ಬ್ರೇಕಿಂಗ್ ನ್ಯೂಸ್
12-01-21 03:28 pm Source: GIZBOT ಡಿಜಿಟಲ್ ಟೆಕ್
ಪ್ರಸ್ತುತ ವಾಟ್ಸಾಪ್‌ನ ಹೊಸ ಸೇವಾ ನಿಯಮದ ಬಗ್ಗೆಯೆ ಹೆಚ್ಚು ಚರ್ಚೆ ಆಗ್ತಿದೆ. ಇದರ ನಡುವೆ ವಾಟ್ಸಾಪ್‌ಗೆ ಸರಿ ಸಮನಾದ ಇತರೆ ಮೆಸೇಜಿಂಗ್ ಅಪ್ಲಿಕೇಶನ್‌ಗಳ ಕಡೆಗೆ ಬಳಕೆದಾರರು ಹೆಚ್ಚಿನ ಗಮನ ನೀಡುತ್ತಿದ್ದಾರೆ. ಈಗಾಗಲೇ ವಾಟ್ಸಾಪ್‌ನ ಬಳಕೆದಾರರು ಸಿಗ್ನಲ್, ಟೆಲಿಗ್ರಾಮ್ ನಂತಹ ಮೆಸೇಜಿಂಗ್ ಅಪ್ಲಿಕೇಶನ್‌ಗೆ ಬದಲಾಗುತ್ತಿದ್ದಾರೆ. ಇದರ ನಡುವೆಯೆ ಸಿಹಿ ಸುದ್ದಿಯೊಂದು ಹೊರ ಬಿದ್ದಿದೆ. ಅದೆನಂದರೆ ಭಾರತದಲ್ಲಿ ತಯಾರಾದ ಅಪ್ಪಟ್ಟ ಸ್ವದೇಶಿ ಮೆಸೇಜಿಂಗ್ ಅಪ್ಲಿಕೇಶನ್ ಅನ್ನು ಭಾರತೀಯ ಸಾಫ್ಟ್‌ವೇರ್ ಕಂಪೆನಿಯೊಂದು ಸಿದ್ದತೆ ನಡೆಸಿದೆ.
Rಹೌದು, ಭಾರತದಲ್ಲಿ ಸ್ವದೇಶಿ ಮೆಸೇಜಿಂಗ್ ಅಪ್ಲಿಕೇಶನ್ ಅನ್ನು ಪರಿಚಯಿಸಲು ಭಾರತೀಯ ಸಾಫ್ಟ್‌ವೇರ್ ಕಂಪನಿಯಾದ ಜೊಹೊ ಸಿದ್ದತೆ ನಡೆಸಿದೆ. ಈ ಕಂಪೆನಿ ಭಾರತದಲ್ಲಿ ಅರಟ್ಟೈ ಎಂಬ ಹೆಸರಿನ ಮೆಸೇಜಿಂಗ್ ಆಪ್ ಅನ್ನು ಬಿಡುಗಡೆ ಮಾಡಲು ಸಜ್ಜಾಗಿದೆ. ಇನ್ನು ಅರಟ್ಟೈ ಎಂದರೆ ತಮಿಳಿನಲ್ಲಿ ಚಿಟ್-ಚಾಟ್ ಎಂದು ಹೆಸರಿಸಲಾಗಿದೆ. ಜೊಹೊ ಕಾರ್ಪೊರೇಷನ್ ಸಾಫ್ಟ್‌ವೇರ್ ಅಭಿವೃದ್ಧಿಯಲ್ಲಿ ಪರಿಣತಿ ಹೊಂದಿರುವ ಬಹುರಾಷ್ಟ್ರೀಯ ತಂತ್ರಜ್ಞಾನ ಕಂಪನಿಯಾಗಿದ್ದು, ಇದರ ಪ್ರಧಾನ ಕಚೇರಿ ಚೆನ್ನೈನಲ್ಲಿದೆ.

