ಬ್ರೇಕಿಂಗ್ ನ್ಯೂಸ್
07-01-24 03:08 pm HK News Desk ಕರ್ನಾಟಕ
ಬೆಳಗಾವಿ, ಜ.7: ಯುವನಿಧಿ ಯೋಜನೆಗೆ ಅರ್ಜಿ ಸಲ್ಲಿಸಲು ಬಂದಿದ್ದ ಅಕ್ಕ, ತಮ್ಮನನ್ನು ಮುಸ್ಲಿಂ ಯವಕರ ಗುಂಪು ನಾಲ್ಕು ಗಂಟೆ ಕಾಲ ಕೋಣೆಯಲ್ಲಿ ಕೂಡಿಹಾಕಿ ಮನಬಂದಂತೆ ಥಳಿಸಿದ ಘಟನೆ ಬೆಳಗಾವಿ ಮಾರ್ಕೇಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಯುವತಿ ಮುಸ್ಲಿಂ ಹಿಂದು ಯುವಕನ ಜೊತೆಗಿದ್ದಾನೆಂದು ತಿಳಿದು ಯುವಕರು ಇಬ್ಬರಿಗೂ ಹಲ್ಲೆ ನಡೆಸಿದ್ದಾರೆ.
ಯುವತಿ ಮುಖಕ್ಕೆ ಬಟ್ಟೆ ಮುಚ್ಚಿಕೊಂಡಿದ್ದರಿಂದ ಮುಸ್ಲಿಂ ಎಂದು ತಿಳಿದುಕೊಂಡಿದ್ದರು. ಯುವಕ ಹಣೆಗೆ ತಿಲಕ ಹಾಕಿದ್ದರಿಂದ ಮುಸ್ಲಿಂ ಯುವತಿಯ ಜೊತೆಗಿದ್ದಾನೆಂದು ಇವರು ಅನ್ಯಕೋಮಿ ಜೋಡಿ ಅನ್ಕೊಂಡಿದ್ದಾರೆ. ತಾವು ಅಕ್ಕ, ತಮ್ಮ ಎಂದು ತಿಳಿಸಿದರೂ ಮುಸ್ಲಿಂ ಯುವಕರ ಗುಂಪು ಮನಬಂದಂತೆ ಧಳಿಸಿದ್ದಾರೆ. ಯುವಕ ಪಕ್ಕೆಲುಬು ಭಾಗಕ್ಕೆ ತೀವ್ರ ಗಾಯಗೊಂಡಿದ್ದು ಇಬ್ಬರನ್ನೂ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. 16 ಜನ ಮುಸ್ಲಿಂ ಯುವಕರ ಗ್ಯಾಂಗ್ ಕೃತ್ಯ ಎಸಗಿದ್ದು ನೈತಿಕ ಪೊಲೀಸಗಿರಿ ಬಗ್ಗೆ ಭಾರೀ ಆಕ್ರೋಶ ವ್ಯಕ್ತವಾಗಿದೆ.



ಬೆಳಗಾವಿ ಕೋಟೆ ಕರೆ ಆವರಣದಲ್ಲಿರುವ ಕಂಪ್ಯೂಟರ್ ಸೆಂಟರಿಗೆ 24 ವರ್ಷದ ಯುವತಿ ಜೊತೆ 21 ವರ್ಷದ ಸಚೀನ್ ಲಮಾನಿ ಎಂಬ ಯುವಕ ಬಂದಿದ್ದು ಯುವನಿಧಿ ಫಾರ್ಮ್ ತುಂಬಲು ಬಂದಾಗ ಕಂಪ್ಯೂಟರ್ ಸೆಂಟರ್ ಮಾಲಿಕ ಅರ್ಧ ಗಂಟೆ ಬಿಟ್ಟು ಬನ್ನಿ ಎಂದು ಹೇಳಿದ್ದರು. ಬಳಿಕ ಇವರಿಬ್ಬರು ಅಕ್ಕ ತಮ್ಮಾ ಬೆಳಗಾವಿ ಕೋಟೆ ಕೆರೆ ಆವರಣದಲ್ಲಿ ಕುಳಿತಿದ್ದನ್ನು ನೋಡಿದ ಕಿರಾತಕರು ಯುವಕ, ಯುವತಿಯನ್ನು ಅಪಹರಿಸಿ ಮನೆಯೊಂದರಲ್ಲಿ ನಾಲ್ಕು ಗಂಟೆ ವರೆಗೆ ಕೂಡಿ ಹಾಕಿ ಹಲ್ಲೆ ಮಾಡಿದ್ದಾರೆ. ಹಲ್ಲೆಗೋಳಗಾದ ಯುವಕ ಮತ್ತು ಯುವತಿ ಬೆಳಗಾವಿ ಜಿಲ್ಲಾಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಯುವಕ- ಯುವತಿಯ ತಂದೆ ಮುಸ್ಲಿಂ, ತಾಯಿ ಹಿಂದುವಾಗಿದ್ದು ಇವರ ಬಗ್ಗೆ ತಿಳಿದಿದ್ದರೂ ಯುವಕರ ತಂಡ ಹಲ್ಲೆ ಕೃತ್ಯ ನಡೆಸಿದೆ ಎನ್ನಲಾಗಿದೆ.
