ಬ್ರೇಕಿಂಗ್ ನ್ಯೂಸ್
28-06-22 03:38 pm HK News Desk ಕರ್ನಾಟಕ
ಮಡಿಕೇರಿ, ಜೂನ್ 28: ದಕ್ಷಿಣ ಕನ್ನಡ – ಕೊಡಗು ಜಿಲ್ಲೆಯ ಗಡಿಭಾಗದಲ್ಲಿ ಆಗಿರುವ ಭೂಕಂಪನದ ಬಗ್ಗೆ ರಾಜ್ಯ ಪ್ರಾಕೃತಿಕ ವಿಕೋಪ ನಿಗಾ ಕೇಂದ್ರದ ಅಧಿಕಾರಿಗಳು ವರದಿ ನೀಡಿದ್ದಾರೆ. ಭೂಕಂಪನದ ಕೇಂದ್ರ ಬಿಂದು ಮಡಿಕೇರಿಯಿಂದ 5.2 ಕಿಮೀ ದೂರ ಇರುವ ಪೆರಾಜೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಚೆಂಬು ಎನ್ನುವ ಪ್ರದೇಶದಲ್ಲಿತ್ತು ಎನ್ನುವುದನ್ನು ಪತ್ತೆ ಮಾಡಿದ್ದಾರೆ. ಅಲ್ಲದೆ, ರಿಕ್ಟರ್ ಮಾಪಕದಲ್ಲಿ ಕಂಪನದ ತೀವ್ರತೆ 3ರಷ್ಟು ಇತ್ತು ಅನ್ನುವುದನ್ನು ಹೇಳಿದ್ದಾರೆ.
ಚೆಂಬು ಎನ್ನುವ ಪ್ರದೇಶದಿಂದ 8.2 ಕಿಮೀ ವ್ಯಾಪ್ತಿಯಲ್ಲಿ ಕೊಡಗು ಜಿಲ್ಲೆಯ ಕರಿಕೆ ಗ್ರಾಮ ಪಂಚಾಯತ್ ಇದೆ. 11.4 ಕಿಮೀ ದೂರದಲ್ಲಿ ಕೊಡಗು ಜಿಲ್ಲಾ ವ್ಯಾಪ್ತಿಯ ಸಂಪಾಜೆ ಹೋಬಳಿ ಇದೆ. 12 ಕಿಮೀ ದೂರದಲ್ಲಿ ದಕ್ಷಿಣ ಕನ್ನಡ ಜಿಲ್ಲೆಗೆ ಸೇರುವ ಸುಳ್ಯ ತಾಲೂಕಿನ ಪೂರ್ವ ಭಾಗದ ಪ್ರದೇಶಗಳು ಇವೆ.
ರಿಕ್ಟರ್ ಮಾಪಕದ ಪ್ರಕಾರ ಕೇಂದ್ರ ಬಿಂದುವಿನಿಂದ 40ರಿಂದ 50 ಕಿಮೀ ಸುತ್ತಳತೆಯಲ್ಲಿ ಭೂಕಂಪನ ಜನರ ಅನುಭವಕ್ಕೆ ಬರುವ ಸಾಧ್ಯತೆಯಿದೆ ಎಂದು ರಾಜ್ಯ ವಿಕೋಪ ನಿಗಾ ಕೇಂದ್ರದ ಅಧಿಕಾರಿಗಳು ತಿಳಿಸಿದ್ದಾರೆ. ಇದಲ್ಲದೆ, ಈ ರೀತಿಯ ಕಂಪನಗಳಿಂದ ಯಾವುದೇ ಹಾನಿ ಉಂಟಾಗುವುದಿಲ್ಲ. ಜನರು ಭಯ ಪಡುವ ಅವಶ್ಯಕತೆಯಿಲ್ಲ. ಸ್ವಲ್ಪ ಮಟ್ಟಿಗೆ ನಡುಗಿನ ರೀತಿಯ ಅನುಭವ ಆಗುವುದಷ್ಟೇ. ಈ ವಲಯ ಭೂಕಂಪ ಸಾಧ್ಯತೆಯ ಸೀಸ್ಮಿಕ್ ಝೋನ್ – 3ರಲ್ಲಿದ್ದು, ಟೆಕ್ಟೋನಿಕ್ ಪ್ಲೇಟ್ಸ್ ರಚನೆಯ ಆಧಾರದಲ್ಲಿ ಯಾವುದೇ ದೊಡ್ಡ ಮಟ್ಟಿನ ಕಂಪನ ಆಗುವ ಸಾಧ್ಯತೆ ಇರುವುದಿಲ್ಲ. ಈ ಬಗ್ಗೆ ಜನರು ಆತಂಕಗೊಳ್ಳುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.
