ಬ್ರೇಕಿಂಗ್ ನ್ಯೂಸ್
27-05-23 08:15 pm Source: Gizbot ಡಿಜಿಟಲ್ ಟೆಕ್
ನಾಯ್ಸ್ ಸಂಸ್ಥೆಯು ಭಾರತದಲ್ಲಿ ಹೊಸ ಸ್ಮಾರ್ಟ್‌ವಾಚ್ ಅನ್ನು ಲಾಂಚ್ ಮಾಡಿದೆ. ಇದನ್ನು ನಾಯ್ಸ್ ಕಲರ್‌ಫಿಟ್ ಮೈಟಿ ಸ್ಮಾರ್ಟ್‌ವಾಚ್ ಎಂದು ಹೆಸರಿಸಲಾಗಿದೆ. ಇನ್ನು ಸ್ಮಾರ್ಟ್‌ವಾಚ್ ಸಿಂಗಲ್ ಚಾರ್ಜ್‌ನಲ್ಲಿ 7 ದಿನಗಳ ಬ್ಯಾಟರಿ ಬಾಳಿಕೆ ನೀಡಲಿದೆ ಎಂದು ನಾಯ್ಸ್ ಕಂಪೆನಿ ಹೇಳಿಕೊಂಡಿದೆ. ಹೌದು, ನಾಯ್ಸ್ ಕಂಪೆನಿ ಹೊಸ ನಾಯ್ಸ್ ಕಲರ್‌ಫಿಟ್ ಮೈಟಿ ಸ್ಮಾರ್ಟ್‌ವಾಚ್ ಪರಿಚಯಿಸಿದೆ. ಈ ಸ್ಮಾರ್ಟ್‌ವಾಚ್ 110ಕ್ಕೂ ಹೆಚ್ಚು ಸ್ಪೋರ್ಟ್ಸ್ ಮೋಡ್‌ಗಳಿಗೆ ಬೆಂಬಲವನ್ನು ನೀಡಲಿದೆ. ಇದಲ್ಲದೆ ಸ್ಮಾರ್ಟ್‌ವಾಚ್ ಹಲವು ಹೆಲ್ತ್ ಫೀಚರ್ಸ್‌ಗಳನ್ನು ಸಹ ಒಳಗೊಂಡಿದೆ. ಇನ್ನುಳಿದಂತೆ ಈ ಸ್ಮಾರ್ಟ್‌ವಾಚ್ ಯಾವೆಲ್ಲಾ ಫೀಚರ್ಸ್‌ಗಳನ್ನು ಒಳಗೊಂಡಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.
ನಾಯ್ಸ್ ಕಲರ್‌ಫಿಟ್ ಮೈಟಿ ಸ್ಮಾರ್ಟ್‌ವಾಚ್ ಫೀಚರ್ಸ್ ವಿವರ: ಈ ಸ್ಮಾರ್ಟ್‌ವಾಚ್ 1.96 ಇಂಚಿನ ಬಿಗ್ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 240 x 286 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯವನ್ನು ಹೊಂದಿದ್ದು, 500 ನೀಟ್ಸ್ ಗರಿಷ್ಠ ಬ್ರೈಟ್‌ನೆಸ್ ಅನ್ನು ಒಳಗೊಂಡಿದೆ. ಇನ್ನು ಸ್ಮಾರ್ಟ್‌ವಾಚ್ ಬಲಭಾಗದಲ್ಲಿ ತಿರುಗುವ ಕಿರೀಟವನ್ನು ಹೊಂದಿದ್ದು, ಆಪಲ್ ವಾಚ್ ಮಾದರಿಯ ವಿನ್ಯಾಸವನ್ನು ಹೊಂದಿದೆ.

