ಬ್ರೇಕಿಂಗ್ ನ್ಯೂಸ್
05-07-22 06:49 pm Bangalore Correspondent ಕರ್ನಾಟಕ
ಬೆಂಗಳೂರು, ಜುಲೈ 5: ಪಿಎಸ್ಐ ನೇಮಕಾತಿ ಅಕ್ರಮ ಪ್ರಕರಣದಲ್ಲಿ ನೇಮಕಾತಿ ವಿಭಾಗದ ಎಡಿಜಿಪಿ ಅಮೃತ್ ಪೌಲ್ ಶಾಮೀಲಾತಿ ಬಗ್ಗೆ ಆರಂಭದಲ್ಲಿಯೇ ಸಿಐಡಿ ಅಧಿಕಾರಿಗಳಿಗೆ ಅನುಮಾನಗಳಿದ್ದವು. ಇಲಾಖೆಯ ಅಧೀನ ಸಿಬಂದಿಯನ್ನು ಅಕ್ರಮಕ್ಕೆ ಬಳಸಿಕೊಂಡಿರುವುದಕ್ಕೆ ಪುರಾವೆಗಳಿದ್ದರೂ, ಅಧಿಕಾರಿಗಳು ಬಂಧಿಸಲು ಮುಂದಾಗಿರಲಿಲ್ಲ. ತಮಗಿಂತ ಮೇಲಿನ ದರ್ಜೆಯ ಅಧಿಕಾರಿಯನ್ನು ಬಂಧಿಸಲು ಪೊಲೀಸರು ಭಯಗೊಂಡಿದ್ದರು. ಹಾಗಾಗಿ ಸತತ ಮೂರು ಬಾರಿ ಅವರನ್ನು ವಿಚಾರಣೆಗೊಳಪಡಿಸಿ ಬಂಧಿಸದೆ ಬಿಟ್ಟಿದ್ದರು. ಈ ನಡುವೆ, ರಾಜ್ಯ ಸರಕಾರವೂ ಅವರನ್ನು ನೇಮಕಾತಿ ವಿಭಾಗದಿಂದ ಆಂತರಿಕ ಭದ್ರತಾ ವಿಭಾಗಕ್ಕೆ ವರ್ಗಾಯಿಸಿ ಅಭಯ ನೀಡಿತ್ತು.
ಒಎಂಆರ್ ಶೀಟ್ ತಿದ್ದಲು ಸಾಥ್ ನೀಡಿದ್ದ ಎಡಿಜಿಪಿ
ಪಿಎಸ್ಐ ಪರೀಕ್ಷೆಯಲ್ಲಿ ಪಾಲ್ಗೊಂಡಿದ್ದ ಅಭ್ಯರ್ಥಿಗಳ ಒಎಂಆರ್ ಪ್ರತಿಗಳನ್ನು ಇರಿಸಿದ್ದ ಭದ್ರತಾ ಕೊಠಡಿಯ ಬೀಗದ ಕೀಯನ್ನು ತನ್ನ ಅಧೀನ ನೌಕರರಿಗೆ ನೀಡಿ ಅವರಲ್ಲೇ ಉತ್ತರ ಪತ್ರಿಕೆಯನ್ನು ತಿದ್ದಿಸಿರುವ ಕೃತ್ಯದಲ್ಲಿ ಎಡಿಜಿಪಿ ಅಮೃತ್ ಪೌಲ್ ಪಾತ್ರ ತನಿಖೆಯಲ್ಲಿ ಸಾಬೀತಾಗಿತ್ತು. ಹಾಗಿದ್ದರೂ, ಸಿಐಡಿ ಅಧಿಕಾರಿಗಳು ಎಡಿಜಿಪಿಯನ್ನು ಬಂಧಿಸುವ ಧೈರ್ಯ ಮಾಡಿರಲಿಲ್ಲ. ಪ್ರಭಾವಿ ಅಧಿಕಾರಸ್ಥರೇ ಅವರನ್ನು ಬಂಧಿಸದಂತೆ ತಡೆ ಹಾಕಿದ್ದರು ಅನ್ನುವ ಆರೋಪಗಳಿದ್ದವು. ಕಳೆದ ಎಪ್ರಿಲ್ 10ರಂದು ಮೊದಲ ಬಾರಿಗೆ ಪಿಎಸ್ಐ ನೇಮಕಾತಿ ಅಕ್ರಮ ಸಂಬಂಧಿಸಿ ಕಲಬುರಗಿಯ ಚೌಕ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು. ಆಗಿನಿಂದಲೂ ಪ್ರಕರಣದಲ್ಲಿ ಅಮೃತ್ ಪೌಲ್ ಕೈವಾಡವಿರುವ ಆರೋಪ ಕೇಳಿಬಂದಿತ್ತು. ಹಗರಣಕ್ಕೆ ಸಂಬಂಧಿಸಿ ಈವರೆಗೆ ಎಂಟು ಎಫ್ಐಆರ್ ಗಳು ದಾಖಲಾಗಿದ್ದು ಒಟ್ಟು 65 ಮಂದಿಯನ್ನು ಬಂಧಿಸಲಾಗಿದೆ.
