ಬ್ರೇಕಿಂಗ್ ನ್ಯೂಸ್
08-09-22 10:22 pm HK News Desk ಕರ್ನಾಟಕ
ಮಂಡ್ಯ, ಸೆ.8: ಇತ್ತೀಚೆಗೆ ತನ್ನನ್ನು ಹನಿಟ್ರಾಪ್ ಮಾಡಲಾಗಿದೆ ಎಂದು ದೂರು ನೀಡಿ ಸುದ್ದಿಯಾಗಿದ್ದ ಮಂಗಳೂರು ಮೂಲದ ಜುವೆಲ್ಲರಿ ಉದ್ಯಮಿ ಜಗನ್ನಾಥ ಶೆಟ್ಟಿ ಅವರದ್ದು ಎನ್ನಲಾದ ವಿಡಿಯೋ ಲೀಕ್ ಆಗಿದೆ. ಲಾಡ್ಜ್ ನಲ್ಲಿ ಯುವತಿಯ ಜೊತೆಗಿರುವ ವಿಡಿಯೋ ಲೀಕ್ ಆಗಿದ್ದು, ಭಾರೀ ವೈರಲ್ ಆಗಿದೆ.
ಯುವತಿ ಜೊತೆಗಿದ್ದಾಗಲೇ ಇಬ್ಬರು ಯುವಕರು ಲಾಡ್ಜ್ ಎಂಟ್ರಿಯಾಗಿದ್ದು, ಯುವತಿ ಮತ್ತು ಜಗನ್ನಾಥ ಶೆಟ್ಟಿ ಮೇಲೆ ಹಲ್ಲೆ ನಡೆಸಿದ್ದಾರೆ. ಯುವತಿಯನ್ನು ಪ್ರಶ್ನೆ ಮಾಡಿದ್ದು, ನೀನು ಮನೆಯಲ್ಲಿ ಏನು ಹೇಳಿ ಬಂದೀಯಮ್ಮಾ ಎಂದು ಕೇಳಿದ್ದಾರೆ. ಇವರು ಕಾಲೇಜಿನಲ್ಲಿ ಲೆಕ್ಚರ್, ಅವರಿಗೆ ಹೊಡೀಬೇಡಿ. ಇವರೇ ನನ್ನನ್ನು ಕರೆದಿದ್ದು ಎಂದು ಹೇಳುವುದು ವಿಡಿಯೋದಲ್ಲಿದೆ.
ಜಗನ್ನಾಥ ಶೆಟ್ಟಿ ಮತ್ತು ಯುವತಿ ಮಾತನಾಡುವ ಫೋನ್ ಸಂಭಾಷಣೆಯ ಆಡಿಯೋ ಕೂಡ ಇದೇ ವೇಳೆ ಜಾಲತಾಣದಲ್ಲಿ ವೈರಲ್ ಆಗಿದೆ. ಯುವತಿಯ ಜೊತೆಗೆ ಸಲುಗೆಯಿಂದ ಮಾತನಾಡಿ, ಲಾಡ್ಜ್ ಗೆ ಕರೆಯುವುದು ಆಡಿಯೋದಲ್ಲಿದೆ. ಈ ಬಗ್ಗೆ ಪ್ರತ್ಯೇಕ ದೂರು ದಾಖಲಾಗಿರುವ ಬಗ್ಗೆ ಮಾಹಿತಿಯಿಲ್ಲ. ಆದರೆ, ಇತ್ತೀಚೆಗೆ ತನ್ನನ್ನು ಹನಿ ಟ್ರಾಪ್ ಮಾಡಿದ್ದಾರೆಂದು ನೀಡಿದ್ದ ದೂರಿನಂತೆ ಪೊಲೀಸರು ಈಗಾಗಲೇ ತನಿಖೆ ಕೈಗೊಂಡಿದ್ದರು. ಆ ಪ್ರಕರಣದಲ್ಲಿ ಬೇರೊಬ್ಬ ಮಹಿಳೆ ಸೇರಿ ಇನ್ನಿಬ್ಬರು ಯುವಕರನ್ನು ಬಂಧಿಸಿದ್ದರು. ಆ ಮಹಿಳೆ ಸಮಾಜ ಸೇವೆ ಹೆಸರಲ್ಲಿ ಗುರುತಿಸಿಕೊಂಡವರಾಗಿದ್ದರು.
