ಬ್ರೇಕಿಂಗ್ ನ್ಯೂಸ್
12-08-22 05:40 pm Bangalore Correspondent ಕರ್ನಾಟಕ
ಬೆಂಗಳೂರು, ಆಗಸ್ಟ್ 12: ಮುಖ್ಯಮಂತ್ರಿಯಾಗಿದ್ದವರನ್ನೇ ಜೈಲಿಗೆ ಕಳುಹಿಸುವ ಸಾಮರ್ಥ್ಯ ಹೊಂದಿದ್ದ ಲೋಕಾಯುಕ್ತವನ್ನು ದುರ್ಬಲಗೊಳಿಸಿ ಎಸಿಬಿ ರಚಿಸಲಾಗಿತ್ತು. 2016 ರಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಕೈಗೊಂಡಿದ್ದ ಎಸಿಬಿ ರಚನೆಯ ನಿರ್ಧಾರ ತೀವ್ರ ಟೀಕೆಗೆ ಗುರಿಯಾಗಿತ್ತು.
ಕಳೆದ 2018 ರ ಚುನಾವಣೆಯಲ್ಲಿ ಮರಳಿ ಲೋಕಾಯುಕ್ತ ರಚಿಸುವುದೇ ಬಿಜೆಪಿ ಮತ್ತು ಜೆಡಿಎಸ್ ವಾಗ್ದಾನ ಆಗಿತ್ತು. ತಾವು ಅಧಿಕಾರಕ್ಕೆ ಬಂದರೆ 24 ಗಂಟೆಯಲ್ಲೇ ಎಸಿಬಿ ರದ್ದುಗೊಳಿಸಿ, ಲೋಕಾಯುಕ್ತ ಬಲಪಡಿಸುತ್ತೇವೆ ಎಂದು ಬಿಜೆಪಿ ಮತ್ತು ಜೆಡಿಎಸ್ ನಾಯಕರು ಹೇಳುತ್ತಾ ಬಂದಿದ್ದರು. ಅಲ್ಲದೆ, ಪಕ್ಷದ ಪ್ರಣಾಳಿಕೆಯಲ್ಲೂ ಘೋಷಣೆ ಮಾಡಿದ್ದರು. ಎರಡೂ ಪಕ್ಷಗಳು ಅಧಿಕಾರಕ್ಕೆ ಬಂದರೂ ತಾವು ಹೇಳಿದ್ದನ್ನು ಮಾಡಲಿಲ್ಲ. ಆದರೆ, ಸಿದ್ದರಾಮಯ್ಯ ಸರಕಾರದ ನಿರ್ಣಯದ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ್ದವರಿಗೆ ಈಗ ಜಯ ಸಿಕ್ಕಿದೆ. ಹೈಕೋರ್ಟ್ ಸುದೀರ್ಘ ವಿಚಾರಣೆಯ ಬಳಿಕ ಎಸಿಬಿ ರಚನೆಯನ್ನೇ ರದ್ದುಪಡಿಸಿದೆ.
