ಬ್ರೇಕಿಂಗ್ ನ್ಯೂಸ್
12-01-23 10:46 pm Bangalore Correspondent ಕರ್ನಾಟಕ
ಬೆಂಗಳೂರು, ಜ.12 : ಪ್ರಧಾನಿ ನರೇಂದ್ರ ಮೋದಿ ರಾಷ್ಟ್ರೀಯ ಯುವಜನೋತ್ಸವ ಕಾರ್ಯಕ್ರಮದ ನೆಪದಲ್ಲಿ ಹುಬ್ಬಳ್ಳಿಗೆ ಬಂದು ಕರ್ನಾಟಕದ ಚುನಾವಣೆಗೆ ರಣಕಹಳೆ ಮೊಳಗಿಸಿದ್ದರೆ, ಇತ್ತ ರಾಜ್ಯ ಬಿಜೆಪಿಯ ಹಿರಿಯ ನಾಯಕ, ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರನ್ನು ಸದ್ದಿಲ್ಲದೆ ಸೈಡ್ ಲೈನ್ ಮಾಡಲಾಗಿದೆ. ಹುಬ್ಬಳ್ಳಿಯ ಮೋದಿ ಕಾರ್ಯಕ್ರಮಕ್ಕೆ ಯಡಿಯೂರಪ್ಪರಿಗೆ ಆಹ್ವಾನವನ್ನೇ ನೀಡಿರಲಿಲ್ಲ. ಸರ್ಕಾರಿ ಕಾರ್ಯಕ್ರಮ ಆಗಿದ್ದರಿಂದ ಯಡಿಯೂರಪ್ಪರಿಗೆ ಆಹ್ವಾನ ನೀಡಿಲ್ಲ ಎಂದು ಬಿಜೆಪಿ ಸ್ಪಷ್ಟನೆ ನೀಡಿದ್ದರೂ, ಇವೆಲ್ಲ ಯಡಿಯೂರಪ್ಪ ಮತ್ತು ಸಂಗಡಿಗರನ್ನು ಬೇಕೆಂದೇ ಸೈಡ್ ಲೈನ್ ಮಾಡುತ್ತಿರುವುದರ ಸಂಕೇತ ಎನ್ನುವುದು ರಾಜಕೀಯ ವಲಯದಲ್ಲಿ ಚರ್ಚೆಗೊಳಗಾಗಿದೆ.
ಕಳೆದ ಬಾರಿ ಸಿಎಂ ಯಡಿಯೂರಪ್ಪ ಜಾಗಕ್ಕೆ ಬಸವರಾಜ ಬೊಮ್ಮಾಯಿ ಅವರನ್ನು ತಂದ ಬಳಿಕ ನಿಧಾನಕ್ಕೆ ಈ ಪ್ರಕ್ರಿಯೆ ಶುರುವಾಗಿತ್ತು. ಪರ್ಯಾಯ ಲಿಂಗಾಯತ ನಾಯಕರನ್ನಾಗಿ ಬೊಮ್ಮಾಯಿ ಅವರನ್ನು ಬಿಂಬಿಸುವುದು ಬಿಜೆಪಿ ಪ್ಲಾನ್ ಆಗಿತ್ತು. ಅದೇ ಕಾರಣಕ್ಕೆ ಬೊಮ್ಮಾಯಿ ಸರ್ಕಾರದಲ್ಲಿ ಯಡಿಯೂರಪ್ಪನವರಿಗೆ ಯಾವುದೇ ಸ್ಥಾನವಿಲ್ಲ ಎನ್ನುವುದನ್ನು ಪರೋಕ್ಷವಾಗಿ ತೋರಿಸಲಾಗುತ್ತಿದೆ. ಇದನ್ನು ಸಮಾಜಕ್ಕೂ ಸಂದೇಶ ನೀಡಿ, ತಟ್ಟಿ ನೋಡುವ ತಂತ್ರ ಹೆಣೆಯಲಾಗುತ್ತಿದೆ. ಆಮೂಲಕ ಪ್ರಬಲ ಲಿಂಗಾಯತ ಸಮಾಜ ಬೊಮ್ಮಾಯಿ ಅವರನ್ನೇ ತಮ್ಮ ನಾಯಕನಾಗಿ ಸ್ವೀಕರಿಸುವಂತೆ ಮಾಡುವ ಹಿಡನ್ ಉದ್ದೇಶವೂ ಇದರ ಹಿಂದಿದೆ. ಇತ್ತೀಚೆಗೆ ಮಂಡ್ಯದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ನೇತೃತ್ವದ ಬಿಜೆಪಿ ಕಾರ್ಯಕ್ರಮದ ಸಮಯದಲ್ಲಿ ಬಿಎಸ್ವೈ ಸ್ವತಃ ವಿದೇಶಕ್ಕೆ ತೆರಳಿದ್ದರು. ಆ ಕಾರಣದಿಂದ ಅವರಿಗೆ ಆಹ್ವಾನ ನೀಡಿರಲಿಲ್ಲ ಎನ್ನಲಾಗಿತ್ತು. ಆದರೆ ರಾಜ್ಯ ಬಿಜೆಪಿ ಮತ್ತು ಬೊಮ್ಮಾಯಿ ಅವರಿಂದ ಯಡಿಯೂರಪ್ಪ ಅಂತರ ಕಾಯ್ದುಕೊಂಡಿರುವುದು ಮತ್ತು ಇವರೊಳಗೆ ಮುಸುಕಿನ ಗುದ್ದಾಟ ನಡೆಯುತ್ತಿರುವುದು ಗುಟ್ಟಿನ ವಿಚಾರವಾಗಿ ಉಳಿದಿಲ್ಲ.
