ಬ್ರೇಕಿಂಗ್ ನ್ಯೂಸ್
16-01-24 03:28 pm HK News Desk ಕರ್ನಾಟಕ
ಕಾರವಾರ, ಜ.16: ಪ್ರಧಾನಿ ಮೋದಿ ಅವರನ್ನು ಏಕವಚನದಲ್ಲಿ ಸಿದ್ದರಾಮಯ್ಯ ಮಾತನಾಡಿದ್ದು ಸರಿಯಾಗಿದ್ರೆ, ನಾನು ಮಾತನಾಡಿದ್ದೂ ಸರಿ. ಯಾರು ನನ್ನನ್ನು ಒಪ್ಕೊತಾರೋ ಬಿಡ್ತಾರೊ ಗೊತ್ತಿಲ್ಲ, ಆ ದೇವರು ಒಪ್ಕೊಳ್ತಾನೆ. ಹಿಂದೂ ಸಮಾಜದ ಜನರು ಒಪ್ಕೊಳ್ಳತ್ತೆ ಎಂದು ಸಂಸದ ಅನಂತ ಕುಮಾರ ಹೆಗಡೆ ಹೇಳಿದ್ದಾರೆ.
ವಿವಾದಾತ್ಮಕ ಹೇಳಿಕೆ ಬಿಜೆಪಿ ನಾಯಕರಿಂದಲೇ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಅನಂತ ಹೆಗಡೆ ಸಮರ್ಥನೆ ನೀಡಿದ್ದಾರೆ. ನಾನು ಹೇಳಿದಷ್ಟನ್ನು ರೆಕಾರ್ಡ್ ಮಾಡಿಕೊಳ್ಳಿ ಹಂಗೆ ಹಾಕಿಕೊಳ್ಳಿ. ನೀವು ನನ್ನ ಹೇಳಿಕೆಯನ್ನು ಕಟ್ ಮಾಡಿದ್ರೆ ನಾನು ನನ್ನ ಸೋಶಿಯಲ್ ಮಿಡಿಯಾದಲ್ಲಿ ಬಿಡ್ತೇನೆ ಎಂದು ಆರಂಭದಲ್ಲೇ ಮಾಧ್ಯಮಗಳಿಗೆ ಸೂಚನೆ ನೀಡಿದ ಹೆಗಡೆ, ಆನಂತರ ತನ್ನ ಹೇಳಿಕೆಯನ್ನು ಸಮರ್ಥಿಸಿದ್ದಾರೆ. ನನ್ನ ಹೇಳಿಕೆಯನ್ನು ಖಂಡಿಸುವುದು ಸಹಜ. ಇದು ನನ್ನ ವೈಯಕ್ತಿಕ ಹೇಳಿಕೆ, ಇದು ಪಕ್ಷದ ಹೇಳಿಕೆ ಅಲ್ಲ, ಇದು ನನ್ನ ವೈಯಕ್ತಿಕ ಹೇಳಿಕೆ. ವಿಜಯೇಂದ್ರ ಹೇಳಿರುವ ಮಾತು ಸರಿ ಇದೆ. ಸಂಸ್ಕೃತಿ ಬಗ್ಗೆ ಸಿದ್ಧರಾಮಯ್ಯ ಅವರೇ ನನ್ನ ಎದುರು ಬಂದು ಮಾತನಾಡಲಿ. ಇದರ ಎಲ್ಲದರ ಬಗ್ಗೆ ನಾವಿಬ್ರೂ ಕುತ್ಕೊಂಡು ಜನರ ಮುಂದೆ ಚರ್ಚೆ ಮಾಡೋಣ. ಎಲ್ಲೋ ಕುತ್ಕೊಂಡು ಸಭೆಯಲ್ಲಿ ಮಾತನಾಡುವುದು ಸರಿ ಅಲ್ಲ ಎಂದು ಹೇಳಿದರು.
ನಮ್ಮ ಪ್ರಧಾನಿ ಮೋದಿ, ಅಮಿತ್ ಶಾ ಬಗ್ಗೆ ಯಾರೆಲ್ಲಾ ಏನೇನ್ ಮಾತಾಡಿದಾರೆ ಹೇಳಬೇಕಾ.?ಶರದ್ ಪವಾರ್ ಮೋದಿಯರನ್ನು ಹಿಟ್ಲರ್ ಅಂತಾ ಕರೆದ್ರು. ಕಾಂಗ್ರೆಸಿನ ಬಹುತೇಕ ನಾಯಕರು ಇವರನ್ನು ಹಿಟ್ಲರ್ ಎಂದು ಕರೆದರು. ಇದಕ್ಕೆಲ್ಲಾ ಮಿಡಿಯಾದಲ್ಲೇ ದಾಖಲೆಗಳು ಇವೆ. ಸಿಎಂ ಸಿದ್ಧರಾಮಯ್ಯ ಮೋದಿಯವರನ್ನು ಏಕವಚನದಲ್ಲಿ ಮಾಸ್ ಮರ್ಡರರ್ ಎಂದು ಕರೆದರು. ಇದು ನನ್ನ ಪ್ರಧಾನಿ, ನನ್ನ ದೇಶ ನನ್ನ ಧರ್ಮದ ಬಗ್ಗೆ ಹೇಳಿರುವ ಹೇಳಿಕೆಯಲ್ಲಿ ಯಾವುದೇ ಹಿಂಜರಿಕೆ ಇಲ್ಲ.
