ಬ್ರೇಕಿಂಗ್ ನ್ಯೂಸ್
21-12-20 03:08 pm Source: GIZBOT Mutthuraju H M ಡಿಜಿಟಲ್ ಟೆಕ್
ಬೆಂಗಳೂರು, ಡಿ.21: ಇಂದು ಖಗೋಳದಲ್ಲಿ ವಿಸ್ಮಯವೊಂದು ಜರುಗಲಿದೆ. ಸೌರವ್ಯೂಹದ ಎರಡ್ಡು ದೊಡ್ಡ ಗ್ರಹಗಳ ಸಮಾಗಮಕ್ಕೆ ಈ ದಿನ ಸಾಕ್ಷಿಯಾಗಲಿದೆ. ಎರಡು ದೊಡ್ಡ ಗ್ರಹಗಳು ಹತ್ತಿರ ಹತ್ತಿರ ಸಮೀಪಿಸುತ್ತಿದ್ದಾರೆ ಎನ್ನುವ ಸುದ್ದಿ ಇಡೀ ಜಗತ್ತನ್ನೇ ಕುತೂಹಲಕ್ಕೆ ದೂಡಿದೆ. ಇದೇ ಕಾರಣಕ್ಕೆ ಸರ್ಚ್ ಇಂಜಿನ್ ದೈತ್ಯ ಕೂಡ ಈ ದಿನ ತನ್ನ ಮುಖಪುಟದ ಡೂಡಲ್ ನಲ್ಲಿ ಉತ್ತರ ಗೋಳಾರ್ಧದಲ್ಲಿ ಚಳಿಗಾಲದ ಅಯನ ಸಂಕ್ರಾಂತಿಯನ್ನು ಪ್ರದರ್ಶಿಸಿದೆ.
ಹೌದು, ಸೌರವ್ಯೂಹದ ದೊಡ್ಡ ಗ್ರಹಗಳಾದ ಗುರು ಮತ್ತು ಶನಿ ಸಮೀಪಕ್ಕೆ ಬರಲಿದ್ದಾರೆ. ಇದು 2020 ರ ಮತ್ತೊಂದು ಅಚ್ಚರಿ ಎಂದೇ ಹೇಳಬಹುದಾಗಿದೆ. ಡಿಸೆಂಬರ್ 21 ಅಂದರೆ ಈ ದಿನ ಸುದೀರ್ಘ ರಾತ್ರಿಯಲ್ಲಿ, "ದೊಡ್ಡ ಸಂಯೋಗ" ಎಂದು ಕರೆಯಲ್ಪಡುವ ನಂಬಲಾಗದ ಖಗೋಳ ಚಮತ್ಕಾರ ನಡೆಯಲಿದೆ. ರಾತ್ರಿಯ ಆಕಾಶದಲ್ಲಿ ನಮ್ಮ ಸೌರವ್ಯೂಹದ ಗ್ರಹಗಳಾದ ಶನಿ ಮತ್ತು ಗುರುಗಳ ದೃಶ್ಯ ಅತಿಕ್ರಮಣವೇ ದೊಡ್ಡ ಸಂಯೋಗವಾಗಿದೆ.
ಮೂಲತಃ, ಶನಿ ಮತ್ತು ಗುರುಗಳು ಪರಸ್ಪರ 0.1 ಡಿಗ್ರಿ ಒಳಗೆ ಇರುತ್ತವೆ. ಶನಿ ಮತ್ತು ಗುರು ಗ್ರಹಗಳು ಪ್ರತಿ 20 ವರ್ಷಗಳಿಗೆ ಒಮ್ಮೆ ಹೀಗೆ ಪರಸ್ಪರ ಹಾದುಹೋಗಲಿವೆ. ಆದರೆ, ಈ ಬಾರಿ ಈ ಎರಡೂ ಗ್ರಹಗಳಿಗೆ ಅತ್ಯಂತ ಹತ್ತಿರದಲ್ಲಿ ಭೂಮಿಯೂ ಹಾದುಹೋಗಲಿದೆ. ಸದ್ಯ ಗುರು ಮತ್ತು ಶನಿಗ್ರಹಗಳು 400 ವರ್ಷಗಳ ನಂತರ ಇದೇ ಮೊದಲ ಬಾರಿ ಅತ್ಯಂತ ಸಮೀಪಕ್ಕೆ ಬರಲಿವೆ. ಇದನ್ನು ಖಗೋಳ ವಿಜ್ಞಾನಿಗಳು ‘ಮಹಾ ಸಂಯೋಗ' ಎಂದು ಹೆಸರಿಸಲಾಗಿದೆ. ಇಂತಹ ವಿದ್ಯಮಾನ ಮತ್ತೇ 60 ವರ್ಷಗಳ ನಂತರ ಸಂಭವಿಸಲಿದೆ ಎಂದು ‘ನಾಸಾ' ಸಂಸ್ಥೆ ಹೇಳಿದೆ.