ಈ ನಡುವೆ, ಯಡಿಯೂರಪ್ಪ ಮಾತ್ರ ಬಿಜೆಪಿಯಲ್ಲಿ ತಮ್ಮನ್ನು ನಿರ್ಲಕ್ಷಿಸಲಾಗಿದೆ ಎಂಬ ಸುದ್ದಿಯನ್ನು ತಳ್ಳಿಹಾಕುತ್ತಲೇ ಬಂದಿದ್ದಾರೆ. ನನಗೆ ನನ್ನದೇ ಆದ ಶಕ್ತಿ ಇದೆ, ನನ್ನನ್ನು ರಾಜಕೀಯವಾಗಿ ಯಾರೂ ಮುಗಿಸಲು ಸಾಧ್ಯವಿಲ್ಲ ಎಂದವರು ಪರೋಕ್ಷ ಟಾಂಗ್ ನೀಡುವುದನ್ನೂ ಮುಂದುವರಿಸಿದ್ದಾರೆ. ಯಡಿಯೂರಪ್ಪ ರಾಜ್ಯ ಬಿಜೆಪಿ ಮತ್ತು ಲಿಂಗಾಯತರ ಪಾಲಿಗೆ ಯಾರೂ ಹಿಮ್ಮೆಟ್ಟಿಸಲಾಗದ ನಾಯಕ ಎನ್ನೋದು ಹೈಕಮಾಂಡ್ ನಾಯಕರಿಗೂ ಗೊತ್ತಿದೆ. ಆದರೆ ಅವರ ಶಕ್ತಿಯನ್ನು ಕುಂದಿಸಲು, ನೈತಿಕ ಸ್ಥೈರ್ಯ ಕುಸಿಯುವಂತೆ ಮಾಡಿ ಅವರೊಂದಿಗಿದ್ದ ಪ್ರಭಾ ವಲಯವನ್ನು ತಗ್ಗಿಸಲು ಬಿಜೆಪಿ ಕೇಂದ್ರ ನಾಯಕರು ಸಿಕ್ಕ ಅವಕಾಶವನ್ನು ಬಳಸಿಕೊಳ್ತಿದ್ದಾರೆ. ಚುನಾವಣೆ ಕಾಲದಲ್ಲಿಯೂ ಹಿರಿಯ ನಾಯಕನ ಸ್ಥೈರ್ಯ ಕುಗ್ಗಿಸುವ ಯತ್ನ ನಡೆದಿದೆ. ಆಮೂಲಕ ಸಂಪೂರ್ಣವಾಗಿ ಯಡಿಯೂರಪ್ಪ ಜೊತೆಗಿದ್ದ ಬಣವನ್ನು ಖಾಲಿ ಮಾಡಿಸುವಲ್ಲಿ ಮತ್ತು ಅವರನ್ನು ಒಬ್ಬಂಟಿಯಾಗಿಸುವಲ್ಲಿ ಸಫಲರಾಗುತ್ತಿದ್ದಾರೆ. ಇತ್ತೀಚೆಗೆ ಬೆಳಗಾವಿ ಅಧಿವೇಶನದ ಸಂದರ್ಭದಲ್ಲಿ ಯಡಿಯೂರಪ್ಪ ಒಬ್ಬಂಟಿಯಾಗಿದ್ದು ಇದೆಲ್ಲವನ್ನೂ ಹೇಳಿತ್ತು.
