ಬ್ರೇಕಿಂಗ್ ನ್ಯೂಸ್
15-01-24 09:33 pm Bangalore Correspondent ಕರ್ನಾಟಕ
ಬೆಂಗಳೂರು, ಜ.15: ಮೈಸೂರು ಮೂಲದ ಶಿಲ್ಪಿ ಅರುಣ್ ಯೋಗಿರಾಜ್ ನಿರ್ಮಿಸಿದ ಬಾಲರಾಮನ ಮೂರ್ತಿಯೇ ಅಯೋಧ್ಯೆ ರಾಮ ಜನ್ಮಭೂಮಿಯ ಮಂದಿರದ ಗರ್ಭಗುಡಿಯಲ್ಲಿ ಪ್ರತಿಷ್ಠೆಗೊಳ್ಳಲು ಫೈನಲ್ ಆಗಿದೆ.
ಅಯೋಧ್ಯೆಯ ಶ್ರೀರಾಮ ಮಂದಿರದ ಗರ್ಭಗುಡಿಯಲ್ಲಿ ಪ್ರತಿಷ್ಠೆ ಮಾಡುವುದಕ್ಕಾಗಿ ಮೂರು ಅಪೂರ್ವ ಮೂರ್ತಿಗಳನ್ನು ಕೆತ್ತಲಾಗಿತ್ತು. ಅದರಲ್ಲಿ ಯಾವ ಮೂರ್ತಿ ಗರ್ಭಗುಡಿ ಸೇರಲಿದೆ ಎಂಬ ಕುತೂಹಲ ಇತ್ತು. ಈಗ ಆ ಪ್ರಶ್ನೆಗೆ ಉತ್ತರ ಸಿಕ್ಕಿದೆ.

ಮೂರು ಮೂರ್ತಿಗಳಲ್ಲಿ ಯಾವುದು ಬೆಟರ್ ಅನ್ನುವ ಬಗ್ಗೆ ಡಿ.29 ರಂದು ಮತದಾನ ಪ್ರಕ್ರಿಯೆ ನಡೆದಿತ್ತು. ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ಟ್ರಸ್ಟಿನ 11 ಸದಸ್ಯರು ಮೂರ್ತಿ ಆಯ್ಕೆಯಲ್ಲಿ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ. ಒಂದು ಮೂರ್ತಿಯನ್ನು ಗರ್ಭಗುಡಿಯಲ್ಲಿ ಪ್ರತಿಷ್ಠಾಪನೆ ಮಾಡಿದರೆ ಇನ್ನುಳಿದ ಎರಡು ಮೂರ್ತಿಯನ್ನು ರಾಮ ದೇಗುಲದ ಒಳಗಡೆಯಲ್ಲೇ ಇಡುವುದಾಗಿ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಹೇಳಿದೆ.
ಶಿಲ್ಪಿಗಳಾದ ಕರ್ನಾಟಕದ ಮೈಸೂರು ಮೂಲದ ಅರುಣ್ ಯೋಗಿರಾಜ್, ಗಣೇಶ್ ಭಟ್ ಮತ್ತು ಜೈಪುರದ ಸತ್ಯನಾರಾಯಣ ಪಾಂಡೆ ಪ್ರತ್ಯೇಕ ಮೂರು ಮೂರ್ತಿಗಳನ್ನು ಕೆತ್ತನೆ ಮಾಡಿದ್ದಾರೆ. ಕನ್ನಡಿಗರಾದ ಅರುಣ್ ಯೋಗಿರಾಜ್ ಮತ್ತು ಗಣೇಶ ಭಟ್ ಮೈಸೂರಿನ ಕೃಷ್ಣಶಿಲೆಯನ್ನು ಬಳಕೆ ಮಾಡಿ ಮೂರ್ತಿ ಕೆತ್ತನೆ ಮಾಡಿದ್ದರು. ಸತ್ಯನಾರಾಯಣ ಪಾಂಡೆ ಅವರು ರಾಜಸ್ಥಾನದಿಂದ ತರಿಸಿದ್ದ ಕಲ್ಲನ್ನು ಬಳಕೆ ಮಾಡಿದ್ದರು. ರಾಮಲಲ್ಲಾ ಮೂರ್ತಿಯ ದೀರ್ಘಾವಧಿ ಬಾಳಿಕೆ ಕುರಿತು ತಾಂತ್ರಿಕ ವರದಿಯನ್ನೂ ಪಡೆಯಲಾಗಿದೆ. ಅಂತಿಮವಾಗಿ ಅರುಣ್ ಯೋಗಿರಾಜ್ ತಯಾರಿಸಿದ ಮೂರ್ತಿಯನ್ನೇ ಆಯ್ಕೆ ಮಾಡಲಾಗಿದೆ.
the shyam rang (dark coloured) Ram Lalla idol sculpted on ‘Krishna Shila’ (black stone) by Mysuru-based sculptor Arun Yogiraj has been selected for installation in the garbha griha (sanctum sanctorum) of the new Ram Temple in Ayodhya.
