ಬ್ರೇಕಿಂಗ್ ನ್ಯೂಸ್
05-12-23 01:59 pm HK News Desk ಕರ್ನಾಟಕ
ಮೈಸೂರು, ಡಿ 05: ಬೆಳ್ಳಂಬೆಳಗ್ಗೆ ಮೈಸೂರು ಜಿಲ್ಲೆಯಲ್ಲಿ ಲೋಕಾಯುಕ್ತ ಅಧಿಕಾರಿಗಳ ತಂಡ ಭರ್ಜರಿ ಕಾರ್ಯಾಚರಣೆ ನಡೆಸಿದೆ. ನಂಜನಗೂಡಿನ ಸರ್ಕಾರಿ ಕಾಲೇಜು ಉಪನ್ಯಾಸಕ ಮಹದೇವಸ್ವಾಮಿ ಮನೆ ಮೇಲೆ ದಾಳಿ ನಡೆದಿದೆ. ಇದರೊಂದಿಗೆ ಮೈಸೂರಿನ ಗುರುಕುಲ ಬಡಾವಣೆ ನಿವಾಸ ಸೇರಿ 12 ಕಡೆ ದಾಳಿ ನಡೆದಿದೆ.
ನಂಜನಗೂಡು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಉಪನ್ಯಾಸಕ ಮಹದೇವಸ್ವಾಮಿ ವಿರುದ್ಧ ಕುಟುಂಬದ ಹೆಸರಿನಲ್ಲಿ MS Group ಕಂಪನಿ ನಡೆಸುತ್ತಿದ್ದು, ಆದಾಯಕ್ಕೂ ಮೀರಿ ಅಸ್ತಿ ಗಳಿಕೆ ಆರೋಪದ ಹಿನ್ನೆಲೆಯಲ್ಲಿ ದಾಳಿ ನಡೆಸಿದ್ದು, ಆಸ್ತಿ ಪರಿಶೀಲನೆ ನಡೆಸಲಾಗುತ್ತಿದೆ.
ಲೋಕಾಯುಕ್ತ ADGP ಪ್ರಶಾಂತ್ ಕುಮಾರ್ ಹಾಗೂ IGP ಸುಬ್ರಮಣ್ಣೀಶ್ವರ ರಾವ್, ಎಸ್ಪಿ ಸುರೇಶ್ ಬಾಬು ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಯುತ್ತಿದ್ದು, ಡಿಎಸ್‌ಪಿ ಕೃಷ್ಣಯ್ಯ ನೇತೃತ್ವದಲ್ಲಿ 12 ತಂಡಗಳಿಂದ ವಿವಿಧ ಕಡೆಗಳಲ್ಲಿ ದಾಳಿ ನಡೆದಿದೆ.
ಹೆಸರಿಗೆ ಮಾತ್ರ ಸರ್ಕಾರಿ ಕಾಲೇಜು ಉಪನ್ಯಾಸಕ:
ನಂಜನಗೂಡಿನ ಸರ್ಕಾರಿ ಕಾಲೇಜಿನಲ್ಲಿ ಉಪನ್ಯಾಸಕನಾಗಿರುವ ಮಹದೇವಸ್ವಾಮಿ ಹೆಸರಿಗಷ್ಟೆ ಉಪನ್ಯಾಸಕ, ಮಾಡೊದೆಲ್ಲ ಬೇರೆ ವ್ಯವಹಾರ ಎಂಬುದು ಸ್ಪಷ್ಟವಾಗಿದೆ. ಲೋಕಾಯುಕ್ತ ಅಧಿಕಾರಿಗಳ ತಂಡ ಮಹದೇವಸ್ವಾಮಿಗೆ ಸೇರಿದ ಮನೆ, ಕಚೇರಿ, ಶಾಲೆ, ವಾಣಿಜ್ಯ ಕಟ್ಟಡದ ಮೇಲೆ ದಾಳಿ ನಡೆಸಿದೆ.
