ಬ್ರೇಕಿಂಗ್ ನ್ಯೂಸ್
01-01-24 11:09 pm HK News Desk ಕರ್ನಾಟಕ
ಚಿತ್ರದುರ್ಗ, ಜ.1: ಅಯೋಧ್ಯೆಯಲ್ಲಿರುವುದು ಬಿಜೆಪಿಯ ರಾಮ, ನಮ್ಮ ರಾಮ ಸಿದ್ದರಾಮಯ್ಯ ಎಂದು ಕಾಂಗ್ರೆಸ್ ಮಾಜಿ ಸಚಿವ ಹೆಚ್. ಆಂಜನೇಯ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಸಿಎಂ ಸಿದ್ದರಾಮಯ್ಯಗೆ ರಾಮಮಂದಿರ ಉದ್ಘಾಟನೆಗೆ ಆಹ್ವಾನವಿಲ್ಲದ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ರಾಮಮಂದಿರ ಉದ್ಘಾಟನೆಗೆ ಕರೆಯದೆ ಇದ್ದಿದ್ದೇ ಒಳ್ಳೆಯದಾಯಿತು. ಸ್ವತಃ ಸಿದ್ದರಾಮಯ್ಯ ಅವರೇ ರಾಮ, ಹೀಗಿರುವಾಗ ಆ ರಾಮನಿಗೇಕೆ ಹೋಗಿ ಅವರು ಪೂಜಿಸಬೇಕು ಎಂದು ಪ್ರಶ್ನಿಸಿದ್ದಾರೆ

ಸಿದ್ದರಾಮಯ್ಯ ಅವರ ತವರು ಸಿದ್ಧರಾಮನಹುಂಡಿಯಲ್ಲೇ ಶ್ರೀರಾಮನ ದೇವಸ್ಥಾನ ಇದೆ, ಅವರು ಅಲ್ಲೇ ಪೂಜಿಸುತ್ತಾರೆ. ಅಯೋಧ್ಯೆಯಲ್ಲಿರುವುದು ಬಿಜೆಪಿ ರಾಮ ಹೀಗಾಗಿ ಬಿಜೆಪಿಯವರನ್ನ ಕರೆಸಿಕೊಂಡು ಅಲ್ಲಿ ಭಜನೆ ಮಾಡುತ್ತಾರೆ. ಆದ್ರೆ ನಮ್ಮ ರಾಮ ಎಲ್ಲಾ ಕಡೆ ಇದ್ದಾನೆ, ನಮ್ಮ ಎದೆಯಲ್ಲಿಯೂ ಇದ್ದಾನೆ. ನಾನು ಆಂಜನೇಯ, ಗೊತ್ತಲ್ವಾ ಆಂಜನೇಯ ಏನು ಮಾಡಿದ ಅಂತಾ? ಎಂದು ಕುಟುಕಿದ್ದಾರೆ.
ಅಲ್ಲದೇ ನಮ್ಮ ಸಮುದಾಯದವರು ರಾಮ ಹಾಗೂ ಆಂಜನೇಯ, ಹನುಮಂತ ಎಂಬ ಹೆಸರಿಟ್ಟುಕೊಳ್ಳುತ್ತಾರೆ. ರಾಮ, ಆಂಜನೇಯ ನಮ್ಮ ವರ್ಗಕ್ಕೆ ಸೇರಿದವರು. ಆದರೆ ಬಿಜೆಪಿ ಅವರದ್ದು ಧರ್ಮಗಳನ್ನು ಒಡೆದಾಳುವ ನೀತಿಯಾಗಿದೆ. ಒಂದು ಧರ್ಮದ ವಿರುದ್ಧ ಟೀಕಿಸಿ ಮತ ಬ್ಯಾಂಕ್ ಸೃಷ್ಟಿಸುವ ಭ್ರಮೆ ಬಿಜೆಪಿಯವರಿಗಿದೆ. ಅವರ ಆಡಳಿತದಲ್ಲಿ ಯಾರಿಗೆ ಅನುಕೂಲ ಆಗಿದೆ? ಹಿಂದೂ ಯುವಕರಿಗೆ ಬಿಜೆಪಿ ಆಡಳಿತದಿಂದ ಅನುಕೂಲ ಆಗಿದೆಯೆ? ನಾವೂ ಹಿಂದೂಗಳು, ಆದ್ರೆ ಹಿಂದೂಗಳನ್ನು ಮತ್ತು ಹಿಂದೂ ಧರ್ಮವನ್ನ ಬಿಜೆಪಿ ಕೊಂಡುಕೊಂಡಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
ಬಿಜೆಪಿಯವರು ಮಂದಿ ನಿರ್ಮಾಣ ಮಾಡಿದ್ದು ಸಾಕು, ದೇಶದಲ್ಲಿ ಮನೆ-ಮನಗಳನ್ನು ಕಟ್ಟುವ ಕೆಲಸ ಆಗಬೇಕು. ದೇಶದಲ್ಲಿ ಕೆಲವರು ಈಗಲೂ ಪ್ರಾಣಿಗಳ ರೀತಿ, ಯೋಗ್ಯವಲ್ಲದ ಸ್ಥಳಗಳಲ್ಲಿ ವಾಸಿಸುತ್ತಿದ್ದಾರೆ. ಅಂತಹವರಿಗೆ ಸೂರು ಒದಗಿಸಿ ರಕ್ಷಣೆ ಕೊಡಬೇಕು. ದೇಶದಲ್ಲಿ ಮನೆ ಇಲ್ಲದವರಿಗೆ, ಮನೆ ಕಟ್ಟಿಸಿಕೊಟ್ಟು ಅದಕ್ಕೆ ರಾಮಮಂದಿರ ಅಂತ ಹೆಸರಿಟ್ಟರೆ, ಆಗ ನಿಜವಾದ ಶ್ರೀರಾಮ ಬಂದು ಎಲ್ಲರನ್ನು ಆಶೀರ್ವದಿಸುತ್ತಾನೆ. ಹಾಗಾಗಿ ಮತಕ್ಕಾಗಿ ಬಿಜೆಪಿ ರಾಮನನ್ನ ಮಾಡುವುದು ಬೇಡ ಎಂದು ಕಿಡಿ ಕಾರಿದ್ದಾರೆ.
