ಬ್ರೇಕಿಂಗ್ ನ್ಯೂಸ್
30-09-22 01:35 pm HK News Desk ಕರ್ನಾಟಕ
ವಿಜಯಪುರ, ಸೆ.30 : ಸಂಪುಟ ವಿಸ್ತರಣೆ ಬಗ್ಗೆ ದೆಹಲಿಗೆ ತೆರಳಿ, ಹೈಕಮಾಂಡ್ ಜೊತೆ ಚರ್ಚಿಸಿ ಆದಷ್ಟು ಬೇಗ ಮಾಡ್ತೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಈ ವರ್ಷ 10 ಸಾವಿರ ಕೋಟಿ ಅನುದಾನವನ್ನು ನೀರಾವರಿಗಾಗಿ ವಿನಿಯೋಗ ಮಾಡ್ತೇವೆ. ಯಾವುದೇ ಕಾರಣಕ್ಕು ನೀರಾವರಿ ಯೋಜನೆಗಳಿಗೆ ಹಣ ಬಿಡುಗಡೆಗೆ ಹಿಂದೆ ಮುಂದೆ ನೋಡಲ್ಲ ಎಂದು ಹೇಳಿದರು. ಪಿ.ಎಫ್.ಐ ಬ್ಯಾನ್ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಈಗಾಗಲೇ ಅದ್ರ ಬಗ್ಗೆ ಸಾರ್ವಜನಿಕವಾಗಿ ವ್ಯಾಖ್ಯಾನ ಮಾಡಲಾಗಿದೆ. ಈ ರೀತಿ ಆರೋಪ ಮಾಡುದ್ರಿಂದ ಅವರಿಗೆ (ಕಾಂಗ್ರೆಸ್) ಲಾಭವಾಗಲ್ಲ, ಬೇಳೆ ಬೇಯಲ್ಲ. ಇಲೆಕ್ಷನ್ ಅವಧಿಯಾಗಿದ್ರಿಂದ ಇನ್ನೂ ಜಾಸ್ತಿ ಟೀಕೆಗಳು ಬರ್ತವೆ. ಟೀಕೆ, ಟಿಪ್ಪಣಿಗಳೇ ನನ್ನ ಯಶಸ್ಸಿನ ಮೆಟ್ಟಲು. ಕಾಂಗ್ರೆಸ್ ನಾಯಕರೇ ವಿಧಾನಸಭೆಯಲ್ಲಿ ಬ್ಯಾನ್ ಮಾಡಿ ಅಂತಾ ಆಗ್ರಹಿಸಿದ್ದಾರೆ. ಸದನದ ಒಳಗಡೆ ಹಾಗೂ ಹೊರಗಡೆ, ಯಾಕೆ ಬ್ಯಾನ್ ಮಾಡ್ತಿಲ್ಲ ಎಂದು ಡಿಮ್ಯಾಂಡ್ ಇಟ್ಟಿದ್ರು. ಈಗ ಬ್ಯಾನ್ ಮಾಡಿದ್ದೇವಲ್ಲ, ಇದು ಒಂದು ದಿನದ ಕೆಲಸವಲ್ಲ. ಹತ್ತು ಹಲವಾರು ವರ್ಷಗಳಿಂದ ಆ ಸಂಘಟನೆಗಳು ದೇಶದ್ರೋಹ ಕೆಲಸ ಮಾಡಿದ್ದಾರೆ. ಹವಾಲಾದಿಂದ ಏನ್ ದುಡ್ಡು ತಂದಿದ್ದಾರೆ, ಹೊರಗಡೆ ಇಂದ ಎನ್ ಟ್ರೇನಿಂಗ್ ತಗೊಂಡು ಬಂದಿದ್ದಾರೆ. ಭಯೋತ್ಪಾದನೆಯಲ್ಲಿ ಹೇಗೆ ಸಾಥ್ ಕೊಟ್ಟಿದ್ದಾರೆ. ಎಲ್ಲ ಸಾಕ್ಷಿ ಸಮೇತವಾಗಿ ಇಟ್ಟಿದ್ದೇವೆ, ಕೇವಲ ಕರ್ನಾಟಕ, ಕೇರಳ ಮಾತ್ರವಲ್ಲ, ಇಡೀ ಭಾರತ ದೇಶದಲ್ಲಿ ವ್ಯಾಪಕವಾಗಿ ಆಗಿರುವಂತದ್ದನ್ನ ಮುಂದಿಟ್ಟು ವ್ಯವಸ್ಥಿತವಾಗಿ, ಕಾನೂನು ಬದ್ಧವಾಗಿ ಬ್ಯಾನ್ ಮಾಡಿದ್ದೇವೆ ಎಂದು ಹೇಳಿದರು.
