ಬ್ರೇಕಿಂಗ್ ನ್ಯೂಸ್
10-01-26 07:57 pm Mangalore Correspondent ಕರಾವಳಿ
ಮಂಗಳೂರು, ಜ.10 : ಉನ್ನತ ಶಿಕ್ಷಣದಲ್ಲಿ ಭಾಷೆಯ ಕಡೆಗಣನೆಗೆ ವಿಶ್ವವಿದ್ಯಾಲಯಗಳು ಹಾಗೂ ಅಲ್ಲಿನ ಅಧ್ಯಾಪಕರು ಕಾರಣ. ವಿಶ್ವವಿದ್ಯಾಲಯಗಳ ಪಠ್ಯಗಳಲ್ಲಿ ಕಥೆ ಹಾಗೂ ಕವಿತೆಗಳ ಸಾರಾಂಶದ ಬಗ್ಗೆ ಹೇಳಲಾಗುತ್ತದೆ ಹೊರತು ಆಳವಾಗಿ ಅಧ್ಯಯನ ಮಾಡುವುದಿಲ್ಲ. ಯಾವುದೇ ಕೃತಿಯ ಬಗ್ಗೆ ಆಳವಾದ ಅಧ್ಯಯನ ಮಾಡಿದಾಗ ಮಾತ್ರ ಅದರ ಮೌಲ್ಯ ತಿಳಿಯುತ್ತದೆ, ಅದರ ಭಾಷೆಯೂ ಅರಿವಿಗೆ ಬರಲು ಸಾಧ್ಯ ಎಂದು ಶತಾವಧಾನಿ ಆರ್. ಗಣೇಶ್ ಹೇಳಿದರು.
ಮಂಗಳೂರು ಲಿಟ್ ಫೆಸ್ಟ್ 8ನೇ ಆವೃತ್ತಿಯ ಉದ್ಘಾಟನಾ ಕಾರ್ಯಕ್ರಮದ ಸಂವಾದ- ಗೋಷ್ಟಿಯಲ್ಲಿ ಅವರು ಮಾತನಾಡಿದರು. ಗೋಷ್ಟಿಯಲ್ಲಿ ಡೀಮ್ಡ್ ಯುನಿವರ್ಸಿಟಿ, ಆಟೊನಾಮಸ್ ಕಾಲೇಜುಗಳಲ್ಲಿ ಭಾಷೆಗಳನ್ನು ಕಲಿಸುವುದು ಕಡಿಮೆಯಾಗುತ್ತಿದೆ, ಸಿಇಟಿ ಅಂಕ ಪಡೆಯುವುದೇ ಮುಖ್ಯವಾಗಿದೆ. ಹೀಗಾದರೆ ಸಾಹಿತ್ಯದಿಂದ ಮೌಲ್ಯ ಕಲಿಯುವುದು ಹೇಗೆ ಎಂದು ಅಜೆಕ್ಕಳ ಗಿರೀಶ್ ಭಟ್ ಪ್ರಶ್ನಿಸಿದಾಗ, ಅನ್ಯಥಾ ಭಾವಿಸಬೇಡಿ ಎಂದು ಹೇಳಿಯೇ ಮಾತು ಆರಂಭಿಸಿದ ಡಾ.ಗಣೇಶ್, 50 ವರ್ಷಗಳ ಹಿಂದೆಯೇ ಈ ರೀತಿಯ ಜಿಜ್ಞಾಸೆ ಇತ್ತು. ಭಾಷೆ ಬೇಕೋ, ವಿಜ್ಞಾನ ಸಾಕೋ ಅಂತ. ವ್ಯವಹಾರಕ್ಕಷ್ಟೆ ಭಾಷೆ ಸಾಕಲ್ಲವೇ ಎನ್ನುವ ಜಿಜ್ಞಾಸೆ. ಆದರೆ ಆಸಕ್ತಿ ಇದ್ದವರು ಭಾಷೆ, ಸಾಹಿತ್ಯ ಕಲಿಯುತ್ತಿದ್ದರು. ಈಗ ವಿಶ್ವವಿದ್ಯಾನಿಲಯಗಳಲ್ಲಿ ಪಂಪ, ಡಿವಿಜಿ, ಕುವೆಂಪು ಕಾವ್ಯಗಳ ಸಾರಾಂಶ ಹೇಳಲಾಗುತ್ತದೆಯೇ ಹೊರತು ಆಳವಾದ ಸಾಹಿತ್ಯ ಅಧ್ಯಯನ ಆಗುವುದಿಲ್ಲ. ಭಾಷೆಯ ಕಲಿಕೆ ವ್ಯವಹಾರಕ್ಕೆ ಸಾಕಲ್ಲ ಎನ್ನುವಷ್ಟರ ಮಟ್ಟಿಗೆ ಸೀಮಿತವಾಗಿದೆ. ಪಂಪನ ಕೃತಿಯನ್ನು ಓದದೆ ಆತನನ್ನು ತಿಳಿಯಲು ಸಾಧ್ಯವಿಲ್ಲ. ವಿವಿಗಳು, ಶಿಕ್ಷಕರು ಕಲಿಸುವುದನ್ನು ಲಾಭದ ದೃಷ್ಟಿಯಿಂದ ನೋಡುವುದು ನಡೆದುಬಂದಿದೆ ಎಂದರು.


ಅದಕ್ಕೂ ಮುನ್ನ ಮಂಗಳೂರು ಲಿಟ್ ಫೆಸ್ಟ್ 8ನೇ ಆವೃತ್ತಿಗೆ ಸರಸ್ವತಿ ರಥ ಎಳೆಯುವ ಮೂಲಕ ವಿಧ್ಯುಕ್ತವಾಗಿ ಚಾಲನೆ ನೀಡಲಾಯಿತು. ಪ್ರಧಾನ ಭಾಷಣಕಾರರಾಗಿ ಮಾತನಾಡಿದ ಮಿಥಿಕ್ ಸೊಸೈಟಿಯ ಗೌರವ ಕಾರ್ಯದರ್ಶಿ ರವಿ ಎಸ್, ʼಸಮಾಜವನ್ನು ರೂಪಿಸುವಲ್ಲಿ ಸಾಹಿತ್ಯದ ಮಹತ್ವದ ಪಾತ್ರವಿದೆ. ಓದು ಮತ್ತು ಚಿಂತನೆಯ ಮೂಲಕ ವ್ಯಕ್ತಿಯ ಬೌದ್ಧಿಕ ಬೆಳವಣಿಗೆ ಸಾಧ್ಯವಾಗುತ್ತದೆ. ಯುವಜನರಲ್ಲಿ ವಿಮರ್ಶಾತ್ಮಕ ಚಿಂತನೆ ಮತ್ತು ಸೃಜನಶೀಲತೆಯನ್ನು ಬೆಳೆಸುವಲ್ಲಿ ಲಿಟ್ ಫೆಸ್ಟ್ಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಪದ್ಮಶ್ರೀ ಡಾ.ಮೀನಾಕ್ಷಿ ಜೈನ್, ಭಾರತ್ ಫೌಂಡೇಶನ್ ಟ್ರಸ್ಟಿ ಕ್ಯಾ. ಬ್ರಿಜೇಶ್ ಚೌಟ ಉಪಸ್ಥಿತರಿದ್ದರು. ಇತ್ತೀಚೆಗೆ ನಿಧನರಾದ ಡಾ. ಎಸ್.ಎಲ್. ಭೈರಪ್ಪ ಮತ್ತು ಡಾ. ವಿನಯ ಹೆಗ್ಡೆ ಅವರಿಗೆ ಗೌರವ ನಮನ ಸಲ್ಲಿಸಲಾಯಿತು. ಲಕ್ಷ್ಮೀ ಮಠದಮೂಳೆ ಅವರು ಪ್ರಾರ್ಥನೆ ಹಾಡಿದರು. ವಿದ್ಯಾ ಎಸ್ ವಂದನಾರ್ಪಣೆ ಮಾಡಿದರು. ಕಾರ್ಯಕ್ರಮವನ್ನು ಶೈನಾ ಡಿಸೋಜಾ ಮತ್ತು ಆರ್ಜೆ ಅಭಿಷೇಕ್ ಶೆಟ್ಟಿ ನಿರೂಪಿಸಿದರು.
