosh Lad, Modi, Pak, War: ಮೋದಿ ತಾವೇ ಸುಪ್ರೀ...
16-05-25 10:04 am
Davanagere Sp, Constable Accident: ದಾವಣಗೆರೆಯಲ...
15-05-25 10:16 pm
Yatnal FIR, Mahatma Gandhi; ಮಹಾತ್ಮ ಗಾಂಧಿ ಪಾಕಿ...
15-05-25 11:59 am
19-05-25 02:25 pm
HK News Desk
ಚಾರ್ಮಿನಾರ್ ಬಳಿಯ ಗುಲ್ಜಾರ್ ಹೌಸ್ನಲ್ಲಿ ಬೆಂಕಿ ಅವ...
19-05-25 01:46 pm
Brijesh Chowta, Tejaswi Surya: ಪಾಕ್ ಪ್ರೇರಿತ ಭ...
18-05-25 08:23 pm
ಪಾಕ್ ಪರವಾಗಿ ಬೇಹುಗಾರಿಕೆ ; ಭಾರತೀಯ ಸೇನಾ ಮಾಹಿತಿ ಸ...
17-05-25 10:51 pm
Donald Trump, Asim Munir: ಡೊನಾಲ್ಡ್ ಟ್ರಂಪ್ ಕುಟ...
17-05-25 03:42 pm
19-05-25 05:22 pm
Mangalore Correspondent
Akanksha Suicide, Dharmasthala, Mangalore: ಏರ...
19-05-25 12:31 pm
Akanksha Death, Punjab, Dharmasthala, Mangalo...
18-05-25 12:42 pm
Ullal, U T Khader, Mangalore: ಎರಡು ವರ್ಷವಾದರೂ...
17-05-25 10:09 pm
Mangalore Balmatta Accident, Bus, Video: ನಿಂತ...
17-05-25 08:52 pm
19-05-25 03:35 pm
HK News Desk
Reshma Bariga, FIR, Mangalore; ಆಪರೇಶನ್ ಸಿಂಧೂರ...
18-05-25 07:45 pm
Suhas Shetty, BJP Corporator Shweta Poojary,...
18-05-25 07:35 pm
Bangalore Cigarette Murder, Video Viral: ಕಾರಿ...
17-05-25 05:00 pm
Mangalore Stabbing, Panemangalore, Crime, Att...
16-05-25 11:06 pm