ಬ್ರೇಕಿಂಗ್ ನ್ಯೂಸ್
27-09-22 05:25 pm Bangalore Correspondent ಕರ್ನಾಟಕ
ಬೆಂಗಳೂರು, ಸೆ.27 : ರಾಜ್ಯ ಸರ್ಕಾರದ ವಿರುದ್ಧ 'ಪೇಸಿಎಂ' ಪೋಸ್ಟರ್ ಅಂಟಿಸಿ ಕಾಂಗ್ರೆಸ್ ಅಭಿಯಾನ ನಡೆಸುತ್ತಿದ್ದರೆ, ಅತ್ತ ಬಿಜೆಪಿಯಿಂದ ಸೋನಿಯಾ ಗಾಂಧಿ ಫೋಟೋ ಹಾಕಿ 'ಪೇ ಟು ಮೇಡಂ' ಪೋಸ್ಟರ್ ಪರಸ್ಪರ ಸಮರ ಆರಂಭಿಸಿವೆ. ಇವೆರಡೂ ರಾಷ್ಟ್ರೀಯ ಪಕ್ಷಗಳಿಗೆ ಕೌಂಟರ್ ಕೊಡಲು ರೆಡಿಯಾಗಿರುವ ಜೆಡಿಎಸ್, ಹೊಸ ಮಾದರಿಯ ಕ್ಯಾಂಪೇನ್ ಶುರು ಮಾಡಲು ಸಜ್ಜಾಗಿದೆ.
ಜೆಡಿಎಸ್ನಿಂದ 'ಪಬ್ಲಿಕ್' ಪೋಸ್ಟರ್ ಹೆಸರಲ್ಲಿ ಅಭಿಯಾನ ಆರಂಭಿಸಲು ಸಿದ್ಧತೆ ನಡೆಸುತ್ತಿದೆ. ಕ್ಯೂ ಆರ್ ಕೋಡ್ ಮಾದರಿಯಲ್ಲಿ ಪಬ್ಲಿಕ್ ಪೋಸ್ಟರ್ ಅಭಿವೃದ್ಧಿ ಪಡಿಸುವ ಕಾರ್ಯ ನಡೆದಿದೆ. ಈ ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡುತ್ತಿದ್ದಂತೆ ಎಚ್.ಡಿ.ಕುಮಾರಸ್ವಾಮಿ ಅವರ ಆಡಳಿತ ಅವಧಿಯ ಸಾಧನೆಗಳು, ಮುಂಬರುವ ಚುನಾವಣಾ ಯೋಜನೆಗಳ ಮಾಹಿತಿ ಸಿಗಲಿದೆ. ರಾಷ್ಟ್ರೀಯ ಪಕ್ಷಗಳ ಹಗರಣಗಳ ಬಗ್ಗೆಯೂ ಇದರಲ್ಲಿ ಮಾಹಿತಿ ಇರಲಿದೆ. ಸೆ.30ರಂದು ಮಾಜಿ ಸಿಎಂ ಕುಮಾರಸ್ವಾಮಿ ಅವರು ಅಧಿಕೃತ ಪೋಸ್ಟರ್ನ ಕ್ಯೂ ಆರ್ ಕೋಡ್ ಬಿಡುಗಡೆ ಮಾಡಲಿದ್ದಾರೆ. ರಾಯಚೂರಿನಿಂದ ಈ ಹೊಸ ಅಭಿಯಾನ ಆರಂಭವಾಗಲಿದೆ.
ಕಳೆದ ವಾರ ರಾತ್ರೋರಾತ್ರಿ ಬೆಂಗಳೂರಲ್ಲಿ ಪೇಸಿಎಂ ಪೋಸ್ಟರ್ ಅಂಟಿಸಿ ರಾಜ್ಯ ಸರ್ಕಾರದ ವಿರುದ್ಧ ಕಾಂಗ್ರೆಸ್ ಅಭಿಯಾನ ನಡೆಸಿತ್ತು. ಇದಕ್ಕೆ ಪ್ರತಿಯಾಗಿ ಪೇಟಿಎಂ ಕ್ಯೂ ಆರ್ ಕೋಡ್ ಮಾದರಿಯಲ್ಲಿ ಸಿದ್ದರಾಮಯ್ಯ ಮತ್ತು ಡಿಕೆಶಿ ಅವರ ಫೋಟೋ ಹಾಕಿ 'ರಾಜ್ಯವನ್ನ ಲೂಟಿ ಮಾಡಿ ಹಾಳು ಮಾಡಿರುವ ಭ್ರಷ್ಟ ಜೋಡಿಯನ್ನ ರಾಜ್ಯದಿಂದ ಕಿತ್ತೆಸೆಯಲು ಇದನ್ನ ಸ್ಕ್ಯಾನ್ ಮಾಡಿ ಎಂದು ಬಿಜೆಪಿ ಕಡೆಯಿಂದ ಪೋಸ್ಟ್ ಹಾಕಲಾಗಿತ್ತು. 'ಸ್ಕ್ಯಾಮ್ ರಾಮಯ್ಯ' ಹೆಸರಿನಲ್ಲಿ ಪುಸ್ತಕವನ್ನೂ ಬಿಡುಗಡೆ ಮಾಡಿ ಆಕ್ರೋಶ ಹೊರ ಹಾಕಿತ್ತು. ಅಲ್ಲದೆ, ಸೋನಿಯಾ ಗಾಂಧಿ ಫೋಟೋ ಸಹಿತ 'ಪೇ ಟು ಮೇಡಂ' ಪೋಸ್ಟರನ್ನೂ ಬಿಡುಗಡೆ ಮಾಡಿತ್ತು. ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ ಅಧಿವೇಶನದಲ್ಲಿ 40% ಕಮಿಷನ್ ಎಂದು ಬರೆದಿದ್ದ ಪ್ಲೆಕಾರ್ಡ್ ಹಿಡಿದು ಧರಣಿ ನಡೆಸಿತ್ತು. ಈ ನಡುವೆ ರೈತ ಸಂಘದ ಸದಸ್ಯರು, 'PAY FARMER' ಎಂಬ ಅಭಿಯಾನ ಶುರು ಮಾಡಿದ್ದು ಹೊಸ ವಿದ್ಯಮಾನ ಆಗಿತ್ತು. ಇದರ ನಡುವೆ ಜೆಡಿಎಸ್, ಇವೆರಡೂ ರಾಷ್ಟ್ರೀಯ ಪಕ್ಷಗಳಿಗೆ ಠಕ್ಕರ್ ಕೊಡಲು ಹೊಸ ಪೋಸ್ಟರ್ ಗೆ ಸಿದ್ಧತೆ ನಡೆಸಿದೆ.