ದಿಗ್ವಿಜಯ ಸಿಂಗ್ ಮೋದಿಯವರನ್ನ ರಾವಣ ಅಂತಾ ಕರೆದ್ರು. ಜಯರಾಂ ರಮೇಶ್ ಭಸ್ಮಾಸುರ ಅಂತಾ ಕರೆದ್ರು. ಮನೀಶ್ ಅಯ್ಯರ್ ವಿಷ ಸರ್ಪ ಅಂತಾ ಕರೆದ್ರು. ಇನ್ನೂ ಏನ್ರಿ ಹೇಳಿಸಿಕೊಳ್ಳಬೇಕು ನಾವು..?ಕಾಂಗ್ರೆಸ್ ನಾಯಕರು ಎಲ್ರೂ ನನ್ನ ಮುಂದೆ ಬಂದು ಸಂಸ್ಕೃತಿ ಬಗ್ಗೆ ಚರ್ಚೆ ಮಾಡಲಿ. ಸಭ್ಯತೆ ಅಂದ್ರೆ ಏನು ಅಂತಾ ನಾನು ಪಾಠ ಮಾಡ್ತೀನಿ. ಏನೂ ಮಾತನಾಡಬೇಕು ಅಂತಾ ನಾನು ಹೇಳ್ತಿನಿ. ಯಾರಿಗೆ ಯಾವ ಭಾಷೆಯಲ್ಲಿ ಹೇಗೆ ಮಾತಾಡಬೇಕು ಹಾಗೆ ಮಾತಾಡಬೇಕು
ಅವರಿಗೊಂದು ನ್ಯಾಯ ನಮಗೊಂದು ನ್ಯಾಯನಾ..? ಅದೆಲ್ಲಾ ನಮಗೆ ಗೊತ್ತಿಲ್ಲ, ಯಾರಿಗೆ ಹೇಗೆ ಮಾತಾಡಬೇಕು ನಮಗೆ ಗೊತ್ತು. ರಾಮ ಮಂದಿರ ಬಗ್ಗೆ ಬಗ್ಗೆ ಎಷ್ಟು ಅವಹೇಳನಕಾರಿಯಾಗಿ ಮಾತಾಡಿದ್ರು. ಎಷ್ಟು ಕೀಳಾಗಿ ಹಿಂದೂ ಸಮಾಜದ ಬಗ್ಗೆ ಮಾತಾಡಿದ್ರು. ಹಿಂದೂ ಸಮಾಜ ಅಂದ್ರೆ ಬೇವರ್ಸಿ ಸಮಾಜಾನಾ..? 20 % ಮತಕ್ಕಾಗಿ ಎಷ್ಟೊಂದು ಜೊಲ್ಲೂ ಸುರಿಸುತ್ತಾ ಮಾತನಾಡುತ್ತಾರೆ. 80 ರಿಂದ 85% ಇರುವ ಹಿಂದೂ ಸಮಾಜದ ಬಗ್ಗೆ ನಿಮಗೆ ಗೌರವ ಯಾಕಿಲ್ಲ. ನನ್ನ ಧ್ವನಿ ಇದೇ ರೀತಿ. ಏಕವಚನದಲ್ಲಿ ನೀವೂ ಮಾತನಾಡಿದ್ದೂ ಸರಿ ಆಗಿದ್ರೆ, ನಾನು ಮಾತನಾಡಿದ್ದೂ ಕೂಡಾ ಸರಿ. ಯಾರೂ ನನ್ನ ಒಪ್ಕೊತಾರೆ ಬಿಡ್ತಾರೋ ಗೊತ್ತಿಲ್ಲ, ಆ ದೇವರು ಒಪ್ಕೊಳ್ತಾನೆ. ಹಿಂದೂ ಸಮಾಜದ ಜನರು ಒಪ್ಕೊಳ್ತಾರೆ.