ಇದು IP67-ಪ್ರಮಾಣೀಕೃತ ಧೂಳು ಮತ್ತು ನೀರು-ನಿರೋಧಕವಾಗಿದೆ. ಈ ಸ್ಮಾರ್ಟ್‌ವಾಚ್ ಮೆಟಾಲಿಕ್ ಫಿನಿಶ್ ಮತ್ತು ನಯವಾದ ನಿರ್ಮಾಣವನ್ನು ಹೊಂದಿದೆ. ಇದಲ್ಲದೆ ಫಿಟ್‌ನೆಸ್‌ಗೆ ಸಂಬಂಧಿಸಿದಂತೆ ಹೃದಯ ಬಡಿತ ಮಾನಿಟರ್, SpO2 ಸೆನ್ಸಾರ್ ಮತ್ತು ಸ್ಲೀಪ್ ಟ್ರ್ಯಾಕರ್ ಅನ್ನು ಹೊಂದಿದೆ. ಈ ಸ್ಮಾರ್ಟ್‌ವಾಚ್ ಒತ್ತಡವನ್ನು ಪತ್ತೆಹಚ್ಚಲು ಸೂಕ್ತವಾಗಿದೆ ಎನ್ನಲಾಗಿದೆ. ಇದಲ್ಲದೆ ಸ್ಮಾರ್ಟ್‌ವಾಚ್ 110 ಕ್ಕೂ ಹೆಚ್ಚು ಕ್ರೀಡಾ ವಿಧಾನಗಳಿಗೆ ಬೆಂಬಲವನ್ನು ಸಹ ನೀಡಲಿದೆ.
ನಾಯ್ಸ್ ಕಲರ್‌ಫಿಟ್ ಮೈಟಿ ಸ್ಮಾರ್ಟ್‌ವಾಚ್ ಬ್ಲೂಟೂತ್ ಕಾಲಿಂಗ್ ಫೀಚರ್ಸ್ ಅನ್ನು ಒಳಗೊಂಡಿದೆ. ಇದರಿಂದ ಸ್ಮಾರ್ಟ್‌ವಾಚ್ ಮೂಲಕವೇ ನಿಮ್ಮ ಫೋನ್ ಕರೆಗಳನ್ನು ಸ್ವಿಕರಿಸಲು ಸಾದ್ಯವಾಗಲಿದೆ. ಇದರೊಂದಿಗೆ ನೋಟಿಫಿಕೇಶನ್, ವೆದರ್ ಅಪ್ಡೇಟ್, ಕ್ಯಾಮರಾ ಮತ್ತು ಮ್ಯೂಸಿಕ್ ಕಂಟ್ರೋಲ್ ಅನ್ನು ಸಹ ನೀಡಲಾಗಿದೆ. ಇದಲ್ಲದೆ DND ಮೋಡ್, ಮಣಿಕಟ್ಟಿನ ಎಚ್ಚರಗೊಳ್ಳುವಿಕೆ ಸೇರಿದಂತೆ ಹಲವು ಅನುಕೂಲಕರ ಫೀಚರ್ಸ್‌ಗಳನ್ನು ಸೇರ್ಪಡೆ ಮಾಡಲಿದೆ.
![]()
ಈ ಸ್ಮಾರ್ಟ್‌ವಾಚ್ 300mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿದೆ. ಇದು ಸಿಂಗಲ್ ಚಾರ್ಜ್‌ನಲ್ಲಿ 7 ದಿನಗಳವರೆಗೆ ಬ್ಯಾಟರಿ ಬಾಳಿಕೆಯನ್ನು ನೀಡಲಿದೆ. ಇನ್ನು ಸ್ಮಾರ್ಟ್‌ವಾಚ್ ಭಾರತದಲ್ಲಿ 1,999ರೂ.ಬೆಲೆಯನ್ನು ಹೊಂದಿದೆ. ಇದನ್ನು ನೀವು ಜೆಟ್ ಬ್ಲ್ಯಾಕ್, ಕ್ಲಾಮ್ ಬ್ಲೂ, ಫಾರೆಸ್ಟ್ ಗ್ರೀನ್, ಬರ್ಗಂಡಿ ವೈನ್ ಮತ್ತು ಸಿಲ್ವರ್ ಗ್ರೇ ಬಣ್ಣದ ಆಯ್ಕೆಗಳಲ್ಲಿ ಬ್ರ್ಯಾಂಡ್‌ನ ಅಧಿಕೃತ ವೆಬ್‌ಸೈಟ್ ಮತ್ತು ಫ್ಲಿಪ್‌ಕಾರ್ಟ್‌ನಿಂದ ಖರೀದಿಸಬಹುದು.
