ಬ್ರೇಕಿಂಗ್ ನ್ಯೂಸ್
24-05-23 07:47 pm Source: Gizbot ಡಿಜಿಟಲ್ ಟೆಕ್
ಕ್ಯಾಮೆರಾ ಮಾರುಕಟ್ಟೆಯಲ್ಲಿ ಕ್ಯಾನನ್ ಕಂಪೆನಿ ಜನಪ್ರಿಯ ಬ್ರ್ಯಾಂಡ್ ಆಗಿ ಗುರುತಿಸಿಕೊಂಡಿದೆ. ಕ್ಯಾನನ್ ಕ್ಯಾಮೆರಾಗಳು ತಮ್ಮ ವಿಭಿನ್ನ ಫೀಚರ್ಸ್ ಹಾಗೂ ನವೀನ ಮಾದರಿಯ ಟೆಕ್ನಾಲಜಿಯಿಂದ ಸೈ ಎನಿಸಿಕೊಂಡಿವೆ. ಸದ್ಯ ಇದೀಗ ಕ್ಯಾನನ್ ಕಂಪೆನಿ ಹೊಸ ಕಾಂಪ್ಯಾಕ್ಟ್ ಕ್ಯಾಮೆರಾ EOS R100 ಮಿರರ್‌ಲೆಸ್ ಅನ್ನು ಪರಿಚಯಿಸಿದೆ.
ಹೌದು, ಕ್ಯಾನನ್ ಹೊಸ ಕಾಂಪ್ಯಾಕ್ಟ್ EOS R100 ಮಿರರ್‌ಲೆಸ್ ಅನ್ನು ಪರಿಚಯಿಸಿದೆ. ಇದು ಕ್ಯಾನನ್ ಸಂಸ್ಥೆಯ ಮೊದಲ RF ಮೌಂಟ್ ಫಾರ್ಮ್ಯಾಟ್ ಪ್ಯಾನ್‌ಕೇಕ್ ಲೆನ್ಸ್‌ನೊಂದಿಗೆ ಬಂದಿರುವ ಕ್ಯಾಮೆರಾ ಆಗಿದೆ. ಈ ಹೊಸ ಕಾಂಪ್ಯಾಕ್ಟ್ ಕ್ಯಾಮೆರಾ APS-C ಗಾತ್ರದ CMOS ಇಮೇಜ್ ಸೆನ್ಸಾರ್‌ನೊಂದಿಗೆ ಬರುತ್ತದೆ. ಹಾಗಾದ್ರೆ ಈ ಹೊಸ ಕ್ಯಾಮೆರಾ ಫೀಚರ್ಸ್ ಏನಿದೆ? ಇದರ ಬೆಲೆ ಎಷ್ಟು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.
ಕ್ಯಾನನ್ EOS R100 ಕಾಂಪ್ಯಾಕ್ಟ್ ಮಿರರ್‌ಲೆಸ್ ಕ್ಯಾಮೆರಾ ಬ್ಲೂಟೂತ್ ಮತ್ತು ವೈಫೈನಂತಹ ಕಂಟ್ಯಾಕ್ಟ್ ಫೀಚರ್ಸ್‌ಗಳನ್ನು ಹೊಂದಿದೆ. ಇದು ಕ್ಯಾನನ್ ಕ್ಯಾಮೆರಾ ಕನೆಕ್ಟ್ ಅಪ್ಲಿಕೇಶನ್ ಅನ್ನು ಬಳಸಿಕೊಂಡು ಆಂಡ್ರಾಯ್ಡ್ ಮತ್ತು ಐಒಎಸ್ ಸಾಧನಗಳಿಗೆ ತ್ವರಿತವಾಗಿ ಚಿತ್ರಗಳನ್ನು ವರ್ಗಾಯಿಸಲು ಅವಕಾಶ ನೀಡಲಿದೆ. ಇನ್ನು ಈ ಕ್ಯಾಮೆರಾ ಕಾಂಪ್ಯಾಕ್ಟ್ ಡಿವೈಸ್ ಆಗಿದ್ದರೂ ಕೂಡ, ಇದು ಉದಾರವಾದ ಹಿಡಿತದೊಂದಿಗೆ ಡಿಜಿಟಲ್ OLED ವ್ಯೂಫೈಂಡರ್ ಅನ್ನು ಕೂಡ ಒಳಗೊಂಡಿದೆ.
