ಬ್ರೇಕಿಂಗ್ ನ್ಯೂಸ್
06-08-20 07:37 am Headline Karnataka News Network ಕರ್ನಾಟಕ
ಮಡಿಕೇರಿ, ಆಗಸ್ಟ್ 6: ನಾಲ್ಕು ವರ್ಷಗಳ ಹಿಂದೆ ಜಲಪ್ರಳಯ, ಜಲಸ್ಫೋಟಕ್ಕೆ ಸಾಕ್ಷಿಯಾಗಿದ್ದ ಕೊಡಗಿನ ಮಡಿಕೇರಿ, ನಾಪೋಕ್ಲು , ಜೋಡುಪಾಲದ ಘಟನೆ ಮತ್ತೆ ಮರುಕಳಿಸಿದೆ. ತಲಕಾವೇರಿ ಬಳಿಯ ನಿಸರ್ಗ ರಮಣೀಯ ತಾಣದ ನಡುವಿನ ಬೃಹತ್ ಬೆಟ್ಟಗಳ ಸಾಲು ಕುಸಿದು ಹೋಗಿದ್ದು ಅಲ್ಲಿದ್ದ ಮನೆಗಳು, ಅಲ್ಲಿನ ಜನ- ಜಾನುವಾರುಗಳು ಪೂರ್ತಿ ನೆಲಸಮವಾಗಿವೆ.
ಕಾವೇರಿ ತೀಥ೯ಕ್ಷೇತ್ರ ತಲಕಾವೇರಿಯ ಬಳಿಯಲ್ಲೇ ಈ ಭೂಕುಸಿತದ ಘಟನೆ ಆಗಿದ್ದು ಸುಮಾರು ಆರು ಕಿಮೀ ವ್ಯಾಪ್ತಿಯಲ್ಲಿ ಬೆಟ್ಟದ ಮಣ್ಣು , ಬಂಡೆ ಕಲ್ಲುಗಳು ಬೃಹತ್ ಮರಗಳ ಸಮೇತ ಕುಸಿದು ಕೊಚ್ಚೆಯಾಗಿ ಹರಿದಿದೆ. ಕಡಿದು ಹೋದ ರಸ್ತೆಯ ಮುಂದೆ ನೆಲಸಮಗೊಂಡ ಬೆಟ್ಟಗಳಿಂದ ಕೆಸರು ನುಗ್ಗಿ ಬರುತ್ತಿದೆ.
ಆ ಭಾಗದಲ್ಲಿ ಮನೆಗಳು ಕಡಿಮೆ. ವರ್ಷವಿಡೀ ಮೋಡಗಳು ಮುತ್ತಿಕ್ಕುವ ನಿಸರ್ಗ ಸಿರಿಯನ್ನು ಹೊತ್ತ ಬೆಟ್ಟಗಳ ಸಾಲುಗಳೇ ಬ್ರಹ್ಮಗಿರಿ ಶ್ರೇಣಿ. ಈ ಸಾಲುಗಳ ಮಧ್ಯೆಯೇ ಭಾಗಮಂಡಲ ಮತ್ತು ತಲಕಾವೇರಿ ಪುಣ್ಯಕ್ಷೇತ್ರಗಳು ಬರುತ್ತವೆ. ಇದೇ ಭಾಗದಲ್ಲಿ ನಾಲ್ಕು ವರ್ಷಗಳ ಹಿಂದೆ ನಡೆದ ದುರಂತದ ಸಂದರ್ಭದಲ್ಲಿಯೂ ಬೆಟ್ಟಗಳು ಬಿರುಕು ಬಿಟ್ಟಿದ್ದವು. ಅಲ್ಲಲ್ಲಿ ಗುಡ್ಡ ಕುಸಿದು ಎರಡು ತಿಂಗಳ ಕಾಲ ರಸ್ತೆ ಸಂಚಾರ ಕಡಿದುಹೋಗಿತ್ತು. ಹಲವು ಗ್ರಾಮಗಳು ಕುಸಿದ ಮಣ್ಣಿನಲ್ಲಿ ಹೂತುಹೋಗಿದ್ದವು.
