ಬ್ರೇಕಿಂಗ್ ನ್ಯೂಸ್
25-01-23 10:18 pm HK News Desk ಕರ್ನಾಟಕ
ಬೆಳಗಾವಿ, ಜ.25 : ರಾಜ್ಯದಲ್ಲಿ ಮತ್ತೆ ಸೀಡಿ ವಾರ್ ಶುರುವಾಗಿದೆ. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ವಿರುದ್ಧ ಮತ್ತೆ ಮಾಜಿ ಸಚಿವ, ಸಿಡಿ ಪ್ರಕರಣದ ಸಂತ್ರಸ್ತ ರಮೇಶ್ ಜಾರಕಿಹೊಳಿ ಹರಿಹಾಯ್ದಿದ್ದಾರೆ. ನನ್ನ ಖಾಸಗಿ ವಿಡಿಯೋ ಸೇರಿದಂತೆ ಇನ್ನೂ ಹತ್ತಾರು ಜನರ 110ಕ್ಕೂ ಹೆಚ್ಚು ಸಿ.ಡಿ.ಗಳನ್ನು ಡಿ.ಕೆ.ಶಿವಕುಮಾರ್ ಇಟ್ಟುಕೊಂಡಿದ್ದಾನೆ. ಹಾಗಾಗಿ, ಈ ಸಿ.ಡಿ ಪ್ರಕರಣವನ್ನು ಸಿಬಿಐಗೆ ಒಪ್ಪಿಸಲು ಅಮಿತ್ ಷಾ ಜೊತೆಗೆ ಮಾತಾಡುತ್ತೇನೆ ಎಂದು ಹೇಳಿದ್ದಾರೆ.
‘ನನ್ನ ಸಿ.ಡಿ ಪ್ರಕರಣದಲ್ಲಿ ಈ ‘ಮಹಾನ್ ನಾಯಕ’ ಇರುವುದು ಖಚಿತ. ಆರೋಪಿಯೊಬ್ಬನ ದೇವನಹಳ್ಳಿಯ ಮನೆಯಲ್ಲಿ ತನಿಖೆ ನಡೆದಾಗ ಹಲವು ಸಿ.ಡಿಗಳು ಸಿಕ್ಕಿವೆ. ನನ್ನ ಪ್ರಕರಣದ ತನಿಖೆ ನಡೆಸಿದ ಅಧಿಕಾರಿಯ ಭ್ರಷ್ಟಾಚಾರಕ್ಕೆ ಸಂಬಂಧಿಸಿದ ಸಿ.ಡಿ ಕೂಡ ಸಿಕ್ಕಿದೆ. ಇದೆಲ್ಲವನ್ನೂ ಮುಚ್ಚಿಡಲಾಗಿದೆ. ನನ್ನ ವೈಯಕ್ತಿಕ ಜೀವನ ಹಾಳಾದಂತೆ ಬೇರೊಬ್ಬರಿಗೆ ಆಗಬಾರದು ಎಂಬ ಕಾರಣಕ್ಕೆ ಇದನ್ನು ಸಿಬಿಐಗೆ ಒಪ್ಪಿಸಲು ಆಗ್ರಹಿಸುತ್ತೇನೆ ಎಂದಿದ್ದಾರೆ.

ಆಮಿಷ ಒಡ್ಡಿಲ್ಲ, ಸಹಾಯ ಕೊಡ್ತೇನೆಂದಿದ್ದು..
ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ನಾನು ₹10 ಕೋಟಿ ಖರ್ಚು ಮಾಡುತ್ತೇನೆ, ಮತದಾರರಿಗೆ ತಲಾ ₹6,000 ಕೊಡುತ್ತೇನೆ ಎಂದು ಆಮಿಷ ಒಡ್ಡಿದ್ದಾಗಿ ಕಾಂಗ್ರೆಸ್ಸಿಗರು ಆರೋಪಿಸಿದ್ದಾರೆ. ನಾನು ಯಾವುದೇ ಆಮಿಷ ಒಡ್ಡಿಲ್ಲ. ನಮ್ಮ ಯಾವ ಅಭ್ಯರ್ಥಿಯ ಹೆಸರೂ ಹೇಳಿಲ್ಲ. ಈಗ ನೀತಿ ಸಂಹಿತೆ ಕೂಡ ಇಲ್ಲ. ಮಾತಿನ ಆವೇಶದಲ್ಲಿ ಖರ್ಚು ಮಾಡುತ್ತೇನೆ ಎಂದಿರಬಹುದು. ಈ ಕ್ಷೇತ್ರದ ಶಾಲೆ ಸುಧಾರಣೆ, ರೈತರು, ಬಡವರಿಗೆ ಆರೋಗ್ಯ ಸೌಕರ್ಯ ನೀಡುವ ಉದ್ದೇಶದಿಂದ ಹೇಳಿದ್ದೇನೆ ಹೊರತು ಲಂಚ ಕೊಡುತ್ತೇನೆಂದಲ್ಲ ಎಂದು ಸಮರ್ಥಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಡಿಕೆಶಿ, ಆತನಿಗೆ ಪ್ಯಾಂಟ್ ಬಿಚ್ಚು ಅಂತ ನಾನು ಹೇಳಿದ್ನಾ.. ಹತ್ತು ಸಾವಿರ ಕೊಡುತ್ತೇನೆ ಎನ್ನಲು ನಾನು ಹೇಳಿದ್ದಾ.. ಎಲ್ಲಿ ಬೇಕಾದರು ಹೋಗಲಿ, ಏನು ಸಿಬಿಐ ತನಿಖೆನಾದ್ರು ಮಾಡಲಿ ಎಂದು ಸವಾಲು ಹಾಕಿದ್ದಾರೆ.
