ಬ್ರೇಕಿಂಗ್ ನ್ಯೂಸ್
17-12-20 05:05 pm Source: GIZBOT ಡಿಜಿಟಲ್ ಟೆಕ್
ಫೇಸ್‌ಬುಕ್ ಒಡೆತನದ ಇನ್‌ಸ್ಟಾಗ್ರಾಮ್ ಭಾರತದಲ್ಲಿ ಆಂಡ್ರಾಯ್ಡ್ ಬಳಕೆದಾರರಿಗೆ ಅಪ್ಲಿಕೇಶನ್‌ನ ಹೊಸ "ಲೈಟ್" ಆವೃತ್ತಿಯನ್ನು ಪರಿಚಯಿಸಲು ಸಿದ್ದತೆ ನಡೆಸಿದೆ. "Facebook Fuel For India" ವರ್ಚುವಲ್ ಈವೆಂಟ್‌ನಲ್ಲಿ ಈ ಮಾಹಿತಿಯನ್ನು ಹಂಚಿಕೊಂಡಿದೆ. ಅಲ್ಲದೆ ಇದೇ ಈವೆಂಟ್‌ನಲ್ಲಿ "ಬಾರ್ನ್ ಆನ್ ಇನ್‌ಸ್ಟಾಗ್ರಾಮ್" ಕ್ರಿಯೆಟರ್ ಪ್ರೋಗ್ರಾಂನ ಎರಡನೇ ಆವೃತ್ತಿಯನ್ನು ಸಹ ಪರಿಚಯಿಸಿದೆ.
ಹೌದು, ಜನಪ್ರಿಯ ಫೋಟೋ ಶೇರಿಂಗ್ ಅಪ್ಲಿಕೇಶನ್ ಇನ್‌ಸ್ಟಾಗ್ರಾಮ್ ತನ್ನ ಹೊಸ ಲೈಟ್ ಎಡಿಷನ್ ಅನ್ನು ಭಾರತದಲ್ಲಿ ಪರಿಚಯಿಸಲು ಸಿದ್ದತೆ ನಡೆಸಿದೆ. ಇನ್‌ಸ್ಟಾಗ್ರಾಮ್ ತನ್ನ ಲೈಟ್ ಆವೃತ್ತಿಯ ಪರೀಕ್ಷೆ ಮತ್ತು ಬಾರ್ನ್ ಆನ್ ಇನ್‌ಸ್ಟಾಗ್ರಾಮ್ ಆವೃತ್ತಿಯೊಂದಿಗೆ, ಭಾರತದಲ್ಲಿ ಹೆಚ್ಚಿನ ಸಂಖ್ಯೆಯ ಜನರಿಗೆ ಅಭಿವ್ಯಕ್ತಿ ಮತ್ತು ಸೃಜನಶೀಲತೆಯನ್ನು ಪ್ರಜಾಪ್ರಭುತ್ವೀಕರಿಸುವ ಗುರಿ ಹೊಂದಿದ್ದೇವೆ ಎಂದು ಹೇಳಿದೆ.

ಇನ್‌ಸ್ಟಾಗ್ರಾಮ್ ತನ್ನ ಲೈಟ್ ಆವೃತ್ತಿಯನ್ನು ಜಾಗತಿಕ ಮಟ್ಟದಲ್ಲಿ ಪರಿಚಯಿಸುವ ಮೊದಲೇ ಭಾರತದಲ್ಲಿ ಪರಿಚಯಿಸಲು ಮುಂದಾಗಿದೆ. ಜಾಗತಿಕ ರೋಲ್ ಔಟ್‌ಗೆ ಮೊದಲು ಇನ್‌ಸ್ಟಾಗ್ರಾಮ್ ಭಾರತದಲ್ಲಿ ಫೀಚರ್ಸ್ ಅನ್ನು ಪರೀಕ್ಷಿಸುತ್ತಿರುವುದು ಇದೇ ಮೊದಲಲ್ಲ. ಈ ವೇದಿಕೆಯು ಕಳೆದ ಕೆಲವು ತಿಂಗಳುಗಳಲ್ಲಿ ಭಾರತದಲ್ಲಿ ಪಾದಾರ್ಪಣೆ ಮಾಡಿದ ಹೊಸ ಫೀಚರ್ಸ್‌ಗಳನ್ನು ಪ್ರದರ್ಶಿಸಿದೆ, ಇವುಗಳಲ್ಲಿ ಇದು ರೀಲ್ಸ್, ರೀಲ್ಸ್ ಟ್ಯಾಬ್ ಮತ್ತು ಲೈವ್ ರೂಮ್‌ಗಳನ್ನು ಒಳಗೊಂಡಿದೆ.

