ಬ್ರೇಕಿಂಗ್ ನ್ಯೂಸ್
28-12-20 03:31 pm Source: GIZBOT Manthesh ಡಿಜಿಟಲ್ ಟೆಕ್
ಭಾರತದ ಮನರಂಜನೆಯ ವಲಯವು ಇಂದು ಮಹತ್ತರ ಬದಲಾವಣೆಗೆ ಸಾಕ್ಷಿ ಆಗಿದೆ. ಸದ್ಯ ಮುಖ್ಯವಾಗಿ ವಿಡಿಯೊ ಸ್ಟ್ರೀಮಿಂಗ್ ಅಪ್ಲಿಕೇಶನ್‌ಗಳು ಹೆಚ್ಚು ಸದ್ದು ಮಾಡುತ್ತಿದ್ದು, ಲಾಕ್‌ಡೌನ್ ಸಂದರ್ಭದಲ್ಲಿ ಓಟಿಟಿ ಆಪ್ಸ್‌ಗಳು ಮತ್ತಷ್ಟು ಜನಪ್ರಿಯತೆ ಪಡೆದಿವೆ. ಈಗಾಗಲೇ ಎಷ್ಟೋ ಹೊಸ ಸಿನಿಮಾಗಳು ನೇರವಾಗಿ ಓಟಿಟಿ ಪ್ಲಾಟ್‌ಫಾರ್ಮುನಲ್ಲಿಯೇ ಬಿಡುಗಡೆ ಕಂಡಿವೆ. ಈ ನಿಟ್ಟಿನಲ್ಲಿ ಪ್ರಸ್ತುತ ಓಟಿಟಿ ಆಪ್ಸ್‌ಗಳು ಯುವ ಸಮೂಹದ ಗಮನ ಸೆಳೆದಿವೆ ಎಂದರೇ ತಪ್ಪಾಗಲಾರದು.
ಹೌದು, ಸದ್ಯ ಓಟಿಟಿ-OTT ಅಪ್ಲಿಕೇಶನ್‌ಗಳಲ್ಲಿನ ವೆಬ್ ಸಿರೀಸ್‌ಗಳು ಹೊಸ ಟ್ರೆಂಡ್ ಹುಟ್ಟುಹಾಕಿವೆ. ಜನಪ್ರಿಯ ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಮ್ ವಿಡಿಯೊ, ಹಾಟ್‌ಸ್ಟಾರ್ ಆಪ್‌ಗಳಿಗೆ ಪೈಪೋಟಿ ನೀಡುವಂತಹ ಇತರೆ ಹೊಸ ಆಪ್ಸ್‌ಗಳು ಇದೀಗ ಸೇರ್ಪಡೆ ಆಗಿವೆ. ಇನ್ನು ಈ ಆಪ್ಸ್‌ಗಳು ಕಾಮಿಡಿ ಕಂಟೆಂಟ್ ಹಾಗೂ ಮನರಂಜನೆಯ ಕಂಟೆಂಟ್ ಸೇರಿದಂತೆ ವಯಸ್ಕರ ಕಂಟೆಂಟ್ ಅನ್ನು ಸೇರಿಸಿ ಹೊಸ ಆಯಾಮವನ್ನು ತೆರೆದಿಟ್ಟಿವೆ.
ಉಲ್ಲು-Ullu-ಅಪ್ಲಿಕೇಶನ್
ಉಲ್ಲು ಅಪ್ಲಿಕೇಶನ್ ಭಾರತೀಯ ಬೇಡಿಕೆಯ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ ಗಳಲ್ಲಿ ಒಂದಾಗಿದೆ. ವಿಬು ಅಗರ್‌ವಾಲ್ ಮಾಲೀತ್ವದಲ್ಲಿರುವ ಈ ತಾಣವು ವಿಶೇಷ ವೆಬ್ ಸಿರೀಸ್‌ಗಳ ಮೂಲಕ ಯುವ ಸಮೂಹವನ್ನು ಆಕರ್ಷಿಸಿದೆ. ಈ ಆಪ್‌ನಲ್ಲಿ ಪ್ರಸಾರವಾದ ವಯಸ್ಕರ ವೆಬ್ ಸಿರೀಸ್ ಹೆಚ್ಚು ಜನಪ್ರಿಯತೆ ಪಡೆದಿವೆ. ಪ್ರಸ್ತುತ ಆಂಡ್ರಾಯ್ಡ್ ಮ್ತತು ಐಒಎಸ್‌ಗಾಗಿ ಲಭ್ಯವಿದೆ.
