ಬ್ರೇಕಿಂಗ್ ನ್ಯೂಸ್
12-10-22 08:11 pm HK News Desk ಕರ್ನಾಟಕ
ಹಾವೇರಿ, ಅ.12 : ಮುಖ್ಯಮಂತ್ರಿಗಳ ತವರು ಜಿಲ್ಲೆ ಹಾವೇರಿಯಲ್ಲಿಯೇ ಆರ್ ಎಸ್ಎಸ್ ಪ್ರಮುಖರ ಮೇಲೆ ಅನ್ಯಧರ್ಮೀಯ ಯುವಕರು ಹಲ್ಲೆ ನಡೆಸಿದ ಘಟನೆ ನಡೆದಿದೆ. ಪ್ರಕರಣ ಸಂಬಂಧಿಸಿ ಪೊಲೀಸರು 20 ಜನರನ್ನ ಬಂಧಿಸಿದ್ದು, ಸ್ಥಳದಲ್ಲಿ ಬೂದಿಮುಚ್ಚಿದ ಪರಿಸ್ಥಿತಿ ನಿರ್ಮಾಣಗೊಂಡಿದೆ.
ಅ.7ರಿಂದ ರಟ್ಟಿಹಳ್ಳಿ ಪಟ್ಟಣದಲ್ಲಿ ಆರೆಸ್ಸೆಸ್ ಶಿಬಿರ ನಡೆಯುತ್ತಿದ್ದು, ಅ.14ರಂದು ಬೃಹತ್ ಪಥಸಂಚಲನ ನಡೆಯಲಿದೆ. ಪಥ ಸಂಚಲನದ ಬಗ್ಗೆ ರೂಟ್ ಮ್ಯಾಪ್ ಪರಿಶೀಲನೆಗೆಂದು ಆರೆಸ್ಸೆಸ್ ಪ್ರಮುಖರು ಮಂಗಳವಾರ ರಾತ್ರಿ ಬಸ್ ನಿಲ್ದಾಣದ ಮುಂಭಾಗಕ್ಕೆ ಬಂದಿದ್ದರು. ಈ ವೇಳೆ, ಏಕಾಏಕಿ ಸೇರಿದ ನೂರಕ್ಕೂ ಹೆಚ್ಚು ಜನರು ದಾಳಿ ನಡೆಸಿದ್ದಾರೆ. ಹಾವೇರಿ ಹಾಗೂ ಧಾರವಾಡ ಜಿಲ್ಲೆಯ ಆರ್ ಎಸ್ ಎಸ್ ಪ್ರಮುಖರ ಮೇಲೆ ಹಲ್ಲೆಯಾಗಿದೆ. ಹಲ್ಲೆಯಲ್ಲಿ ಕೆಲವರ ತಲೆಗೆ ಗಂಭೀರ ಗಾಯಗಳಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆರ್ ಎಸ್ ಎಸ್ ಪ್ರಮುಖರಾದ ಗುರುರಾಜ್ ಕುಲಕರ್ಣಿ, ಚಂದ್ರಣ್ಣ, ಮಾಲತೇಶ, ಸುನೀಲ್ ಎಂಬವರ ಮೇಲೆ ಹಲ್ಲೆ ನಡೆದಿದ್ದು, ಸ್ಥಳದಲ್ಲಿದ್ದ ಕಾರಿನ ಗಾಜು ಒಡೆದು ದಾಂಧಲೆ ನಡೆಸಲಾಗಿದೆ.
ರಟ್ಟಿಹಳ್ಳಿ ಪಟ್ಟಣದಲ್ಲಿ 144 ಸೆಕ್ಷನ್ ಜಾರಿಗೊಳಿಸಿದ್ದು ಮುಂಜಾಗ್ರತಾ ಕ್ರಮವಾಗಿ ಹೆಚ್ಚಿನ ಪೊಲೀಸರ ನಿಯೋಜನೆ ಮಾಡಲಾಗಿದೆ. ರಟ್ಟಿಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, 20 ಜನರನ್ನ ಬಂಧಿಸಲಾಗಿದೆ. ಆರೆಸ್ಸೆಸ್ ಪರವಾಗಿ ಪೇಟೆಯಲ್ಲಿ ಹಾಕಿದ್ದ ಬ್ಯಾನರ್, ಬಂಟಿಂಗ್ಸ್, ಕೇಸರಿ ಪತಾಕೆಗಳನ್ನ ಪೊಲೀಸರು ತೆರವು ಮಾಡಿದ್ದಾರೆ. ಬಂಧಿತರ ಪೈಕಿ ರಟ್ಟಿಹಳ್ಳಿ ತಾಲೂಕಿನ ಅಂಜುಮನ್ ಕಮಿಟಿ ಅಧ್ಯಕ್ಷನೂ ಸೇರಿದ್ದಾನೆ. ದಾಳಿ ಘಟನೆಯಲ್ಲಿ ಅಂಜುಮನ್ ಕಮಿಟಿ ಅಧ್ಯಕ್ಷ ಮಮ್ಮು ಎ ವನ್ ಆರೋಪಿಯಾಗಿದ್ದಾನೆ.
