ಬ್ರೇಕಿಂಗ್ ನ್ಯೂಸ್
24-12-20 03:29 pm Source: GIZBOT ಡಿಜಿಟಲ್ ಟೆಕ್
ಪ್ರಸ್ತುತ ದಿನಮಾನಗಳಲ್ಲಿ ಭಾರತದ ಗ್ರಾಮೀಣ ವಲಯವು ಡಿಜಿಟಲೀಕರಣ ಮತ್ತು ತಂತ್ರಜ್ಞಾನದತ್ತ ವೇಗವಾಗಿ ಸಾಗುತ್ತಿದೆ. ದೇಶದ ಪ್ರಮುಖ ಆರ್ಥಿಕ ಮೂಲವಾಗಿರುವ ವ್ಯವಸಾಯ ಕ್ಷೇತ್ರದಲ್ಲಿಯೂ ಹೊಸ ತಂತ್ರಜ್ಞಾನ ಬಳಕೆ ಮಾಡಲಾಗುತ್ತಿದೆ. ಇತ್ತೀಚಿಗೆ ದೇಶದ ಯುವಜನತೆ ಸಹ ಕೃಷಿ ಚಟುವಟಿಕೆಗಳತ್ತ ಹೆಚ್ಚು ಒಲವು ತೋರಿಸುತ್ತಿದ್ದು, ಹೊಸ ಮಾದರಿಯ ತಂತ್ರಜ್ಞಾನಗಳ ಅಳವಡಿಕೆ ಮಾಡುತ್ತಿದ್ದಾರೆ. ಅದಕ್ಕೆ ಪೂರಕವಾಗಿ ಹಲವು ಅಪ್ಲಿಕೇಶನ್‌ಗಳು ಕೆಲಸ ಮಾಡುತ್ತಿವೆ.
ಹೌದು, ಭಾರತದ ಗ್ರಾಮೀಣ ಭಾಗದಲ್ಲಿ ಬಹುತೇಕ ಕುಟುಂಬಗಳು ಕೃಷಿಯನ್ನು ಉದ್ಯೋಗವೆಂದು ಭಾವಿಸದೆ, ಜೀವನವಾಗಿ ಸ್ವೀಕರಿಸಿದ್ದಾರೆ. ಈ ವ್ಯವಸ್ಥೆಗೆ ಗೌರವವಾಗಿ ಕೃಷಿ ಚಟುವಟಿಕೆಗಳಿಗೆ ಅನುಕೂಲಕರವಾಗುವ ಅಪ್ಲಿಕೇಶನ್‌ಗಳು ಕಾರ್ಯನಿರ್ವಹಿಸುತ್ತಿವೆ. ಯಾವುದೇ ಬೆಳೆ ಅಥವಾ ತರಕಾರಿಗಳ ಕೃಷಿ, ಬಿತ್ತನೆ ಅಥವಾ ಕೊಯ್ಲು ಸರಿಯಾದ ವೈಜ್ಞಾನಿಕ ವಿಧಾನವನ್ನು ಸೂಚಿಸುವ ಆಪ್‌ಗಳು ಇವೆ. ಹಾಗೆಯೇ ಕೀಟಗಳು ಅಥವಾ ಕೀಟಗಳ ದಾಳಿಗೆ ಸಂಬಂಧಿಸಿದ ಯಾವುದೇ ಕೃಷಿ ಸಮಸ್ಯೆಗಳನ್ನು ಪರಿಹರಿಸಲು ಆಪ್‌ಗಳು ಇವೆ. ಹೀಗಾಗಿ ಕೃಷಿ ಆಪ್‌ಗಳು ರೈತರ ಆಪ್ತನಂತೆ ನೆರವಾಗಲಿವೆ.
ಕೃಷಿ ಕಿಸಾನ್-Krishi Kisan
ಕೃಷಿ ಕಿಸಾನ್ ಆಪ್ ರೈತರಿಗಾಗಿ ರೂಪಿಸಲಾಗಿದೆ. ಈ ಆಪ್‌ನಲ್ಲಿ ಕೃಷಿಗೆ ಸಂಬಂಧಿಸಿದ ಹೊಸ ತಂತ್ರಜ್ಞಾನಗಳ ಬಗ್ಗೆ, ಕೃಷಿ ಪದ್ಧತಿಗಳ ಬಗ್ಗೆ ಮಾಹಿತಿ ಲಭ್ಯವಾಗಲಿದೆ. ಹಾಗೆಯೇ ರೈತರಿಗೆ ಬೆಳೆಗಳ ಬಗ್ಗೆ, ಬೀಜ ಬಿತ್ತುವಿಕೆಯ ಬಗ್ಗೆ ಮಾಹಿತಿ ನೀಡಲಾಗುತ್ತದೆ. ಜಿಯೋ-ಫೆನ್ಸಿಂಗ್ ಹಾಗೂ ಜಿಯೋ ಟ್ಯಾಗಿಂಗ್ ಕುರಿತಾಗಿಯು ಅಗತ್ಯ ನೆರವು ನೀಡಲಿದೆ.
