ಬ್ರೇಕಿಂಗ್ ನ್ಯೂಸ್
08-10-22 07:49 pm Bangalore Correspondent ಕರ್ನಾಟಕ
ಬೆಂಗಳೂರು,ಅ.8 : ಸ್ವಯಂ ಘೋಷಿತ ದೇವಮಾನವ ನಿತ್ಯಾನಂದ ಕೈಲಾಸ ಎಂಬ ಪ್ರತ್ಯೇಕ ರಾಷ್ಟ್ರವನ್ನು ಕಟ್ಟಿಕೊಂಡಿರುವುದು ಗೊತ್ತೇ ಇದೆ. ಈಗ ವಿಶ್ವದ ಎಲ್ಲಾ ಗರ್ಭಿಣಿಯರಿಗೆ ಆಫರ್ ಒಂದನ್ನು ನೀಡಿ ಸುದ್ದಿಯಾಗುತ್ತಿದೆ. ಕೈಲಾಸದಲ್ಲಿ ಬಿಂದಾಸ್ ಆಗಿರುವ ಬಿಡದಿ ಸ್ವಾಮಿ ನಿತ್ಯಾನಂದ, ವಿಶ್ವದ ಎಲ್ಲಾ ಮಹಿಳೆಯರು ಹೆರಿಗೆಗೆ ಕೈಲಾಸಕ್ಕೆ ಬನ್ನಿ ಎಂದು ಆಹ್ವಾನ ನೀಡಿದ್ದಾನೆ.
ಕೈಲಾಸದಲ್ಲಿ ಹೆರಿಗೆಯಾಗುವ ಪ್ರತಿ ಮಗುವಿಗೆ, ವಿಶೇಷವಾದ ಅಲೌಕಿಕವಾದ ಪ್ರಕಾಶಮಾನವಾದ ಶಕ್ತಿಯುಳ್ಳ ಡಿಎನ್‍ಎ ದಯಪಾಲಿಸುವುದಾಗಿ ತಿಳಿಸಿದ್ದು,
ಅಲ್ಲದೇ ಕೈಲಾಸದಲ್ಲಿ ಹೆರಿಗೆಯಾದರೆ ಏನೇನು ಪ್ರಯೋಜನಗಳಿವೆ ಎಂಬುದರ ಕುರಿತಾಗಿ ವೀಡಿಯೋ ಮೂಲಕ ವಿವರಿಸಿದ್ದಾನೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ಈ ವೀಡಿಯೋ ವೈರಲ್ ಆಗುತ್ತಿದೆ. ಕೈಲಾಸದಲ್ಲಿ ಇಡೀ ಬ್ರಹ್ಮಾಂಡಕ್ಕಾಗಿಯೇ ಮೀಸಲಾಗಿರುವ ಶಾಶ್ವತ ಕಾಸ್ಮಿಕ್ ಏರ್‌ಪೋರ್ಟ್ ಹಾಗೂ ಹೆರಿಗೆ ಆಸ್ಪತ್ರೆಯನ್ನು ಸದ್ಯದಲ್ಲೇ ನಿರ್ಮಿಸಲಾಗುತ್ತದೆ.
ಇಲ್ಲಿ ಹೆರಿಗೆಯಾಗುವ ಪ್ರತಿ ಮಗುವಿಗೂ ಪ್ರಬುದ್ಧವಾದಂತಹ ಅಲೌಕಿಕವಾದ ಪ್ರಕಾಶಮಾನವಾದ ಶಕ್ತಿಯುಳ್ಳ ಡಿಎನ್‍ಎ ಒಲಿಯುತ್ತದೆ. ಜೊತೆಗೆ, ಬ್ರಹ್ಮಜ್ಞಾನವುಳ್ಳ ಅನುವಂಶೀಯ ಕೋಡ್ ಅನ್ನು ನೀಡಲಾಗುತ್ತದೆ ಎಂದು ಸ್ಪಷ್ಟಪಡಿಸಿದ್ದಾನೆ. ನೀವು ಎಲ್ಲೇ ಇರಿ, ಯಾವ ದೇಶದಲ್ಲೇ ಇರಿ ಅಲ್ಲೇ ಗರ್ಭಿಣಿಯಾಗಿರಿ. ಆದರೆ, ನೀವು ಹೆರಿಗೆಗೆ ಮಾತ್ರ ಕೈಲಾಸಕ್ಕೆ ಬನ್ನಿ. ಈ ಮೂಲಕ ನಿಮ್ಮ ಮಗುವಿಗೆ ಹಲವು ಪ್ರಯೋಜನಗಳಿವೆ. ಈ ಪ್ರಯೋಜನಗಳನ್ನು ಬಳಸಿಕೊಳ್ಳಿ ಎಂದು ಆಫರ್ ನೀಡಿದ್ದಾನೆ.