ಎಸಿಬಿ ಸ್ಥಾಪನೆಯ ವೇಳೆ ಲೋಕಾಯುಕ್ತಕ್ಕೆ ಆವರೆಗೂ ಇದ್ದ ದಾಳಿ ನಡೆಸಿ ಕೇಸು ದಾಖಲಿಸುವ ಅಧಿಕಾರ ಮತ್ತು ಪೊಲೀಸ್ ಬಲವನ್ನು ಕಿತ್ತುಕೊಂಡು ಎಸಿಬಿಗೆ ವರ್ಗಾಯಿಸಲಾಗಿತ್ತು. ಅಲ್ಲದೆ, ಎಸಿಬಿಯನ್ನು ರಚಿಸಿದ್ದರೂ ಅದರ ಮೇಲೊಂದು ಮೂಗುದಾರ ತೊಡಿಸಲಾಗಿತ್ತು. ಎಸಿಬಿ ಅಧಿಕಾರಿಗಳು ಯಾವುದೇ ಪ್ರಕರಣದಲ್ಲಿ ದಾಳಿ, ಶೋಧ ನಡೆಬೇಕಾದರೂ, ಮುಖ್ಯ ಕಾರ್ಯದರ್ಶಿ ನೇತೃತ್ವದ ಉನ್ನತ ಸಮಿತಿಯ ಪೂರ್ವಾನುಮತಿ ಪಡೆಯಬೇಕೆಂಬ ಷರತ್ತು ಹಾಕಲಾಗಿತ್ತು. ಹೀಗಾಗಿ, ಸರ್ಕಾರದ ಆಣತಿಯಂತೆ ಎಸಿಬಿ ನಡೆಯವಂತೆ ಮಾಡಲಾಗಿತ್ತು. ಅಲ್ಲಿದೆ, ಸ್ವತಂತ್ರ ತನಿಖಾ ಸಂಸ್ಥೆ ಎಂಬ ಹಿರಿಮೆ ಇದ್ದ ಲೋಕಾಯುಕ್ತದ ಹಲ್ಲು ಮುರಿಯಲಾಗಿತ್ತು. ಲೋಕಾಯುಕ್ತ ರದ್ದು ಆಗದೇ ಇದ್ದರೂ, ನಾಮಕೇವಾಸ್ತೆ ಇಟ್ಟುಕೊಂಡಿದ್ದರು.
2016 ಮಾರ್ಚ್ 19ರಂದು ಭ್ರಷ್ಟಾಚಾರ ನಿಗ್ರಹ ದಳ ಅಸ್ತಿತ್ವಕ್ಕೆ ಬಂದಿದ್ದು, ಈವರೆಗೆ 350ಕ್ಕೂ ಹೆಚ್ಚು ಎಫ್‌ಐಆರ್‌ಗಳನ್ನು ದಾಖಲಿಸಿಕೊಂಡು ತನಿಖೆ ನಡೆಸಿದೆ. 105 ಪ್ರಕರಣಗಳಲ್ಲಿ ಸರಕಾರದ ಒತ್ತಡಕ್ಕೆ ಮಣಿದೋ ಏನೋ 'ಬಿ' ವರದಿಯನ್ನೂ ಸಲ್ಲಿಸಿದೆ. ಒಂದು ಪ್ರಕರಣದಲ್ಲೂ ಯಾವುದೇ ವ್ಯಕ್ತಿಯನ್ನು ಜೈಲಿಗೆ ಹಾಕಿದ್ದೂ ಇಲ್ಲ.
ಇತ್ತೀಚೆಗೆ ಒಂದೆರಡು ದಾಳಿ ಪ್ರಕರಣಗಳು ಹೆಚ್ಚು ಸುದ್ದಿಯಾಗಿದ್ದು ಬಿಟ್ಟರೆ, ಎಸಿಬಿ ಮಾಡಿದ್ದು ಏನೂ ಇಲ್ಲ. ನೋಟಿನ ಚೀಲವನ್ನು ಕಿಟಕಿಯಿಂದ ಆಚೆಗೆ ಎಸೆದಿದ್ದ ಕೆಎಐಡಿಬಿ ಮುಖ್ಯ ಅಭಿವೃದ್ಧಿ ಅಧಿಕಾರಿ ಆಗಿದ್ದ ಟಿ.ಆರ್.ಸ್ವಾಮಿ, ಪೈಪ್‌ನಲ್ಲಿ ಹಣ ಬಚ್ಚಿಟ್ಟಿದ್ದ ಲೋಕೋಪಯೋಗಿ ಇಲಾಖೆ ಕಲಬುರಗಿಯಲ್ಲಿ ಕಿರಿಯ ಎಂಜಿನಿಯರ್ ಆಗಿದ್ದ ಶಾಂತಗೌಡ ಬಿರಾದಾರ್, ಬಿಡಿಎ ಎಂಜಿನಿಯರ್ ಎನ್.ಜಿ. ಗೌಡಯ್ಯ ವಿರುದ್ಧದ ದಾಳಿಗಳು ನೋಟು, ಚಿನ್ನದ ಕಂತೆಯ ಕಾರಣಕ್ಕೆ ರಾಜ್ಯದ ಗಮನ ಸೆಳೆದಿತ್ತು. ಇತ್ತೀಚೆಗೆ ಬೆಂಗಳೂರು ಜಿಲ್ಲಾಧಿಕಾರಿಯಾಗಿದ್ದ ಜೆ.ಮಂಜುನಾಥ್ ಪ್ರಕರಣದಲ್ಲಿ ಎಸಿಬಿ ಕಾರ್ಯವೈಖರಿ ಬಗ್ಗೆ ಹೈಕೋರ್ಟ್ ತೀವ್ರ ತರಾಟೆಗೆ ತೆಗೆದುಕೊಂಡಿದ್ದೂ ನಡೆದಿತ್ತು.
