ಬ್ರೇಕಿಂಗ್ ನ್ಯೂಸ್
20-01-21 12:41 pm Source: GIZBOT Mutthuraju H M ಡಿಜಿಟಲ್ ಟೆಕ್
ಕಳೆದ ಕೆಲ ದಿನಗಳಿಂದ ವಾಟ್ಸಾಪ್‌ನ ಹೊಸ ಸೇವಾ ನಿಯಮದ ಬಗ್ಗೆಯೆ ಹೆಚ್ಚು ಚರ್ಚೆ ಆಗ್ತಿದೆ. ಅದರಲ್ಲೂ ಹೆಚ್ಚಿನ ಸಂಖ್ಯೆಯ ಬಳಕೆದಾರರು ಭಾರತದಲ್ಲಿ ಇರುವುದರಿಂದ ಭಾರತದಲ್ಲೂ ಈ ಚರ್ಚೆ ಹೆಚ್ಚು ಪ್ರಸ್ತುತವಾಗಿದೆ. ಇದರ ನಡುವೆ ವಾಟ್ಸಾಪ್ ತನ್ನ ಸೇವಾ ನಿಯಮದ ಬಗ್ಗೆ ಬಳಕೆದಾರರಿಗೆ ಮಾಹಿತಿ ನೀಡುವುದಕ್ಕೆ ಪ್ರಾರಂಭಿಸಿದೆ. ಸದ್ಯ ಇದೀಗ ವಾಟ್ಸಾಪ್ ತನ್ನ ಹೊಸ ಸೇವಾ ನಿಯಮವನ್ನು ಭಾರತದಲ್ಲಿ ಹಿಂತೆಗೆದುಕೊಳ್ಳುವಂತೆ ವಾಟ್ಸಾಪ್ ಸಂಸ್ಥೆಗೆ ಭಾರತ ಸರ್ಕಾರ ಸೂಚನೆ ನೀಡಿದೆ.
ಹೌದು, ವಾಟ್ಸಾಪ್ ಇತ್ತೀಚೆಗೆ ತನ್ನ ಹೊಸ ಗೌಪ್ಯತೆ ನೀತಿಯನ್ನು ಬಹಿರಂಗಪಡಿಸಿದೆ. ಅಲ್ಲದೆ ಇದನ್ನು ಬಳಕೆದಾರರು ಮೇ 15 ರೊಳಗೆ ಸ್ವೀಕರಿಸುವ ಅಗತ್ಯವಿದೆ. ಒಂದು ವೇಳೆ ಸೇವಾ ನಿಮಯವನ್ನು ಒಪ್ಪದೇ ಹೋದರೆ ವಾಟ್ಸಾಪ್ ಬಳಸಲು ಸಾಧ್ಯವಿಲ್ಲ ಎಂದು ಹೇಳಿದೆ. ಇದು ಬಳಕೆದಾರರ ಆಕ್ರೋಶಕ್ಕೆ ಕಾರಣವಾಗಿದೆ. ಇದನ್ನು ಗಮನಿಸಿರುವ ಭಾರತ ಸರ್ಕಾರ ಏಕಪಕ್ಷೀಯ ಬದಲಾವಣೆಗಳು ನ್ಯಾಯಯುತವಲ್ಲ ಮತ್ತು ಸ್ವೀಕಾರಾರ್ಹವಲ್ಲ ಎಂದು ಹೇಳುವ ಮೂಲಕ ಇತ್ತೀಚಿನ ಬದಲಾವಣೆಗಳನ್ನು ಹಿಂತೆಗೆದುಕೊಳ್ಳುವಂತೆ ವಾಟ್ಸಾಪ್‌ಗೆ ಕೇಳಿದೆ ಎಂದು ವರದಿಯಾಗಿದೆ.

