ಬ್ರೇಕಿಂಗ್ ನ್ಯೂಸ್
27-07-22 07:01 pm HK News Desk ಕರ್ನಾಟಕ
ಸುಳ್ಯ, ಜುಲೈ 27 : ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಶವ ಮೆರವಣಿಗೆ ಕೊನೆಗೆ ರಾಜಕೀಯ ನಾಯಕರ ವಿರುದ್ಧ ಕಾರ್ಯಕರ್ತರೇ ತಿರುಗಿ ಬೀಳುವಂತಾಗಿತ್ತು. ಬೆಳ್ಳಾರೆಯಲ್ಲಿ ಶವದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಸೇರಿದ್ದ ಸಾವಿರಾರು ಜನರು ಅಂತಿಮ ದರ್ಶನ ಪಡೆಯುತ್ತಿದ್ದರು.
ಇಷ್ಟರಲ್ಲೇ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಮತ್ತು ಉಸ್ತುವಾರಿ ಸಚಿವ ಸುನಿಲ್ ಕುಮಾರ್ ಸ್ಥಳಕ್ಕೆ ಬಂದಿದ್ದಾರೆ. ರಾಜಕೀಯ ನಾಯಕರನ್ನು ನೋಡುತ್ತಲೇ ಕಾರ್ಯಕರ್ತರು ರೊಚ್ಚಿಗೆದ್ದಿದ್ದಾರೆ. ಬಿಜೆಪಿ ಸರಕಾರ, ನಳಿನ್ ಕುಮಾರ್ ವಿರುದ್ಧ ಧಿಕ್ಕಾರ ಕೂಗಲು ಆರಂಭಿಸಿದ್ದಾರೆ. ಕೆಲ ಹೊತ್ತಿನಲ್ಲಿಯೇ ಧಿಕ್ಕಾರದ ಕೂಗು ಮಾರ್ದನಿಸಿದ್ದು ಎಲ್ಲರ ಕೂಗು ಒಂದೇ ಆಗಿತ್ತು. ಹಿಂದು ಸಂಘಟನೆ ನಾಯಕರು ಏನೇ ಮನವೊಲಿಸಲು ಯತ್ನಿಸಿದರೂ ಜನರು ಸೌಮ್ಯವಾಗಲಿಲ್ಲ. ಮತ್ತಷ್ಟು ಧಿಕ್ಕಾರ, ನಿಂದನೆಯ ಕೂಗು ಕೇಳಿಬಂತು. ಪೊಲೀಸರು ಮೂಕ ಪ್ರೇಕ್ಷಕರಾಗಿದ್ದರು.
ಕಲ್ಲಡ್ಕ ಪ್ರಭಾಕರ ಭಟ್ ಮೈಕ್ ಪಡೆದು ಎಲ್ಲರೂ ಶಾಂತವಾಗಿರಬೇಕು ಎಂದು ಎಂದಿನ ಶೈಲಿಯಲ್ಲಿ ಸೂಚನಾ ಪದಗಳನ್ನು ಹೇಳಲು ತೊಡಗಿದರು. ಆದರೆ ಕಲ್ಲಡ್ಕ ಭಟ್ ವಿರುದ್ಧವೇ ಜನರ ಆಕ್ರೋಶ ತಿರುಗಿತು. ಒಂದೆಡೆ ಮೋದಿ ಮೋದಿ ಘೋಷಣೆ, ಇನ್ನೊಂದೆಡೆ ನಳಿನ್ ಗೆ ಧಿಕ್ಕಾರ, ಬಿಜೆಪಿ ಸರಕಾರಕ್ಕೆ ಧಿಕ್ಕಾರ ಹಾಕಿದರು. ಜನರ ಭುಗಿಲೆದ್ದ ಆಕ್ರೋಶ ಇನ್ನೇನು ಹಲ್ಲೆ, ದೊಂಬಿಗೆ ಕಾರಣವಾಗುತ್ತದೆ ಎನ್ನುವ ಸುಳಿವು ಸಿಗುತ್ತಲೇ ಶರಣ್ ಪಂಪ್ವೆಲ್ ಸೇರಿ ಕೆಲವು ಮಂಗಳೂರು ಮೂಲದ ಕಾರ್ಯಕರ್ತರು ಕಲ್ಲಡ್ಕ ಭಟ್ ರನ್ನು ದೂಡಿಕೊಂಡೇ ಹೊರಕ್ಕೆ ಕರೆತಂದರು. ವಿರೋಧಿ ಘೋಷಣೆ, ನಿಂದನೆಗಳ ಮಧ್ಯೆ ಬೇರೊಂದು ಕಾರಿನಲ್ಲಿ ಕಲ್ಲಡ್ಕ ಪ್ರಭಾಕರ ಭಟ್ ಸ್ಥಳದಿಂದ ಕಾಲ್ಕಿತ್ತರು.