ಮೈಸೂರಿನ ಜೆ.ಪಿ ನಗರಲ್ಲಿ ವಾಸವಿದ್ದ ಮಹದೇವಸ್ವಾಮಿಗೆ ಸೇರಿದ ಮೈಸೂರಿನ ಗುರುಕುಲ ವಿದ್ಯಾಸಂಸ್ಥೆ, ಸ್ಟೀಲ್ ಅಂಗಡಿಗಳು ಹಾಗೂ ಕಚೇರಿ ಮೇಲೆ ಏಕ ಕಾಲದಲ್ಲಿ ದಾಳಿಯಾಗಿದೆ. ಮೈಸೂರಿನಲ್ಲಿ ಸ್ಟೀಲ್ ಹಾಗೂ ಬಟ್ಟೆ ಅಂಗಡಿ, ನಂಜನಗೂಡು ಸ್ಟೀಲ್ ಅಂಗಡಿ, ಕೆ.ಆರ್. ನಗರದ ಸ್ಟೀಲ್ ಅಂಗಡಿ ಮೇಲೆ ದಾಳಿಯಾಗಿದೆ. ಅಲ್ಲದೇ ಈತ ತನ್ನ ಕಾರುಗಳನ್ನ ನಿಲ್ಲಿಸೋದಕ್ಕೆ 100x100 ಜಾಗ ಮಾಡಿಕೊಂಡಿದ್ದ ಅನ್ನೋದು ಬೆಳಕಿಗೆ ಬಂದಿದೆ.
Mysuru Lokayukta raid, First grade college lecturer Mahadevaswami house raided, steel and clothe business exposed. 63 places in Karnataka raided by Lokayukta.
28-08-25 06:23 pm
HK News Desk
Bidar Bus Driver Suicide: ಬೀದರ್ ಬಸ್ ಡಿಪೋ ನಲ್ಲ...
28-08-25 02:41 pm
ಬಿಳಿಯಲ್ಲ ಮಾರಾಯರೇ ನೀಲಿ ಮೊಟ್ಟೆ ಇಟ್ಟ ನಾಟಿ ಕೋಳಿ ;...
28-08-25 11:56 am
Banumustak, DK Shivakumar, Chamundi Hill: ದೇವ...
27-08-25 06:21 pm
Congress, MP Yaduveer, DK Shivakumar: ಕಾಂಗ್ರೆ...
27-08-25 06:17 pm
28-08-25 12:19 pm
HK News Desk
ಕೈ ಗ್ಯಾರಂಟಿಗೆ ಬೊಕ್ಕಸ ಪೂರ ಖಾಲಿ - ಖಾಲಿ ; ತೆಲಂಗಾ...
26-08-25 09:02 pm
ಜಮ್ಮು ಭಾರಿ ಮಳೆಗೆ ಒಂಬತ್ತು ಮಂದಿ ಬಲಿ ; ಹಲವೆಡೆ ಭೂ...
26-08-25 07:39 pm
Trump Immigrant Population: ಟ್ರಂಪ್ ಸಾಮ್ರಾಜ್ಯದ...
24-08-25 01:47 pm
Actor Vijay, Thalapathy; ಟಿವಿಕೆ ಮುಖ್ಯಸ್ಥ, ನಟ...
23-08-25 04:58 pm
28-08-25 11:00 pm
Mangalore Correspondent
Mangalore Rain, School College Holiday: ಭಾರೀ...
28-08-25 10:07 pm
Soujanya Murder Case, Mother SIT: ಸೌಜನ್ಯಾ ಕೊಲ...
28-08-25 08:31 pm
Talapady Accident, Mangalore, Auto bus: ಕೇರಳ...
28-08-25 04:05 pm
Loudspeaker, Punjalkatte,Farangipete: ಪುಂಜಾಲ...
28-08-25 02:51 pm
27-08-25 10:23 pm
HK News Desk
Karkala Murder, Arrest, Crime: ಹೆಂಡ್ತಿ ಮಕ್ಕಳನ...
26-08-25 10:39 pm
ಟೆಕ್ನಾಲಜಿಯಲ್ಲಿ ಮುಂದಿರುವ ಅಮೆರಿಕದ ಪ್ರಜೆಗಳನ್ನೇ ಯ...
26-08-25 05:24 pm
ದುಬೈನಲ್ಲಿ ಗಂಡ, ಮೈಸೂರಿನಲ್ಲಿ ಪತ್ನಿಯ ಲವ್ವಿ ಡವ್ವಿ...
25-08-25 08:29 pm
ಶಿಕ್ಷಣ ಸಚಿವ ಮಧು ಬಂಗಾರಪ್ಪ ಪಿಎ ಹೆಸರಲ್ಲಿ ವಸೂಲಿ ;...
25-08-25 07:42 pm