ಸಂಪಾಜೆ ಭಾಗದಲ್ಲಿ ಎರಡು ದಿನಗಳ ಹಿಂದೆ ಜೂನ್ 26ರಂದು ಬೆಳಗ್ಗೆ 9.10ರ ಸುಮಾರಿಗೆ ಇದೇ ಮಾದರಿಯಲ್ಲಿ ಭೂಕಂಪ ಆಗಿತ್ತು. ಅಂದು 2.3ರಷ್ಟು ಕಂಪನ ಇದ್ದುದರಿಂದ ಹೆಚ್ಚು ನಡುಗಿದ ಅನುಭವ ಆಗಿರಲಿಲ್ಲ. ಆದರೆ ಮಂಗಳವಾರ ಬೆಳಗ್ಗೆ 7.45ರ ಸುಮಾರಿಗೆ ಮನೆಯಲ್ಲಿ ಕುರ್ಚಿಯಲ್ಲಿ ಕುಳಿತಿದ್ದವರು ಕೂಡ ನಡುಗಿದ ಅನುಭವದಿಂದ ಆತಂಕಗೊಂಡಿದ್ದಾರೆ. ಜೊತೆಗೆ, ಏನೋ ವಿಚಿತ್ರ ರೀತಿಯ ಸದ್ದು ಕೇಳಿಸಿದ್ದು, ಜನರು ಭಯಗೊಂಡಿದ್ದಾರೆ.
ಕೊಡಗಿನಲ್ಲಿ ವಾರದಲ್ಲಿ ಮೂರನೇ ಬಾರಿ
ವಾರದ ಹಿಂದೆ ಹಾಸನ ಜಿಲ್ಲೆಯ ಹೊಳೆನರಸೀಪುರ, ಅರಕಲಗೂಡು ಭಾಗದಲ್ಲಿಯೂ ಭೂಕಂಪನ ಆಗಿತ್ತು. ಅಂದು ಕೂಡ ಮಡಿಕೇರಿ, ಸೋಮವಾರಪೇಟೆಯಲ್ಲೂ ಕಂಪನದ ಅನುಭವ ಆಗಿತ್ತು. ಕೊಡಗಿನ ಜನರಿಗೆ ವಾರದಲ್ಲಿ ಮೂರನೇ ಬಾರಿ ಕಂಪನದ ಅನುಭವ ಆಗಿದ್ದು, ಪದೇ ಪದೇ ಭೂಮಿ ಅದುರುತ್ತಿರುವುದರಿಂದ ಆತಂಕಗೊಂಡಿದ್ದಾರೆ. ಮಂಗಳವಾರ ಬೆಳಗ್ಗೆ 7.45ರ ಸುಮಾರಿಗೆ ವಿರಾಜಪೇಟೆ, ಮಡಿಕೇರಿ ಭಾಗದಲ್ಲಿ ಜನರಿಗೆ ಕಂಪನದ ಅನುಭವ ಉಂಟಾಗಿತ್ತು. ನಾಪೋಕ್ಲು, ಕುಕ್ಕುಂದ, ದಬ್ಬಡ್ಕ, ಕರಿಕೆ, ಭಾಗಮಂಡಲ ಭಾಗದಲ್ಲಿ ಜನರು ಕೆಲ ಕ್ಷಣಗಳ ಕಾಲ ಕಂಪಿಸಿದ ಅನುಭವದಿಂದಾಗಿ ಭಯಗೊಂಡಿದ್ದಾರೆ. ಮನೆಯಲ್ಲಿದ್ದ ಪಾತ್ರೆಗಳು ಅಲುಗಾಡಿದ್ದವು.