ಇದೇ ವೇಳೆ, ಒಂದು ಮೂಲೆಯಲ್ಲಿ ತಮ್ಮ ಆಪ್ತರ ಜೊತೆಗೆ ಕುಳಿತಿದ್ದ ನಳಿನ್ ಕುಮಾರ್ ಮತ್ತು ಸುನಿಲ್ ಅವರ ಮೇಲೆ ಹಲ್ಲೆ ಮಾಡುತ್ತಾರೆಯೋ ಎನ್ನುವಂತೆ ಗುಂಪು ಕೂಡಿದರು. ಸುತ್ತ ನಿಂತಿದ್ದವರನ್ನು ತಳ್ಳಿಕೊಂಡೇ ಬಂದು ಇಬ್ಬರು ನಾಯಕರನ್ನು ಗುರಿಯಾಗಿಸಿ ಆಕ್ರೋಶ ಹೊರಹಾಕಿದರು. ಶರಣ್ ಪಂಪ್ವೆಲ್ ಸಮಾಧಾನ ಮಾಡಲು ಯತ್ನಿಸಿದರೂ ಕೇಳಲಿಲ್ಲ. ಕಳ್ಳ, ಸುಳ್ಳ, ಪಾಪದ ಕಾರ್ಯಕರ್ತರ ಹೆಸರಿನಲ್ಲಿ ನೀನು ಗೆದ್ದು ಹಣ ಮಾಡಿದ್ದೀಯ.. ನಿನಗೆ ನಾಚಿಕೆ ಆಗಲ್ವಾ.. ನಾಯಿ ಹೀಗೆ ತುಳುವಿನಲ್ಲಿ ಅವಾಚ್ಯ ಶಬ್ದಗಳ ನಿಂದನೆಯೇ ಕೇಳಿಬಂತು. ಜನರು ವಿರೋಧಿ ಘೋಷಣೆ ಕೇಳುತ್ತಲೇ ಇತ್ತು. ಇದೇ ವೇಳೆ, ನಳಿನ್ ಕುಮಾರ್ ಕಾರಿನ ಟೈರ್ ಪಂಚರ್ ಮಾಡಲು ಯತ್ನ ನಡೆಯಿತು. ಪೊಲೀಸರು ಸುತ್ತುವರಿದು ನಿಂತರೂ ಕಾರ್ಯಕರ್ತರ ಆಕ್ರೋಶದ ಮಧ್ಯೆ ಏನೂ ಮಾಡುವಂತಿರಲಿಲ್ಲ.
ನೀವೆಲ್ಲ ಕೈಲಾಗದವರು. ಹಿಂದು ಕಾರ್ಯಕರ್ತರು ಸಾಯುತ್ತಿದ್ದಾರೆ. ಬಿಜೆಪಿ ಸರಕಾರ ಇದ್ದರೇನು, ಇಲ್ಲದಿದ್ದರೇನು..? ನಿಮ್ಮಂಥವರು ಆಡಳಿತದಲ್ಲಿ ಇರಬೇಕಾ.. ಚುನಾವಣೆ ಬರಲಿ. ನಿಮಗೆಲ್ಲ ಬುದ್ದಿ ಕಲಿಸುತ್ತೇವೆ. ಇಲ್ಲೊಬ್ಬ ಶಾಸಕ ಆರು ಬಾರಿ ಗೆದ್ದು ಬಂದಿದ್ದಾರೆ. ಆದರೆ ಹಿಂದುಗಳ ಹಿತ ಕಾಯಲು ಸಾಧ್ಯ ಆಗಿಲ್ಲ. ಇವತ್ತು ಸ್ಥಳಕ್ಕೇ ಬಂದಿಲ್ಲ. ನೀವೆಲ್ಲ ನರಸತ್ತವರು ಎಂದು ಹೇಳಿ ಮಹಿಳೆಯರು, ಯುವಕರು ಆಕ್ರೋಶ ಹೊರಹಾಕಿದ್ದಾರೆ. ಇಬ್ಬರು ನಾಯಕರನ್ನೂ ಒಂದು ಗಂಟೆಗೂ ಹೆಚ್ಚು ಕಾಲ ಕೂಡಿಹಾಕಲಾಗಿತ್ತು. ಬಳಿಕ ಕೆಲವು ಕಾರ್ಯಕರ್ತರ ಬೆಂಬಲದೊಂದಿಗೆ ಕಾರಿನತ್ತ ನಳಿನ್ ತೆರಳುತ್ತಿದ್ದಂತೆ ಆಕ್ರೋಶಿತರು ದೂಡಿಕೊಂಡೇ ಬಂದರು. ಕಾರಿನಲ್ಲಿ ಕುಳಿತುಕೊಳ್ಳುತ್ತಿದ್ದಂತೆ ಅಡ್ಡ ಹಾಕಿದ ಕಾರ್ಯಕರ್ತರು ಕಾರನ್ನೇ ಜಗ್ಗಾಡಿದರು. ಕೆಲವರು ಹೆಲ್ಮೆಟ್ ತೆಗೆದು ಕಾರಿಗೆ ಬಡಿದರೆ, ಇನ್ನು ಕೆಲವರು ಕೈಯಿಂದಲೇ ಕಾರಿಗೆ ಗುದ್ದಿದರು. ಕೆಲವರು ಕಾರನ್ನೇ ಮಗುಚಿ ಹಾಕಲು ಕೆಳಗಿಂದ ಎತ್ತ ತೊಡಗಿದರು. ಮಂಗಳೂರಿನ ಬಜರಂಗದಳ ಯುವಕರು ಎದುರು ಭಾಗದಲ್ಲಿ ನಿಂತಿದ್ದ ಆಕ್ರೋಶಿತರನ್ನು ತಳ್ಳಿ ಕಾರು ಹೋಗಲು ತೆರವು ಮಾಡಿದರು. ಹಿಂದಿನಿಂದ ಕಳ್ಳ ಕಳ್ಳ ಎಂದು ಹೇಳುತ್ತಲೇ ಜನರು ಕಲ್ಲು ಎತ್ತಿಕೊಳ್ಳುತ್ತಿದ್ದಂತೆ ಸ್ಥಳದಲ್ಲಿದ್ದ ಕೆಲವು ಸ್ಥಳೀಯ ನಾಯಕರು ಕಾರ್ಯಕರ್ತರನ್ನು ಅಡ್ಡ ಹಾಕಿದರು. ಉದ್ರಿಕ್ತರ ಮಧ್ಯದಿಂದ ನಳಿನ್ ಪಾರಾಗಿ ಬಂದಿದ್ದೇ ವಿಚಿತ್ರ ಅನ್ನುವಂತಾಗಿತ್ತು. ಬದುಕಿದೆಯಾ ಬಡ ಜೀವ ಎನ್ನುತ್ತಾ ಒಂದೇ ಕಾರಿನಲ್ಲಿ ಸುನಿಲ್, ನಳಿನ್, ಬಿಜೆಪಿ ಜಿಲ್ಲಾಧ್ಯಕ್ಷ ಸೇರಿ ಎಲ್ಲರೂ ಕಾಲ್ಕಿತ್ತಿದ್ದರು.
ಇದಕ್ಕೂ ಮೊದಲೇ ಬಲವಂತದಿಂದ ಸ್ಥಳದಿಂದ ಶವ ಎತ್ತಿ ನೆಟ್ಟಾರಿನ ಮನೆಯತ್ತ ಒಯ್ಯಲಾಗಿತ್ತು. ಅಲ್ಲಿ ಮೂರು ಗಂಟೆ ಸುಮಾರಿಗೆ ಅಂತ್ಯಕ್ರಿಯೆ ನಡೆಸಲಾಯಿತು. ನೂರಾರು ಸಂಖ್ಯೆಯಲ್ಲಿ ಸೇರಿದ್ದ ಸಂಘ ಪರಿವಾರದ ಕಾರ್ಯಕರ್ತರು ಬಡ ಕುಟುಂಬದ ಪರ ನಿಲ್ಲುವುದಾಗಿ ಶಪಥ ಹಾಕಿದರು. ಅಲ್ಲದೆ, ಪ್ರವೀಣ್ ಕುಟುಂಬಕ್ಕೆ 50 ಲಕ್ಷ ರೂಪಾಯಿ ಸಂಗ್ರಹಿಸಿ ನೀಡುತ್ತೇವೆ ಎಂದು ಘೋಷಿಸಿದರು. ಸಚಿವ ಸುನಿಲ್ ಆಗಲೀ, ನಳಿನ್ ಆಗಲಿ ಕಾರ್ಯಕರ್ತರ ಸಿಟ್ಟಿನ ನಡುವೆ ಪ್ರವೀಣ್ ಮನೆಗೂ ತೆರಳದೆ ಕಾಲ್ಕಿತ್ತರು.