ಆರ್.ಎಸ್.ಎಸ್ ಹಾಗೂ ಬಜರಂಗದಳ ಬ್ಯಾನ್ ಯಾಕಿಲ್ಲ ಎಂಬ ಕಾಂಗ್ರೆಸ್ ನಾಯಕರ ಪ್ರಶ್ನೆಗೆ, ಆರ್.ಎಸ್.ಎಸ್ ಬ್ಯಾನ್ ವಿಚಾರ ಮೂರ್ಖತನದ ಪ್ರಶ್ನೆ. ದೇಶಭಕ್ತಿಯ ಸಂಘಟನೆಗಳನ್ನ ಪಿ.ಎಫ್.ಐಗೆ ಜೋಡಿಸೋದು ಸರಿಯಲ್ಲ. ಯಾರಾದ್ರೂ ಪಿ.ಎಫ್.ಐ ಸಮರ್ಥನೆ ಮಾಡಲು ಸಾಧ್ಯವಿಲ್ಲ, ಅಂತವ್ರು ಇಂತಹ ಬೇಡಿಕೆ ಇಡ್ತಾರೆ. ಅವ್ರ ತುಷ್ಟೀಕರಣ ರಾಜಕಾರಣದ ಫಲವಾಗಿ ಇಂದು ಪಿ.ಎಫ್.ಐ ಹುಟ್ಟಿಕೊಂಡಿರೋದು ಎಂದರು.
ಭಾರತ್ ಜೋಡೋ ರ್ಯಾಲಿ ರಾಜ್ಯಕ್ಕೆ ಎಂಟ್ರಿ ಬಗ್ಗೆ ಸಿಎಂ ಬೊಮ್ಮಾಯಿ ಪ್ರತಿಕ್ರಿಯೆ ನೀಡಲು ನಿರಾಕರಣೆ ಮಾಡಿದರು. ರಾಜ್ಯಕ್ಕೆ ಬೇಕಾಗಿರುವ ಯುಕೆಪಿ ಯೋಜನೆಗಾಗಿ ನಾನು ಬಂದಿರುವೆ. ಇಂತಹ ದೊಡ್ಡ ಯೋಜನೆ ಬಗ್ಗೆ ಮಾತನಾಡುವಾಗ, ರಾಜಕಾರಣ ಬಗ್ಗೆ ಮಾತನಾಡೋದು ಸಿಎಂ ಆಗಿ ಸರಿಯಲ್ಲ ಎಂದು ನುಣುಚಿಕೊಂಡರು.
Cabinet expansion to be held soon, PFI activist are trying to defame the name of RSS slams CM Bommai.
03-09-25 09:00 pm
HK News Desk
ಧರ್ಮಸ್ಥಳ ಚಲೋ' ಬಿಜೆಪಿ ನಾಯಕರ ವಿಡಿಯೋ ಬಳಸಿ ಜಾಲತಾಣ...
03-09-25 08:35 pm
ಪ್ರೀಮಿಯಂ ಬ್ರಾಂಡ್ ಮದ್ಯಗಳ ಬೆಲೆ ಇಳಿಕೆಗೆ ಚಿಂತನೆ ;...
03-09-25 02:30 pm
Mangalore, Moodbidri Police, Constable Shanta...
03-09-25 01:36 pm
ಬಿಬಿಎಂಪಿ ಬದಲು ಗ್ರೇಟರ್ ಬೆಂಗಳೂರು ಅಸ್ತಿತ್ವಕ್ಕೆ ;...
02-09-25 11:04 pm
04-09-25 10:54 am
HK News Desk
ತಂದೆ ಸ್ಥಾಪಿಸಿದ ಬಿಆರ್ ಎಸ್ ಪಕ್ಷದಿಂದ ಮಗಳಿಗೆ ಗೇಟ್...
03-09-25 10:04 pm
ಹೊಳೆಯಂತಾದ ದೆಹಲಿಯ ಬೀದಿಗಳು, ನೀರಲ್ಲೇ ಮಾರ್ಕೆಟ್!...
03-09-25 09:59 pm
ಯಮ‘ಕಂಪನ’ ; ತಾಲಿಬಾನಿಗಳ ನೆಲೆ ಈಗ ಗಢಗಢ..ಭೂಕಂಪಕ್ಕೆ...
03-09-25 07:18 pm
ಅಮೆರಿಕನ್ ಕಂಪನಿಗಳನ್ನು ಬಹಿಷ್ಕರಿಸಲು ರಾಮದೇವ್ ಕರೆ...
01-09-25 01:06 pm
04-09-25 07:57 pm
Mangalore Correspondent
Mangalore, Loudspeaker Ban: ರಾತ್ರಿ ವೇಳೆ ಧ್ವನಿ...
04-09-25 07:39 pm
KMC Attavar Performs Rare, Life-Saving Surger...
03-09-25 11:03 pm
Kmc Attavar, Mangalore News: 43 ವರ್ಷದ ಮಹಿಳೆಗೆ...
03-09-25 10:52 pm
Sullia, Sampaje Accident: ಸಂಪಾಜೆ ಬಳಿ ಭೀಕರ ಅಪಘ...
03-09-25 08:09 pm
04-09-25 01:10 pm
Udupi Correspondent
Udupi Crime, Baby Sale Racket: ಮಂಗಳೂರಿನ ಪ್ರತಿ...
04-09-25 12:25 pm
Bagalur Police, Drugs, Crime: ಬ್ಯುಸಿನೆಸ್ ವೀಸಾ...
03-09-25 05:40 pm
Gold Theft, Mangalore, Airport: ವಿಮಾನ ಪ್ರಯಾಣಿ...
02-09-25 07:09 pm
Valachil, Rape, College, Mangalore Crime: ಇನ್...
02-09-25 04:31 pm