ಸಾಹಿತ್ಯದ ಮುಖಾಂತರ ಮೌಲ್ಯಗಳ ಅನ್ವೇಷಣೆ
ಉದ್ಘಾಟನಾ ಗೋಷ್ಠಿಯಲ್ಲಿ ಸಾಹಿತ್ಯದ ಮುಖಾಂತರ ಮೌಲ್ಯಗಳ ಅನ್ವೇಷಣೆ ಎಂಬ ವಿಷಯದ ಕುರಿತು ಅಜಕ್ಕಳ ಗಿರೀಶ್ ಭಟ್ ಹಾಗೂ ಶತಾವಧಾನಿ ಆರ್ ಗಣೇಶ್ ಸಂವಾದ ನಡೆಸಿದರು. ಮೌಲ್ಯಗಳ ಬಗ್ಗೆ ಮಾತನಾಡಿದ ಆರ್. ಗಣೇಶ್, ‘ಅಖಂಡ ಭಾರತದ ಸಂವೇದನೆಯಲ್ಲಿ ಮೌಲ್ಯ ಎನ್ನುವಂಥದ್ದು ಸಾಹಿತ್ಯ ಮಾತ್ರವಲ್ಲದೆ ಎಲ್ಲಾ ಕಲೆಗಳಲ್ಲೂ ಇದೆ. ಸಾಹಿತ್ಯದ ಮುಖಾಂತರ ಬರುವ ಮೌಲ್ಯಗಳು ಧ್ವನಿ ಹಾಗೂ ರಸ ಮಾರ್ಗದಲ್ಲಿ ಇರುತ್ತವೆ. ಸಂವೇದನೆಯನ್ನು ಬುದ್ಧಿಯ ಮೂಲಕ ಹೆಚ್ಚು ಮಾಡಲು ಆಗವುದಿಲ್ಲ, ಅದಕ್ಕೆ ಭಾವ ಬೇಕುʼ ಎಂದು ಹೇಳಿದರು.
ಸರಸ್ವತಿ ರಥ ಎಳೆದು ಲಿಟ್ ಫೆಸ್ಟ್ ಚಾಲನೆ
ಮಂಗಳೂರು ಲಿಟ್ ಫೆಸ್ಟ್ ನ 8ನೇ ಆವೃತ್ತಿಗೆ ಹೊತ್ತಿಗೆಗಳು ತುಂಬಿದ್ದ ಸರಸ್ವತಿ ರಥವನ್ನು ಎಳೆಯುವ ಮೂಲಕ ವಿಧ್ಯುಕ್ತ ಚಾಲನೆ ನೀಡಿದ್ದು ವಿಶೇಷ. ಭಾಗವಹಿಸಿದ್ದ ಅತಿಥಿ ಗಣ್ಯರು ವೇದಿಕೆಗೆ ಸರಸ್ವತಿ ರಥವನ್ನು ಎಳೆದುಕೊಂಡು ಬರುವ ಮೂಲಕ ಮಂಗಳೂರು ಲಿಟ್ ಫೆಸ್ಟ್ ಉದ್ಘಾಟಿಸಿದ್ದು ನೆರೆದವರ ಗಮನ ಸೆಳೆಯಿತು.