ಕಿಸಾನ್ ಸುವಿಧಾ-Kisan Suvidha
ಕಿಸಾನ್ ಸುವಿಧಾ ಅಪ್ಲಿಕೇಶನ್ ಅನ್ನು ಭಾರತ ಸರ್ಕಾರದಿಂದ ಅಭಿವೃದ್ಧಿಪಡಿಸಿ ಅನಾವರಣ ಮಾಡಲಾಗಿದೆ. ಈ ಆಪ್‌ನಲ್ಲಿ ರೈತರಿಗೆ ಪ್ರಸ್ತುತ ಮತ್ತು ಮುಂದಿನ 5 ದಿನಗಳ ಹವಾಮಾನದ ಮಾಹಿತಿಯನ್ನು ನೀಡಲಾಗುತ್ತದೆ. ಸ್ಥಳೀಯ ಡೀಲರ್‌ಗಳು, ಮಾರುಕಟ್ಟೆ, ಕೃಷಿ ಸಲಹೆಗಾರರ ಬಗ್ಗೆ, ಕೃಷಿ ರಕ್ಷಣೆ, ಐಪಿಎಮ್ ಪ್ರಯೋಗಗಳನ್ನು ರೈತರಿಗೆ ನೇರವಾಗಿ ನೀಡುತ್ತದೆ.
ಕೃಷಿ ಮಿತ್ರ-Krishi Mitra
ಕನ್ನಡದಲ್ಲಿಯೇ ಲಭ್ಯವಿರುವ ಆಪ್ ಇದಾಗಿದೆ. ವಿವಿಧ ಪತ್ರಿಕೆಗಳಲ್ಲಿ ಬರುವ ಕೃಷಿ ಸಂಬಂಧಿತ ವರದಿಗಳನ್ನು ನೀಡುತ್ತದೆ. ನಿಮ್ಮ ಪಹಣಿಯನ್ನು ಹುಡುಕುವ ಆಯ್ಕೆ ನಿಡಲಾಗಿದೆ. ಹವಾಮಾನ ವರದಿಯನ್ನು ಸಹ ಈ ಆಪ್ ನೀಡುತ್ತಿದ್ದು, ಪ್ರಸ್ತುತ ಮಾರುಕಟ್ಟೆ ದರವನ್ನು ರೈತರಿಗೆ ನೀಡುತ್ತದೆ. ಅದಲ್ಲದೇ ಕೃಷಿ ಇಲಾಖೆಯ ಪ್ರಮುಖ ಕಚೇರಿಗಳ ಹಾಗೂ ಎಪಿಎಂಸಿಗಳ ಮೊಬೈಲ್ ಸಂಖ್ಯೆಗಳನ್ನು ಒಳಗೊಂಡಿದ್ದು, ರೈತರಿಗೆ ನೆರವಾಗುತ್ತದೆ.
Mಕಿಸಾನ್ ಆಪ್-MKisan Application
Mಕಿಸಾನ್ ಆಪ್‌ನಲ್ಲಿ ಬಳಕೆದಾರರು ಪೋರ್ಟಾಲ್‌ಗೆ ನೋಂದಣಿಯಾಗದೆ ಕೃಷಿ ತಜ್ಞರು, ವಿವಿಧ ಸರ್ಕಾರಿ ಅಧಿಕಾರಿಗಳಿಂದ ಕೃಷಿ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಬಹುದಾಗಿದೆ. ಭಾರತದಲ್ಲಿ Mಕಿಸಾನ್ ಪೋರ್ಟಾಲ್ ಕೃಷಿ ಬಗೆಗಿನ ಅನೇಕ ಮಾಹಿತಿಯನ್ನು ನೀಡುತ್ತದೆ. ಈ ಆಪ್‌ನ್ನು ಕೃಷಿ ಮಂತ್ರಾಲಯದ ರಾಷ್ಟ್ರೀಯ ವಿದ್ಯುನ್ಮಾನ ಆಡಳಿತ ಯೋಜನೆ (NeGP-A) ಅಭಿವದ್ಧಿಪಡಿಸಿದೆ.