ತಾನು ಮಂಡ್ಯದಲ್ಲಿ ಬಸ್ಸಿಗೆ ನಿಂತಿದ್ದಾಗ ಕಾರಿನಲ್ಲಿ ಬಂದಿದ್ದ ನಾಲ್ವರು ಚಿನ್ನದ ಬಿಸ್ಕೆಟ್ ತಪಾಸಣೆ ಮಾಡಬೇಕೆಂದು ಲಾಡ್ಜ್ ಒಯ್ದಿದ್ದರು ಎಂದು ಜಗನ್ನಾಥ ಶೆಟ್ಟಿ ದೂರಿನಲ್ಲಿ ತಿಳಿಸಿದ್ದರು. ಇದೀಗ ಬೇರೆಯದ್ದೇ ವಿಡಿಯೋ ವೈರಲ್ ಆಗಿದ್ದು, ಹಳೆಯದಕ್ಕೂ ಇದಕ್ಕೂ ಸಂಬಂಧ ಇದೆಯೇ, ಯಾರಾದ್ರೂ ಉದ್ದೇಶಪೂರ್ವಕ ಈ ವಿಡಿಯೋ ಲೀಕ್ ಮಾಡಿದ್ದಾರೆಯೇ ಎನ್ನೋದು ಗೊತ್ತಾಗಿಲ್ಲ. ಜಗನ್ನಾಥ ಶೆಟ್ಟಿ ಮಂಡ್ಯದಲ್ಲಿ ಉದ್ಯಮಿಯಾಗಿದ್ದು, ಜೊತೆಗೆ ಬಿಜೆಪಿ ಮುಖಂಡನಾಗಿ ಗುರುತಿಸಿಕೊಂಡಿದ್ದಾರೆ.
Big twist in Mandya Honey trap case, Mangalore based Jagannath shetty new video released. The video shows that Jagannath was inside a private lodge with compromising position with a girl where he was caught red handed later he was blackmailed about the video.
28-08-25 06:23 pm
HK News Desk
Bidar Bus Driver Suicide: ಬೀದರ್ ಬಸ್ ಡಿಪೋ ನಲ್ಲ...
28-08-25 02:41 pm
ಬಿಳಿಯಲ್ಲ ಮಾರಾಯರೇ ನೀಲಿ ಮೊಟ್ಟೆ ಇಟ್ಟ ನಾಟಿ ಕೋಳಿ ;...
28-08-25 11:56 am
Banumustak, DK Shivakumar, Chamundi Hill: ದೇವ...
27-08-25 06:21 pm
Congress, MP Yaduveer, DK Shivakumar: ಕಾಂಗ್ರೆ...
27-08-25 06:17 pm
29-08-25 01:47 pm
HK News Desk
ಮೋದಿ 75 ವರ್ಷಕ್ಕೆ ನಿವೃತ್ತರಾಗಬೇಕು ಎಂದು ಹೇಳಿಲ್ಲ...
29-08-25 12:50 pm
ಪ್ರತಿ ಭಾರತೀಯ ಕುಟುಂಬಗಳು ಮೂರಕ್ಕಿಂತ ಹೆಚ್ಚು ಮಕ್ಕಳ...
29-08-25 10:56 am
Kanhangad Suicide: ಕಾಞಂಗಾಡ್ ; ಬೆಳೆದು ನಿಂತ ಇಬ್...
28-08-25 12:19 pm
ಕೈ ಗ್ಯಾರಂಟಿಗೆ ಬೊಕ್ಕಸ ಪೂರ ಖಾಲಿ - ಖಾಲಿ ; ತೆಲಂಗಾ...
26-08-25 09:02 pm
28-08-25 11:00 pm
Mangalore Correspondent
Mangalore Rain, School College Holiday: ಭಾರೀ...
28-08-25 10:07 pm
Soujanya Murder Case, Mother SIT: ಸೌಜನ್ಯಾ ಕೊಲ...
28-08-25 08:31 pm
Talapady Accident, Mangalore, Auto bus: ಕೇರಳ...
28-08-25 04:05 pm
Loudspeaker, Punjalkatte,Farangipete: ಪುಂಜಾಲ...
28-08-25 02:51 pm
27-08-25 10:23 pm
HK News Desk
Karkala Murder, Arrest, Crime: ಹೆಂಡ್ತಿ ಮಕ್ಕಳನ...
26-08-25 10:39 pm
ಟೆಕ್ನಾಲಜಿಯಲ್ಲಿ ಮುಂದಿರುವ ಅಮೆರಿಕದ ಪ್ರಜೆಗಳನ್ನೇ ಯ...
26-08-25 05:24 pm
ದುಬೈನಲ್ಲಿ ಗಂಡ, ಮೈಸೂರಿನಲ್ಲಿ ಪತ್ನಿಯ ಲವ್ವಿ ಡವ್ವಿ...
25-08-25 08:29 pm
ಶಿಕ್ಷಣ ಸಚಿವ ಮಧು ಬಂಗಾರಪ್ಪ ಪಿಎ ಹೆಸರಲ್ಲಿ ವಸೂಲಿ ;...
25-08-25 07:42 pm