ನಾಯ್ಸ್ ಸಂಸ್ಥೆ ಇತ್ತೀಚಿಗೆ ಭಾರತದಲ್ಲಿ ನಾಯ್ಸ್ ಕ್ರ್ಯೂ ಸ್ಮಾರ್ಟ್‌ವಾಚ್ 1.38 ಇಂಚಿನ ಡಿಸ್‌ಪ್ಲೇ ಹೊಂದಿದೆ. ಈ ಡಿಸ್‌ಪ್ಲೇ 240x240 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯವನ್ನು ಪಡೆದಿದೆ. ಇದು 500 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ರೇಟಿಂಗ್ ಅನ್ನು ಒಳಗೊಂಡಿದೆ. ಜೊತೆಗೆ ಧೂಳು ಮತ್ತು ನೀರಿನಿಂದ ರಕ್ಷಣೆ ಮಾಡುವುದಕ್ಕಾಗಿ ಸ್ಮಾರ್ಟ್‌ವಾಚ್ IP68 ರೇಟಿಂಗ್ ಅನ್ನು ಹೊಂದಿದೆ. ಇನ್ನು ಸ್ಮಾರ್ಟ್‌ವಾಚ್ ಅನ್ನು ಸ್ಮಾರ್ಟ್‌ಫೋನ್‌ನೊಂದಿಗೆ ಕನೆಕ್ಟ್ ಮಾಡುವುದಕ್ಕಾಗಿ ನಾಯ್ಸ್‌ಫಿಟ್ ಅಪ್ಲಿಕೇಶನ್‌ನೊಂದಿಗೆ ಕಾರ್ಯನಿರ್ವಹಿಸಲಿದೆ.

ನಾಯ್ಸ್‌ಫಿಟ್ ಕ್ರ್ಯೂ ಸ್ಮಾರ್ಟ್‌ವಾಚ್ ಬ್ಲೂಟೂತ್ 5.3 ಅನ್ನು ಹೊಂದಿದ್ದು, ಬ್ಲೂಟೂತ್ ಕಾಲಿಂಗ್ ಫೀಚರ್ಸ್ ಅನ್ನು ಒಳಗೊಂಡಿದೆ. ಇನ್ನು ಸ್ಮಾರ್ಟ್‌ವಾಚ್ ಫಿಟ್‌ನೆಸ್ ಮತ್ತು ಆಕ್ಟಿವಿಟಿ ಟ್ರ್ಯಾಕಿಂಗ್ ಅನ್ನು ಹೊಂದಿದ್ದು, ನಾಯ್ಸ್‌ಫಿಟ್ ಕ್ರ್ಯೂ ಸ್ಟೆಪ್ ಟ್ರ್ಯಾಕಿಂಗ್, ಹೃದಯ ಬಡಿತ ಮತ್ತು SpO2 ಮಾನಿಟರಿಂಗ್ ಮತ್ತು ಸ್ಲೀಪ್ ಟ್ರ್ಯಾಕಿಂಗ್ ಫೀಚರ್ಸ್ ಅನ್ನು ಹೊಂದಿದೆ. ಇದಲ್ಲದೆ ಫಿಟ್‌ನೆಸ್ ಟ್ರ್ಯಾಕಿಂಗ್‌ಗಾಗಿ 100ಕ್ಕೂ ಹೆಚ್ಚು ಸ್ಪೋರ್ಟ್ಸ್ ಮೋಡ್‌ಗಳನ್ನು ನೀಡಲಾಗಿದೆ. ಅಲ್ಲದೆ ಸ್ಮಾರ್ಟ್‌ವಾಚ್ 100ಕ್ಕೂ ಹೆಚ್ಚು ವಾಚ್ ಫೇಸ್‌ಗಳನ್ನು ಬೆಂಬಲಿಸಲಿದೆ.
noise colorfit mighty launched in india specs and price.
