ಬ್ರೇಕಿಂಗ್ ನ್ಯೂಸ್
29-06-22 06:56 pm HK News Desk ಕರ್ನಾಟಕ
ಶಿವಮೊಗ್ಗ, ಜೂನ್ 29 : ರಾಜಸ್ಥಾನದಲ್ಲಿ ಕನಯ್ಯಲಾಲ್ ಕಗ್ಗೊಲೆ ಕೇವಲ ಒಬ್ಬ ವ್ಯಕ್ತಿಯ ಕೊಲೆಯಲ್ಲ. ಒಬ್ಬನಿಗೆ ಸೀಮಿತ ವಿಷಯವಲ್ಲ. ಇಡೀ ದೇಶದ ಹಿಂದು ಸಮಾಜಕ್ಕೆ ಸವಾಲೊಡ್ಡಿದ್ದಾರೆ. ಕೊಲೆ ಮಾಡಿದವರೇ ತಾವೇ ಕೃತ್ಯ ಎಸಗಿದ್ದಾಗಿ ಹೇಳಿದ್ದಾರೆ. ಅವರನ್ನು ವಿಚಾರಣೆ ನಡೆಸಬೇಕಿಲ್ಲ. ಪೊಲೀಸರೇ ಗುಂಡು ಹೊಡೆದು ಸಾಯಿಸಬೇಕು. ಇದಕ್ಕಾಗಿ ಕಾನೂನಿನಲ್ಲಿ ಬದಲಾವಣೆ ತರಬೇಕು ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಒತ್ತಾಯಿಸಿದ್ದಾರೆ.
ಉದಯಪುರದ ಘಟನೆ ಖಂಡಿಸಿ ಶಿವಮೊಗ್ಗದಲ್ಲಿ ನಡೆದ ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಈಶ್ವರಪ್ಪ, ನಮ್ಮ ಅನೇಕ ಶ್ರದ್ಧಾಕೇಂದ್ರಗಳು ಅಪಮಾನ ಸಹಿಸಿಕೊಂಡು ಬಂದಿವೆ. ರಾಮ ಹುಟ್ಟಿದ ಜಾಗದಲ್ಲಿ ಬಾಬ್ರಿ ಮಸೀದಿ ಆಗಿತ್ತು. ಅಪಮಾನವನ್ನು ನೂರಾರು ವರ್ಷ ಸಹಿಸಿಕೊಂಡು ಬಂದ್ವಿ. ಇವತ್ತು ಕಾಶಿಯಲ್ಲಿ ವಿಶ್ವನಾಥನ ಲಿಂಗದ ಕೆಳಗೆ ಪಾದ ತೊಳೆದುಕೊಂಡು ನಮಾಜ್ ಮಾಡ್ತಿದ್ದರು. ಮಥುರಾದಲ್ಲಿ ಶ್ರೀಕೃಷ್ಣನ ಜನ್ಮಸ್ಥಳದ ಜಾಗಕ್ಕೆ ಹೋದ್ರೆ ಮಸೀದಿ ಕಟ್ಟಿರುವುದು ಇತಿಹಾಸ. ಈ ಮೂರು ದೇವಾಲಯಗಳನ್ನು ನಾನು ಕಣ್ಣಾರೆ ಕಂಡಿದ್ದೇನೆ.
ನೂಪುರ್ ಶರ್ಮಾ ಪೈಗಂಬರ್ ಬಗ್ಗೆ ಒಂದು ಮಾತು ಹೇಳಿದ್ದಾರೆ ಅಂತ ಮುಸಲ್ಮಾನ್ ದೇಶಗಳು ಪ್ರತಿಭಟನೆ ಮಾಡಿದವು. ಇವತ್ತು ರಾಜಸ್ಥಾನದಲ್ಲಿ ಒಬ್ಬ ಸಾಮಾನ್ಯ ದರ್ಜಿಯ ಕೊಲೆಯಾಗಿದೆ. ಇದೇ ರೀತಿ ಮೋದಿ ಕೊಲೆ ಮಾಡ್ತೇವೆ ಅಂದಿದ್ದಾರೆ. ಈ ಉದ್ದಟತನದ ಹೇಳಿಕೆ ಹಿಂದು ಸಮಾಜಕ್ಕೆ ಅಪಮಾನ. ಕಾಂಗ್ರೆಸ್ ನಾಯಕರು ಆಗಿದ್ದು ಆಯ್ತು, ಶಾಂತಿ ಕಾಪಾಡಿ ಅಂತಿದ್ದಾರೆ. ಇಂತಹ ಮುಸಲ್ಮಾನ್ ರಾಷ್ಟ್ರದ್ರೋಹಿಗಳ ವಿರುದ್ದ ಏನು ಕ್ರಮ ಕೈಗೊಳ್ಳಬೇಕು ಅಂತ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಸಿದ್ದರಾಮಯ್ಯ, ಡಿಕೆಶಿ ಇದುವರೆಗೆ ಬಾಯಿ ಬಿಟ್ಟಿಲ್ಲ.