Nithyananda gives a bumper offer to pregnant ladies all over the world.
16-01-26 09:38 pm
Bangalore Correspondent
ಹೇಯ್ ಬೆಂಕಿ ಹಚ್ತೀನಿ.. ನಿಂಗೆ ಚಪ್ಪಲಿಲಿ ಹೊಡಿಸ್ತೀನ...
16-01-26 04:35 pm
ಕೆಲಸದ ಒತ್ತಡ ; ಮಕ್ಕಳಿಗೆ ಪಾಠ ಮಾಡಿ ಶಾಲಾ ಕೊಠಡಿಯಲ್...
15-01-26 05:56 pm
ಧರ್ಮಸ್ಥಳ ಎಸ್ಐಟಿ ತನಿಖೆ ; ತನಿಖೆಯ ಮಾಹಿತಿ ಕೇಳಿ ಸರ...
14-01-26 03:34 pm
ಆನೆ ದಂತದಿಂದ ಮಾಡಲ್ಪಟ್ಟ ರಾಧಾ ಕೃಷ್ಣರ ವಿಗ್ರಹ ಮಾರಾ...
14-01-26 02:54 pm
16-01-26 06:33 pm
HK News Desk
ಇಂಗ್ಲಿಷ್ ಮತ್ತು ಯುರೋಪಿಯನ್ ಭಾಷೆಗಳಿಗೂ ಸಂಸ್ಕೃತವೇ...
16-01-26 02:26 pm
ಕುಂಬಳೆ ; ಆರಿಕ್ಕಾಡಿ ಟೋಲ್ ಗೇಟ್, ಕ್ಯಾಮರಾ ಕಿತ್ತೆಸ...
15-01-26 12:14 pm
ಆಂತರಿಕ ದಂಗೆಯಲ್ಲಿ ಬೆಂದು ಹೋದ ಇರಾನ್ ; 12 ಸಾವಿರಕ್...
14-01-26 10:08 pm
ಜೀವಂತ ನಾಗರಹಾವನ್ನೇ ಜೇಬಿನಲ್ಲಿಟ್ಟು ಆಸ್ಪತ್ರೆಗೆ ಬಂ...
13-01-26 06:39 pm
16-01-26 10:28 pm
Mangalore Correspondent
ಡ್ರಗ್ಸ್ ಮುಕ್ತ ಕಾರ್ಯಕ್ಕಾಗಿ ಕಮಿಷನರ್ ದಿಟ್ಟ ಹೆಜ್ಜ...
16-01-26 09:44 pm
ಕರಾವಳಿ ಪ್ರಯಾಣಿಕರಿಗೆ ಸಿಹಿಸುದ್ದಿ ; ಮಂಗಳೂರು- ಮರವ...
16-01-26 07:33 pm
ಡಿಮಾರ್ಟ್ ಶಾಪಿಂಗ್ ಮಾಲ್ ನಲ್ಲಿ ಉದ್ಯೋಗಾವಕಾಶ ಜಾಹಿರ...
16-01-26 12:31 pm
ಲಕ್ಕಿ ಸ್ಕೀಮ್ ಕಂಪೆನಿಗಳಿಗೆ ಬೀಗ ಜಡಿಯಿರಿ ; ನೂರಕ್ಕ...
15-01-26 10:24 pm
16-01-26 09:01 pm
HK News Desk
Cyber Fraud Biggest Bangalore: ದೇಶದ ಅತಿ ದೊಡ್ಡ...
15-01-26 11:07 pm
ಬಾಲಕನ ಅಸಹಜ ಸಾವು ಪ್ರಕರಣ ; ಬಾವಿಗೆ ಬಿದ್ದಾಗ ಜೀವಂತ...
15-01-26 03:01 pm
ಹೂಡಿಕೆ ಹೆಸರಿನಲ್ಲಿ ವಂಚಿಸುತ್ತಿದ್ದ ಖದೀಮರ ಜಾಲ ಬಯಲ...
14-01-26 09:49 pm
Karwar Suicide: ಪ್ರೀತಿ ಒಪ್ಪಿಕೊಳ್ಳುವಂತೆ ನಿರಂತರ...
14-01-26 05:22 pm