ವಾಟ್ಸಾಪ್‌ನ ಹೊಸ ಸೇವಾ ನಿಯಮ ಕುರಿತು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು (MeitY) ವಾಟ್ಸಾಪ್ ಸಿಇಒ ವಿಲ್ ಕ್ಯಾಥ್‌ಕಾರ್ಟ್‌ಗೆ ಸೂಚನೆಯನ್ನು ನೀಡಿದೆ. ವಾಟ್ಸಾಪ್ ಸೇವಾ ನಿಯಮಗಳು ಮತ್ತು ಗೌಪ್ಯತೆ ನೀತಿಯಲ್ಲಿ ಪ್ರಸ್ತಾಪಿತ ಬದಲಾವಣೆಗಳು ''ಇದರ ಪರಿಣಾಮಗಳ ಬಗ್ಗೆ ಗಂಭೀರ ಕಳವಳವನ್ನು ಉಂಟುಮಾಡುತ್ತವೆ" ಭಾರತೀಯ ನಾಗರಿಕರ ಆಯ್ಕೆ ಮತ್ತು ಸ್ವಾಯತ್ತತೆಗಾಗಿ ಬದಲಾವಣೆಗಳನ್ನು ಹಿಂತೆಗೆದುಕೊಳ್ಳಲು ಮತ್ತು "ಮಾಹಿತಿ ಗೌಪ್ಯತೆ, ಆಯ್ಕೆಯ ಸ್ವಾತಂತ್ರ್ಯ ಮತ್ತು ಡೇಟಾ ಸುರಕ್ಷತೆಗೆ ಅದರ ವಿಧಾನವನ್ನು ಮರುಪರಿಶೀಲಿಸುವಂತೆ" MeitY ವಾಟ್ಸಾಪ್ ಕಂಪನಿಗೆ ಹೇಳಿದೆ ಎನ್ನಲಾಗಿದೆ.

ಇನ್ನು ವರದಿಯ ಪ್ರಕಾರ, ಜಾಗತಿಕವಾಗಿ ಭಾರತವು ವಾಟ್ಸಾಪ್‌ನ ಅತಿದೊಡ್ಡ ಬಳಕೆದಾರರ ನೆಲೆಯಾಗಿದೆ. ಇದರ ಸೇವೆಗಳಿಗೆ ಅತಿದೊಡ್ಡ ಮಾರುಕಟ್ಟೆಯಾಗಿದೆ ಎಂದು MeitY ಹೇಳಿದೆ, ಈ ಕಾರಣದಿಂದಾಗಿ ಭಾರತೀಯ ಬಳಕೆದಾರರ ಗೌಪ್ಯತೆಯನ್ನು ಗೌರವಿಸಬೇಕು ಮತ್ತು "ವಾಟ್ಸಾಪ್ ನಿಯಮಗಳಲ್ಲಿ ಯಾವುದೇ ಏಕಪಕ್ಷೀಯ ಬದಲಾವಣೆಗಳು ಸೇವೆ ಮತ್ತು ಗೌಪ್ಯತೆ ನ್ಯಾಯಯುತ ಮತ್ತು ಸ್ವೀಕಾರಾರ್ಹವಲ್ಲ" ಎಂದು ಹೇಳಿದೆ. ವಾಟ್ಸಾಪ್ ಇತ್ತೀಚೆಗೆ ಫೆಬ್ರವರಿ 8 ರಿಂದ ಮೇ 15 ರವರೆಗೆ ಪಾಲಿಸಿಯನ್ನು ಸ್ವೀಕರಿಸುವ ಗಡುವನ್ನು ವಿಳಂಬಗೊಳಿಸಿತು. ಗೌಪ್ಯತೆ ಮತ್ತು ಸುರಕ್ಷತೆಯ ಸುತ್ತಲಿನ ತಪ್ಪು ಮಾಹಿತಿಯನ್ನು ತೆರವುಗೊಳಿಸಲು ವಿಳಂಬವನ್ನು ಪರಿಚಯಿಸಲಾಗಿದೆ ಎಂದು ಕಂಪನಿ ಹೇಳಿದೆ.

ಕಂಪನಿಯು ತನ್ನ ಬಳಕೆದಾರರ ಖಾಸಗಿ ಸಂದೇಶಗಳನ್ನು ನೋಡುವುದಿಲ್ಲ ಅಥವಾ ಅವರ ಕರೆಗಳನ್ನು ಕೇಳುವುದಿಲ್ಲ ಏಕೆಂದರೆ ಅವುಗಳು ಎಂಡ್ ಟು ಎಂಡ್ ಎನ್‌ಕ್ರಿಪ್ಟ್ ಆಗುತ್ತವೆ. ಇದು ಬ್ಯುಸಿನೆಸ್ ಖಾತೆಗಳೊಂದಿಗೆ ಚಾಟ್ ಮಾಡುವ ಜನರ ಡೇಟಾವನ್ನು ಮಾತ್ರ ಬಳಸಿಕೊಳ್ಳುತ್ತದೆ, ಇದು ಉದ್ದೇಶಿತ ಜಾಹೀರಾತುಗಳನ್ನು ಒದಗಿಸಲು ಸಹಾಯ ಮಾಡುತ್ತದೆ. ಹೊಸ ನೀತಿಯು 2016 ರಿಂದ ವ್ಯಾಪಕವಾಗಿ ಬಳಕೆಯಲ್ಲಿರುವ ಅಭ್ಯಾಸವನ್ನು ಇನ್ನಷ್ಟು ಪರಿಣಾಮಕಾರಿಯಾಗಿ ತರಲಿದೆ ಎಂದು ಹೇಳಿದೆ.
