ಬ್ರೇಕಿಂಗ್ ನ್ಯೂಸ್
05-01-24 05:45 pm HK News Desk ಕರ್ನಾಟಕ
ಹುಬ್ಬಳ್ಳಿ, ಜ.05: ಹಿಂದೂ ಕಾರ್ಯಕರ್ತ ಶ್ರೀಕಾಂತ್ ಪೂಜಾರಿಗೆ ಇಂದು ಹುಬ್ಬಳ್ಳಿಯ ಒಂದನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ ಷರತ್ತುಬದ್ಧ ಜಾಮೀನು ನೀಡಿತು. ಶ್ರೀಕಾಂತ್ ಅವರನ್ನು 31 ವರ್ಷಗಳಷ್ಟು ಹಳೆಯ ಪ್ರಕರಣದಲ್ಲಿ ಪೊಲೀಸರು ಡಿಸೆಂಬರ್ 29ರಂದು ಬಂಧಿಸಿದ್ದರು. ಈ ಬಂಧನ ಪ್ರಕರಣ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿತ್ತು. ಶ್ರೀಕಾಂತ್ ಬಿಡುಗಡೆಗೆ ಆಗ್ರಹಿಸಿ ಬಿಜೆಪಿ ರಾಜ್ಯವ್ಯಾಪಿ ಪ್ರತಿಭಟನೆ ನಡೆಸಿತ್ತು.
1992 ಡಿಸೆಂಬರ್ 5ರಂದು ನಡೆದಿದ್ದ ರಾಮ ಜನ್ಮಭೂಮಿ ಹೋರಾಟದ ವೇಳೆ ನಡೆದ ಗಲಭೆ ಪ್ರಕರಣವೊಂದರಲ್ಲಿ ಭಾಗಿಯಾಗಿದ್ದ ಆರೋಪದಲ್ಲಿ ಶ್ರೀಕಾಂತ್ ಪೂಜಾರಿಯನ್ನು ಪೊಲೀಸರು ಬಂಧಿಸಿದ್ದರು.

ನಾಳೆ ಬಿಡುಗಡೆ ಸಾಧ್ಯತೆ:
ನ್ಯಾಯಾಲಯವು ಷರತ್ತುಬದ್ಧ ಜಾಮೀನು ಮಂಜೂರು ಮಾಡಿ ಆದೇಶ ನೀಡಿರುವುದು ಖುಷಿ ತಂದಿದೆ. ಷರತ್ತುಗಳ ಬಗ್ಗೆ ಜಾಮೀನು ಪ್ರತಿ ಕೈಸೇರಿದ ನಂತರವೇ ಗೊತ್ತಾಗಲಿದೆ. ನಾಳೆ ಸಾಯಂಕಾಲದೊಳಗೆ ಶ್ರೀಕಾಂತ್ ಪೂಜಾರಿಯನ್ನು ಬಿಡುಗಡೆ ಮಾಡುವ ಭರವಸೆ ಇದೆ" ಎಂದು ಆರೋಪಿ ಪರ ವಕೀಲ ಸಂಜಯ ಬಡಸ್ಕರ್ ಹೇಳಿದರು
''ಹಿಂದೂ ಸಮಾಜವನ್ನು ಹೆದರಿಸುವ ಉದ್ದೇಶದಿಂದ ಸಾಕಷ್ಟು ಷಡ್ಯಂತ್ರ ಮಾಡಿದವರಿಗೆ ತಕ್ಕ ಉತ್ತರ ಸಿಕ್ಕಿದೆ. ದೇಶವೇ ಹೆಮ್ಮೆಪಡುವ ರಾಮ ಮಂದಿರ ಉದ್ಘಾಟನೆ ಸಂದರ್ಭದಲ್ಲಿ ಕೋಮುವಾದ ಹಾಗೂ ಅಶಾಂತಿ ಹುಟ್ಟಿಸುವ ಹುನ್ನಾರ ನಡೆಸಿದವರಿಗೆ ಉತ್ತರ ಸಿಕ್ಕಿದೆ. ಹಿಂದೂಗಳ ಭಾವನೆಗೆ ಧಕ್ಕೆ ತರಲು ಮಾಡಿರುವ ಷಡ್ಯಂತ್ರಕ್ಕೆ ತಕ್ಕ ಶಾಸ್ತಿಯಾಗಿದೆ'' ಎಂದು ವಕೀಲ ಹಾಗೂ ವಿಎಚ್ಪಿ ಮುಖಂಡ ಅಶೋಕ ಅಣ್ವೇಕರ ಪ್ರತಿಕ್ರಿಯಿಸಿದರು.