25-08-26 03:39 pm
HK News Staffer
ಕರ್ನಾಟಕದಲ್ಲಿ H1N1 ಆತಂಕ ; 8 ತಿಂಗಳಲ್ಲಿ 4,212 ಪ...
24-08-26 03:16 pm
ಕರ್ನಾಟಕದಲ್ಲಿ ‘ಅನಲಾಗ್ ಪನ್ನೀರ್’ಗೆ ಒಂದು ವರ್ಷ ನಿಷ...
22-08-26 10:15 pm
ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ನಾಪತ್ತೆ ; ಏ...
22-08-26 03:01 pm
500 ಕೆಪಿಎಸ್ ಶಾಲೆಗಳ ಸಮಗ್ರ ಅಭಿವೃದ್ಧಿಗೆ ₹2500 ಕೋ...
22-08-26 11:10 am
27-08-26 12:39 pm
HK News Staffer
ಪುತ್ರಿಯ ಅಂತರ್ಜಾತಿ ವಿವಾಹ ; ಕಣ್ಣೂರು ಮುಚ್ಚಿಲೋಟ್...
26-08-26 06:41 pm
ಹಿಜಾಬ್ ಇಸ್ಲಾಮಿನ ಧಾರ್ಮಿಕ ಆಚರಣೆಯಲ್ಲಿ ಅನಿವಾರ್ಯ ಅ...
26-08-26 02:05 pm
ಮಂಗಳೂರನ್ನು ಪಾಲಕ್ಕಾಡ್ ರೈಲ್ವೇ ವಿಭಾಗದಿಂದ ತೆರವು ಮ...
26-08-26 12:01 pm
ಅಮರಾವತಿ ಆಸ್ಪತ್ರೆಯಲ್ಲಿ ಭೀಕರ ಅಗ್ನಿ ದುರಂತ ; ವೆಂಟ...
24-08-26 04:55 pm
27-08-26 10:59 pm
HK News Desk
ಕ್ಯಾನ್ಸರ್ ಹೋರಾಟದ ಮಧ್ಯೆ ದರ್ಶನ ಪಾತ್ರಿಗೆ 7ನೇ ನಮೋ...
27-08-26 08:26 pm
ಕೊಟ್ಟಾರದಲ್ಲಿ ಗಾಳಿ ಮಳೆಗೆ ಧರೆಗುರುಳಿದ ಬೃಹತ್ ಮರ ;...
27-08-26 06:55 pm
ಸೌಜನ್ಯಾ ಮನೆಗೆ ಆರೆಸ್ಸೆಸ್ ಮುಖಂಡ ಕಲ್ಲಡ್ಕ ಪ್ರಭಾಕರ...
27-08-26 11:22 am
ಪಕ್ಕದ ವಾರ್ಡಿನ ಸರಕಾರಿ ಶಾಲಾಭಿವೃದ್ಧಿಗೆ ಅನುದಾನ ಕೊ...
26-08-26 10:58 pm
27-08-26 07:23 pm
HK News Staffer
ಆಪ್ತನಿಂದಲೇ ನಂಬಿಕೆ ದ್ರೋಹ, ಐಟಿ ದಾಳಿಯ ಒತ್ತಡ ; ಕಾ...
27-08-26 05:24 pm
Samson Coutinho, Mangalore, Fiona Sweedal Mur...
26-08-26 09:36 pm
ಸೂರ್ಯಪೇಟೆಯಲ್ಲಿ ಭೀಕರ ಅಪಘಾತ ; ಕಂಟೇನರ್ ಲಾರಿಗೆ ಬ...
26-08-26 11:26 am
ವಿಜಯಪುರದಲ್ಲಿ ಭೀಕರ ದುರಂತ ; ನಾಪತ್ತೆಯಾಗಿದ್ದ ಒಂದೇ...
26-08-26 11:23 am