ಮುಸ್ಲಿಂ ಯುವಕರ ಪೊಲೀಸ್ ಗಿರಿ ಘಟನೆ ಹಿನ್ನೆಲೆಯಲ್ಲಿ ಬೆಳಗಾವಿ ಮಾರ್ಕೆಟ್ ಪೊಲೀಸರು 7 ಜನ ದುಷ್ಕರ್ಮಿಗಳನ್ನು ವಶಕ್ಕೆ ಪಡೆದಿದ್ದಾರೆ. ಬಂಧಿತರಲ್ಲಿ ಇಬ್ಬರು ಕಾನೂನು ಸಂಘರ್ಷಕ್ಕೆ ಒಳಗಾದ ಅಪ್ರಾಪ್ತರಾಗಿದ್ದಾರೆ. ಮಾರ್ಕೆಟ್ ಠಾಣೆ ಪೊಲೀಸರು 17 ಜನರ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ. ಲಂಬಾಣಿ ಯಜವಕನಾದ್ದರಿಂದ ಎಸ್ಸಿ, ಎಸ್ಟಿ ದೌರ್ಜನ್ಯ ಕಾಯ್ದೆ ಸೇರಿ 10 ಕಲಂ ಬಳಸಿ ದೂರು ದಾಖಲಾಗಿದೆ.
A group of youth confined boy and a girl in a room and assaulted them in a case of “moral” policing in Belagavi on Saturday. According to police, the boy and girl - residents of Yamnapur on the city outskirts - had come to register their names for Yuva Nidhi scheme. They could not get the registration completed due to server issues. Both were sitting on a bench on the Fort Lake premises.
25-08-26 03:39 pm
HK News Staffer
ಕರ್ನಾಟಕದಲ್ಲಿ H1N1 ಆತಂಕ ; 8 ತಿಂಗಳಲ್ಲಿ 4,212 ಪ...
24-08-26 03:16 pm
ಕರ್ನಾಟಕದಲ್ಲಿ ‘ಅನಲಾಗ್ ಪನ್ನೀರ್’ಗೆ ಒಂದು ವರ್ಷ ನಿಷ...
22-08-26 10:15 pm
ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ನಾಪತ್ತೆ ; ಏ...
22-08-26 03:01 pm
500 ಕೆಪಿಎಸ್ ಶಾಲೆಗಳ ಸಮಗ್ರ ಅಭಿವೃದ್ಧಿಗೆ ₹2500 ಕೋ...
22-08-26 11:10 am
27-08-26 12:39 pm
HK News Staffer
ಪುತ್ರಿಯ ಅಂತರ್ಜಾತಿ ವಿವಾಹ ; ಕಣ್ಣೂರು ಮುಚ್ಚಿಲೋಟ್...
26-08-26 06:41 pm
ಹಿಜಾಬ್ ಇಸ್ಲಾಮಿನ ಧಾರ್ಮಿಕ ಆಚರಣೆಯಲ್ಲಿ ಅನಿವಾರ್ಯ ಅ...
26-08-26 02:05 pm
ಮಂಗಳೂರನ್ನು ಪಾಲಕ್ಕಾಡ್ ರೈಲ್ವೇ ವಿಭಾಗದಿಂದ ತೆರವು ಮ...
26-08-26 12:01 pm
ಅಮರಾವತಿ ಆಸ್ಪತ್ರೆಯಲ್ಲಿ ಭೀಕರ ಅಗ್ನಿ ದುರಂತ ; ವೆಂಟ...
24-08-26 04:55 pm
27-08-26 10:59 pm
HK News Desk
ಕ್ಯಾನ್ಸರ್ ಹೋರಾಟದ ಮಧ್ಯೆ ದರ್ಶನ ಪಾತ್ರಿಗೆ 7ನೇ ನಮೋ...
27-08-26 08:26 pm
ಕೊಟ್ಟಾರದಲ್ಲಿ ಗಾಳಿ ಮಳೆಗೆ ಧರೆಗುರುಳಿದ ಬೃಹತ್ ಮರ ;...
27-08-26 06:55 pm
ಸೌಜನ್ಯಾ ಮನೆಗೆ ಆರೆಸ್ಸೆಸ್ ಮುಖಂಡ ಕಲ್ಲಡ್ಕ ಪ್ರಭಾಕರ...
27-08-26 11:22 am
ಪಕ್ಕದ ವಾರ್ಡಿನ ಸರಕಾರಿ ಶಾಲಾಭಿವೃದ್ಧಿಗೆ ಅನುದಾನ ಕೊ...
26-08-26 10:58 pm
27-08-26 07:23 pm
HK News Staffer
ಆಪ್ತನಿಂದಲೇ ನಂಬಿಕೆ ದ್ರೋಹ, ಐಟಿ ದಾಳಿಯ ಒತ್ತಡ ; ಕಾ...
27-08-26 05:24 pm
Samson Coutinho, Mangalore, Fiona Sweedal Mur...
26-08-26 09:36 pm
ಸೂರ್ಯಪೇಟೆಯಲ್ಲಿ ಭೀಕರ ಅಪಘಾತ ; ಕಂಟೇನರ್ ಲಾರಿಗೆ ಬ...
26-08-26 11:26 am
ವಿಜಯಪುರದಲ್ಲಿ ಭೀಕರ ದುರಂತ ; ನಾಪತ್ತೆಯಾಗಿದ್ದ ಒಂದೇ...
26-08-26 11:23 am