ಬ್ರೇಕಿಂಗ್ ನ್ಯೂಸ್
12-10-22 04:44 pm HK News Desk ಕರ್ನಾಟಕ
ಕಾರವಾರ, ಅ.12 : ಉತ್ತರ ಕನ್ನಡ ಜಿಲ್ಲೆಗೆ ಪ್ರವಾಸ ಬೆಳೆಸಿದ್ದ ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ರಾತ್ರಿ ವೇಳೆ ಭಟ್ಕಳದಲ್ಲಿ ತಂಗಿ ಯಕ್ಷಗಾನ ವೀಕ್ಷಿಸಿದ್ದಲ್ಲದೇ, ಯಕ್ಷಗಾನ ಪೋಷಾಕು ಧರಿಸಿ ಮಿಂಚಿದ್ದಾರೆ. ಚಿಕ್ಕಬಳ್ಳಾಪುರ ಮೂಲದ ಸುಧಾಕರ್ ಗೆ ಯಕ್ಷಗಾನ ಹೊಸತು. ಹೀಗಾಗಿ ಕರಾವಳಿಯ ಗಂಡುಕಲೆಯ ಬಗ್ಗೆ ಮೆಚ್ಚುಗೆ ತೋರಿದ್ದಲ್ಲದೆ ತಾನೇ ವೇಷ ಧರಿಸಿ ವರಸೆ ನೋಡಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಸ್ಥಳ ವೀಕ್ಷಣೆಗಾಗಿ ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಮತ್ತು ಅಧಿಕಾರಿಗಳು ಕಾರವಾರ, ಕುಮಟಾ ಹಾಗೂ ಭಟ್ಕಳಕ್ಕೆ ಭೇಟಿ ನೀಡಿದ್ದರು. ಭಟ್ಕಳದಲ್ಲಿ ಸಮುದಾಯ ಆಸ್ಪತ್ರೆಯ ವೀಕ್ಷಣೆ ಬಳಿಕ ನೇರವಾಗಿ ಭಟ್ಕಳ ಶಾಸಕ ಸುನಿಲ್ ನಾಯ್ಕ ಅವರ ಫಾರ್ಮ್ ಹೌಸ್‌ಗೆ ತೆರಳಿದ್ದರು. ಸಚಿವರಿಗೆ ಭರ್ಜರಿ ಸ್ವಾಗತ ನೀಡಿದ್ದ ಸುನಿಲ್ ನಾಯ್ಕ, ಸಚಿವರಿಗೆಂದೇ ಕರಾವಳಿಯ ಗಂಡು ಕಲೆಯಾದ ಯಕ್ಷಗಾನ ಆಯೋಜಿಸಿದ್ದರು.


ರಾತ್ರಿ ವೇಳೆ ಬಿರುಸಾದ ಮಳೆಯ ನಡುವೆಯೂ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಸುನಿಲ್ ನಾಯ್ಕರ ಜೊತೆ ಬಡಗುತಿಟ್ಟು ಶೈಲಿಯಲ್ಲಿ "ಭೀಷ್ಮ ವಿಜಯ" ಯಕ್ಷಗಾನ ನೋಡಿದ ಸಚಿವರು ಸಂತೋಷಪಟ್ಟರು. ಯಕ್ಷಗಾನ ನೋಡಿದ ಬಳಿಕ ಕಲಾವಿದರ ಪೋಷಾಕು ಧರಿಸಿ ಸಚಿವರು ಖುಷಿಪಟ್ಟರು. ಕಲಾವಿದರ ಅನುಭವ ಪಡೆದುಕೊಂಡಿದ್ದಲ್ಲದೆ, ಯಕ್ಷಗಾನ ಧಿರಿಸಿನಲ್ಲೇ ಸಚಿವ ಡಾ. ಸುಧಾಕರ್ ಅವರನ್ನು ಸನ್ಮಾನಿಸಲಾಯಿತು. ಯಕ್ಷಗಾನ ವೇದಿಕೆಯಲ್ಲಿ ಬಡಗುತಿಟ್ಟು ಶೈಲಿಯ ಪೋಷಾಕು ಧರಿಸಿ ಮಿಂಚಿದ ಆರೋಗ್ಯ ಸಚಿವ ಡಾ.ಸುಧಾಕರ್ ಅವರನ್ನು ಕಂಡು ಪಕ್ಷದ ಕಾರ್ಯಕರ್ತರು ಕೊಂಡಾಡಿದರಲ್ಲದೇ, ಹಲವರು ಸಚಿವರ ಜೊತೆ ಫೋಟೊ ಕ್ಲಿಕ್ಕಿಸಿಕೊಂಡರು.
