ಬ್ರೇಕಿಂಗ್ ನ್ಯೂಸ್
11-12-22 06:59 pm Bangalore Correspondent ಕರ್ನಾಟಕ
ಬೆಂಗಳೂರು, ಡಿ.11: ನಡುರಾತ್ರಿಯಲ್ಲಿ ತಮ್ಮ ಮನೆ ಪಕ್ಕದಲ್ಲಿ ನಡೆದು ಹೋಗುತ್ತಿದ್ದ ದಂಪತಿಯನ್ನು ಹೊಯ್ಸಳ ಪೊಲೀಸರು ಹಣಕ್ಕಾಗಿ ಪೀಡಿಸಿದ ಆರೋಪ ಕೇಳಿಬಂದಿದ್ದು, ಈ ಬಗ್ಗೆ ಕಿರುಕುಳಕ್ಕೊಳಗಾದ ವ್ಯಕ್ತಿಯೊಬ್ಬರು ಟ್ವೀಟ್ ಮಾಡಿ ಹಿರಿಯ ಪೊಲೀಸ್ ಅಧಿಕಾರಿಗಳ ಗಮನ ಸೆಳೆದಿದ್ದಾರೆ. ಸಂಪಿಗೆಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಮಾನ್ಯತಾ ಟೆಕ್ ಪಾರ್ಕ್ ಬಳಿ ಘಟನೆ ನಡೆದಿದ್ದು, ತನಿಖೆ ಕೈಗೆತ್ತಿಕೊಂಡ ಹಿರಿಯ ಪೊಲೀಸ್ ಅಧಿಕಾರಿಗಳು ಇಬ್ಬರು ಪೊಲೀಸ್ ಸಿಬಂದಿಯನ್ನು ಅಮಾನತು ಮಾಡಿದ್ದಾರೆ.
ಕಾರ್ತಿಕ್ ಪತ್ರಿ ಎಂಬವರು ಟ್ವೀಟ್ ಮಾಡಿದ್ದು, ರಾತ್ರಿ 12.30ರ ವೇಳೆಗೆ ನಾನು ಪತ್ನಿಯ ಜೊತೆಗೆ ಗೆಳೆಯನ ಮನೆಯಲ್ಲಿ ಕೇಕ್ ಕಟ್ಟಿಂಗ್ ಸಮಾರಂಭಕ್ಕೆ ಹೋಗಿ ನಡೆದುಕೊಂಡು ಬರುತ್ತಿದ್ದೆವು. ಈ ವೇಳೆ, ಹೊಯ್ಸಳ ವಾಹನದ ಪೊಲೀಸರು ನಮ್ಮ ಹತ್ತಿರ ವಾಹನ ನಿಲ್ಲಿಸಿ ತಮ್ಮ ಐಡಿಯನ್ನು ತೋರಿಸಿದ್ದಾರೆ. ಆನಂತರ, ಇಷ್ಟೊತ್ತಿಗೆ ಅಪರಾತ್ರಿಯಲ್ಲಿ ಹೀಗೆ ನಡೆದುಕೊಂಡು ಹೋಗಬಾರದು ಅನ್ನುವುದು ಗೊತ್ತಿಲ್ಲವೇ.. ನೀವ್ಯಾಕೆ ಹೀಗೆ ನಡೆದು ಹೋಗುತ್ತಿದ್ದೀರಿ ಎಂದು ಪ್ರಶ್ನೆ ಮಾಡಿದ್ದಾರೆ.
ಆನಂತರ, ತಮಗೆ ಅಂತಹ ನಿಯಮ ಇರುವುದು ಗೊತ್ತಿಲ್ಲ. ಓಕೆ, ಮುಂದೆ ಹೀಗೆ ನಡೆದುಕೊಂಡು ಹೋಗಲ್ಲ ಎಂದು ದಂಪತಿ ಮುಂದೆ ಹೋಗಲು ಮುಂದಾಗಿದ್ದಾರೆ. ಆದರೆ ಪೊಲೀಸರು ಹಾಗೆ ಬಿಟ್ಟು ಕಳಿಸೋಕೆ ಆಗಲ್ಲ. ನೀವು ನಿಯಮ ಮುರಿದಿದ್ದೀರಿ. ಇದಕ್ಕಾಗಿ ಮೂರು ಸಾವಿರ ದಂಡ ಕಟ್ಟಬೇಕು ಎಂದು ಹೇಳಿದ್ದಾರೆ. ದಂಪತಿ ತಮ್ಮ ಆಧಾರ್ ಕಾರ್ಡ್ ತೋರಿಸಿ, ನಾವು ಇಲ್ಲಿಯದೇ ನಿವಾಸಿಗಳು ಎಂದು ಹೇಳಿ ಬೇಡಿಕೊಂಡರೂ ದಂಡ ಕಟ್ಟದೆ ಬಿಡುವುದಿಲ್ಲ ಎಂದಿದ್ದಾರೆ. ಕೊನೆಗೆ, ಒಂದು ಸಾವಿರಕ್ಕೆ ದಂಡವನ್ನು ಇಳಿಸಿ, ಪೇಟಿಎಂ ಮಾಡುವಂತೆ ಸೂಚಿಸಿದ್ದಾರೆ. ದಂಪತಿ ಕೊನೆಗೆ ಗತಿಕಾಣದೆ ಒಂದು ಸಾವಿರ ರೂ. ಹಣ ಕೊಟ್ಟು ಜಾಗ ಖಾಲಿ ಮಾಡಿದ್ದಾರೆ.
