ಬ್ರೇಕಿಂಗ್ ನ್ಯೂಸ್
24-05-22 05:25 pm Bengalore Correspondent ಕರ್ನಾಟಕ
ಬೆಂಗಳೂರು, ಮೇ 24 : ಬೆಂಗಳೂರಿನಲ್ಲೊಬ್ಬ ರಸ್ತೆ, ಗೋಡೆ, ಕಾಲೇಜು ಆವರಣದಲ್ಲಿ ಸಾರಿ ಸಾರಿ ಎಂದು ಕೆಂಪು ಬಣ್ಣದಲ್ಲಿ ನೂರಾರು ಕಡೆ ರಾತ್ರೋರಾತ್ರಿ ಬರೆದಿಟ್ಟಿದ್ದು ಜನರ ಕುತೂಹಲಕ್ಕೆ ಕಾರಣವಾಗಿದೆ. ಯಾರೋ ಪ್ರೀತಿ ಹುಚ್ಚಿನಲ್ಲಿ ಈ ಕೆಲಸ ಮಾಡಿರಬೇಕು. ಆದರೆ ಯಾರು, ಯಾರಿಗೆ ಈ ಸಾರಿ ಕೇಳಿದ್ದಾರೆ ಎನ್ನುವುದರ ಪತ್ತೆಗೆ ಸ್ಥಳೀಯರು ಪೊಲೀಸರ ಮೊರೆ ಹೋಗಿದ್ದಾರೆ.
ಸುಂಕದಕಟ್ಟೆಯ ಶಾಂತಿಧಾಮ ಸ್ಕೂಲ್ ಬಳಿ ಅಪರಿಚಿತ ವ್ಯಕ್ತಿಯೊಬ್ಬ ಕ್ಷಮಿಸು (Sorry) ಎಂದು ಗೋಡೆ, ರಸ್ತೆಯಲ್ಲೆಲ್ಲಾ ಬರೆದಿದ್ದಾನೆ. ಬರೀ ಶಾಲೆ ಅಷ್ಟೇ ಅಲ್ಲ, ಅಲ್ಲೇ ಪಕ್ಕದಲ್ಲಿದ್ದ ಮನೆಯ ಕಾಂಪೌಂಡ್, ಮೆಟ್ಟಿಲ ಮೇಲೆಲ್ಲಾ 'Sorry' ಎಂದು ಬರೆಯಲಾಗಿದೆ. ಕಾಲೇಜ್ ಮುಂದಿನ ರಸ್ತೆ ಮೇಲೂ ಸಾರಿ ಅಂತ ನೂರಾರು ಸಾರಿ ಬರೆದಿದ್ದು ಕಂಡುಬಂದಿದೆ. ಇಂದು ಬೆಳಗ್ಗೆ ಎದ್ದು ನೋಡಿದ ಸ್ಥಳೀಯರಿಗೆ ಅಚ್ಚರಿಯಾಗಿದ್ದು, ಯಾರು ಯಾರಿಗಾಗಿ ಬರೆದಿದ್ದಾನೆ ಎಂದು ಕುತೂಹಲಗೊಂಡಿದ್ದಾರೆ.


ರಾತ್ರಿ ಬೈಕ್‌ನಲ್ಲಿ ಬಂದು ಬರೆದ ಅಪರಿಚಿತರು !
ಸ್ಥಳೀಯರು ಹೇಳುವ ಪ್ರಕಾರ ರಾತ್ರಿ 11 ರಿಂದ 12 ಗಂಟೆ ಸಮಯದಲ್ಲಿ ಡ್ಯೂಕ್ ಬೈಕ್ ನಲ್ಲಿ ಆಗಮಿಸಿದ್ದ ಇಬ್ಬರು ಯುವಕರು ಈ ಕೃತ್ಯ ಮಾಡಿದ್ದಾರೆ ಎನ್ನಲಾಗಿದೆ. ಫುಡ್ ಡೆಲಿವರಿ ಬ್ಯಾಗ್ ನೊಂದಿಗೆ ಬಂದಿದ್ದರು. ಅವರೇ ಸ್ಪ್ರೇ ಪೈಂಟ್ ಮೂಲಕ ಸಿಕ್ಕ ಸಿಕ್ಕಲ್ಲಿ ಸಾರಿ ಎಂದು ಬರೆದಿದ್ದಾರೆ ಎನ್ನುವ ಶಂಕೆಯಿದೆ. ಪಾಗಲ್ ಪ್ರೇಮಿಗಳದ್ದೇ ಕೃತ್ಯ ಅಂತ ಸ್ಥಳೀಯರು ಶಂಕಿಸಿದ್ದಾರೆ.