ಇದೀಗ ಮತ್ತೆ ಅದೇ ಬೆಟ್ಟಗಳ ಸಾಲಿನ ಮಧ್ಯೆ ಜಲ ಸ್ಫೋಟ ಆಗಿದೆ. ಮತ್ತೆ ಬೆಟ್ಟಗಳ ಸಾಲು ಕುಸಿದು ಬಿದ್ದಿದ್ದು ನಿಸರ್ಗ ರಮಣೀಯ ತಾಣ ಸಂಪೂರ್ಣ ನಾಮಾವಶೇಷ ಆಗಿದೆ. ಬೆಟ್ಟದ ತಪ್ಪಲಿನಲ್ಲಿ ಮನೆ ಕಟ್ಟಿಕೊಂಡಿದ್ದ ತಲಕಾವೇರಿ ಕ್ಷೇತ್ರದ ಪ್ರಧಾನ ಅಚ೯ಕ ಟಿ.ಎಸ್.ನಾರಾಯಣ ಆಚಾರ್ ಮತ್ತು ಮತ್ತೊಬ್ಬ ಅರ್ಚಕರ ಮನೆ ಸಂಪೂರ್ಣ ನೆಲದಲ್ಲಿ ಹೂತುಹೋಗಿದೆ. ನಾರಾಯಣ ಆಚಾರ್, ಮತ್ತವರ ಪತ್ನಿ, ಆನಂದತೀಥ೯ ಮತ್ತು ಇನ್ನಿಬ್ಬರು ಅಚ೯ಕರು ಈ ಘಟನೆ ಸಂದರ್ಭದಲ್ಲಿ ನಾಪತ್ತೆಯಾಗಿದ್ದಾರೆ. ರಾಶಿ ಬಿದ್ದಿರುವ ಮಣ್ಣಿನ ಮಧ್ಯೆ ಸಿಲುಕಿರುವ ಸಾಧ್ಯತೆಯಿದೆ. ಆದರೆ, ರಕ್ಷಣಾ ಕಾರ್ಯಾಚರಣೆಗೆ ಆಗಮಿಸಿರುವ ಎನ್ ಡಿ ಆರ್ ಎಫ್ ತಂಡಗಳಿಗೂ ಸ್ಥಳಕ್ಕೆ ತೆರಳಲು ಧೈರ್ಯ ಸಾಲುತ್ತಿಲ್ಲ. ಮಣ್ಣು ಮತ್ತು ನೀರು ಕೋಡಿಯಂತೆ ಹರಿದು ಬರುತ್ತಿದ್ದು ಅಲ್ಲಿಗೆ ತೆರಳುವ ರಸ್ತೆ ಮಧ್ಯದಲ್ಲೇ ಕಡಿದುಹೋಗಿದೆ.
ಆ ಮನೆಗಳಲ್ಲಿದ್ದ ಎರಡು ಕಾರು, 20ಕ್ಕೂ ಹೆಚ್ಚು ಜಾನುವಾರುಗಳು ಮಣ್ಣಿನಡಿಗೆ ಬಿದ್ದು ಹೂತು ಹೋಗಿರುವ ಶಂಕೆ ವ್ಯಕ್ತವಾಗಿದೆ. ಇನ್ನೆಷ್ಟು ಜನರಿದ್ದರು ಎನ್ನುವ ಖಚಿತ ಮಾಹಿತಿ ಸ್ಥಳೀಯರಿಗೂ ಇಲ್ಲ. ಅಲ್ಲಿ ಸುಮಾರು 6 ಕಿ.ಮೀ. ಉದ್ದಕ್ಕೆ ಕುಸಿದು ಬಿದ್ದಿರುವ ಬೆಟ್ಟದ ಸಾಲುಗಳು ದುರಂತದ ರುದ್ರಭೀಕರ ದೃಶ್ಯಕ್ಕೆ ಸಾಕ್ಷಿಯಾಗಿದೆ.