ALTಬಾಲಾಜಿ ಅಪ್ಲಿಕೇಶನ್
ಜನಪ್ರಿಯ ಬಾಲಾಜಿ ಟೆಲಿಫಿಲ್ಮ್ ಸಂಸ್ಥೆಯ ಅಂಗಸಂಸ್ಥೆಯಾಗಿದೆ. ಈ ಆಪ್‌ನಲ್ಲಿ ಬಳಕೆದಾರರು ಚಲನಚಿತ್ರಗಳು, ಭಿನ್ನ ಪ್ರದರ್ಶನಗಳು ಮತ್ತು ಮಕ್ಕಳ ವಿಶೇಷತೆಯ ಕಾರ್ಯಕ್ರಮಗಳನ್ನು ವೀಕ್ಷಿಸಬಹುದಾಗಿದೆ. ಈ ಸಂಸ್ಥೆಯು ಹೆಚ್ಚಿನ ಕಂಟೆಂಟ್ ಸಂಗ್ರಹಗಳನ್ನು ಹೊಂದಿದೆ. ಇನ್ನು ಈ ಆಪ್ ಎರಡು ಪ್ರಮುಖ ಚಂದಾದಾರಿಕೆಯ ಆಯ್ಕೆಗಳನ್ನು ಹೊಂದಿದ್ದು, ಅವುಗಳು ಮಾಸಿಕ ಮತ್ತು ವಾರ್ಷಿಕ ಆಗಿವೆ.
ನೆಟ್‌ಫ್ಲಿಕ್ಸ್ ಅಪ್ಲಿಕೇಶನ್
ನೆಟ್‌ಫ್ಲಿಕ್ಸ್ ತಾಣ ನಿಮಗೆಲ್ಲಾ ತಿಳಿದಿರುವ ಪ್ರಮುಖ ಓಟಿಟಿ ಅಪ್ಲಿಕೇಶನ್ ಆಗಿದೆ. ಈ ತಾಣದಲ್ಲಿ ಚಲನಚಿತ್ರಗಳು ಮತ್ತು ವೆಬ್ ಸರಣಿಗಳು, ಸೇಕ್ರೆಡ್ ಗೇಮ್ಸ್, ಸ್ಟ್ರೇಂಜರ್ ಥಿಂಗ್ಸ್, ಡೇರ್‌ಡೆವಿಲ್, ಪನಿಷರ್, ಆರೆಂಜ್ ಈಸ್ ದಿ ನ್ಯೂ ಬ್ಲ್ಯಾಕ್, ನಾರ್ಕೋಸ್, ಹೌಸ್ ಆಫ್ ಕಾರ್ಡ್ಸ್, ಕಾರ್ಯಕ್ರಮಗಳು ಹೆಚ್ಚು ಅಟ್ರ್ಯಾಕ್ಟ್ ಆಗಿವೆ. ಈ ಆಪ್ ನಾಲ್ಕು ವಿಭಿನ್ನ ಚಂದಾದಾರಿಕೆ ಯೋಜನೆಗಳನ್ನು ಹೊಂದಿದ್ದು, ಒಂದು ಸಮಯದಲ್ಲಿ 4 ಡಿವೈಸ್‌ಗಳ ಸ್ಕ್ರೀನ್‌ಗಳಲ್ಲಿ ಈ ಆಪ್ ಬಳಸುವ ಚಂದಾದಾರಿಕೆಯ ಪ್ಲ್ಯಾನ್ ಸಹ ಇದೆ.
ಹಾಟ್‌ಸ್ಟಾರ್ ಅಪ್ಲಿಕೇಶನ್
ಕ್ರೀಡಾ ಅಭಿಮಾನಿಗಳಿಂಗತೂ ಹಾಟ್‌ಸ್ಟಾರ್ ಹಾಟ್ ಫೇವರೇಟ್ ಆಗಿದೆ. ಯಾಕಂದ್ರೆ ಈ ಆಪ್ ಕ್ರಿಕೆಟ್, ಐಪಿಎಲ್ ಮ್ಯಾಚ್ ಸೇರಿದಂತೆ ಇತರೆ ಕ್ರೀಡೆಗಳ ನೇರ ಪ್ರಸಾರಗಳನ್ನು ಪ್ರದರ್ಶನ ಮಾಡುತ್ತದೆ. ಜೊತೆಗೆ ಸಿನಿಮಾ ಹಾಗೂ ವಿಶೇಷ ಕಾರ್ಯಕ್ರಮಗಳ ಪ್ರಸಾರದ ಆಯ್ಕೆಗಳನ್ನು ಈ ತಾಣವು ಹೊಂದಿದೆ. ಇನ್ನು ಹಾಟ್‌ಸ್ಟಾರ್ ಭಿನ್ನ ಚಂದಾದಾರಿಕೆಯ ಆಯ್ಕೆಗಳನ್ನು ಒಳಗೊಂಡಿದೆ.