ಸ್ವತಃ ರಾಷ್ಟ್ರದ್ರೋಹಿ ಕೊಲೆಗಡುಕರು, ನಾವೇ ಕೊಂದಿದ್ದಾರೆ ಅಂದಿದ್ದಾರೆ. ಹೀಗಾಗಿ ನಾನು ಪ್ರಧಾನಿಯವರಲ್ಲಿ ಮನವಿ ಮಾಡ್ತೇನೆ. ಈ ಕಾನೂನನ್ನು ತಕ್ಷಣ ಬದಲಾವಣೆ ಮಾಡಬೇಕು. ಕೊಲೆಗಡುಕರು ಕೊಲೆ ಮಾಡಿದ್ದೇವೆ ಅಂದಾಗ ಇದನ್ನು ವಿಚಾರಣೆ ಮಾಡಲು ಏನಿದೆ ? ಕೊಲೆಗಡುಕ ಅಂತಾ ತೀರ್ಮಾನ ಆದ ದಿನವೇ ಅವರನ್ನು ಗುಂಡಿಟ್ಟು ಕೊಲ್ಲಬೇಕು, ಇಲ್ಲದಿದ್ದರೆ ನೇಣಿಗೆ ಹಾಕಬೇಕು. ಅಂತಹ ಕಾನೂನು ಜಾರಿಗೆ ತರಬೇಕು ಎಂದು ಆಗ್ರಹಿಸಿದರು.
ಹಿಂದು ಸಮಾಜದ ತಾಳ್ಮೆ ಪರೀಕ್ಷೆ ಮಾಡುವಂತಹ ಕೆಲಸ ನಡೆಯುತ್ತಿದೆ. ಹಿಂದು ಸಮಾಜ ದಂಗೆ ಏಳುವ ಮೊದಲು ಕ್ರಮ ಕೈಗೊಳ್ಳಬೇಕು. ಮದರಸಾಗಳಲ್ಲಿ ರಾಷ್ಟ್ರ ಭಕ್ತಿ ಪಾಠ ಹೇಳಿಕೊಡುತ್ತಿಲ್ಲ. ರಾಷ್ಟ್ರದ್ರೋಹಿ ಪಾಠ ಹೇಳಿಕೊಡಲಾಗುತ್ತಿದೆ. ಹೀಗಾಗಿ ದೇಶಾದ್ಯಂತ ಮದರಸಾಗಳನ್ನು ಬಂದ್ ಮಾಡಬೇಕು. ಇಲ್ಲದಿದ್ದರೆ ಮದರಸಾಗಳಲ್ಲಿ ರಾಷ್ಟ್ರಭಕ್ತಿ ಇರುವ ಪಾಠ ಮಾತ್ರ ಹೇಳಿಕೊಡಬೇಕು ಎಂದು ಹೇಳಿದ ಈಶ್ವರಪ್ಪ, ಮೋದಿ ಅವರನ್ನು ಕೊಲ್ಲುತ್ತೇವೆ ಅಂದಿರುವಾಗ ಈ ಬಗ್ಗೆ ವಿಶ್ವಸಂಸ್ಥೆ ಸಭೆ ನಡೆಸಿ ತುರ್ತು ಕ್ರಮ ಕೈಗೊಳ್ಳಬೇಕು ಎಂದರು.
ಮೋದಿಯವರು ಈ ಬಗ್ಗೆ ತುರ್ತಾಗಿ ಸಂಸತ್ ಸಭೆ ಕರೆಯಬೇಕು. ಸಂಸತ್ತಿನಲ್ಲಿ ಹೊಸ ಕಾನೂನು ತರಲು ಚರ್ಚೆ ಮಾಡಬೇಕು. ತಾಳ್ಮೆಯನ್ನು ಎಲ್ಲಿಯವರೆಗೆ ತಡೆಯಲು ಸಾಧ್ಯ. ಕನಯ್ಯಲಾಲ್ ಕೊಲೆಯ ತನಿಖೆಯನ್ನು ಎನ್ ಐಎ ಗೆ ಕೊಡುತ್ತೇವೆ ಎಂದು ಘೋಷಣೆ ಮಾಡಿದ್ದಾರೆ. ಇದರ ಹಿಂದೆ ಯಾರಿದ್ದಾರೆ ಎಂಬುದು ಎನ್ ಐಎ ತನಿಖೆಯಿಂದ ಹೊರಗೆ ಬರುತ್ತದೆ. ಅಮಿತ್ ಶಾ ಅವರು ರಾಷ್ಟ್ರ ದ್ರೋಹಿಗಳನ್ನು ಮಟ್ಟ ಹಾಕಲೆಂದೇ ಗೃಹ ಸಚಿವರಾಗಿದ್ದಾರೆ. ಸ್ವತಂತ್ರ ಬಂದ 75 ವರ್ಷಗಳಿಂದಲೂ ಮುಸಲ್ಮಾನರು ಹಿಂದುಗಳ ಹತ್ಯೆ ಮಾಡುತ್ತಾ ಬಂದಿದ್ದಾರೆ. ಇದುವರೆಗೆ ಸಾವಿರಾರು ಹಿಂದುಗಳನ್ನು ಹತ್ಯೆ ಮಾಡಿದ್ದಾರೆ. ಗೃಹ ಸಚಿವರು ಇಂಥ ಕ್ರಿಮಿಗಳನ್ನು ಒದ್ದೋಡಿಸುತ್ತಾರೆಂಬ ನಂಬಿಕೆ ಇದೆ.