ಈ ಛೂಬಾಣವನ್ನು ಸಾಬೀತು ಮಾಡುವಂತೆ, ಇತ್ತೀಚೆಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಬಾಯಲ್ಲಿ ಹೇಳಿಸುವ ಪ್ರಯತ್ನ ನಡೆದಿತ್ತು. ಈ ರಾಜ್ಯಕ್ಕೆ ಯಡಿಯೂರಪ್ಪ ಆಗಲೀ, ನಳಿನ್ ಕುಮಾರ್ ಆಗಲೀ ಅನಿವಾರ್ಯ ಅಲ್ಲ. ಪಕ್ಷವೇ ಪರಮೋಚ್ಚ. ನಾಯಕರು ನಗಣ್ಯ ಅನ್ನುವ ಮಾತನ್ನು ಬಹಿರಂಗ ಕಾರ್ಯಕ್ರಮದಲ್ಲಿ ನಳಿನ್ ಹೇಳಿದ್ದರು. ಆಮೂಲಕ, 40 ವರ್ಷಗಳ ಕಾಲ ಪಕ್ಷಕ್ಕಾಗಿ ಮಣ್ಣು ಹೊತ್ತಿದ್ದ ಯಡಿಯೂರಪ್ಪ ಕಾಲ ಮುಗೀತು, ರಾಜ್ಯ ಬಿಜೆಪಿಗೆ ಈಗ ಹಿರಿಯಜ್ಜ ಅನಿವಾರ್ಯ ಅಲ್ಲ ಎನ್ನುವುದನ್ನು ಅಧ್ಯಕ್ಷರೇ ಸಾರಿ ಹೇಳಿದಂತಿತ್ತು. ಇದೀಗ ಯಡಿಯೂರಪ್ಪ ಮತ್ತು ಅವರ ಜೊತೆಗಿದ್ದ ಜಗದೀಶ ಶೆಟ್ಟರ್ ಅವರನ್ನೂ ಹುಬ್ಬಳ್ಳಿ ಕಾರ್ಯಕ್ರಮದಿಂದ ದೂರ ಇಡಲಾಗಿದೆ. ಇದರೊಂದಿಗೆ ಹಳೆ ತಲೆಮಾರಿನ ಮುಖಗಳನ್ನು ಬದಿಗೆ ಸರಿಸುವ ಬಿಜೆಪಿ ಹಿಡನ್ ಅಜೆಂಡಾವನ್ನು ಜಾರಿಗೆ ತರಲಾಗಿದೆ. ನಳಿನ್ ಕುಮಾರ್ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ ಈ ರೀತಿಯ ಮಾತುಗಳನ್ನು ತೇಲಿ ಬಿಡಲಾಗಿತ್ತು. ಅದೀಗ ಚುನಾವಣೆ ಹೊತ್ತಿಗೆ ಕಾರ್ಯರೂಪಕ್ಕೆ ಬರುತ್ತಿರುವುದರ ಸಂಕೇತ ಎನ್ನಬಹುದು.
Karnataka BJP strongman BS Yediyurappa will not be a part of Prime Minister Narendra Modi's National Youth Festival event in Hubballi on Thursday. The party has said the former chief minister wasn't invited since it was a government event. Yediyurappa, who isn't a part of the Basavaraj Bommai-led state government, had skipped a party event led by Union Home Minister Amit Shah in Mandya recently too, as he was out abroad.
13-09-25 10:38 pm
Bangalore Correspondent
ಕುರುಬ ಕ್ರಿಶ್ಚಿಯನ್, ಕುಂಬಾರ ಕ್ರಿಶ್ಚಿಯನ್ ಇದೆಯೇ?...
13-09-25 08:46 pm
Caste Cenus News, Karnataka; ಸೆ.22ರಿಂದ ಅ.7ರ ವ...
13-09-25 07:50 pm
Hassan Accident, 9 killed, Update: ಗಣೇಶ ಮೆರವಣ...
13-09-25 04:31 pm
Hassan truck Accident: ಅರಕಲಗೂಡು ; ಗಣೇಶ ಮೆರವಣಿ...
13-09-25 10:19 am
13-09-25 03:25 pm
HK News Desk
ವಾಷಿಂಗ್ ಮೆಷಿನ್ ವಿಷಯದಲ್ಲಿ ವಾಗ್ವಾದ ; ಅಮೆರಿಕದಲ...
12-09-25 11:33 am
ನೇಪಾಳದಲ್ಲಿ ಕಮ್ಯುನಿಸ್ಟ್ ಸರಕಾರ ಪತನ ; ಹೊಸ ನಾಯಕ ಯ...
10-09-25 04:22 pm
ನೇಪಾಳದಲ್ಲಿ ಹಿಂಸಾಚಾರ ತೀವ್ರ ; ದೇಶ ಬಿಟ್ಟು ಓಡಿದ ಪ...
09-09-25 11:09 pm
ನೂತನ ಉಪ ರಾಷ್ಟ್ರಪತಿಯಾಗಿ ಎನ್.ಡಿ.ಎ ಮೈತ್ರಿಕೂಟದ ಸಿ...
09-09-25 09:38 pm
13-09-25 11:05 pm
Udupi Correspondent
Mangalore, Police, Loud Speakers: ಗಣೇಶೋತ್ಸವಕ್...
12-09-25 10:58 pm
Mahesh Vikram Hegde Arrested, Post Card Kanna...
12-09-25 09:25 pm
Sameer Md, Dharmasthala: ವಿದೇಶದಿಂದ ಫಂಡ್ ಬಂದಿ...
12-09-25 08:53 pm
RTI Dharmasthala Hostels, Mahesh Thimarodi: ಧ...
12-09-25 07:43 pm
13-09-25 11:36 am
Mangalore Correspondent
ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರಗೈದು ಹತ್ಯೆ ; ಬೆಳಗ...
12-09-25 11:07 pm
Ullal Police, Mangalore, Gold Robbery: ತೊಕ್ಕೊ...
12-09-25 10:48 pm
Udupi, Brahmavar Stabbing, Crime: ಬ್ರಹ್ಮಾವರ ;...
12-09-25 05:31 pm
Mangalore Police, Arrest: ಉರ್ವಾದಲ್ಲಿ ಪೊಲೀಸ್ ಕ...
11-09-25 09:13 pm