ಈ ಬಗ್ಗೆ ಕಾರ್ತಿಕ್ ಪತ್ರಿ ಬೆಂಗಳೂರು ಕಮಿಷನರನ್ನು ಉದ್ದೇಶಿಸಿ 15 ಸರಣಿ ಟ್ವೀಟ್ ಗಳನ್ನು ಮಾಡಿದ್ದು, ಸಾರ್ವಜನಿಕರ ಗಮನ ಸೆಳೆದಿದ್ದಾರೆ. ಟ್ವೀಟ್ ಬಗ್ಗೆ ಪ್ರತಿಕ್ರಿಯೆ ನೀಡಿರುವ ಡಿಸಿಪಿ ಅನೂಪ್ ಶೆಟ್ಟಿ, ಆ ರೀತಿ ವರ್ತಿಸಿದವರು ಯಾರೆಂದು ಪತ್ತೆ ಮಾಡಿದ್ದೇವೆ. ಅವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ಮರು ಟ್ವೀಟ್ ಮಾಡಿದ್ದಾರೆ.
A couple in Karnataka's Bengaluru was on Thursday midnight allegedly harassed by policemen who forced them to pay ₹ 1,000 through payment app PayTm for 'breaking the law' by walking on the street near their home after 11 pm, which they said wasn't allowed. The couple was walking home from a birthday cake-cutting event. Police have launched a probe, and a constable and a head constable attached with the Sampigehalli police station have been suspended.
12-11-25 11:10 pm
Bangalore Correspondent
ಧರ್ಮಸ್ಥಳ ಶವ ಹೂತ ಪ್ರಕರಣದಲ್ಲಿ ಎಸ್ಐಟಿ ತನಿಖೆಯ ತಡ...
12-11-25 11:06 pm
ಯಾರೂ ಗೂಟ ಹೊಡೆದು ಇರಕ್ಕಾಗಲ್ಲ, ಬಿಹಾರ ಚುನಾವಣೆ ಟೈಮ...
12-11-25 09:03 pm
ವಿಮಾನ ನಿಲ್ದಾಣದಲ್ಲಿ ನಮಾಜ್ ; ಅವರು ಎಲ್ಲಾದ್ರೂ ಶ್ರ...
10-11-25 07:17 pm
54 ಹೆಕ್ಟೇರ್ ಅರಣ್ಯ ನಾಶ ಭೀತಿ ; ಶರಾವತಿ ಪಂಪ್ಡ್ ಸ್...
10-11-25 02:58 pm
12-11-25 02:54 pm
HK News Desk
ದೆಹಲಿ ಘಟನೆ, ಆತ್ಮಹತ್ಯಾ ಬಾಂಬರ್ ಆಗಿರಲಿಲ್ಲ, ಆಕಸ್ಮ...
11-11-25 10:56 pm
Mangaluru Kasaragod Highway: ಮಂಗಳೂರು- ಕಾಸರಗೋಡ...
11-11-25 10:20 pm
ಕೆಂಪುಕೋಟೆ ಕಾರು ಬ್ಲಾಸ್ಟ್ ಪ್ರಕರಣ ; ಜೈಶ್ ಉಗ್ರರ ಲ...
11-11-25 03:28 pm
ಐ-20 ಕಾರು ಕೆಂಪುಕೋಟೆ ಸಿಗ್ನಲ್ ನಲ್ಲಿದ್ದಾಗ ಬ್ಲಾಸ್...
10-11-25 11:07 pm
12-11-25 06:56 pm
Mangalore Correspondent
Ullal Dargah Committee: ಉಳ್ಳಾಲ ದರ್ಗಾ ಕಮಿಟಿಯಲ್...
11-11-25 10:42 pm
Bomb blast in New Delhi, High Alert in Dakshi...
11-11-25 10:15 pm
Bhagvati Prem Ship, Mangalore: ಸುರತ್ಕಲ್ ; ಮರಳ...
08-11-25 08:31 pm
ಬೆಂಗಳೂರು- ಮಂಗಳೂರು ಹೈಸ್ಪೀಡ್ ಕಾರಿಡಾರ್ ; ಶಿರಾಡ...
07-11-25 10:58 pm
12-11-25 12:32 pm
Mangalore Correspondent
ಬೆಳ್ತಂಗಡಿ ಶ್ರೀರಾಮ ಕ್ರೆಡಿಟ್ ಸೊಸೈಟಿಯಲ್ಲಿ ಭಾರೀ ಅ...
11-11-25 06:33 pm
Fraud Dream Deal Mangalore, KSRTC: ತಿಂಗಳಿಗೆ ಒ...
09-11-25 10:27 pm
ಬಹುಕೋಟಿ ವಂಚಕ ರೋಷನ್ ಸಲ್ದಾನಗೆ ಸೇರಿದ 2.85 ಕೋಟಿ ಮ...
09-11-25 03:50 pm
ಕೋಮುದ್ವೇಷದ ಕೊಲೆ ; ಪ್ರತೀಕಾರಕ್ಕೆ ಪ್ರಚೋದಿಸಿ ಇನ್...
08-11-25 11:15 pm