ಈ ಕ್ಯಾಮೆರಾ ಫೇಸ್ ಟ್ರ್ಯಾಕಿಂಗ್ ಆಟೋಫೋಕಸ್, ಸ್ಪೋರ್ಟ್ಸ್ ಆಟೋಫೋಕಸ್, 1-ಪಾಯಿಂಟ್ ಆಟೋಫೋಕಸ್ ಮತ್ತು ಜೋನ್ ಆಟೋಫೋಕಸ್‌ನಂತಹ ಫೀಚರ್ಸ್ ಬೆಂಬಲವನ್ನು ಸಹ ಪಡೆದಿದೆ. ಇನ್ನು ಕ್ಯಾಮೆರಾ 24.1 MP ಸೆನ್ಸಾರ್ ಹೊಂದಿದ್ದು, ಚಿತ್ರಗಳಿಗಾಗಿ 100-12,800 (H:25,600) ಮತ್ತು 1080p ರೆಸಲ್ಯೂಶನ್‌ನಲ್ಲಿ ವೀಡಿಯೊಗಳಿಗಾಗಿ 100-12,800 (H:25,600) ಪರಿಣಾಮಕಾರಿ ISO ಶ್ರೇಣಿಯನ್ನು ಹೊಂದಿದೆ.
ಕ್ಯಾನನ್ EOS R100 ಕಾಂಪ್ಯಾಕ್ಟ್ ಮಿರರ್‌ಲೆಸ್ ಕ್ಯಾಮೆರಾ ನಿರಂತರ ಶೂಟಿಂಗ್ ಮೋಡ್‌ನಲ್ಲಿ, EOS R100 ಪ್ರತಿ ಸೆಕೆಂಡಿಗೆ 6.5 ಫ್ರೇಮ್‌ಗಳನ್ನು ಗರಿಷ್ಠ ಶಟರ್ ವೇಗ 1/4,000 ಸೆಕೆಂಡ್‌ನೊಂದಿಗೆ ಶೂಟ್ ಮಾಡುವ ಸಾಮರ್ಥ್ಯವನ್ನು ಹೊಂದಿದೆ. ಜೊತೆಗೆ 24/25fps ನಲ್ಲಿ 4K ವೀಡಿಯೊಗಳನ್ನು ಶೂಟ್ ಮಾಡುವ ಸಾಮರ್ಥ್ಯವನ್ನು ಪಡೆದಿದೆ. ಇನ್ನು ಕ್ಯಾಮೆರಾ 60fps ವರೆಗೆ 1080p ವೀಡಿಯೊಗಳನ್ನು ಶೂಟ್ ಮಾಡುವುದಕ್ಕೆ ಕೂಡ ಅವಕಾಶ ನೀಡಿದೆ.
ಇದಲ್ಲದೆ ಸಿಂಗಲ್ ಟೇಕ್‌ನಲ್ಲಿ, ಕ್ಯಾಮರಾ 29 ನಿಮಿಷ 59 ಸೆಕೆಂಡ್‌ಗಳ ಸಾಮಾನ್ಯ ವೀಡಿಯೊ ಶೂಟ್ ಮಾಡುವ ಸಾಮರ್ಥ್ಯ ಹೊಂದಿದೆ. ಇನ್ನು ಕ್ಯಾನನ್ EOS R100 ಕಾಂಪ್ಯಾಕ್ಟ್ ಮಿರರ್‌ಲೆಸ್ ಕ್ಯಾಮೆರಾದ ಬೆಲೆ ವಿವರಗಳು ಇನ್ನು ಕೂಡ ಬಹಿರಂಗವಾಗಿಲ್ಲ. ಆದರೆ ಈ ಕ್ಯಾಮೆರಾ ಜೂನ್ 2023 ರಲ್ಲಿ ಸೇಲ್ ಡೇಟ್ ಬಹಿರಂಗವಾಗಲಿದೆ ಎನ್ನಲಾಗಿದೆ.
ಇನ್ನು ಕ್ಯಾನನ್ ಕಂಪೆನಿ ಇತ್ತೀಚಿಗೆ ಪವರ್‌ಶಾಟ್ V10 ಕ್ಯಾಮೆರಾ ಪರಿಚಯಿಸಿದೆ. ಈ ವಿಶೇಷ ಕ್ಯಾಮೆರಾ 2.0 ಇಂಚಿನ ಎಲ್‌ಸಿಡಿ ಟಚ್‌ಸ್ಕ್ರೀನ್ ಹೊಂದಿದ್ದು, ಇದನ್ನು ಫ್ಲಿಪ್ ಮಾಡಬಹುದು. ಜೊತೆಗೆ ಈ ಪವರ್‌ಶಾಟ್ V10 ಉತ್ತಮ ಗುಣಮಟ್ಟದ ಮೈಕ್ರೊಫೋನ್ ಆಯ್ಕೆ ಪಡೆದಿದ್ದು, ಇನ್‌ಬಿಲ್ಟ್ ಸ್ಟ್ಯಾಂಡ್ ಆಯ್ಕೆ ಪಡೆದುಕೊಂಡಿದೆ. ಜೊತೆಗೆ ಶೇಕ್-ಫ್ರೀ 4K UHD ವಿಡಿಯೋಗಳನ್ನು ರೆಕಾರ್ಡ್ ಮಾಡುವ ಸಾಮರ್ಥ್ಯವನ್ನು ಇದು ಪಡೆದುಕೊಂಡಿದೆ.