ನಾಲ್ಕೂವರೆ ವರ್ಷ ಎಲ್ಲಿದ್ರೂ , ಕುಂಭಕರ್ಣ ಎಂಬ ಕಾಂಗ್ರೆಸ್ ಟೀಕೆ ಮಾಡಿರುವ ವಿಚಾರದಲ್ಲಿ, ಅದಕ್ಕೆಲ್ಲಾ ನಾನು ಮುಂದಿನ ದಿನಗಳಲ್ಲಿ ಉತ್ತರ ಕೊಡ್ತೇನೆ. ಎಲ್ಲದಕ್ಕೂ ಉತ್ತರ ಕೊಡ್ತೇನೆ, ಯಾವುದಕ್ಕೂ ಬಡ್ಡಿ ಗಿಡ್ಡಿ ಇಟ್ಟುಕೊಳ್ಳುವ ಪ್ರಶ್ನೆ ಇಲ್ಲ ಎಂದು ಹೇಳಿದರು.
Ananth kumar hegde says i am not guilt of calling CM Siddaramaiah in singular words.
12-01-26 08:20 pm
Mangaluru
ಮನೆ ಕಟ್ಟಲು ಅಡಿಪಾಯ ತೆಗೆಯುವ ವೇಳೆ 1 ಕೆಜಿಯಷ್ಟು ನಿ...
10-01-26 10:28 pm
"ಡ್ಯಾಡಿ ಈಸ್ ಹೋಮ್" ಎಐ ವಿಡಿಯೋ ರಿಲೀಸ್ ; ರಾಜ್ಯ ರಾ...
10-01-26 04:29 pm
ಚಾರ್ಮಾಡಿ ಘಾಟಿಯಲ್ಲಿ ರಸ್ತೆಗೆ ಅಡ್ಡ ನಿಂತ ಒಂಟಿ ಸಲಗ...
10-01-26 03:00 pm
Purushottam Bilimale, Legal Battle Against Ma...
10-01-26 01:17 pm
12-01-26 05:01 pm
Mangaluru Staffer
ಎಕ್ಸ್ ನಲ್ಲಿ ಅಶ್ಲೀಲ ಕಂಟೆಂಟ್ ; ಐಟಿ ಸಚಿವಾಲಯದ ಒತ್...
11-01-26 06:07 pm
ವೆನಿಜುವೆಲಾ ತೈಲದ ನಿಯಂತ್ರಣಕ್ಕೆ ಮುಂದಾದ ಅಮೆರಿಕ ;...
10-01-26 03:22 pm
ಶಬರಿಮಲೆ ಚಿನ್ನ ಕಳವು ಪ್ರಕರಣ ; ಪ್ರಧಾನ ತಂತ್ರಿ ಕಂಠ...
09-01-26 11:00 pm
ಟ್ರಂಪ್ ಕೈಗಳು ಸಾವಿರಾರು ಇರಾನಿಗರ ರಕ್ತದಿಂದ ಒದ್ದೆಯ...
09-01-26 08:30 pm
12-01-26 08:03 pm
Mangaluru Staffer
ಭಾರತ ರಕ್ತಪಾತಕ್ಕೆ ಇನ್ನಷ್ಟು ಸಿದ್ಧವಾಗಬೇಕು ; ಚೀನಾ...
11-01-26 10:39 pm
ಬಾಂಗ್ಲಾದಲ್ಲಿ ಹಿಂದುಗಳ ಹತ್ಯೆಯನ್ನು ಭಾರತ ನೋಡುತ್ತ...
11-01-26 07:06 pm
ಅಮೆರಿಕ ಬಿಟ್ಟು ಚೀನಾ ಜೊತೆಗೆ ಬಾಂಧವ್ಯ ಬೆಳೆಸಬೇಕಿದೆ...
11-01-26 12:56 pm
Cm Siddaramaiah, Mangalore: ಕರಾವಳಿ ಪ್ರವಾಸೋದ್ಯ...
10-01-26 10:45 pm
12-01-26 06:28 pm
Mangaluru Staffer
Mangalore Crime: ಬಾಂಗ್ಲಾದವನೆಂದು ಹೇಳಿ ವಲಸೆ ಕಾರ...
12-01-26 01:54 pm
Sharmila Death, Murder, Bangalore: ಮಂಗಳೂರಿನ ಟ...
12-01-26 01:31 pm
ಅಯ್ಯಪ್ಪ ಸ್ವಾಮಿಗಳ ಪೂಜೆ ಸಂದರ್ಭದಲ್ಲಿ ಮುಸ್ಲಿಂ ವ್ಯ...
11-01-26 09:59 pm
ಆರು ವರ್ಷದ ಬಾಲಕಿಯನ್ನು ಅಪಹರಿಸಿ, ಕೊಲೆ ; ತಾಯಿ ಜಗಳ...
07-01-26 10:45 pm