Ayodhya is Rama of BJP, our Rama Siddaramaiah said former Congress minister H. Anjaneya (H Anjaneya) has attacked BJP. Responding to CM Siddaramaiah not being invited to the inauguration of the Ram Mandir, he said that it was good that he was not invited to the inauguration of the Ram Mandir.
12-01-26 08:20 pm
Mangaluru
ಮನೆ ಕಟ್ಟಲು ಅಡಿಪಾಯ ತೆಗೆಯುವ ವೇಳೆ 1 ಕೆಜಿಯಷ್ಟು ನಿ...
10-01-26 10:28 pm
"ಡ್ಯಾಡಿ ಈಸ್ ಹೋಮ್" ಎಐ ವಿಡಿಯೋ ರಿಲೀಸ್ ; ರಾಜ್ಯ ರಾ...
10-01-26 04:29 pm
ಚಾರ್ಮಾಡಿ ಘಾಟಿಯಲ್ಲಿ ರಸ್ತೆಗೆ ಅಡ್ಡ ನಿಂತ ಒಂಟಿ ಸಲಗ...
10-01-26 03:00 pm
Purushottam Bilimale, Legal Battle Against Ma...
10-01-26 01:17 pm
12-01-26 11:00 pm
HK staffer
ಕುಂಬಳೆ ಟೋಲ್ ಗೇಟ್ ವಿರುದ್ಧ ರಸ್ತೆ ತಡೆದು ಪ್ರತಿಭಟನ...
12-01-26 05:01 pm
ಎಕ್ಸ್ ನಲ್ಲಿ ಅಶ್ಲೀಲ ಕಂಟೆಂಟ್ ; ಐಟಿ ಸಚಿವಾಲಯದ ಒತ್...
11-01-26 06:07 pm
ವೆನಿಜುವೆಲಾ ತೈಲದ ನಿಯಂತ್ರಣಕ್ಕೆ ಮುಂದಾದ ಅಮೆರಿಕ ;...
10-01-26 03:22 pm
ಶಬರಿಮಲೆ ಚಿನ್ನ ಕಳವು ಪ್ರಕರಣ ; ಪ್ರಧಾನ ತಂತ್ರಿ ಕಂಠ...
09-01-26 11:00 pm
12-01-26 08:03 pm
Mangaluru Staffer
ಭಾರತ ರಕ್ತಪಾತಕ್ಕೆ ಇನ್ನಷ್ಟು ಸಿದ್ಧವಾಗಬೇಕು ; ಚೀನಾ...
11-01-26 10:39 pm
ಬಾಂಗ್ಲಾದಲ್ಲಿ ಹಿಂದುಗಳ ಹತ್ಯೆಯನ್ನು ಭಾರತ ನೋಡುತ್ತ...
11-01-26 07:06 pm
ಅಮೆರಿಕ ಬಿಟ್ಟು ಚೀನಾ ಜೊತೆಗೆ ಬಾಂಧವ್ಯ ಬೆಳೆಸಬೇಕಿದೆ...
11-01-26 12:56 pm
Cm Siddaramaiah, Mangalore: ಕರಾವಳಿ ಪ್ರವಾಸೋದ್ಯ...
10-01-26 10:45 pm
12-01-26 06:28 pm
Mangaluru Staffer
Mangalore Crime: ಬಾಂಗ್ಲಾದವನೆಂದು ಹೇಳಿ ವಲಸೆ ಕಾರ...
12-01-26 01:54 pm
Sharmila Death, Murder, Bangalore: ಮಂಗಳೂರಿನ ಟ...
12-01-26 01:31 pm
ಅಯ್ಯಪ್ಪ ಸ್ವಾಮಿಗಳ ಪೂಜೆ ಸಂದರ್ಭದಲ್ಲಿ ಮುಸ್ಲಿಂ ವ್ಯ...
11-01-26 09:59 pm
ಆರು ವರ್ಷದ ಬಾಲಕಿಯನ್ನು ಅಪಹರಿಸಿ, ಕೊಲೆ ; ತಾಯಿ ಜಗಳ...
07-01-26 10:45 pm