ಮಂಜು ಮುಸುಕಿರುವುದು ಮತ್ತು ನಿರಂತರ ಮಳೆಯಿಂದಾಗಿ ರಕ್ಷಣಾ ಕಾಯಾ೯ಚರಣೆಗೆ ತೊಡಕಾಗಿದೆ. ಹೀಗಾಗಿ ಸ್ಥಳೀಯರು ಆ ಭಾಗಕ್ಕೆ ನುಗ್ಗಿ ತೆರಳು ಮುಂದಾಗುತ್ತಿದ್ದರೂ ಎನ್ ಡಿ ಆರ್ ಎಫ್ ಪಡೆ ಅಪಾಯದ ಬಗ್ಗೆ ಸಾರಿ ಹೇಳುತ್ತಿದೆ. ಮುಂದೆ ತೆರಳುವ ಸ್ವಯಂಸೇವಕರನ್ನೂ ಅಡ್ಡ ಹಾಕುತ್ತಿದೆ.
ಇನ್ನು ಭಾಗಮಂಡಲ ಮತ್ತು ತಲಕಾವೇರಿ ರಸ್ತೆಯ ಅಲ್ಲಲ್ಲಿ ಭೂಕುಸಿತ ಆಗಿದ್ದು ರಕ್ಷಣಾ ಕಾಯ೯ಪಡೆಯ ವಾಹನಗಳೂ ಸ್ಥಳಕ್ಕೆ ತೆರಳಲು ಅಡ್ಡಿಯಾಗಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.
ಕಳೆದ ಬಾರಿ ಜಲಸ್ಫೋಟದ ಘಟನೆಗಳಾದಗಲೂ ರಾಜ್ಯ ಸರಕಾರ ನಿಶ್ಚಿತ ಕಾರಣ ಕಂಡುಕೊಳ್ಳಲು ವಿಫಲವಾಗಿತ್ತು. ನಾಮಕೇವಾಸ್ತೆ ಅಧ್ಯಯನ ವರದಿ ತಯಾರಿಸಿ ಅಧಿಕಾರಿಗಳು ಕೈತೊಳೆದಿದ್ದರು. ಈಗ ಅಂತಹುದೇ ದುರ್ಘಟನೆ ಮರುಕಳಿಸಿದೆ. ಒಂದೆಡೆ ಬಿಸ್ಲೆ ಘಾಟ್, ಮತ್ತೊಂದೆಡೆ ಚಾರ್ಮಾಡಿ ಘಾಟ್, ಇನ್ನೊಂದು ಸಂಪಾಜೆ ಘಾಟ್ ಕುಸಿಯಲು ಕಾರಣವಾಗುತ್ತಿದೆ. ಸಕಲೇಶಪುರ ವ್ಯಾಪ್ತಿಯ ಎತ್ತಿನಹೊಳೆ ಯೋಜನೆಗಾಗಿ ಬೃಹತ್ ಬೆಟ್ಟಗಳನ್ನು ಮತ್ತು ಅಲ್ಲಿನ ಶೋಲಾ ಕಾಡುಗಳನ್ನು ಕಡಿದು ಸಮತಟ್ಟು ಮಾಡಿದ್ದು ಇಂಥ ದುರ್ಘಟನೆಗೆ ಕಾರಣವಾಗುತ್ತಿದೆ ಎಂದು ಪರಿಸರ ತಜ್ಞರು ಹೇಳಿದ್ದರೂ, ರಾಜ್ಯ ಸರಕಾರ ಮಾತ್ರ ನಿರ್ಲಕ್ಷ್ಯ ವಹಿಸಿದೆ. ಕಪಟ ರಾಜಕಾರಣಿಗಳ ಹೀನ ಕೆಲಸದಿಂದಾಗಿ ಬಡಪಾಯಿ ಜನರು ಬೀದಿಗೆ ಬೀಳುತ್ತಿದ್ದಾರೆ. ಪ್ರತಿ ವರ್ಷ ಮಳೆಗಾಲದಲ್ಲಿ ಕೊಡಗು, ಚಿಕ್ಕಮಗಳೂರು, ದಕ್ಷಿಣ ಕನ್ನಡ ಭಾಗದ ಬೆಟ್ಟಗಳು ಬಿರುಕು ಬಿಟ್ಟು ಕುಸಿದು ಬೀಳುತ್ತಿರುವುದಕ್ಕೆ ಇಂಥ ಅವೈಜ್ಞಾನಿಕ ಯೋಜನೆಯೇ ಕಾರಣ ಎಂಬುದನ್ನು ಅಧಿಕಾರಿಗಳು ಮುಚ್ಚಿ ಹಾಕುತ್ತಿರುವುದು ನಮ್ಮ ನಡುವಿನ ದುರಂತವೇ ಸರಿ..