In a major setback to the State government, the High Court of Karnataka on Thursday set aside the constitution of a separate Anti-Corruption Bureau (ACB), under the direct control of the Chief Minister, in 2016 by withdrawing the powers vested with the Karnataka Lokayukta (KL) police wing to probe all cases under the Prevention of Corruption Act, 1988 against public servants.
28-08-25 11:56 am
HK News Desk
Banumustak, DK Shivakumar, Chamundi Hill: ದೇವ...
27-08-25 06:21 pm
Congress, MP Yaduveer, DK Shivakumar: ಕಾಂಗ್ರೆ...
27-08-25 06:17 pm
ದಸರಾ ಉದ್ಘಾಟಕರ ಆಯ್ಕೆ ವಿವಾದ ; ನೀವು ನಂಬಿರುವ ನಿಮ್...
27-08-25 03:17 pm
Kannada Anchor Anushree, Marriage, Mangalore:...
27-08-25 02:51 pm
28-08-25 12:19 pm
HK News Desk
ಕೈ ಗ್ಯಾರಂಟಿಗೆ ಬೊಕ್ಕಸ ಪೂರ ಖಾಲಿ - ಖಾಲಿ ; ತೆಲಂಗಾ...
26-08-25 09:02 pm
ಜಮ್ಮು ಭಾರಿ ಮಳೆಗೆ ಒಂಬತ್ತು ಮಂದಿ ಬಲಿ ; ಹಲವೆಡೆ ಭೂ...
26-08-25 07:39 pm
Trump Immigrant Population: ಟ್ರಂಪ್ ಸಾಮ್ರಾಜ್ಯದ...
24-08-25 01:47 pm
Actor Vijay, Thalapathy; ಟಿವಿಕೆ ಮುಖ್ಯಸ್ಥ, ನಟ...
23-08-25 04:58 pm
28-08-25 11:27 am
Mangalore Correspondent
Pastor John Shamine, Madan Bugadi, IHRACSJC:...
27-08-25 11:02 pm
FIR, Chinnayya, Dharmasthala, Mahesh Thimarod...
27-08-25 09:19 pm
Praveen Nettaru, NIA, Mangalore: ಪ್ರವೀಣ್ ನೆಟ್...
27-08-25 08:46 pm
Pastor John Shamine, BJP, Fake Human Rights:...
26-08-25 10:57 pm
27-08-25 10:23 pm
HK News Desk
Karkala Murder, Arrest, Crime: ಹೆಂಡ್ತಿ ಮಕ್ಕಳನ...
26-08-25 10:39 pm
ಟೆಕ್ನಾಲಜಿಯಲ್ಲಿ ಮುಂದಿರುವ ಅಮೆರಿಕದ ಪ್ರಜೆಗಳನ್ನೇ ಯ...
26-08-25 05:24 pm
ದುಬೈನಲ್ಲಿ ಗಂಡ, ಮೈಸೂರಿನಲ್ಲಿ ಪತ್ನಿಯ ಲವ್ವಿ ಡವ್ವಿ...
25-08-25 08:29 pm
ಶಿಕ್ಷಣ ಸಚಿವ ಮಧು ಬಂಗಾರಪ್ಪ ಪಿಎ ಹೆಸರಲ್ಲಿ ವಸೂಲಿ ;...
25-08-25 07:42 pm