ಕಂಪ್ಲೀಟ್ ಸ್ವದೇಶಿ ಮೆಸೇಜಿಂಗ್ ಅಪ್ಲಿಕೇಶನ್ ಪರಿಚಯಿಸುವುದಕ್ಕೆ ಜೊಹೊ ಕಾರ್ಪೊರೇಶನ್ ಮುಂದಾಗಿದೆ. ಇದರ ಬಗ್ಗೆ ಈ ಜೊಹೊ ಸಂಸ್ಥೆಯ ಸಿಇಒ ಶ್ರೀಧರ್ ವೆಂಬು ಅವರು ಟ್ವೀಟ್ ಮಾಡಿದ್ದಾರೆ. "ನಮ್ಮ ಅರಟ್ಟೈ ತಂಡವು ನಮ್ಮ ತ್ವರಿತ ಮೆಸೇಜಿಂಗ್ ಅಪ್ಲಿಕೇಶನ್‌ನ ಬಗ್ಗೆ ಇನ್ನೂ ಮಾತನಾಡದಂತೆ ಕೇಳಿದೆ. ಆದರೆ ಇದರ ಬಗ್ಗೆ ಈಗಾಗಲೇ ಎಲ್ಲಾ ಕಡೆ ಚರ್ಚೆ ನಡೆಯುತ್ತಿರುವುದರಿಂದ ನಾನು ಕೂಡ ಇದರ ಬಗ್ಗೆ ವಿಷಯ ತಿಳಿಸಲು ಮುಂದಾಗಿದ್ದಾನೆ ಎಂದು ಟ್ವೀಟ್ ಮಾಡಿದ್ದಾರೆ. ಇದಲ್ಲದೆ ಅರಟ್ಟೈ ಅಪ್ಲಿಕೇಶನ್ ಅನ್ನು ಪ್ಲೇ ಸ್ಟೋರ್‌ನಲ್ಲಿ ಪರಿಚಯಿಸಲಿದ್ದೇವೆ. ಅರಟ್ಟೈ ಅಪ್ಲಿಕೇಶನ್ ಶೀಘ್ರದಲ್ಲೇ ಕೆಲವು ವಾರಗಳಲ್ಲಿ ಅಧಿಕೃತವಾಗಲಿದೆ ಎಂದು ತಿಳಿಸಿದ್ದಾರೆ.

ಸದ್ಯ ಜೊಹೊ ಸಂಸ್ಥೆಯ ಅರಟ್ಟೈ ಅಪ್ಲಿಕೇಶನ್ ಅನ್ನು ಕೆಲವು ವಾರಗಳ ಹಿಂದೆ ಬೀಟಾ ಅಡಿಯಲ್ಲಿ ತನ್ನ ಸ್ವಂತ ಉದ್ಯೋಗಿಗಳಿಗೆ ಲಭ್ಯವಾಗುವಂತೆ ಮಾಡಿದೆ. ನಂತರ ಇದನ್ನು ಸಾರ್ವಜನಿಕ ಡೌನ್‌ಲೋಡ್‌ಗಳಿಗಾಗಿ ಕಳೆದ ವಾರ ಗೂಗಲ್ ಮತ್ತು ಆಪಲ್ ಪ್ಲೇ ಸ್ಟೋರ್‌ಗಳಲ್ಲಿ ಬಿಡುಗಡೆ ಮಾಡಿದೆ. ಇದೀಗ ಕಂಪನಿಯು ಶೀಘ್ರದಲ್ಲೇ ಅಪ್ಲಿಕೇಶನ್ ಅನ್ನು ಪ್ರಾರಂಭಿಸಲು ಸಿದ್ಧತೆ ನಡೆಸಿದೆ. ಫೇಸ್‌ಬುಕ್ ಒಡೆತನದ ವಾಟ್ಸಾಪ್ ಸೇವಾ ನಿಯಮ ಭಾರಿ ಅಸಮಾಧಾನ ಉಂಟು ಮಾಡಿರುವುದರಿಂದ ಭಾರತೀಯರಿಗೆ ಹೊಸ ಮೆಸೇಜಿಂಗ್ ಅಪ್ಲಿಕೇಶನ್ ಆಗಿ ಅರಟ್ಟೈ ಒಂದು ಆಯ್ಕೆಯಾಗಲಿದೆ.

ಇನ್ನು ಈ ಅಪ್ಲಿಕೇಶನ್ ಯಾವೆಲ್ಲಾ ಫೀಚರ್ಸ್‌ಗಳನ್ನ ಹೊಂದಿರಲಿದೆ ಹಾಗೂ ಹೇಗಿರಲಿದೆ ಎಂಬ ಮಾಹಿತಿ ಲಭ್ಯವಾಗಿಲ್ಲ. ಆದರೆ ಇದು ವಾಟ್ಸಾಪ್‌ಗೆ ಸೆಡ್ಡು ಹೊಡೆಯಲಿದೆ ಎಂದು ಹೇಳಲಾಗಿದೆ. ಇನ್ನು ವಾಟ್ಸಾಪ್ ಭಾರತದಲ್ಲಿ ಅತಿ ಹೆಚ್ಚಿನ ಬಳಕೆದಾರರನ್ನು ಹೊಂದಿದೆ. ಈ ಸ್ವದೇಶಿ ಅಪ್ಲಿಕೇಶನ್ ಭಾರತದಲ್ಲಿ ಯುಶಸ್ವಿಯಾದರೆ ವಾಟ್ಸಾಪ್‌ಗೆ ಸಂಕಷ್ಟು ಎದುರಾಗುವುದು ಖಚಿತ ಎನ್ನಲಾಗಿದೆ. ಏಕೆಂದರೆ ಜೊಹೊ ಅವರ ಹೊಸ ಅಪ್ಲಿಕೇಶನ್ ವಾಟ್ಸಾಪ್ ನಂತಹ ಮೆಸೇಜಿಂಗ್ ಅಪ್ಲಿಕೇಶನ್‌ಗಳಿಗೆ ಭಾರತದ ಪರ್ಯಾಯಗಳಲ್ಲಿ ಒಂದಾಗಬಹುದು ಎಂದು ಅಂದಾಜಿಸಲಾಗಿದೆ.