ಬೆಳಗ್ಗೆ ಎದ್ದು ರಸ್ತೆ, ಶಾಲೆ ನೋಡಿದ ಸ್ಥಳೀಯರಿಗೆ ಶಾಕ್ ಆಗಿದೆ. ಬಳಿಕ ಸ್ಛಳೀಯರು ಹಾಗೂ ಕಾಲೇಜ್ ಪ್ರಿನ್ಸಿಪಾಲ್ ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಬಂದ ಪೊಲೀಸರು ಬರಹಗಳನ್ನು ಪರಿಶೀಲಿಸಿದ್ದಾರೆ. ಸುತ್ತಮುತ್ತಲಿನ ಸಿಸಿಟಿವಿಗಳ ಪರಿಶೀಲನೆ ನಡೆಸಿ ಅಪರಿಚಿತ ವ್ಯಕ್ತಿಗೆ ಹುಡುಕಾಟ ನಡೆಸಿದ್ದಾರೆ.
Roads and walls painted with Sorry in Bangalore, public approach police to investigate the case.
28-08-26 09:35 pm
HK News Staffer
ವಾಲ್ಮೀಕಿ ನಿಗಮ ಹಗರಣ ಎಫೆಕ್ಟ್ ; ಕೊನೆಗೂ ಸಚಿವ ಸ್ಥಾ...
28-08-26 12:41 pm
ಮಹಿಳೆಯರು ಇಲ್ಲದ ಸಂಪುಟ ಅಪೂರ್ಣ, ಮಂತ್ರಿಗಿರಿ ಕೇಳಿಲ...
28-08-26 12:13 pm
Yadgir Prayer Meeting: ಯಾದಗಿರಿಯಲ್ಲಿ ಉಜ್ಜೀವನದ...
25-08-26 03:39 pm
ಕರ್ನಾಟಕದಲ್ಲಿ H1N1 ಆತಂಕ ; 8 ತಿಂಗಳಲ್ಲಿ 4,212 ಪ...
24-08-26 03:16 pm
29-08-26 03:36 pm
HK News Staffer
ನೇಪಾಳದಲ್ಲಿ ಜಲಪ್ರಳಯ ; ಸಾವಿನ ಸಂಖ್ಯೆ 160ಕ್ಕೆ ಏರ...
27-08-26 12:39 pm
ಪುತ್ರಿಯ ಅಂತರ್ಜಾತಿ ವಿವಾಹ ; ಕಣ್ಣೂರು ಮುಚ್ಚಿಲೋಟ್...
26-08-26 06:41 pm
ಹಿಜಾಬ್ ಇಸ್ಲಾಮಿನ ಧಾರ್ಮಿಕ ಆಚರಣೆಯಲ್ಲಿ ಅನಿವಾರ್ಯ ಅ...
26-08-26 02:05 pm
ಮಂಗಳೂರನ್ನು ಪಾಲಕ್ಕಾಡ್ ರೈಲ್ವೇ ವಿಭಾಗದಿಂದ ತೆರವು ಮ...
26-08-26 12:01 pm
29-08-26 07:01 pm
HK News Staffer
ಮಂಗಳೂರಿನಲ್ಲಿ ಸಚಿವ ಸಂಪುಟ ಸಭೆ ; ತುಳುವನ್ನು ರಾಜ್ಯ...
29-08-26 04:39 pm
ಮಂಗಳೂರು ರೈಲ್ವೇ ; ಕೇರಳದಲ್ಲಿ ಯಾರು ಬಟ್ಟೆ ಬಿಚ್ಚಿ...
29-08-26 04:05 pm
ಪ್ರತಿಷ್ಠಿತ ಫೋರ್ಬ್ಸ್ ಇಂಡಿಯಾ ಪಟ್ಟಿಯಲ್ಲಿ ಸ್ಥಾನ ಪ...
28-08-26 08:57 pm
ಚೀರುಂಭಾ ಭಗವತಿ ತೀಯಾ ಸಮಾಜ ಸೇವಾ ಸಂಘದಲ್ಲಿ ಅವ್ಯವಹಾ...
28-08-26 02:11 pm
29-08-26 01:02 pm
HK News Staffer
ತುಮಕೂರು ; ಓವರ್ಟೇಕ್ ಭರದಲ್ಲಿ ಕಾರುಗಳ ನಡುವೆ ಮುಖ...
29-08-26 11:40 am
ಡೇಟಿಂಗ್ ಆ್ಯಪ್ನಲ್ಲಿ ಪರಿಚಯವಾಗಿದ್ದ ಹುಡುಗಿಯ ಕತರ್...
28-08-26 09:03 pm
ಮಧ್ಯಪ್ರದೇಶದಲ್ಲಿ ಪ್ರಪಾತಕ್ಕೆ ಉರುಳಿ ಬಿದ್ದ ಬಸ್ ;...
28-08-26 07:40 pm
ತೆರಿಗೆ ಮೊತ್ತವನ್ನು 80 ಲಕ್ಷದಿಂದ 30 ಲಕ್ಷ ರೂ.ಗೆ ಇ...
28-08-26 06:22 pm