ಇನ್ನು ಇನ್‌ಸ್ಟಾಗ್ರಾಮ್ ಲೈಟ್‌ನ ಹೊಸ ಆವೃತ್ತಿಯು 2 MB ಗಿಂತಲೂ ಕಡಿಮೆ ಗಾತ್ರದಲ್ಲಿದೆ ಮತ್ತು ಹೆಚ್ಚಿನ ಜನರಿಗೆ ವೇಗವಾಗಿ ಮತ್ತು ವಿಶ್ವಾಸಾರ್ಹವಾಗಿ ಉಳಿಯುವ Instagram ಅನುಭವವನ್ನು ತಲುಪಿಸಲು ಇದನ್ನು ನಿರ್ಮಿಸಲಾಗಿದೆ. ಕಡಿಮೆ ಮೆಮೊರಿ ಫೋನ್‌ಗಳು ಮತ್ತು ಭಾರೀ ಗಾತ್ರದ ಅಪ್ಲಿಕೇಶನ್‌ಗಳ ಪರಿಣಾಮವಾಗಿ ಇಂಟರ್ನೆಟ್ ಸಮಸ್ಯೆಗಳನ್ನು ಎದುರಿಸುತ್ತಿರುವವರನ್ನು ಇದು ಗುರಿಯಾಗಿಸುತ್ತದೆ. ಅಲ್ಲದೆ ಆಂಡ್ರಾಯ್ಡ್‌ಗಾಗಿ ಆಪ್ ತಯಾರಿಸಲಾಗಿದ್ದು, ಈ ಹೊಸ ಆವೃತ್ತಿಯು ವೇಗ, ಕಾರ್ಯಕ್ಷಮತೆ ಮತ್ತು ಸ್ಪಂದಿಸುವಿಕೆಯನ್ನು ಸುಧಾರಿಸಿದೆ ಎಂದು ಇನ್‌ಸ್ಟಾಗ್ರಾಮ್ ತಿಳಿಸಿದೆ.

ಇದಲ್ಲದೆ ಈ ಆಪ್ ಬಂಗಾಳಿ, ಗುಜರಾತಿ, ಹಿಂದಿ, ಕನ್ನಡ, ಮಲಯಾಳಂ, ಮರಾಠಿ, ಪಂಜಾಬಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಲಭ್ಯವಾಗಲಿದೆ ಎಂದು ಕಂಪನಿ ತಿಳಿಸಿದೆ. ಮುಂದಿನ ಪೀಳಿಗೆಯ ವಿಷಯ ರಚನೆಕಾರರನ್ನು ವೇದಿಕೆಯನ್ನು ಬಳಸಲು ಉತ್ತಮ ಅಭ್ಯಾಸಗಳೊಂದಿಗೆ ಸಜ್ಜುಗೊಳಿಸಲು ಮತ್ತು ಸಹಯೋಗ ಮತ್ತು ಮಾರ್ಗದರ್ಶನ ಅವಕಾಶಗಳೊಂದಿಗೆ ಅವುಗಳನ್ನು ಸಕ್ರಿಯಗೊಳಿಸಲು "ಬಾರ್ನ್ ಆನ್ ಇನ್‌ಸ್ಟಾಗ್ರಾಮ್" ಎರಡನೇ ಆವೃತ್ತಿಯನ್ನು ಪರಿಚಯಿಸಿದೆ. ಇದು ಇನ್‌ಸ್ಟಾಗ್ರಾಮ್‌ನಲ್ಲಿ, ವಿಶೇಷವಾಗಿ ರೀಲ್ಸ್‌ನಲ್ಲಿ ಹೊಸ ಫೀಚರ್ಸ್‌ಗಳನ್ನು ಸಂಯೋಜಿಸಲು ಪ್ರೋಗ್ರಾಂ ಅನ್ನು ಅಳವಡಿಸಲಾಗಿದೆ.