01-11-25 09:33 pm
HK News Desk
ನಮ್ಮ ಕ್ಷೇತ್ರದಲ್ಲಿ ಪಥಸಂಚಲನ ಮಾಡೋದನ್ನು ಆರೆಸ್ಸೆಸ್...
31-10-25 08:10 pm
'ನವೆಂಬರ್ ಕ್ರಾಂತಿ' ಮುನ್ಸೂಚನೆ ನೀಡಿದ್ದ ರಾಜಣ್ಣ ಅಖ...
31-10-25 06:02 pm
ಧರ್ಮಸ್ಥಳ ಕೇಸ್ ; ಮಹೇಶ್ ಶೆಟ್ಟಿ ತಿಮರೋಡಿ ತಂಡದ ಮೇಲ...
30-10-25 11:00 pm
ನಟ ಪ್ರಕಾಶ್ ರಾಜ್, ರಾಜೇಂದ್ರ ಚೆನ್ನಿ, ಜಕರಿಯಾ ಜೋಕಟ...
30-10-25 07:25 pm
01-11-25 07:27 pm
HK News Desk
ಭಾರತದಲ್ಲಿ ಸ್ವತಂತ್ರವಾಗಿದ್ದೇನೆ, ಮತ್ತೆ ಬಾಂಗ್ಲಾದೇ...
30-10-25 03:20 pm
ಭಾರತ ಮೂಲದ ಅನಿಲ್ ಕುಮಾರ್ ಬೊಲ್ಲಗೆ 240 ಕೋಟಿ ಮೊತ್ತ...
28-10-25 10:23 pm
ಶಾಂಘೈ ತೆರಳಿದ್ದ ಪ್ರಧಾನಿ ಮೋದಿ ಹತ್ಯೆಗೆ ಅಮೆರಿಕ ಸಂ...
26-10-25 11:01 pm
ಅಂಗೈಯಲ್ಲಿ ಡೆತ್ ನೋಟ್ ಬರೆದಿಟ್ಟು ಸರ್ಕಾರಿ ವೈದ್ಯೆ...
26-10-25 05:38 pm
01-11-25 11:05 pm
Mangalore Correspondent
ಉಡುಪಿ - ಕಾಸರಗೋಡು 440 ಕೆವಿ ವಿದ್ಯುತ್ ಲೈನ್ ; ಕೃಷ...
01-11-25 11:02 pm
ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್ ; ಫೈನಲ್ಸ್ ಮಾತ್ರ ಬ...
01-11-25 10:31 pm
ನೃತ್ಯ ಸಾಧಕಿ ರೆಮೋನಾ, ಶ್ವಾನ ಪ್ರೇಮಿ ರಜನಿ ಶೆಟ್ಟಿ,...
31-10-25 10:47 pm
MP Brijesh Chowta, Mangalore: ದೇಶವ್ಯಾಪಿ ಸರ್ದಾ...
31-10-25 09:23 pm
01-11-25 07:25 pm
HK News Desk
Rowdy Topi Naufal Murder, Mangalore: ಮಂಗಳೂರಿನ...
01-11-25 03:31 pm
ವೃದ್ಧ ಮಹಿಳೆಗೆ ಡಿಜಿಟಲ್ ಅರೆಸ್ಟ್ ಬಲೆ ; ಐದು ಗಂಟೆಯ...
01-11-25 01:31 pm
ಸುಹಾಸ್ ಶೆಟ್ಟಿ ಕೊಲೆ ಪ್ರಕರಣ ; 11 ಆರೋಪಿಗಳ ವಿರುದ್...
31-10-25 10:57 pm
ಮುಂಬೈನಲ್ಲಿ 17 ಮಕ್ಕಳನ್ನು ಒತ್ತೆಯಾಳಾಗಿಸಿದ್ದ ವ್ಯಕ...
31-10-25 12:55 pm