ಅಮೆಜಾನ್ ಪ್ರೈಮ್ ಅಪ್ಲಿಕೇಶನ್
ನೆಟ್‌ಫ್ಲಿಕ್ಸ್‌ಗೆ ನೇರ ಪೈಪೋಟಿ ನೀಡುತ್ತಿರುವ ಪ್ರಮುಖ ಓಟಿಟಿ ಆಪ್ ಅಂದ್ರೇ ಅದು ಅಮೆಜಾನ್ ಪ್ರೈಮ್ ವಿಡಿಯೊ ಆಗಿದೆ. ಈ ತಾಣದಲ್ಲಿ ಬಳಕೆದಾರರು ಚಲನಚಿತ್ರಗಳ ಜೊತೆಗೆ ಭಿನ್ನ ಕಾರ್ಯಕ್ರಮಗಳನ್ನು ವೀಕ್ಷಣೆ ಮಾಡಬಹುದು. ದಿ ಮ್ಯಾನ್ ಇನ್ ದಿ ಹೈ ಕ್ಯಾಸಲ್, ಮೇಡ್ ಇನ್ ಹೆವನ್ ಹಾಗೂ ಹಾಸ್ಯ ಕಾರ್ಯಕ್ರಮಗಳು ಈ ಆಪ್‌ನಲ್ಲಿ ಸೇರಿವೆ. ಅಮೆಜಾನ್ ಪ್ರೈಮ್ ವಿಡಿಯೊ ಎರಡು ಚಂದಾದಾರಿಕೆ ಆಯ್ಕೆಗಳನ್ನು ಹೊಂದಿದ್ದು, ಮಾಸಿಕ ಮತ್ತು ವಾರ್ಷಿಕ.
This News Article is a Copy of GIZBOT
15-09-25 03:39 pm
HK News Desk
Bommai, SIT, Dharmasthala, Bommai: ನಿರೀಕ್ಷೆಗೆ...
14-09-25 05:18 pm
ವಾಹನ ಸವಾರರಿಗೆ ಶೇ.50 ರಿಯಾಯಿತಿ ಆಫರ್ ಎಫೆಕ್ಟ್ ...
13-09-25 10:38 pm
ಕುರುಬ ಕ್ರಿಶ್ಚಿಯನ್, ಕುಂಬಾರ ಕ್ರಿಶ್ಚಿಯನ್ ಇದೆಯೇ?...
13-09-25 08:46 pm
Caste Cenus News, Karnataka; ಸೆ.22ರಿಂದ ಅ.7ರ ವ...
13-09-25 07:50 pm
14-09-25 10:49 pm
HK News Desk
ಪ್ರಧಾನಿ ಮೋದಿ ಅಸ್ಸಾಂನಲ್ಲಿ ಇರುವಾಗಲೇ 5.8ರ ತೀವ್ರತ...
14-09-25 07:31 pm
ಮಿಜೋರಾಂ ರಾಜ್ಯದಲ್ಲಿ ಮೊದಲ ರೈಲು ಮಾರ್ಗ ಪ್ರಧಾನಿ ಮೋ...
13-09-25 03:25 pm
ವಾಷಿಂಗ್ ಮೆಷಿನ್ ವಿಷಯದಲ್ಲಿ ವಾಗ್ವಾದ ; ಅಮೆರಿಕದಲ...
12-09-25 11:33 am
ನೇಪಾಳದಲ್ಲಿ ಕಮ್ಯುನಿಸ್ಟ್ ಸರಕಾರ ಪತನ ; ಹೊಸ ನಾಯಕ ಯ...
10-09-25 04:22 pm
15-09-25 02:08 pm
Mangalore Correspondent
ಬಂಗ್ಲೆಗುಡ್ಡೆ ಕಾಡಿನಲ್ಲಿ ಸ್ಥಳ ಶೋಧಕ್ಕೆ ಎಸ್ಐಟಿ ಸಿ...
15-09-25 01:58 pm
Mangalore, Ullal News, Boat: ಕೈಕೊಟ್ಟ ಇಂಜಿನ್ ;...
15-09-25 11:27 am
Vittal Gowda, Mangalore, Dharmasthala: ವಿಠಲ ಗ...
14-09-25 10:55 pm
Mangalore Protest: ರಸ್ತೆ ನಮ್ಮ ಹಕ್ಕು, ಭಿಕ್ಷೆಯಲ...
14-09-25 10:34 pm
14-09-25 06:01 pm
HK News Desk
Mangalore Fake Aadhar, RTC Scam, Police: ಆರೋಪ...
13-09-25 11:36 am
ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರಗೈದು ಹತ್ಯೆ ; ಬೆಳಗ...
12-09-25 11:07 pm
Ullal Police, Mangalore, Gold Robbery: ತೊಕ್ಕೊ...
12-09-25 10:48 pm
Udupi, Brahmavar Stabbing, Crime: ಬ್ರಹ್ಮಾವರ ;...
12-09-25 05:31 pm