ಬ್ರೇಕಿಂಗ್ ನ್ಯೂಸ್
25-01-24 10:30 pm Bangalore Correspondent ಕರ್ನಾಟಕ
ಬೆಂಗಳೂರು, ಜ.25: ಲೋಕಸಭೆ ಚುನಾವಣೆ ಹೊಸ್ತಿಲಲ್ಲಿ ಕಾಂಗ್ರೆಸ್ ತೊರೆದು ಮರಳಿ ಮಾತೃಪಕ್ಷ ಬಿಜೆಪಿ ಸೇರಿದ ಜಗದೀಶ್ ಶೆಟ್ಟರ್ಗೆ ಸಂಕಷ್ಟ ಎದುರಾಗಿದೆ. ಜಗದೀಶ್ ಶೆಟ್ಟರ್ ಅವರಿಗೆ ಪಕ್ಷಾಂತರ ನಿಷೇಧ ಕಾಯ್ದೆ ಅನ್ವಯ ಆಗುತ್ತದೆ ಅಂತ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದ್ದಾರೆ.
ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ಜಗದೀಶ್ ಶೆಟ್ಟರ್ ರಾಜೀನಾಮೆ ಹಿನ್ನೆಲೆಯಲ್ಲಿ ವಿಧಾನಸೌಧದಲ್ಲಿ ಸಭಾಪತಿ ಬಸವರಾಜ ಹೊರಟ್ಟಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದರು. ನನಗೆ 11:45ಕ್ಕೆ ಜಗದೀಶ್ ಶೆಟ್ಟರ್ ಕರೆ ಮಾಡಿ, ಬಿಜೆಪಿಗೆ ಹೋಗ್ತಿದ್ದೀನಿ ರಾಜಿನಾಮೆ ಕೊಡುತ್ತೇನೆ ಎಂದರು. ನಾನು ರಾಜಿನಾಮೆ ಕಳಿಸಿಕೊಡಿ ಅಂತ ಹೇಳಿದ್ದೇನೆ.
ಆದರೆ, ಶೆಟ್ಟರ್ ಅವರು ರಾಜೀನಾಮೆ ಪತ್ರವನ್ನು ಮೇಲ್ ಮಾಡ್ತೀನಿ ಎಂದಿದ್ದರು. ಇನ್ನೂ ನನಗೆ ಮೇಲ್ ಬಂದಿಲ್ಲ. ಮೇಲ್ ಬಂದರೂ ಅದನ್ನು ಗಣನೆ ತೆಗೆದುಕೊಳ್ಳಲು ಆಗೋದಿಲ್ಲ. ಯಾವುದೇ ಸದಸ್ಯ ನೇರವಾಗಿ ಬಂದು ರಾಜೀನಾಮೆ ಕೊಡಬೇಕಾಗುತ್ತದೆ ಎಂದು ಹೊರಟ್ಟಿ ತಿಳಿಸಿದ್ದಾರೆ.
ರಾಜೀನಾಮೆ ಪಡೆಯುವಾಗ, ಸ್ವ ಇಚ್ಛೆಯಿಂದ ರಾಜೀನಾಮೆ ಕೊಡ್ತಿದ್ದೀರಾ ಅಂತ ಕೇಳ್ತೀವಿ. ಅವರು ಪಕ್ಷ ಬಿಟ್ಟು ಬೇರೆ ಪಕ್ಷ ಹೋಗೋದು ಅವರ ಇಷ್ಟ. ಆದರೆ ಜಗದೀಶ್ ಶೆಟ್ಟರ್ ಅವರು ಈಗಲೂ ಕಾಂಗ್ರೆಸ್ ಸದಸ್ಯರು. ಪಕ್ಷಾಂತರ ನಿಷೇಧ ಕಾಯ್ದೆ ಅನ್ವಯ ಆದರೂ ಆಗಬಹುದು ಎಂದು ಸಭಾಪತಿ ತಿಳಿಸಿದ್ದಾರೆ.
ಜಗದೀಶ್ ಶೆಟ್ಟರ್ ರಾಜೀನಾಮೆ ವಿಚಾರದಲ್ಲಿ ಯಾರಾದ್ರೂ ದೂರು ಕೊಡಬಹುದು. ಇದುವರೆಗು ಯಾವ ಪಕ್ಷದ ನಾಯಕರು ನನ್ನ ಜೊತೆ ಮಾತನಾಡಿಲ್ಲ. ಕಾನೂನು ಪ್ರಕಾರ ಯಾವುದೇ ಸದಸ್ಯ ರಾಜೀನಾಮೆ ಕೊಟ್ಟ ನಂತರವಷ್ಟೇ ಬೇರೆ ಪಕ್ಷಕ್ಕೆ ಹೋಗಬೇಕು ಎಂದು ಹೊರಟ್ಟಿ ಹೇಳಿದ್ದಾರೆ.
Jagadish Shettar, who quit the Congress ahead of the Lok Sabha elections and returned to his parent party BJP, is in trouble. Council Chairman Basavaraj Horatti said that the anti-defection law will be applicable to Jagadish Shettar.
19-05-25 04:00 pm
HK News Desk
Bjp, Radha Mohan Das Agarwal: 1971ರ ಯುದ್ಧ ಗೆಲ...
17-05-25 01:44 pm
Santosh Lad, Modi, Pak, War: ಮೋದಿ ತಾವೇ ಸುಪ್ರೀ...
16-05-25 10:04 am
Davanagere Sp, Constable Accident: ದಾವಣಗೆರೆಯಲ...
15-05-25 10:16 pm
Yatnal FIR, Mahatma Gandhi; ಮಹಾತ್ಮ ಗಾಂಧಿ ಪಾಕಿ...
15-05-25 11:59 am
19-05-25 02:25 pm
HK News Desk
ಚಾರ್ಮಿನಾರ್ ಬಳಿಯ ಗುಲ್ಜಾರ್ ಹೌಸ್ನಲ್ಲಿ ಬೆಂಕಿ ಅವ...
19-05-25 01:46 pm
Brijesh Chowta, Tejaswi Surya: ಪಾಕ್ ಪ್ರೇರಿತ ಭ...
18-05-25 08:23 pm
ಪಾಕ್ ಪರವಾಗಿ ಬೇಹುಗಾರಿಕೆ ; ಭಾರತೀಯ ಸೇನಾ ಮಾಹಿತಿ ಸ...
17-05-25 10:51 pm
Donald Trump, Asim Munir: ಡೊನಾಲ್ಡ್ ಟ್ರಂಪ್ ಕುಟ...
17-05-25 03:42 pm
19-05-25 05:22 pm
Mangalore Correspondent
Akanksha Suicide, Dharmasthala, Mangalore: ಏರ...
19-05-25 12:31 pm
Akanksha Death, Punjab, Dharmasthala, Mangalo...
18-05-25 12:42 pm
Ullal, U T Khader, Mangalore: ಎರಡು ವರ್ಷವಾದರೂ...
17-05-25 10:09 pm
Mangalore Balmatta Accident, Bus, Video: ನಿಂತ...
17-05-25 08:52 pm
19-05-25 03:35 pm
HK News Desk
Reshma Bariga, FIR, Mangalore; ಆಪರೇಶನ್ ಸಿಂಧೂರ...
18-05-25 07:45 pm
Suhas Shetty, BJP Corporator Shweta Poojary,...
18-05-25 07:35 pm
Bangalore Cigarette Murder, Video Viral: ಕಾರಿ...
17-05-25 05:00 pm
Mangalore Stabbing, Panemangalore, Crime, Att...
16-05-25 11:06 pm