ಅಗ್ರಿ ಆಪ್-Agri App
ಅಗ್ರಿ ಆಪ್ ನಿಮಗೆ ಬೆಳೆ ಉತ್ಪನ್ನ, ಬೆಳೆ ರಕ್ಷಣೆ ಮತ್ತು ಕೃಷಿಗೆ ಸಂಬಂಧಿಸಿದ ಹಲವು ಮಾಹಿತಿಗಳನ್ನು ರೈತರಿಗೆ ನೀಡುತ್ತದೆ. ಇದರಲ್ಲಿ ರೈತರು ತಮ್ಮ ಪ್ರಶ್ನೆಗಳಿಗೆ ತಜ್ಞರಿಂದ ಉತ್ತರ ಪಡೆಯಬಹುದಾಗಿದೆ. ಹವಾಮಾನ ವರದಿ, ಮಾರುಕಟ್ಟೆ ದರಗಳನ್ನು ಈ ಆಪ್ ನೀಡಲಿದ್ದು, ಒಂದೇ ಡಿಜಿಟಲ್ ಪ್ಲಾಟ್‌ಫಾರ್ಮ್‌ನಲ್ಲಿ ಅನೇಕ ಕೃಷಿ ಸಂಬಂಧಿತ ಮಾಹಿತಿ ನೀಡುತ್ತದೆ.
This News Article is a Copy of GIZBOT
15-09-25 03:39 pm
HK News Desk
Bommai, SIT, Dharmasthala, Bommai: ನಿರೀಕ್ಷೆಗೆ...
14-09-25 05:18 pm
ವಾಹನ ಸವಾರರಿಗೆ ಶೇ.50 ರಿಯಾಯಿತಿ ಆಫರ್ ಎಫೆಕ್ಟ್ ...
13-09-25 10:38 pm
ಕುರುಬ ಕ್ರಿಶ್ಚಿಯನ್, ಕುಂಬಾರ ಕ್ರಿಶ್ಚಿಯನ್ ಇದೆಯೇ?...
13-09-25 08:46 pm
Caste Cenus News, Karnataka; ಸೆ.22ರಿಂದ ಅ.7ರ ವ...
13-09-25 07:50 pm
14-09-25 10:49 pm
HK News Desk
ಪ್ರಧಾನಿ ಮೋದಿ ಅಸ್ಸಾಂನಲ್ಲಿ ಇರುವಾಗಲೇ 5.8ರ ತೀವ್ರತ...
14-09-25 07:31 pm
ಮಿಜೋರಾಂ ರಾಜ್ಯದಲ್ಲಿ ಮೊದಲ ರೈಲು ಮಾರ್ಗ ಪ್ರಧಾನಿ ಮೋ...
13-09-25 03:25 pm
ವಾಷಿಂಗ್ ಮೆಷಿನ್ ವಿಷಯದಲ್ಲಿ ವಾಗ್ವಾದ ; ಅಮೆರಿಕದಲ...
12-09-25 11:33 am
ನೇಪಾಳದಲ್ಲಿ ಕಮ್ಯುನಿಸ್ಟ್ ಸರಕಾರ ಪತನ ; ಹೊಸ ನಾಯಕ ಯ...
10-09-25 04:22 pm
15-09-25 02:08 pm
Mangalore Correspondent
ಬಂಗ್ಲೆಗುಡ್ಡೆ ಕಾಡಿನಲ್ಲಿ ಸ್ಥಳ ಶೋಧಕ್ಕೆ ಎಸ್ಐಟಿ ಸಿ...
15-09-25 01:58 pm
Mangalore, Ullal News, Boat: ಕೈಕೊಟ್ಟ ಇಂಜಿನ್ ;...
15-09-25 11:27 am
Vittal Gowda, Mangalore, Dharmasthala: ವಿಠಲ ಗ...
14-09-25 10:55 pm
Mangalore Protest: ರಸ್ತೆ ನಮ್ಮ ಹಕ್ಕು, ಭಿಕ್ಷೆಯಲ...
14-09-25 10:34 pm
14-09-25 06:01 pm
HK News Desk
Mangalore Fake Aadhar, RTC Scam, Police: ಆರೋಪ...
13-09-25 11:36 am
ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರಗೈದು ಹತ್ಯೆ ; ಬೆಳಗ...
12-09-25 11:07 pm
Ullal Police, Mangalore, Gold Robbery: ತೊಕ್ಕೊ...
12-09-25 10:48 pm
Udupi, Brahmavar Stabbing, Crime: ಬ್ರಹ್ಮಾವರ ;...
12-09-25 05:31 pm