Congress, BJP poster campaign, JDS set to give counter to both the parties
03-09-25 09:00 pm
HK News Desk
ಧರ್ಮಸ್ಥಳ ಚಲೋ' ಬಿಜೆಪಿ ನಾಯಕರ ವಿಡಿಯೋ ಬಳಸಿ ಜಾಲತಾಣ...
03-09-25 08:35 pm
ಪ್ರೀಮಿಯಂ ಬ್ರಾಂಡ್ ಮದ್ಯಗಳ ಬೆಲೆ ಇಳಿಕೆಗೆ ಚಿಂತನೆ ;...
03-09-25 02:30 pm
Mangalore, Moodbidri Police, Constable Shanta...
03-09-25 01:36 pm
ಬಿಬಿಎಂಪಿ ಬದಲು ಗ್ರೇಟರ್ ಬೆಂಗಳೂರು ಅಸ್ತಿತ್ವಕ್ಕೆ ;...
02-09-25 11:04 pm
04-09-25 10:54 am
HK News Desk
ತಂದೆ ಸ್ಥಾಪಿಸಿದ ಬಿಆರ್ ಎಸ್ ಪಕ್ಷದಿಂದ ಮಗಳಿಗೆ ಗೇಟ್...
03-09-25 10:04 pm
ಹೊಳೆಯಂತಾದ ದೆಹಲಿಯ ಬೀದಿಗಳು, ನೀರಲ್ಲೇ ಮಾರ್ಕೆಟ್!...
03-09-25 09:59 pm
ಯಮ‘ಕಂಪನ’ ; ತಾಲಿಬಾನಿಗಳ ನೆಲೆ ಈಗ ಗಢಗಢ..ಭೂಕಂಪಕ್ಕೆ...
03-09-25 07:18 pm
ಅಮೆರಿಕನ್ ಕಂಪನಿಗಳನ್ನು ಬಹಿಷ್ಕರಿಸಲು ರಾಮದೇವ್ ಕರೆ...
01-09-25 01:06 pm
04-09-25 07:57 pm
Mangalore Correspondent
Mangalore, Loudspeaker Ban: ರಾತ್ರಿ ವೇಳೆ ಧ್ವನಿ...
04-09-25 07:39 pm
KMC Attavar Performs Rare, Life-Saving Surger...
03-09-25 11:03 pm
Kmc Attavar, Mangalore News: 43 ವರ್ಷದ ಮಹಿಳೆಗೆ...
03-09-25 10:52 pm
Sullia, Sampaje Accident: ಸಂಪಾಜೆ ಬಳಿ ಭೀಕರ ಅಪಘ...
03-09-25 08:09 pm
04-09-25 01:10 pm
Udupi Correspondent
Udupi Crime, Baby Sale Racket: ಮಂಗಳೂರಿನ ಪ್ರತಿ...
04-09-25 12:25 pm
Bagalur Police, Drugs, Crime: ಬ್ಯುಸಿನೆಸ್ ವೀಸಾ...
03-09-25 05:40 pm
Gold Theft, Mangalore, Airport: ವಿಮಾನ ಪ್ರಯಾಣಿ...
02-09-25 07:09 pm
Valachil, Rape, College, Mangalore Crime: ಇನ್...
02-09-25 04:31 pm