Karwar Minister Sudhakar in Yakshagana costume.
22-06-26 08:18 pm
HK News Staffer
ವಿಧಾನ ಪರಿಷತ್ ಚುನಾವಣೆಗೂ ಮುನ್ನ ರಹಸ್ಯ ಸಭೆ ; ಬಿಜೆ...
22-06-26 03:44 pm
ಆಸ್ಪತ್ರೆ ಸಿಬ್ಬಂದಿ ಸ್ಪಂದಿಸದಿದ್ದರೆ ಚಿಂತೆ ಬೇಡ ;...
22-06-26 12:51 pm
Cross Voting Row, Vijayendra: ಅಡ್ಡ ಮತದಾನ ; ಧರ...
21-06-26 02:18 pm
ಧರ್ಮಸ್ಥಳ ಮೇಲಾಣೆ ಅಡ್ಡ ಮತದಾನ ಮಾಡಿಲ್ಲ, ಮೋದಿ ಬಂದಿ...
20-06-26 06:40 pm
22-06-26 12:55 pm
HK News Staffer
ಮರಳು ಮಾಫಿಯಾ ಅಟ್ಟಹಾಸಕ್ಕೆ ಬಿಜೆಪಿ ನಾಯಕ ಸಜೀವ ದಹನ;...
18-06-26 07:17 pm
ಮೋದಿ ನೋಡಲು ಶಾಂತ, ಒಳ್ಳೇ ವ್ಯಕ್ತಿಯಂತೆ ಕಾಣ್ತಾರೆ.....
18-06-26 01:23 pm
ಹೊರ್ಮುಜ್ ಬಿಕ್ಕಟ್ಟು; ಒಮಾನ್ ಕರಾವಳಿಯಲ್ಲಿ ಮತ್ತೊಂದ...
15-06-26 11:18 am
ಬಿರಿಯಾನಿ ಹೆಸರಲ್ಲಿ ಮಹಿಳೆಯ ಮಾನ ಕಳೆದ ಟೆಕ್ಕಿ! ತಮಾ...
14-06-26 09:46 pm
22-06-26 05:23 pm
HK News Staffer
Dr Kakkillaya News: ಕೊರಾನಾ ಮಾಸ್ಕ್ ಹಾಕಿಲ್ಲವೆಂದ...
21-06-26 08:59 pm
Yekkur, Mangalore Accident:ಎಕ್ಕೂರು ಹೆದ್ದಾರಿಯಲ...
21-06-26 01:13 pm
ಮೈಸೂರು ದಸರಾಗೆ ಕಂಬಳ ; ತಯಾರಿ ನಡೆಸಲು ಶಾಸಕ ಅಶೋಕ್...
20-06-26 10:25 pm
ಹಳೆ ಬಂದರು - ಲಕ್ಷದ್ವೀಪ ನಡುವೆ ಬಹುನಿರೀಕ್ಷಿತ ಜೆಟ್...
20-06-26 04:21 pm
22-06-26 10:21 pm
HK News Staffer
ಉಡುಪಿಯಲ್ಲಿ ಮಕ್ಕಳಿಲ್ಲದ ದಂಪತಿಗೆ ಮಗು ಮಾರಾಟ; ವೈದ್...
22-06-26 08:01 pm
ಹಂದಿ ಜ್ವರಕ್ಕೆ ಕಾರವಾರದ ವ್ಯಕ್ತಿ ಮಂಗಳೂರಿನಲ್ಲಿ ಬಲ...
22-06-26 07:58 pm
Brahmarakootlu toll fight: ಟೋಲ್ ತಪ್ಪಿಸಲು ಬ್ರಹ...
22-06-26 12:53 pm
ಕಡಬ ; ಪತ್ನಿಯನ್ನು ಕಡಿದು ಕೊಂದು ನೇಣು ಬಿಗಿದು ಸಾವಿ...
20-06-26 09:13 pm