ನಮ್ಮ ತಂದೆಗೆ ಜಾಮೀನು ದೊರೆತಿರುವುದು ಖುಷಿ ತಂದಿದೆ. ಕೋರ್ಟ್ಗೆ ಹಾಗೂ ವಕೀಲರಿಗೆ ಧನ್ಯವಾದ ತಿಳಿಸುತ್ತೇನೆ'' ಎಂದು ಶ್ರೀಕಾಂತ್ ಪೂಜಾರಿ ಪುತ್ರ ಮಂಜುನಾಥ ಪೂಜಾರಿ ಹೇಳಿದರು.
Hubbali right wing activist Srikanth Poojari granted bail by Hubballi court. The court in Hubballi granted bail on Friday to Hindu activist Srikanth Poojari, who was recently arrested for allegedly being involved in riots after the demolition of the Babri Masjid in Ayodhya back in 1992. The BJP has launched a massive protest across the state against the Congress government and alleged it as an anti-Hindu government.
12-01-26 08:20 pm
Mangaluru
ಮನೆ ಕಟ್ಟಲು ಅಡಿಪಾಯ ತೆಗೆಯುವ ವೇಳೆ 1 ಕೆಜಿಯಷ್ಟು ನಿ...
10-01-26 10:28 pm
"ಡ್ಯಾಡಿ ಈಸ್ ಹೋಮ್" ಎಐ ವಿಡಿಯೋ ರಿಲೀಸ್ ; ರಾಜ್ಯ ರಾ...
10-01-26 04:29 pm
ಚಾರ್ಮಾಡಿ ಘಾಟಿಯಲ್ಲಿ ರಸ್ತೆಗೆ ಅಡ್ಡ ನಿಂತ ಒಂಟಿ ಸಲಗ...
10-01-26 03:00 pm
Purushottam Bilimale, Legal Battle Against Ma...
10-01-26 01:17 pm
12-01-26 11:00 pm
HK staffer
ಕುಂಬಳೆ ಟೋಲ್ ಗೇಟ್ ವಿರುದ್ಧ ರಸ್ತೆ ತಡೆದು ಪ್ರತಿಭಟನ...
12-01-26 05:01 pm
ಎಕ್ಸ್ ನಲ್ಲಿ ಅಶ್ಲೀಲ ಕಂಟೆಂಟ್ ; ಐಟಿ ಸಚಿವಾಲಯದ ಒತ್...
11-01-26 06:07 pm
ವೆನಿಜುವೆಲಾ ತೈಲದ ನಿಯಂತ್ರಣಕ್ಕೆ ಮುಂದಾದ ಅಮೆರಿಕ ;...
10-01-26 03:22 pm
ಶಬರಿಮಲೆ ಚಿನ್ನ ಕಳವು ಪ್ರಕರಣ ; ಪ್ರಧಾನ ತಂತ್ರಿ ಕಂಠ...
09-01-26 11:00 pm
12-01-26 08:03 pm
Mangaluru Staffer
ಭಾರತ ರಕ್ತಪಾತಕ್ಕೆ ಇನ್ನಷ್ಟು ಸಿದ್ಧವಾಗಬೇಕು ; ಚೀನಾ...
11-01-26 10:39 pm
ಬಾಂಗ್ಲಾದಲ್ಲಿ ಹಿಂದುಗಳ ಹತ್ಯೆಯನ್ನು ಭಾರತ ನೋಡುತ್ತ...
11-01-26 07:06 pm
ಅಮೆರಿಕ ಬಿಟ್ಟು ಚೀನಾ ಜೊತೆಗೆ ಬಾಂಧವ್ಯ ಬೆಳೆಸಬೇಕಿದೆ...
11-01-26 12:56 pm
Cm Siddaramaiah, Mangalore: ಕರಾವಳಿ ಪ್ರವಾಸೋದ್ಯ...
10-01-26 10:45 pm
12-01-26 06:28 pm
Mangaluru Staffer
Mangalore Crime: ಬಾಂಗ್ಲಾದವನೆಂದು ಹೇಳಿ ವಲಸೆ ಕಾರ...
12-01-26 01:54 pm
Sharmila Death, Murder, Bangalore: ಮಂಗಳೂರಿನ ಟ...
12-01-26 01:31 pm
ಅಯ್ಯಪ್ಪ ಸ್ವಾಮಿಗಳ ಪೂಜೆ ಸಂದರ್ಭದಲ್ಲಿ ಮುಸ್ಲಿಂ ವ್ಯ...
11-01-26 09:59 pm
ಆರು ವರ್ಷದ ಬಾಲಕಿಯನ್ನು ಅಪಹರಿಸಿ, ಕೊಲೆ ; ತಾಯಿ ಜಗಳ...
07-01-26 10:45 pm