This News Article is a Copy of GIZBOT
13-12-25 10:47 pm
HK News Desk
ಕುರ್ಚಿ ಗುದ್ದಾಟ ; ಪರಮೇಶ್ವರ್ ಸಿಎಂ ಆಗಲೆಂದು ಹಾರೈಸ...
13-12-25 08:38 pm
BJP MLA Subhash Guttedar: ಅಳಂದ ಮತಗಳವು ಪ್ರಕರಣ...
13-12-25 04:00 pm
Pet Parrot, Bangalore Youth Death: 2 ಲಕ್ಷ ರೂ....
12-12-25 08:47 pm
Yatnal, Dk Shivakumar, Vijayendra: ಡಿಕೆ ಸಿಎಂ,...
12-12-25 07:47 pm
13-12-25 08:34 pm
HK News Desk
ಕಾರ್ತಿಗೈ ದೀಪೋತ್ಸವ ವಿವಾದ ; ಮಸೀದಿಯವರೇ ಆಕ್ಷೇಪಿಸಿ...
12-12-25 11:00 pm
ಮೋದಿ ಉತ್ತರಾಧಿಕಾರಿ ಯಾರು ? ಆರೆಸ್ಸೆಸ್ ನಿರ್ಧರಿಸುತ...
11-12-25 04:24 pm
ಮಂಗಳೂರು ಏರ್ಪೋರ್ಟ್ಗೆ ವಿದೇಶಿ ನೇರ ವಿಮಾನ ವ್ಯವಸ್...
11-12-25 02:09 pm
ತಮಿಳುನಾಡಿನಲ್ಲಿ ಕಾರ್ತಿಗೈ ದೀಪಕ್ಕೆ ಹೈಕೋರ್ಟ್ ಅನುಮ...
10-12-25 11:13 pm
13-12-25 11:02 pm
Mangalore Correspondent
ಕೆಂಜಾರು ಬಳಿ ಗೋವುಗಳನ್ನು ಕಡಿದು ಹತ್ಯೆ ; ಪೊದೆಯಲ್ಲ...
13-12-25 04:36 pm
ಸತತ ನಾಲ್ಕು ಗಂಟೆ ಸ್ಕೇಟಿಂಗ್ ನಲ್ಲಿ ಶಾಸ್ತ್ರೀಯ ನೃತ...
12-12-25 10:28 pm
ದೈವ ನರ್ತನದ ಬಗ್ಗೆ ನಮಗೆ ಸಂಶಯಗಳಿಲ್ಲ, ಗ್ರಾಮ ದೈವಕ್...
12-12-25 07:32 pm
ಆಯುಷ್ ಇಲಾಖೆಯಲ್ಲಿ ಅವಧಿ ಮೀರಿದ ಔಷಧ ಪೂರೈಕೆ ; ಅಧಿಕ...
12-12-25 02:02 pm
13-12-25 12:51 pm
HK News Desk
ಹಣ್ಣಿನ ವ್ಯಾಪಾರಿಯನ್ನು ಅಡ್ಡಗಟ್ಟಿ 19 ಸಾವಿರ ನಗದು...
12-12-25 01:58 pm
Hassan Crime, Murder: ಸ್ನೇಹಿತನನ್ನು ಪಾರ್ಟಿಗೆ ಕ...
11-12-25 09:53 pm
Bangalore Crime, Blackmail, Suicide: ಬೆತ್ತಲೆ...
11-12-25 07:49 pm
Imprisonment in Malpe Case: ಮಲ್ಪೆಯಲ್ಲಿ ನೆಲೆಸಿ...
10-12-25 10:14 pm