ಬ್ರೇಕಿಂಗ್ ನ್ಯೂಸ್
11-01-23 12:19 pm HK News Desk ಕರ್ನಾಟಕ
ಬೆಳಗಾವಿ, ಜ.11: ಸ್ಯಾಂಟ್ರೋ ರವಿ ಮತ್ತು ಸೈಕಲ್ ರವಿ ಬಿಜೆಪಿ ಸರ್ಕಾರದ ಮುತ್ತು ರತ್ನಗಳಿದ್ದಂತೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಬೆಳಗಾವಿಯಲ್ಲಿ ವ್ಯಂಗ್ಯವಾಡಿದ್ದಾರೆ.
ಮಹಿಳೆಯರು ಕುಂಕುಮ ಹಚ್ಚಿದಾಗ ಒಂಥರಾ, ಮೂಗುತಿ ಹಾಕಿದಾಗ ಇನ್ನೊಂಥರಾ ಹೇಗೆ ಕಾಣ್ತಾರೋ ಹಾಗೆ ಇವರೆಲ್ಲ ಈ ಸರ್ಕಾರದ ಮುತ್ತು ರತ್ನಗಳಿದ್ದಂತೆ ಎಂದು ಡಿ.ಕೆ.
ಶಿವಕುಮಾರ್ ಅವರು ಕ್ರಿಮಿನಲ್‌ಗಳನ್ನು ಹೆಣ್ಣು ಮಕ್ಕಳ ಸೌಂದರ್ಯಕ್ಕೆ ಹೋಲಿಸಿದರು.

ʻʻಸೈಕಲ್ ರವಿ, ಸ್ಯಾಂಟ್ರೋ ರವಿ ಮುತ್ತು ರತ್ನಗಳಿದ್ದಂತೆ, ಈ ಸರ್ಕಾರಕ್ಕೆ ಶೋಭೆ ತರುತ್ತಿದ್ದಾರೆ. ಬಿಜೆಪಿ ನಾಯಕರು ಎಂದೆಂದೂ ನೆನಪು ಇಟ್ಟುಕೊಳ್ಳುವಂಥವರು ಇವರೆಲ್ಲʼʼ ಎಂದು ವ್ಯಂಗ್ಯವಾಡಿದರು.
ಕಾಂಗ್ರೆಸ್‌ನ ಬಹು ನಿರೀಕ್ಷೆಯ ಬಸ್ ಯಾತ್ರೆಯ ಆರಂಭಕ್ಕಾಗಿ ಬೆಳಗಾವಿಗೆ ಬಂದಿರುವ ಅವರು, ʻʻಕರ್ನಾಟಕ ಜನರ ಸಮಸ್ಯೆ, ನೋವು ಅಭಿಪ್ರಾಯ ಹೇಳಲು ಅವರ ಮುಂದೆ ಹೋಗುತ್ತಿದ್ದೇವೆʼʼ ಎಂದರು.

ʻʻಮಹಾತ್ಮಾ ಗಾಂಧೀಜಿಯವರು 1924ರಲ್ಲಿ ಇದೇ ಜಾಗದಲ್ಲಿ ಸ್ವಾತಂತ್ರ್ಯ ಹೋರಾಟದ ಮಹಾ ಅಧಿವೇಶನ ನಡೆಸಿದ್ದರು. ಅದೇ ವೀರಸೌಧದಿಂದಲೇ ಪ್ರಜಾಧ್ವನಿ ಯಾತ್ರೆಗೆ ಚಾಲನೆ ನೀಡಲಿದ್ದೇವೆʼʼ ಎಂದ ಅವರು, ʻʻಸರ್ಕಾರದ ಕೊಲೆ, ಕಾಯಿಲೆ, ಭ್ರಷ್ಟಾಚಾರ ತೊಳೆಯುತ್ತೇವೆʼʼ ಎಂದರು.
ʻʻಬಿಜೆಪಿಗೆ ರಾಜ್ಯದಲ್ಲಿ ಅಭಿವೃದ್ಧಿ ಚಟುವಟಿಕೆ ನಡೆಸಲು ಮಾಡಲು ಸಾಕಷ್ಟು ಅವಕಾಶಗಳಿದ್ದವು. ಬಂಡವಾಳ ಆಕರ್ಷಿಸುವ, ಉದ್ಯೋಗ ಸೃಷ್ಟಿಸುವ ಅವಕಾಶಗಳು ಇದ್ದವು. ಆದರೆ ಮೂರುವರೆ ವರ್ಷದಿಂದ ಈ ಸರ್ಕಾರ ಜನರ ಶಾಪಕ್ಕೆ ಒಳಗಾಗಿದೆ. ರಾಜ್ಯಕ್ಕೆ ಅಂಟಿರುವ ಶಾಪ ನಿರ್ಮೂಲನೆ ಮಾಡಲು ಪವಿತ್ರ ಭೂಮಿಯಿಂದ ಯಾತ್ರೆ ಆರಂಭಿಸುತ್ತಿದ್ದೇವೆʼʼ ಎಂದು ಡಿ.ಕೆ. ಶಿವಕುಮಾರ್ ಹೇಳಿದರು.