01-08-25 02:55 pm
Bangalore Correspondent
ಧರ್ಮ 'ಸ್ಥಳ' ಕೇಸ್ ; ಪಾಯಿಂಟ್ ನಂ.1ರಲ್ಲಿ ಸಿಕ್ಕ...
01-08-25 01:31 pm
ಕೆಆರ್ ಐಡಿಎಲ್ ನಿಗಮವನ್ನೇ ಗುಡಿಸಿ ಹಾಕಿದ ಗುಮಾಸ್ತ !...
01-08-25 11:47 am
ಪಾಕಿಸ್ತಾನದಿಂದಲೇ ಭಾರತವನ್ನು ಸ್ಫೋಟಿಸುತ್ತೇನೆ ! ಗೋ...
31-07-25 11:20 pm
Kolar woman blood group: ಕೋಲಾರದ ಮಹಿಳೆಯಲ್ಲಿ ವಿ...
31-07-25 10:20 am
01-08-25 11:44 am
HK News Desk
2008ರ ಮಾಲೆಗಾಂವ್ ಸ್ಫೋಟ ಪ್ರಕರಣ ; ಸಾಧ್ವಿ ಪ್ರಜ್ಞ...
31-07-25 10:08 pm
Trump, Modi, Export Tariff: ಸ್ನೇಹಿತ ಎನ್ನುತ್ತಲ...
31-07-25 09:51 am
ಪಾಕಿಸ್ತಾನದ ಡಿಜಿಎಂಒ ಕರೆ ಮಾಡಿ ದಾಳಿ ನಿಲ್ಲಿಸಲು ಮನ...
30-07-25 09:06 am
ಜಾರ್ಖಂಡ್ ನಲ್ಲಿ ಭೀಕರ ರಸ್ತೆ ಅಪಘಾತ ; ಸಿಲಿಂಡರ್...
29-07-25 11:58 am
01-08-25 11:45 am
Mangalore Correspondent
ಬಂಟ್ವಾಳ ಪಿಎಸ್ಐ ಕೀರಪ್ಪ ಕಾಂಬಳೆ ಆತ್ಮಹತ್ಯೆ ಪ್ರಕರಣ...
31-07-25 11:16 pm
MCC Bank to Inaugurate 20th Branch in Byndoor...
31-07-25 10:14 pm
KMC Hospital Attavar Trains Armed Forces Doct...
31-07-25 09:14 pm
Mangalore KMC Attavar, Workshop: ಅತ್ತಾವರ ಕೆಎಂ...
31-07-25 09:05 pm
01-08-25 04:27 pm
HK News Desk
Tumakuru Crime, Principal Arrest: ತುಮಕೂರು ; ಹ...
01-08-25 02:31 pm
Mangalore Crime, Police: ಅಪ್ರಾಪ್ತ ಬಾಲಕಿಯನ್ನು...
31-07-25 06:04 pm
Bangalore Cyber Fraud: ಉದ್ಯೋಗಿಯನ್ನ ನಂಬಿ ಲ್ಯಾಪ...
30-07-25 10:42 pm
Mangalore Crime, Arrest: ಉದ್ಯಮಿಗಳಿಗೆ ನಕಲಿ ಆಸ್...
30-07-25 08:48 pm