ಮುಯ್ಯಿಗೆ ಮುಯ್ಯಿ ; ಬೆಳ್ಳಾರೆಯಲ್ಲಿ ಎರಡೇ ದಿನದಲ್ಲಿ ಪ್ರತೀಕಾರ, ಬಿಜೆಪಿ ಕಾರ್ಯಕರ್ತನ ಕಡಿದು ಕೊಲೆ
ಬಿಜೆಪಿ ಕಾರ್ಯಕರ್ತ ಹತ್ಯೆ ; ಪುತ್ತೂರು, ಸುಳ್ಯ ಉದ್ವಿಗ್ನ, ಬೆಳ್ಳಾರೆಗೆ ಶವ ಮೆರವಣಿಗೆ
Bellare murder, Politicians mint money, only innocent Hindus get killed, politicians slammed during final rites of Praveen Kumar. As BJP President Nalin Kumar Kateel, Sunil Kumar and Dr Kalladka Bhathe were leaving the place in their vehicles, a large number of people blocked their path. The police used canes on the mob to create a path for the vehicles to take Mr. Kateel and Mr. Kumar away from the spot. A few people threw stones at the police. Injured police personnel were admitted to nearby hospitals.
27-08-25 06:21 pm
Bangalore Correspondent
Congress, MP Yaduveer, DK Shivakumar: ಕಾಂಗ್ರೆ...
27-08-25 06:17 pm
ದಸರಾ ಉದ್ಘಾಟಕರ ಆಯ್ಕೆ ವಿವಾದ ; ನೀವು ನಂಬಿರುವ ನಿಮ್...
27-08-25 03:17 pm
Kannada Anchor Anushree, Marriage, Mangalore:...
27-08-25 02:51 pm
ಚಾಮುಂಡಿ ಬೆಟ್ಟ ಪಕ್ಕಾ ಹಿಂದೂಗಳ ಸ್ವತ್ತು, ಮುಸ್ಲಿಮರ...
27-08-25 12:33 pm
26-08-25 09:02 pm
HK News Desk
ಜಮ್ಮು ಭಾರಿ ಮಳೆಗೆ ಒಂಬತ್ತು ಮಂದಿ ಬಲಿ ; ಹಲವೆಡೆ ಭೂ...
26-08-25 07:39 pm
Trump Immigrant Population: ಟ್ರಂಪ್ ಸಾಮ್ರಾಜ್ಯದ...
24-08-25 01:47 pm
Actor Vijay, Thalapathy; ಟಿವಿಕೆ ಮುಖ್ಯಸ್ಥ, ನಟ...
23-08-25 04:58 pm
Mp Brijesh Chowta, Mangalore: ಆನ್ಲೈನ್ ಗೇಮಿಂಗ್...
22-08-25 10:00 pm
27-08-25 11:02 pm
Mangalore Correspondent
FIR, Chinnayya, Dharmasthala, Mahesh Thimarod...
27-08-25 09:19 pm
Praveen Nettaru, NIA, Mangalore: ಪ್ರವೀಣ್ ನೆಟ್...
27-08-25 08:46 pm
Pastor John Shamine, BJP, Fake Human Rights:...
26-08-25 10:57 pm
Vasanth Giliyar Hate speech, Case: ಬೆಳ್ತಂಗಡಿ...
26-08-25 10:18 pm
27-08-25 10:23 pm
HK News Desk
Karkala Murder, Arrest, Crime: ಹೆಂಡ್ತಿ ಮಕ್ಕಳನ...
26-08-25 10:39 pm
ಟೆಕ್ನಾಲಜಿಯಲ್ಲಿ ಮುಂದಿರುವ ಅಮೆರಿಕದ ಪ್ರಜೆಗಳನ್ನೇ ಯ...
26-08-25 05:24 pm
ದುಬೈನಲ್ಲಿ ಗಂಡ, ಮೈಸೂರಿನಲ್ಲಿ ಪತ್ನಿಯ ಲವ್ವಿ ಡವ್ವಿ...
25-08-25 08:29 pm
ಶಿಕ್ಷಣ ಸಚಿವ ಮಧು ಬಂಗಾರಪ್ಪ ಪಿಎ ಹೆಸರಲ್ಲಿ ವಸೂಲಿ ;...
25-08-25 07:42 pm