ʻʻಕರ್ನಾಟದ ಬಿಜೆಪಿ ಸರ್ಕಾರ ಭ್ರಷ್ಟಾಚಾರದ ರಾಜಧಾನಿ. ನಾವು ಅಧಿಕಾರಕ್ಕೆ ಬಂದರೆ ಜನರಿಗೆ ಒಳ್ಳೆಯ ಆಡಳಿತ ನೀಡುವ ಭರವಸೆ ನೀಡುತ್ತೇವೆʼʼ ಎಂದ ಡಿ.ಕೆ. ಶಿವಕುಮಾರ್, ʻʻಈ ತಿಂಗಳು ರಾಜ್ಯರ ಹಲವೆಡೆ ಮೊದಲ ಹಂತದ ಯಾತ್ರೆ ನಡೆಯಲಿದೆ. ನಮ್ಮ ಯಾತ್ರೆ ಬಗ್ಗೆ ಬಿಜೆಪಿ ಏನೇ ಟೀಕೆ ಮಾಡಲಿ. ಅವರು ಟೀಕೆ ಮಾಡಬೇಕು, ನಮಗೂ ಅನುಕೂಲʼʼ ಎಂದರು.
ಬಿಜೆಪಿ ತಾನು ಮಾಡಿದ ಪಾಪದ ಕೆಲಸಗಳಿಗೆ ಈ ರಾಜ್ಯದ ಜನರಿಗೆ ಉತ್ತರ ಕೊಡಬೇಕು. ಪಾಪದ ಪುರಾಣದ ಪಟ್ಟಿ ನಮ್ಮ ಬಳಿ ಇದೆ, ಅದನ್ನು ಜನರಿಗೆ ತಿಳಿಸುವ ಪ್ರಯತ್ನ ಮಾಡುತ್ತೇವೆ ಎಂದರು ಡಿ.ಕೆ.ಶಿವಕುಮಾರ್.
Santro ravi and cycle ravi are precious gems of BJP party slams D K Shivakumar in Belagavi.
15-01-26 05:56 pm
HK News Desk
ಧರ್ಮಸ್ಥಳ ಎಸ್ಐಟಿ ತನಿಖೆ ; ತನಿಖೆಯ ಮಾಹಿತಿ ಕೇಳಿ ಸರ...
14-01-26 03:34 pm
ಆನೆ ದಂತದಿಂದ ಮಾಡಲ್ಪಟ್ಟ ರಾಧಾ ಕೃಷ್ಣರ ವಿಗ್ರಹ ಮಾರಾ...
14-01-26 02:54 pm
ಧರ್ಮಸ್ಥಳದಲ್ಲಿ 74 ಅಸಹಜ ಸಾವು ಪ್ರಕರಣ ; ಪ್ರತ್ಯೇಕ...
14-01-26 01:34 pm
ಅಕಾಲಿಕ ಮಳೆಗೆ ಕಂಗಾಲಾದ ಕಾಫಿನಾಡು ; ಭಾರೀ ಮಳೆಗೆ ಕೊ...
13-01-26 10:13 pm
15-01-26 12:14 pm
HK News Desk
ಆಂತರಿಕ ದಂಗೆಯಲ್ಲಿ ಬೆಂದು ಹೋದ ಇರಾನ್ ; 12 ಸಾವಿರಕ್...
14-01-26 10:08 pm
ಜೀವಂತ ನಾಗರಹಾವನ್ನೇ ಜೇಬಿನಲ್ಲಿಟ್ಟು ಆಸ್ಪತ್ರೆಗೆ ಬಂ...
13-01-26 06:39 pm
ರಷ್ಯಾ ಬಳಿಕ ಇರಾನ್ ಮುಂದಿಟ್ಟು ಟ್ರಂಪ್ ಬೆದರಿಕೆ ; ಇ...
13-01-26 04:21 pm
ಮುಂಬೈಗೆ ಬಂದೇ ಬರುತ್ತೇನೆ, ತಾಕತ್ತಿದ್ದರೆ ತಡೆಯಿರಿ....
12-01-26 11:00 pm
16-01-26 12:31 pm
Mangalore Correspondent
ಲಕ್ಕಿ ಸ್ಕೀಮ್ ಕಂಪೆನಿಗಳಿಗೆ ಬೀಗ ಜಡಿಯಿರಿ ; ನೂರಕ್ಕ...
15-01-26 10:24 pm
ಗೋ ಸೇವೆಗೆ ಜನಸಾಮಾನ್ಯರು ಕೊಡುಗೆ ನೀಡಲು ವೇದಿಕೆ ; ಕ...
15-01-26 10:07 pm
ದಕ್ಷಿಣ ಕನ್ನಡದ ಸರ್ಕಾರಿ ಶಾಲೆಗಳಿಗೆ ಇಸ್ರೇಲ್ ಡಿಜಿ...
15-01-26 09:04 pm
ಮನರೇಗಾ ಜಾರಿಗೆ ಒತ್ತಾಯಿಸಿ ಸುಳ್ಯದಿಂದ ಮುಲ್ಕಿಗೆ ಪಾ...
15-01-26 08:12 pm
15-01-26 11:07 pm
Bangalore Correspondent
ಬಾಲಕನ ಅಸಹಜ ಸಾವು ಪ್ರಕರಣ ; ಬಾವಿಗೆ ಬಿದ್ದಾಗ ಜೀವಂತ...
15-01-26 03:01 pm
ಹೂಡಿಕೆ ಹೆಸರಿನಲ್ಲಿ ವಂಚಿಸುತ್ತಿದ್ದ ಖದೀಮರ ಜಾಲ ಬಯಲ...
14-01-26 09:49 pm
Karwar Suicide: ಪ್ರೀತಿ ಒಪ್ಪಿಕೊಳ್ಳುವಂತೆ ನಿರಂತರ...
14-01-26 05:22 pm
ಹೆಂಡತಿ ಮೇಲೆ ಕಣ್ಣು ; ಗುತ್ತಿಗೆದಾರನನ್ನು ಕೊಲೆ ಮಾಡ...
13-01-26 05:28 pm