13-12-25 10:47 pm
HK News Desk
ಕುರ್ಚಿ ಗುದ್ದಾಟ ; ಪರಮೇಶ್ವರ್ ಸಿಎಂ ಆಗಲೆಂದು ಹಾರೈಸ...
13-12-25 08:38 pm
BJP MLA Subhash Guttedar: ಅಳಂದ ಮತಗಳವು ಪ್ರಕರಣ...
13-12-25 04:00 pm
Pet Parrot, Bangalore Youth Death: 2 ಲಕ್ಷ ರೂ....
12-12-25 08:47 pm
Yatnal, Dk Shivakumar, Vijayendra: ಡಿಕೆ ಸಿಎಂ,...
12-12-25 07:47 pm
13-12-25 08:34 pm
HK News Desk
ಕಾರ್ತಿಗೈ ದೀಪೋತ್ಸವ ವಿವಾದ ; ಮಸೀದಿಯವರೇ ಆಕ್ಷೇಪಿಸಿ...
12-12-25 11:00 pm
ಮೋದಿ ಉತ್ತರಾಧಿಕಾರಿ ಯಾರು ? ಆರೆಸ್ಸೆಸ್ ನಿರ್ಧರಿಸುತ...
11-12-25 04:24 pm
ಮಂಗಳೂರು ಏರ್ಪೋರ್ಟ್ಗೆ ವಿದೇಶಿ ನೇರ ವಿಮಾನ ವ್ಯವಸ್...
11-12-25 02:09 pm
ತಮಿಳುನಾಡಿನಲ್ಲಿ ಕಾರ್ತಿಗೈ ದೀಪಕ್ಕೆ ಹೈಕೋರ್ಟ್ ಅನುಮ...
10-12-25 11:13 pm
13-12-25 11:02 pm
Mangalore Correspondent
ಕೆಂಜಾರು ಬಳಿ ಗೋವುಗಳನ್ನು ಕಡಿದು ಹತ್ಯೆ ; ಪೊದೆಯಲ್ಲ...
13-12-25 04:36 pm
ಸತತ ನಾಲ್ಕು ಗಂಟೆ ಸ್ಕೇಟಿಂಗ್ ನಲ್ಲಿ ಶಾಸ್ತ್ರೀಯ ನೃತ...
12-12-25 10:28 pm
ದೈವ ನರ್ತನದ ಬಗ್ಗೆ ನಮಗೆ ಸಂಶಯಗಳಿಲ್ಲ, ಗ್ರಾಮ ದೈವಕ್...
12-12-25 07:32 pm
ಆಯುಷ್ ಇಲಾಖೆಯಲ್ಲಿ ಅವಧಿ ಮೀರಿದ ಔಷಧ ಪೂರೈಕೆ ; ಅಧಿಕ...
12-12-25 02:02 pm
13-12-25 12:51 pm
HK News Desk
ಹಣ್ಣಿನ ವ್ಯಾಪಾರಿಯನ್ನು ಅಡ್ಡಗಟ್ಟಿ 19 ಸಾವಿರ ನಗದು...
12-12-25 01:58 pm
Hassan Crime, Murder: ಸ್ನೇಹಿತನನ್ನು ಪಾರ್ಟಿಗೆ ಕ...
11-12-25 09:53 pm
Bangalore Crime, Blackmail, Suicide: ಬೆತ್ತಲೆ...
11-12-25 07:49 pm
Imprisonment in Malpe Case: ಮಲ್ಪೆಯಲ್ಲಿ ನೆಲೆಸಿ...
10-12-25 10:14 pm