Shatavadhani R. Ganesh expressed concern over the declining importance given to language studies in deemed universities and autonomous colleges, stating that higher education institutions and teachers are responsible for this neglect. Speaking at the inaugural discussion of the 8th edition of the Mangaluru Literature Festival, he said literature is often reduced to summaries of stories and poems rather than being studied in depth. According to him, only a deep and serious engagement with literary works helps students understand their true values and the richness of language.
10-01-26 10:28 pm
HK News Desk
"ಡ್ಯಾಡಿ ಈಸ್ ಹೋಮ್" ಎಐ ವಿಡಿಯೋ ರಿಲೀಸ್ ; ರಾಜ್ಯ ರಾ...
10-01-26 04:29 pm
ಚಾರ್ಮಾಡಿ ಘಾಟಿಯಲ್ಲಿ ರಸ್ತೆಗೆ ಅಡ್ಡ ನಿಂತ ಒಂಟಿ ಸಲಗ...
10-01-26 03:00 pm
Purushottam Bilimale, Legal Battle Against Ma...
10-01-26 01:17 pm
ಮಲಯಾಳ ಭಾಷಾ ಮಸೂದೆಯಿಂದ ಕಾಸರಗೋಡು ಕನ್ನಡಿಗರಿಗೆ ಧಕ್...
09-01-26 04:42 pm
10-01-26 03:22 pm
HK News Desk
ಶಬರಿಮಲೆ ಚಿನ್ನ ಕಳವು ಪ್ರಕರಣ ; ಪ್ರಧಾನ ತಂತ್ರಿ ಕಂಠ...
09-01-26 11:00 pm
ಟ್ರಂಪ್ ಕೈಗಳು ಸಾವಿರಾರು ಇರಾನಿಗರ ರಕ್ತದಿಂದ ಒದ್ದೆಯ...
09-01-26 08:30 pm
ರಷ್ಯಾ ಹಡಗು ವಶಕ್ಕೆ ಪಡೆದ ಬೆನ್ನಲ್ಲೇ ಅಮೆರಿಕಕ್ಕೆ ತ...
08-01-26 11:21 pm
ರಷ್ಯಾ ತೈಲ ಖರೀದಿ ನಿಲ್ಲಿಸಲು ಅಮೆರಿಕ ಹೊಸ ಮಸೂದೆ ;...
08-01-26 05:11 pm
11-01-26 12:56 pm
Mangaluru Staffer
Cm Siddaramaiah, Mangalore: ಕರಾವಳಿ ಪ್ರವಾಸೋದ್ಯ...
10-01-26 10:45 pm
ಡೀಮ್ಡ್ ಯುನಿವರ್ಸಿಟಿಗಳಲ್ಲಿ ಭಾಷೆಯ ಅವಜ್ಞೆ ; ಸಾಹಿತ...
10-01-26 07:57 pm
Dr Meenakshi Jain at Mangaluru Lit Fest: ಉಪನಿ...
10-01-26 07:21 pm
ಕರಾವಳಿ ಟೂರಿಸಂ ಅಭಿವೃದ್ಧಿಗೆ ಜನಪ್ರನಿಧಿಗಳು, ಉದ್ಯಮ...
10-01-26 06:23 pm
07-01-26 10:45 pm
Bangalore Correspondent
ಸಮಾಧಿಯಲ್ಲಿ ಡ್ರಗ್ಸ್ ಬಚ್ಚಿಟ್ಟು ಮಾರಾಟ ; 3.5 ಕೋಟಿ...
06-01-26 07:04 pm
Kanachur Hospital, POSCO, Doctor: ಚಿಕಿತ್ಸೆಗೆ...
06-01-26 02:24 pm
ಯಲ್ಲಾಪುರ ; ಮದ್ವೆಗೆ ಒಪ್ಪಿಲ್ಲವೆಂದು ನಡುರಸ್ತೆಯಲ್ಲ...
04-01-26 11:02 pm
Ganja from Bihar: ಬಿಹಾರದಿಂದ ರೈಲಿನಲ್ಲಿ ಗಾಂಜಾ ತ...
04-01-26 06:15 pm