ಇನ್ನು ಈ ಮಹಾ ಸಂಯೋಗಕ್ಕೆ ಸಾಕ್ಷಿಯಾಗಿ ಡಿಸೆಂಬರ್ 13ರಿಂದಲೇ ಖಗೋಳದ ಎರಡು ದೊಡ್ಡ ಗ್ರಹಗಳಾದ ಗುರು ಮತ್ತು ಶನಿ ಹತ್ತಿ ಹತ್ತಿರ ಬರುತ್ತಿವೆ. ಪ್ರತಿದಿನ ಇವುಗಳ ನಡುವಣ ಅಂತರ ಕಡಿಮೆಯಾಗಲಿದೆ. ಆದರೆ ಇಂದು ಈ ಎರಡು ಗ್ರಹಗಳು ಅತ್ಯಂತ ಸಮೀಪಕ್ಕೆ ಬರಲಿವೆ. ಈ ಮಹಾ ಸಂಯೋಗದಲ್ಲಿ ಪ್ರಾರಂಭದಿಂದ ಶನಿಗ್ರಹವು ಮೇಲ್ಭಾಗದಲ್ಲಿ, ಗುರು ಗ್ರಹವು ಕೆಳಭಾಗದಲ್ಲಿ ಗೋಚರಿಸಲಿದೆ. ಇದನ್ನು ಬರಿ ಗಣ್ಣಿನಿಂದಲೇ ನೋಡಬಹುದಾಗಿದ್ದು, ಆಕಾಶದಲ್ಲಿ ಸುಲಭವಾಗಿ ಗೋಚರಿಸಲಿದೆ. ಆದರೆ ಸೋಮವಾರವಾದ ಇಂದು ರಾತ್ರಿಯಿಂದ ಗುರು ಗ್ರಹವು ಮೇಲ್ಭಾಗದಲ್ಲಿ ಮತ್ತು ಶನಿಗ್ರಹವು ಕೆಳಭಾಗದಲ್ಲಿ ಗೋಚರಿಸಲಿದೆ. ಇನ್ನು ಗೂಗಲ್ ಕೂಡ ತನ್ನ ಡೂಡಲ್‌ನಲ್ಲಿ, ಶನಿ ಮತ್ತು ಗುರುಗಳ ಮಹಾ ಸಂಯೋಗದ ಗುರುತಾಗಿ ತನ್ನ ಡೂಡಲ್ ಪ್ರದರ್ಶಿಸಿದೆ.
This News Article is a Copy of GIZBOT
15-09-25 03:39 pm
HK News Desk
Bommai, SIT, Dharmasthala, Bommai: ನಿರೀಕ್ಷೆಗೆ...
14-09-25 05:18 pm
ವಾಹನ ಸವಾರರಿಗೆ ಶೇ.50 ರಿಯಾಯಿತಿ ಆಫರ್ ಎಫೆಕ್ಟ್ ...
13-09-25 10:38 pm
ಕುರುಬ ಕ್ರಿಶ್ಚಿಯನ್, ಕುಂಬಾರ ಕ್ರಿಶ್ಚಿಯನ್ ಇದೆಯೇ?...
13-09-25 08:46 pm
Caste Cenus News, Karnataka; ಸೆ.22ರಿಂದ ಅ.7ರ ವ...
13-09-25 07:50 pm
14-09-25 10:49 pm
HK News Desk
ಪ್ರಧಾನಿ ಮೋದಿ ಅಸ್ಸಾಂನಲ್ಲಿ ಇರುವಾಗಲೇ 5.8ರ ತೀವ್ರತ...
14-09-25 07:31 pm
ಮಿಜೋರಾಂ ರಾಜ್ಯದಲ್ಲಿ ಮೊದಲ ರೈಲು ಮಾರ್ಗ ಪ್ರಧಾನಿ ಮೋ...
13-09-25 03:25 pm
ವಾಷಿಂಗ್ ಮೆಷಿನ್ ವಿಷಯದಲ್ಲಿ ವಾಗ್ವಾದ ; ಅಮೆರಿಕದಲ...
12-09-25 11:33 am
ನೇಪಾಳದಲ್ಲಿ ಕಮ್ಯುನಿಸ್ಟ್ ಸರಕಾರ ಪತನ ; ಹೊಸ ನಾಯಕ ಯ...
10-09-25 04:22 pm
15-09-25 02:08 pm
Mangalore Correspondent
ಬಂಗ್ಲೆಗುಡ್ಡೆ ಕಾಡಿನಲ್ಲಿ ಸ್ಥಳ ಶೋಧಕ್ಕೆ ಎಸ್ಐಟಿ ಸಿ...
15-09-25 01:58 pm
Mangalore, Ullal News, Boat: ಕೈಕೊಟ್ಟ ಇಂಜಿನ್ ;...
15-09-25 11:27 am
Vittal Gowda, Mangalore, Dharmasthala: ವಿಠಲ ಗ...
14-09-25 10:55 pm
Mangalore Protest: ರಸ್ತೆ ನಮ್ಮ ಹಕ್ಕು, ಭಿಕ್ಷೆಯಲ...
14-09-25 10:34 pm
14-09-25 06:01 pm
HK News Desk
Mangalore Fake Aadhar, RTC Scam, Police: ಆರೋಪ...
13-09-25 11:36 am
ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರಗೈದು ಹತ್ಯೆ ; ಬೆಳಗ...
12-09-25 11:07 pm
Ullal Police, Mangalore, Gold Robbery: ತೊಕ್ಕೊ...
12-09-25 10:48 pm
Udupi, Brahmavar Stabbing, Crime: ಬ್ರಹ್ಮಾವರ ;...
12-09-25 05:31 pm