ಬಂಧಿತರಲ್ಲಿ ನಾಲ್ವರು ಡಿವೈಎಸ್ಪಿ ಸೇರಿದಂತೆ ಪೊಲೀಸ್ ಇಲಾಖೆಯ 18 ಅಧಿಕಾರಿಗಳು, ಸಿಬಂದಿ, 47 ಮಂದಿ ಅಭ್ಯರ್ಥಿಗಳು, ಮಧ್ಯವರ್ತಿಗಳು ಇದ್ದಾರೆ. ಹೌಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದಲ್ಲಿ 35ನೇ ಆರೋಪಿಯನ್ನಾಗಿ ಅಮೃತ್ ಪೌಲ್ ಅವರನ್ನು ಬಂಧಿಸಲಾಗಿದೆ. ಸದ್ಯ ಪೌಲ್ ಅವರನ್ನು ಬೆಂಗಳೂರಿನ ಒಂದನೇ ಎಸಿಎಂಎಂ ನ್ಯಾಯಾಲಯಕ್ಕೆ ಹಾಜರುಪಡಿಸಿ 10 ದಿನಕ್ಕೆ ಸಿಐಡಿ ಕಸ್ಟಡಿಗೆ ಪಡೆದಿದೆ. ತಮ್ಮ ಅಧೀನ ನೌಕರರ ಜೊತೆ ಸೇರಿಕೊಂಡು ಅಮೃತ್ ಪೌಲ್ ಅಕ್ರಮ ಎಸಗಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಈ ಬಗ್ಗೆ ಬಂಧಿತ ನೌಕರರು ಸಹ ಹೇಳಿಕೆ ನೀಡಿದ್ದು, ಅದನ್ನು ಮುಂದಿಟ್ಟು ವಿಚಾರಣೆ ನಡೆಸಲಾಗುತ್ತಿದೆ ಎಂದು ಸಿಐಡಿ ಮೂಲಗಳು ಹೇಳಿವೆ.
ನೌಕರರಿಗೆ ಕೀ ಕೊಟ್ಟು ಕೆಲಸ ಮಾಡಿಸಿದ್ದ ಮುಖ್ಯಸ್ಥ
2021ರ ಅಕ್ಟೋಬರ್ 3ರಂದು ರಾಜ್ಯದ 92 ಕೇಂದ್ರಗಳಲ್ಲಿ ಪಿಎಸ್ಐ ನೇಮಕಾತಿ ಪರೀಕ್ಷೆ ನಡೆದಿತ್ತು. ಅಭ್ಯರ್ಥಿಗಳ ಒಎಂಆರ್ ಪ್ರತಿಗಳನ್ನು ಟ್ರಂಕ್ ಗಳಲ್ಲಿ ಮುಚ್ಚಿ ಸೀಲ್ ಮಾಡಿ ಬೆಂಗಳೂರಿನ ನೇಮಕಾತಿ ವಿಭಾಗದ ಕಚೇರಿಗೆ ಕಳುಹಿಸಲಾಗಿತ್ತು. ಭದ್ರತಾ ವಿಭಾಗದಲ್ಲಿ ಇರಿಸಿದ್ದ ಕೊಠಡಿಗೆ ಎರಡು ಕೀಗಳಿದ್ದವು. ಒಂದು ಎಡಿಜಿಪಿ ಬಳಿ ಇದ್ದರೆ, ಇನ್ನೊಂದು ವಿಭಾಗದ ಸೂಪರಿಡೆಂಟ್ ಬಳಿ ಇತ್ತು. ಎರಡು ಕೀಗಳ ಬಗ್ಗೆಯೂ ತನಿಖೆ ನಡೆಸಲಾಗಿದ್ದು, ಎಡಿಜಿಪಿ ಬಳಿ ಇದ್ದ ಕೀಯನ್ನು ಪಡೆದು ಭದ್ರತಾ ಕೊಠಡಿಯ ನೌಕರರಿಂದಲೇ ಉತ್ತರ ಪತ್ರಿಕೆ ತಿದ್ದಿರುವುದಕ್ಕೆ ಸಾಕ್ಷ್ಯ ಲಭಿಸಿದೆ. ಸುಪರಿಡೆಂಟ್ ಅಕ್ರಮದಲ್ಲಿ ಭಾಗಿಯಾಗಿರುವ ಬಗ್ಗೆ ಸದ್ಯಕ್ಕೆ ಪುರಾವೆ ಸಿಕ್ಕಿಲ್ಲ ಎನ್ನಲಾಗುತ್ತಿದೆ.