This News Article is a Copy of GIZBOT
13-12-25 10:47 pm
HK News Desk
ಕುರ್ಚಿ ಗುದ್ದಾಟ ; ಪರಮೇಶ್ವರ್ ಸಿಎಂ ಆಗಲೆಂದು ಹಾರೈಸ...
13-12-25 08:38 pm
BJP MLA Subhash Guttedar: ಅಳಂದ ಮತಗಳವು ಪ್ರಕರಣ...
13-12-25 04:00 pm
Pet Parrot, Bangalore Youth Death: 2 ಲಕ್ಷ ರೂ....
12-12-25 08:47 pm
Yatnal, Dk Shivakumar, Vijayendra: ಡಿಕೆ ಸಿಎಂ,...
12-12-25 07:47 pm
13-12-25 08:34 pm
HK News Desk
ಕಾರ್ತಿಗೈ ದೀಪೋತ್ಸವ ವಿವಾದ ; ಮಸೀದಿಯವರೇ ಆಕ್ಷೇಪಿಸಿ...
12-12-25 11:00 pm
ಮೋದಿ ಉತ್ತರಾಧಿಕಾರಿ ಯಾರು ? ಆರೆಸ್ಸೆಸ್ ನಿರ್ಧರಿಸುತ...
11-12-25 04:24 pm
ಮಂಗಳೂರು ಏರ್ಪೋರ್ಟ್ಗೆ ವಿದೇಶಿ ನೇರ ವಿಮಾನ ವ್ಯವಸ್...
11-12-25 02:09 pm
ತಮಿಳುನಾಡಿನಲ್ಲಿ ಕಾರ್ತಿಗೈ ದೀಪಕ್ಕೆ ಹೈಕೋರ್ಟ್ ಅನುಮ...
10-12-25 11:13 pm
13-12-25 11:02 pm
Mangalore Correspondent
ಕೆಂಜಾರು ಬಳಿ ಗೋವುಗಳನ್ನು ಕಡಿದು ಹತ್ಯೆ ; ಪೊದೆಯಲ್ಲ...
13-12-25 04:36 pm
ಸತತ ನಾಲ್ಕು ಗಂಟೆ ಸ್ಕೇಟಿಂಗ್ ನಲ್ಲಿ ಶಾಸ್ತ್ರೀಯ ನೃತ...
12-12-25 10:28 pm
ದೈವ ನರ್ತನದ ಬಗ್ಗೆ ನಮಗೆ ಸಂಶಯಗಳಿಲ್ಲ, ಗ್ರಾಮ ದೈವಕ್...
12-12-25 07:32 pm
ಆಯುಷ್ ಇಲಾಖೆಯಲ್ಲಿ ಅವಧಿ ಮೀರಿದ ಔಷಧ ಪೂರೈಕೆ ; ಅಧಿಕ...
12-12-25 02:02 pm
13-12-25 12:51 pm
HK News Desk
ಹಣ್ಣಿನ ವ್ಯಾಪಾರಿಯನ್ನು ಅಡ್ಡಗಟ್ಟಿ 19 ಸಾವಿರ ನಗದು...
12-12-25 01:58 pm
Hassan Crime, Murder: ಸ್ನೇಹಿತನನ್ನು ಪಾರ್ಟಿಗೆ ಕ...
11-12-25 09:53 pm
Bangalore Crime, Blackmail, Suicide: ಬೆತ್ತಲೆ...
11-12-25 07:49 pm
Imprisonment in Malpe Case: ಮಲ್ಪೆಯಲ್ಲಿ ನೆಲೆಸಿ...
10-12-25 10:14 pm