ಸುಳ್ಯದಲ್ಲಿ ಮತ್ತೆ ಅದುರಿದ ಭೂಮಿ ; ಭೂಕಂಪದಿಂದ ಜನರಲ್ಲಿ ತೀವ್ರ ಆತಂಕ, ಏನೋ ವಿಚಿತ್ರ ಸದ್ದಿನೊಂದಿಗೆ ಕಂಪನ !
Days after an earthquake was reported, Kodagu residents experienced another moderate earthquake on Tuesday morning at 9.45am.According to the Karnataka State Natural Disaster Monitoring Centre (KSNDMC) the magnitude of this earthquake was 3.0 on the Richter scale.The epicenter of the earthquake was 5.2 kilometer north-west of M Chembu village, Paraje Grama Panchayat in Madikeri taluk of Kodagu district which border with Dakshina Kannada district.
25-08-25 10:55 pm
Bangalore Correspondent
K N Rajanna, Dk Shivakumar: ಅವ್ರು ಆರೆಸ್ಸೆಸ್ ಗ...
25-08-25 06:07 pm
DK Shivakumar, BK Hariprasad: ಕೆಪಿಸಿಸಿ ಅಧ್ಯಕ್...
25-08-25 03:02 pm
Satish Jarkiholi, Dharmasthala, SIT: ಧರ್ಮಸ್ಥಳ...
25-08-25 10:37 am
50% ರಿಯಾಯಿತಿ ಆಫರ್ ಗೆ ಮುಗಿಬಿದ್ದ ಜನರು ; ಮೊದಲ ದಿ...
24-08-25 05:30 pm
24-08-25 01:47 pm
HK News Desk
Actor Vijay, Thalapathy; ಟಿವಿಕೆ ಮುಖ್ಯಸ್ಥ, ನಟ...
23-08-25 04:58 pm
Mp Brijesh Chowta, Mangalore: ಆನ್ಲೈನ್ ಗೇಮಿಂಗ್...
22-08-25 10:00 pm
ಪತ್ನಿಯ ಪದವಿ ಪ್ರದಾನ ಸಮಾರಂಭಕ್ಕೆ ಬ್ರಿಟನ್ ತೆರಳಲು...
22-08-25 08:07 pm
Another Security, Parliament, Arrest: ಸಂಸತ್ತಿ...
22-08-25 02:00 pm
25-08-25 10:59 pm
Mangalore Correspondent
Mangalore, Esyasoft, AI, Bajpe: ಬಜ್ಪೆ ; ಎಸ್ಯಾ...
25-08-25 10:44 pm
Sameer MD, Latest News: ಬುರುಡೆ ರಹಸ್ಯ ; ಬೆಳ್ತಂ...
25-08-25 10:28 pm
Elevate Brand Mangalore 2025: 'ಎಲಿವೇಟ್ ಬ್ರ್ಯಾ...
25-08-25 05:24 pm
Dharmasthala, Mask Man, Fake Skull, SIT: ಎಸ್ಐ...
25-08-25 12:24 pm
25-08-25 08:29 pm
HK News Desk
ಶಿಕ್ಷಣ ಸಚಿವ ಮಧು ಬಂಗಾರಪ್ಪ ಪಿಎ ಹೆಸರಲ್ಲಿ ವಸೂಲಿ ;...
25-08-25 07:42 pm
How Did Pastor John Shamine and Criminal Mada...
25-08-25 07:31 pm
Online Fraud, cyber, Mangalore : ರಸಗೊಬ್ಬರ ಕಂಪ...
25-08-25 04:39 pm
Dharmasthala Case, Pastor John Shamine and No...
25-08-25 02:29 am