ಭದ್ರತಾ ಕೊಠಡಿಯಲ್ಲಿದ್ದ ಟ್ರಂಕ್ ಗಳ ಕೆಲವು ಬೀಗದ ಕೀಗಳು ಡಿವೈಎಸ್ಪಿ ಶಾಂತಕುಮಾರ್ ಮನೆಯಲ್ಲಿ ಪತ್ತೆಯಾಗಿದ್ದವು. ಎಡಿಜಿಪಿ ಅವರೇ ಡಿವೈಎಸ್ಪಿ ಮೂಲಕ ಕೊಠಡಿ ಬೀಗ ತೆಗೆಸಿದ್ದಾರೆ ಎನ್ನಲಾಗುತ್ತಿದೆ. ಆದರೆ, ಎಡಿಜಿಪಿ ವಿಚಾರಣೆ ವೇಳೆ ತಮ್ಮ ಮೇಲಿನ ಆರೋಪವನ್ನು ನಿರಾಕರಿಸುತ್ತಿದ್ದಾರೆ. ಆದರೆ ಪುರಾವೆಗಳನ್ನು ಮುಂದಿಟ್ಟಾಗ ಮೌನಕ್ಕೆ ಜಾರುತ್ತಿದ್ದಾರೆ. ಡಿವೈಎಸ್ಪಿ ಹಾಗೂ ಇತರ ನೌಕರರ ಮುಂದೆಯೇ ವಿಚಾರಣೆ ನಡೆದಲ್ಲಿ ನಿಜಾಂಶ ತಿಳಿಯಲಿದೆ.
ಹೈಕೋರ್ಟ್ ಛಾಟಿಗೆ ಬೇಸತ್ತು ಸಿಐಡಿ ಗಾಳ
ಪ್ರಕರಣದ ಬಗ್ಗೆ ಇತ್ತೀಚೆಗೆ ವಿಚಾರಣೆ ನಡೆಸಿದ್ದ ಹೈಕೋರ್ಟ್ ನ್ಯಾಯಾಧೀಶರು, ಪಿಎಸ್ಐ ನೇಮಕಾತಿ ಅಕ್ರಮದ ಹಿಂದೆ ಯಾವುದೇ ಸಚಿವ, ಅಧಿಕಾರಿಗಳು ಇದ್ದರೂ ಮುಲಾಜಿಲ್ಲದೆ ಕ್ರಮ ಕೈಗೊಳ್ಳಬೇಕು. ಭ್ರಷ್ಟಾಚಾರ ಸಹಿಸಲ್ಲ ಎಂದು ವಾರ್ನ್ ಮಾಡಿದ್ದರು. ಇದೇ ಕಾರಣಕ್ಕೆ ಸಿಐಡಿ ಡಿಜಿಪಿ ಪಿ.ಎಸ್.ಸಂಧು, ಐಜಿಪಿ ಉಮೇಶ್ ಕುಮಾರ್ ನೇತೃತ್ವದ ತಂಡ ನಾಲ್ಕನೇ ಬಾರಿ ಅಮೃತ್ ಪೌಲ್ ಅವರನ್ನು ವಿಚಾರಣೆಗೆ ಕರೆಸಿ ಬಂಧಿಸಿದೆ. ಇದರ ನಡುವೆಯೇ ಎಡಿಜಿಪಿ ಪೌಲ್ ಅವರನ್ನು ಬಂಧಿಸದಂತೆ ಅಧಿಕಾರಸ್ಥ ಪ್ರಭಾವಿಯೊಬ್ಬರು ಸಿಐಡಿ ಮೇಲೆ ಒತ್ತಡ ಹೇರಿದ್ದರು ಅನ್ನುವ ಆರೋಪಗಳಿದ್ದು, ಹೀಗಾಗಿ ಒಟ್ಟು ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಿದರೆ ಮತ್ತಷ್ಟು ಪ್ರಭಾವಿಗಳು ಜೈಲು ಸೇರಬಹುದು ಎಂಬ ಮಾತು ಪೊಲೀಸ್ ಇಲಾಖೆಯಲ್ಲೇ ಕೇಳಿಬಂದಿದೆ.