DK Shivakumar has more than 110 CDS says Ramesh Jarkiholi.
15-01-26 05:56 pm
HK News Desk
ಧರ್ಮಸ್ಥಳ ಎಸ್ಐಟಿ ತನಿಖೆ ; ತನಿಖೆಯ ಮಾಹಿತಿ ಕೇಳಿ ಸರ...
14-01-26 03:34 pm
ಆನೆ ದಂತದಿಂದ ಮಾಡಲ್ಪಟ್ಟ ರಾಧಾ ಕೃಷ್ಣರ ವಿಗ್ರಹ ಮಾರಾ...
14-01-26 02:54 pm
ಧರ್ಮಸ್ಥಳದಲ್ಲಿ 74 ಅಸಹಜ ಸಾವು ಪ್ರಕರಣ ; ಪ್ರತ್ಯೇಕ...
14-01-26 01:34 pm
ಅಕಾಲಿಕ ಮಳೆಗೆ ಕಂಗಾಲಾದ ಕಾಫಿನಾಡು ; ಭಾರೀ ಮಳೆಗೆ ಕೊ...
13-01-26 10:13 pm
15-01-26 12:14 pm
HK News Desk
ಆಂತರಿಕ ದಂಗೆಯಲ್ಲಿ ಬೆಂದು ಹೋದ ಇರಾನ್ ; 12 ಸಾವಿರಕ್...
14-01-26 10:08 pm
ಜೀವಂತ ನಾಗರಹಾವನ್ನೇ ಜೇಬಿನಲ್ಲಿಟ್ಟು ಆಸ್ಪತ್ರೆಗೆ ಬಂ...
13-01-26 06:39 pm
ರಷ್ಯಾ ಬಳಿಕ ಇರಾನ್ ಮುಂದಿಟ್ಟು ಟ್ರಂಪ್ ಬೆದರಿಕೆ ; ಇ...
13-01-26 04:21 pm
ಮುಂಬೈಗೆ ಬಂದೇ ಬರುತ್ತೇನೆ, ತಾಕತ್ತಿದ್ದರೆ ತಡೆಯಿರಿ....
12-01-26 11:00 pm
15-01-26 10:24 pm
Mangalore Correspondent
ಗೋ ಸೇವೆಗೆ ಜನಸಾಮಾನ್ಯರು ಕೊಡುಗೆ ನೀಡಲು ವೇದಿಕೆ ; ಕ...
15-01-26 10:07 pm
ದಕ್ಷಿಣ ಕನ್ನಡದ ಸರ್ಕಾರಿ ಶಾಲೆಗಳಿಗೆ ಇಸ್ರೇಲ್ ಡಿಜಿ...
15-01-26 09:04 pm
ಮನರೇಗಾ ಜಾರಿಗೆ ಒತ್ತಾಯಿಸಿ ಸುಳ್ಯದಿಂದ ಮುಲ್ಕಿಗೆ ಪಾ...
15-01-26 08:12 pm
ಜ.18ರಂದು ಮಂಗಳೂರಿನಲ್ಲಿ ಪ್ರಪ್ರಥಮ ಜಾಗತಿಕ ಬಿಲ್ಲವರ...
15-01-26 04:01 pm
15-01-26 11:07 pm
Bangalore Correspondent
ಬಾಲಕನ ಅಸಹಜ ಸಾವು ಪ್ರಕರಣ ; ಬಾವಿಗೆ ಬಿದ್ದಾಗ ಜೀವಂತ...
15-01-26 03:01 pm
ಹೂಡಿಕೆ ಹೆಸರಿನಲ್ಲಿ ವಂಚಿಸುತ್ತಿದ್ದ ಖದೀಮರ ಜಾಲ ಬಯಲ...
14-01-26 09:49 pm
Karwar Suicide: ಪ್ರೀತಿ ಒಪ್ಪಿಕೊಳ್ಳುವಂತೆ ನಿರಂತರ...
14-01-26 05:22 pm
ಹೆಂಡತಿ ಮೇಲೆ ಕಣ್ಣು ; ಗುತ್ತಿಗೆದಾರನನ್ನು ಕೊಲೆ ಮಾಡ...
13-01-26 05:28 pm