Over 20 people were arrested for allegedly assaulting a Rashtriya Swayamsevak Sangh (RSS) worker at a village in Karnatakas Haveri district on Tuesday night. One of the arrested men is the president of Anjuman-I-Islam, a Muslim organisation.The incident took place at Rattehalli village in Karnatakas Haveri district. The RSS worker was in the village for a path sanchaln (path laying) work in the village.The RSS worker was allegedly attacked by members of another community. Initially, an argument broke out which later escalated into a fight.
06-09-25 08:28 pm
HK News Desk
Prathap Simha, Mysuru Dasara: ದಸರಾ ಕುಸ್ತಿ ; ಬ...
06-09-25 07:26 pm
Sonia Gandhi, Dharmasthala: Who Killed the Wo...
05-09-25 11:15 pm
ಭೋವಿ ಅಭಿವೃದ್ಧಿ ನಿಗಮದಲ್ಲಿ ಕಮಿಷನ್ ವಸೂಲಿ ; ಅಧ್ಯಕ...
05-09-25 07:55 pm
ಡಿಸಿಎಂ ಡಿಕೆಶಿ ಬೆಂಬಲಿಗರ ಹತ್ತಾರು ಕೇಸು ಸೇರಿದಂತೆ...
05-09-25 05:40 pm
06-09-25 10:34 am
HK News Desk
ಗಣೇಶ ವಿಸರ್ಜನೆ ಸಡಗರ ಹಿನ್ನೆಲೆ ; ಮುಂಬೈ ಮಹಾನಗರದಲ್...
04-09-25 08:47 pm
ಜಿಎಸ್ಟಿ ತೆರಿಗೆಯಲ್ಲಿ ಭಾರೀ ಪರಿಷ್ಕರಣೆ ; ಕಡೆಗೂ ತೆ...
04-09-25 10:54 am
ತಂದೆ ಸ್ಥಾಪಿಸಿದ ಬಿಆರ್ ಎಸ್ ಪಕ್ಷದಿಂದ ಮಗಳಿಗೆ ಗೇಟ್...
03-09-25 10:04 pm
ಹೊಳೆಯಂತಾದ ದೆಹಲಿಯ ಬೀದಿಗಳು, ನೀರಲ್ಲೇ ಮಾರ್ಕೆಟ್!...
03-09-25 09:59 pm
06-09-25 10:59 pm
Mangalore Correspondent
Mangalore, Dharmasthala, Vittal Gowda, Skull:...
06-09-25 10:15 pm
ಗೋಮಾಂಸ ಭಕ್ಷಕರಿಗೆ ರಾಜ್ಯ ಸರ್ಕಾರ ಶಾದಿ ಭಾಗ್ಯ ರೀತಿ...
06-09-25 05:56 pm
Mla Vedavyas Kamath, Mangalore: ಮಳೆಗೆ ಹದಗೆಟ್ಟ...
06-09-25 04:46 pm
Ullal News, Warrant, Video, Mangalore: ಮೊದಲ ಪ...
05-09-25 08:12 pm
06-09-25 08:32 pm
Bangalore Correspondent
60 Crore Fraud, Actress Shilpa Shetty, Raj Ku...
06-09-25 07:45 pm
ಲಷ್ಕರ್ ಉಗ್ರರ ಹೆಸರಲ್ಲಿ ಮುಂಬೈ ಸ್ಫೋಟದ ಬೆದರಿಕೆ ಸಂ...
06-09-25 05:26 pm
Udupi cyber fraud crime; ಷೇರು ಟ್ರೇಡಿಂಗ್ ಹೆಸರಿ...
06-09-25 01:58 pm
ಮುಂಬೈಗೆ 14 ಲಷ್ಕರ್ ಉಗ್ರರ ಎಂಟ್ರಿ ಬೆದರಿಕೆ ! 400...
06-09-25 10:37 am