ಪಂಜಾಬ್ ಮೂಲದ ಅಮೃತ್ ಪೌಲ್ ಎಂಎಸ್ಸಿ ಪದವೀಧರನಾಗಿದ್ದು 1995ನೇ ಬ್ಯಾಚ್ ಐಪಿಎಸ್ ಅಧಿಕಾರಿ. ಈ ಹಿಂದೆ ಉಡುಪಿ ಎಸ್ಪಿ ಆಗಿ ಕೆಲಸ ನಿರ್ವಹಿಸಿದ್ದರು. ಆನಂತರ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ಒಳಗೊಂಡ ಪಶ್ಚಿಮ ವಲಯ ಐಜಿಪಿ ಆಗಿಯೂ ಕಾರ್ಯ ನಿರ್ವಹಿಸಿದ್ದರು. 2020ರಲ್ಲಿ ಎಡಿಜಿಪಿ ಆಗಿ ಭಡ್ತಿ ಪಡೆದಿದ್ದ ಪೌಲ್, ನೇಮಕಾತಿ ವಿಭಾಗಕ್ಕೆ ನಿಯೋಜನೆಗೊಂಡಿದ್ದರು. ಅಧಿಕಾರ ಸ್ವೀಕರಿಸಿದ ಬಳಿಕ, ಇವರದೇ ಉಸ್ತುವಾರಿಯಲ್ಲಿ 545 ಪಿಎಸ್ಐ ನೇಮಕಾತಿಗೆ ಪ್ರಕ್ರಿಯೆ ಆರಂಭಿಸಿದ್ದರು. ಈಗ ಅದೇ ನೇಮಕಾತಿಯಲ್ಲಿ ಭ್ರಷ್ಟಾಚಾರ ಎಸಗಿ, ಎರಡೇ ವರ್ಷದಲ್ಲಿ ಜೈಲು ಪಾಲಾಗಿದ್ದಾರೆ.
The Criminal Investigation Department (CID) on Monday arrested senior IPS officer and former chief of police recruitment, Additional Director General of Police (ADGP), Amrit Paul in connection with the alleged multi-crore police sub inspector (PSI) recruitment scam. He was taken for medical examination to Victoria Hospital soon after his arrest and later produced before a court, which remanded him to police custody for 10 days for custodial interrogation.
27-08-25 03:17 pm
HK News Desk
Kannada Anchor Anushree, Marriage, Mangalore:...
27-08-25 02:51 pm
ಚಾಮುಂಡಿ ಬೆಟ್ಟ ಪಕ್ಕಾ ಹಿಂದೂಗಳ ಸ್ವತ್ತು, ಮುಸ್ಲಿಮರ...
27-08-25 12:33 pm
Dk Shivakumar, Chamundi Hill: ಚಾಮುಂಡಿ ಬೆಟ್ಟ ಹ...
27-08-25 11:48 am
R Ashok, Dharmasthala: ಬುರುಡೆ ಕಥೆ ಹೊರಗಡೆ ಬಂದ...
26-08-25 10:47 pm
26-08-25 09:02 pm
HK News Desk
ಜಮ್ಮು ಭಾರಿ ಮಳೆಗೆ ಒಂಬತ್ತು ಮಂದಿ ಬಲಿ ; ಹಲವೆಡೆ ಭೂ...
26-08-25 07:39 pm
Trump Immigrant Population: ಟ್ರಂಪ್ ಸಾಮ್ರಾಜ್ಯದ...
24-08-25 01:47 pm
Actor Vijay, Thalapathy; ಟಿವಿಕೆ ಮುಖ್ಯಸ್ಥ, ನಟ...
23-08-25 04:58 pm
Mp Brijesh Chowta, Mangalore: ಆನ್ಲೈನ್ ಗೇಮಿಂಗ್...
22-08-25 10:00 pm
26-08-25 10:57 pm
Mangalore Correspondent
Vasanth Giliyar Hate speech, Case: ಬೆಳ್ತಂಗಡಿ...
26-08-25 10:18 pm
Dharmasthala case, Chinmaya, Mahesh Shetty: ದ...
26-08-25 10:36 am
Mangalore, Rushabh Rao: ವಿಯಟ್ನಾಂ ಫ್ಯಾಷನ್ ಶೋ ಸ...
25-08-25 10:59 pm
Mangalore, Esyasoft, AI, Bajpe: ಬಜ್ಪೆ ; ಎಸ್ಯಾ...
25-08-25 10:44 pm
26-08-25 10:39 pm
HK News Desk
ಟೆಕ್ನಾಲಜಿಯಲ್ಲಿ ಮುಂದಿರುವ ಅಮೆರಿಕದ ಪ್ರಜೆಗಳನ್ನೇ ಯ...
26-08-25 05:24 pm
ದುಬೈನಲ್ಲಿ ಗಂಡ, ಮೈಸೂರಿನಲ್ಲಿ ಪತ್ನಿಯ ಲವ್ವಿ ಡವ್ವಿ...
25-08-25 08:29 pm
ಶಿಕ್ಷಣ ಸಚಿವ ಮಧು ಬಂಗಾರಪ್ಪ ಪಿಎ ಹೆಸರಲ್ಲಿ ವಸೂಲಿ ;...
25-08-25 07:42 pm
How Did Pastor John Shamine and Criminal Mada...
25-08-25 07:31 pm