ಇನ್ನುಳಿದಂತೆ ಪವರ್‌ಶಾಟ್ V10 ಲಂಬವಾದ ವಿನ್ಯಾಸ ಪಡೆದುಕೊಂಡಿದ್ದು, ಪೋರ್ಟಬಲ್ ಆಗಿದೆ. ಇನ್ನು ಈ ಕ್ಯಾಮೆರಾದ ಮೂಲಕ ಜನನಿಬಿಡ ಪ್ರದೇಶಗಳಲ್ಲಿ ರೆಕಾರ್ಡ್ ಮಾಡುವಾಗ ಬಳಕೆದಾರರಿಗೆ ಹಲವು ಅನುಕೂಲ ಮಾಡಿಕೊಡಲಿದೆ. ಅಂದರೆ ಕೇಂದ್ರೀಕೃತ ರೆಕಾರ್ಡ್ ಬಟನ್ ತ್ವರಿತ ಮತ್ತು ಚುರುಕುಬುದ್ಧಿಯ ಒನ್-ಹ್ಯಾಂಡೆಡ್ ಕ್ಯಾಮೆರಾ ಕಂಟ್ರೋಲ್ ಆಗಿ ಬಳಕೆ ಮಾಡಬಹುದು. ಅಂದರೆ ಈ ಕ್ಯಾಮೆರಾವನ್ನು ಸಂಪೂರ್ಣವಾಗಿ ಒಬ್ಬರೇ ಕಂಟ್ರೋಲ್ ಮಾಡಬಹುದು. ಜೊತೆಗೆ ಕ್ಯಾಮರಾದ ಹೃದಯಭಾಗದಲ್ಲಿ 1 ಇಂಚಿನ CMOS ಸೆನ್ಸರ್ ಆಯ್ಕೆ ನೀಡಲಾಗಿದ್ದು, ಇದು 4K ವಿಡಿಯೋ ಗುಣಮಟ್ಟವನ್ನು ಹೊಂದಿದೆ.
canon eos r100 compact mirrorless camera launched specs and price details.
31-07-25 10:20 am
Bangalore Correspondent
Pranab Mohanty, SIT, Dharmasthala; ಎಡಿಜಿಪಿ ಪ್...
30-07-25 06:28 pm
Dharmasthala Burial Site, Atm, Pan Card Found...
30-07-25 05:42 pm
Al Qaeda Arrest, Bangalore: ಕರ್ನಾಟಕ ರಾಜಧಾನಿಗೂ...
30-07-25 11:40 am
Durgaamba Bus Accident, Shivamogga: ಮಂಗಳೂರಿನಿ...
30-07-25 10:33 am
31-07-25 09:51 am
HK News Desk
ಪಾಕಿಸ್ತಾನದ ಡಿಜಿಎಂಒ ಕರೆ ಮಾಡಿ ದಾಳಿ ನಿಲ್ಲಿಸಲು ಮನ...
30-07-25 09:06 am
ಜಾರ್ಖಂಡ್ ನಲ್ಲಿ ಭೀಕರ ರಸ್ತೆ ಅಪಘಾತ ; ಸಿಲಿಂಡರ್...
29-07-25 11:58 am
ಕಾಶ್ಮೀರದಲ್ಲಿ ಭಾರತೀಯ ಸೇನೆಯಿಂದ ಆಪರೇಶನ್ ಮಹಾದೇವ್,...
28-07-25 11:07 pm
ಮತಾಂತರ ಇಲ್ಲದೆ ಅಂತರ್ ಧರ್ಮೀಯ ವಿವಾಹ ಕಾನೂನು ಬಾಹಿರ...
28-07-25 12:28 pm
31-07-25 01:37 pm
Mangalore Correspondent
Dharmasthala SIT latest News: ಧರ್ಮಸ್ಥಳ ಎಸ್ಐಟಿ...
31-07-25 12:59 pm
ಕೆಂಪು ಕಲ್ಲು, ಮರಳಿನ ಸಮಸ್ಯೆ ನೀಗಿಸಲು ಸಂಸದ ಬ್ರಿಜೇ...
31-07-25 10:23 am
Dharmasthala Case, SIT Helpline Number, Manga...
30-07-25 11:05 pm
Dharmasthala Second Day of Exhumation, SIT: ಶ...
30-07-25 03:00 pm
30-07-25 10:42 pm
Bangalore Correspondent
Mangalore Crime, Arrest: ಉದ್ಯಮಿಗಳಿಗೆ ನಕಲಿ ಆಸ್...
30-07-25 08:48 pm
Mysuru Drugs, Crime, Mumbai Police: ಮೈಸೂರಿನಲ್...
30-07-25 11:37 am
ಮಕ್ಕಳಾಗಿಲ್ಲ ಅಂತ ಗಂಡನ ಮೇಲೆ ಸಿಟ್ಟು ; ಪ್ರಿಯಕರನಿಂ...
29-07-25 08:54 pm
Honor Killing in Chitradurga: ತಮ್ಮನಿಗೆ ಎಚ್ಐವ...
29-07-25 07:17 pm