ಪ್ರಕರಣದ ಬಗ್ಗೆ ಸಿದ್ಧರಾಮಯ್ಯ ಸಾಮಾನ್ಯ ಟ್ವೀಟ್ ಮಾಡಿದ್ದಾರೆ ಅಷ್ಟೇ. ಅದರಲ್ಲಿ ಕೇವಲ ತೇಪೆ ಹಚ್ಚುವ ಕೆಲಸ ಮಾಡಿದ್ದಾರೆ. ಉಗ್ರವಾಗಿ ಖಂಡಿಸುವ ಕೆಲಸ ಸಿದ್ದರಾಮಯ್ಯ ಮಾಡಿಲ್ಲ ಎಂದು ಟೀಕಿಸಿದ ಈಶ್ವರಪ್ಪ, ಜು.2 ಹಾಗೂ 3 ರಂದು ಹೈದ್ರಾಬಾದ್ ನಲ್ಲಿ ಬಿಜೆಪಿ ರಾಷ್ಟ್ರೀಯ ಸಭೆ ನಡೆಯಲಿದೆ. ಸಭೆಯಲ್ಲಿ ಹಲವು ಮಂದಿ ರಾಷ್ಟ್ರೀಯ ನಾಯಕರು ಭಾಗವಹಿಸುತ್ತಿದ್ದಾರೆ. ನಾನು ಸಹ ಸಭೆಯಲ್ಲಿ ಭಾಗವಹಿಸುತ್ತಿದ್ದೇನೆ. ಅವಕಾಶ ಸಿಕ್ಕರೆ ರಾಷ್ಟ್ರ ದ್ರೋಹಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಬಗ್ಗೆ ಸಭೆಯಲ್ಲಿ ಚರ್ಚೆ ಮಾಡುತ್ತೇನೆ ಎಂದು ಹೇಳಿದರು.
Former minister and BJP MLA K.S. Eshwarappa has demanded for a “suitable law” to punish the culprits in the Udaipur murder and has called for a debate in the United Nations on the threat to Prime Minister Narendra Modi’s life.
25-08-25 10:55 pm
Bangalore Correspondent
K N Rajanna, Dk Shivakumar: ಅವ್ರು ಆರೆಸ್ಸೆಸ್ ಗ...
25-08-25 06:07 pm
DK Shivakumar, BK Hariprasad: ಕೆಪಿಸಿಸಿ ಅಧ್ಯಕ್...
25-08-25 03:02 pm
Satish Jarkiholi, Dharmasthala, SIT: ಧರ್ಮಸ್ಥಳ...
25-08-25 10:37 am
50% ರಿಯಾಯಿತಿ ಆಫರ್ ಗೆ ಮುಗಿಬಿದ್ದ ಜನರು ; ಮೊದಲ ದಿ...
24-08-25 05:30 pm
24-08-25 01:47 pm
HK News Desk
Actor Vijay, Thalapathy; ಟಿವಿಕೆ ಮುಖ್ಯಸ್ಥ, ನಟ...
23-08-25 04:58 pm
Mp Brijesh Chowta, Mangalore: ಆನ್ಲೈನ್ ಗೇಮಿಂಗ್...
22-08-25 10:00 pm
ಪತ್ನಿಯ ಪದವಿ ಪ್ರದಾನ ಸಮಾರಂಭಕ್ಕೆ ಬ್ರಿಟನ್ ತೆರಳಲು...
22-08-25 08:07 pm
Another Security, Parliament, Arrest: ಸಂಸತ್ತಿ...
22-08-25 02:00 pm
25-08-25 10:59 pm
Mangalore Correspondent
Mangalore, Esyasoft, AI, Bajpe: ಬಜ್ಪೆ ; ಎಸ್ಯಾ...
25-08-25 10:44 pm
Sameer MD, Latest News: ಬುರುಡೆ ರಹಸ್ಯ ; ಬೆಳ್ತಂ...
25-08-25 10:28 pm
Elevate Brand Mangalore 2025: 'ಎಲಿವೇಟ್ ಬ್ರ್ಯಾ...
25-08-25 05:24 pm
Dharmasthala, Mask Man, Fake Skull, SIT: ಎಸ್ಐ...
25-08-25 12:24 pm
25-08-25 08:29 pm
HK News Desk
ಶಿಕ್ಷಣ ಸಚಿವ ಮಧು ಬಂಗಾರಪ್ಪ ಪಿಎ ಹೆಸರಲ್ಲಿ ವಸೂಲಿ ;...
25-08-25 07:42 pm
How Did Pastor John Shamine and Criminal Mada...
25-08-25 07:31 pm
Online Fraud, cyber, Mangalore : ರಸಗೊಬ್ಬರ ಕಂಪ...
25-08-25 04:39 pm
Dharmasthala Case, Pastor John Shamine and No...
25-08-25 02:29 am