ಬ್ರೇಕಿಂಗ್ ನ್ಯೂಸ್
13-05-23 08:59 pm Source: Gizbot ಡಿಜಿಟಲ್ ಟೆಕ್
ಬ್ಲೂಪಂಕ್ಟ್ ಸಂಸ್ಥೆಯ ದೇಶಿಯ ಮಾರುಕಟ್ಟೆಯಲ್ಲಿ ಹಲವು ಟೆಕ್ ಡಿವೈಸ್‌ಗಳನ್ನು ಪರಿಚಯಿಸಿ ಸೈ ಎನಿಸಿಕೊಂಡಿದೆ. ಅವುಗಳ ಪೈಕಿ ಬ್ಲೂಪಂಕ್ಟ್ BTW20 ಇಯರ್‌ಬಡ್ ಡಿವೈಸ್ ಗ್ರಾಹಕರ ಗಮನ ಸೆಳೆದಿದ್ದು, ಈ ಡಿವೈಸ್ ಈಗ ಅಮೆಜಾನ್ ತಾಣದಲ್ಲಿ ಭರ್ಜರಿ ರಿಯಾಯಿತಿ ದರದಲ್ಲಿ ಕಾಣಿಸಿಕೊಂಡಿದೆ.
ಹೌದು, ಬ್ಲೂಪಂಕ್ಟ್ ಸಂಸ್ಥೆಯ ಬ್ಲೂಪಂಕ್ಟ್ BTW20 ಇಯರ್‌ಬಡ್ ಅಮೆಜಾನ್ ಆನ್‌ಲೈನ್ ತಾಣದಲ್ಲಿ ಈಗ 70% ನಷ್ಟು ರಿಯಾಯಿತಿ ಬೆಲೆಯಲ್ಲಿ ಕಾಣಿಸಿಕೊಂಡಿದೆ. ಈ ಡಿವೈಸ್ 3,299 ರೂ. ಪ್ರೈಸ್ ಟ್ಯಾಗ್ ಹೊಂದಿದ್ದು, ಆದರೆ ಈಗ ಗ್ರಾಹಕರು 999 ರೂ. ಗಳ ಡಿಸ್ಕೌಂಟ್ ದರದಲ್ಲಿ ಖರೀದಿ ಮಾಡಬಹುದಾಗಿದೆ. ಜೊತೆಗೆ ಬ್ಯಾಂಕ್ ರಿಯಾಯಿತಿ ಸಹ ಲಭ್ಯವಾಗಲಿವೆ.
ಇನ್ನು ಈ ಡಿವೈಸ್ ಅತ್ಯುತ್ತಮ ಬ್ಯಾಟರಿ ಬ್ಯಾಕ್‌ಅಪ್ ಪಡೆದಿದ್ದು, ಒಮ್ಮೆ ಪೂರ್ಣ ಚಾರ್ಜ್ ಮಾಡಿದರೆ ಸುಮಾರು 30 ಗಂಟೆಗಳ ಒಟ್ಟು ಪ್ಲೇಬ್ಯಾಕ್ ಈ ಡಿವೈಸ್ ಬಿಳಿ, ಕಪ್ಪು, ನೀಲಿ ಮತ್ತು ಹಸಿರು ಬಣ್ಣದ ಆಯ್ಕೆ ಪಡೆದಿದೆ. ಹಾಗಾದರೆ ಇನ್ನುಳಿದಂತೆ ಬ್ಲೂಪಂಕ್ಟ್ BTW20 (Blaupunkt BTW20) ಡಿವೈಸ್ ಫೀಚರ್ಸ್ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.
ಬ್ಲೂಪಂಕ್ಟ್ BTW20 (Blaupunkt BTW20) ಇಯರ್‌ಬಡ್ಸ್ ಇನ್ ಇಯರ್ ವಿನ್ಯಾಸದ ಆಯ್ಕೆ ಪಡೆದುಕೊಂಡಿದ್ದು, ತುಂಬಾನೇ ಹಗುರವಾಗಿದೆ. ಅದರಲ್ಲೂ ಚಾರ್ಜಿಂಗ್ ಕೇಸ್ ಆಕರ್ಷಕ ನೋಟದೊಂದಿಗೆ ಇಯರ್‌ಬಡ್‌ಗಳ ಬ್ಯಾಟರಿ ಸ್ಥಿತಿಯನ್ನು ಎಲ್ಇಡಿ ಮೂಲಕ ತೋರಿಸಲಾಗುತ್ತದೆ. ಇದರೊಂದಿಗೆ ಈ ಇಯರ್‌ಬಡ್ಸ್ ವಾಟರ್ ಹಾಗೂ ಸ್ವೆಟ್ ಪ್ರತಿರೋಧಕ್ಕಾಗಿ IPX5 ರೇಟಿಂಗ್ ಆಯ್ಕೆ ಹೊಂದಿರುವುದು ವಿಶೇಷ.
ಬ್ಲೂಪಂಕ್ಟ್ BTW20 ಇಯರ್‌ಬಡ್ಸ್ ಡಿವೈಸ್ ಡೀಪ್ ಬೇಸ್ ಆಯ್ಕೆಯ ಜೊತೆಗೆ ಉತ್ತಮ ಹೆಚ್‌ಡಿ ಧ್ವನಿ ಅನುಭವಕ್ಕಾಗಿ 10mm ಡೈನಾಮಿಕ್ ಡ್ರೈವರ್ ಗಳನ್ನು ಪಡೆದುಕೊಂಡಿದೆ. ಹಾಗೂ 20 Hz (Min) - 20 KHz (Max) ಫ್ರೀಕ್ವೆನ್ಸಿ ರೆಸ್ಪಾನ್ಸ್ ಜೊತೆಗೆ ಇನ್‌ಬಿಲ್ಟ್ ಮೈಕ್ರೊಫೋನ್ ಆಯ್ಕೆ ಮಾತ್ರ ನಿಮ್ಮನ್ನು ತಲ್ಲೀನಗೊಳಿಸುತ್ತದೆ. ಈ ಮೈಕ್ರೊಫೋನ್ ಯಾವುದೇ ಅನವಶ್ಯಕ ಶಬ್ದಗಳ ಅಡಚಣೆಯನ್ನು ದೂರ ಸರಿಸುವ ಮೂಲಕ ನಿಮಗೆ ಸ್ಪಷ್ಟವಾದ ಕರೆ ಅನುಭವವನ್ನು ನೀಡುತ್ತದೆ.
ಈ ಮೇಲಿನ ಫೀಚರ್ಸ್ ಗಳ ಜೊತೆಗೆ ಹೆಚ್ಚುವರಿಯಾಗಿ, ನೀವು ಮ್ಯೂಸಿಕ್ ಅನ್ನು ಈ ಬಡ್ಸ್‌ಗಳ ಮೂಲಕವೇ ಕಂಟ್ರೋಲ್ ಮಾಡಬಹುದು. ಅಂದರೆ ಮ್ಯೂಸಿಕ್ ಅನ್ನು ಪ್ಲೇ ಮಾಡಬಹುದು, ಪಾಸ್ ಮಾಡಬಹುದು ಹಾಗೂ ವಾಲ್ಯೂಮ್ ಅನ್ನು ನಿಯಂತ್ರಿಸಬಹುದು. ಇದರೊಂದಿಗೆ ಗೂಗಲ್ ಅಸಿಸ್ಟೆಂಟ್ ಹಾಗೂ ಸಿರಿ ಆಯ್ಕೆ ನಿಮ್ಮನ್ನು ಇನ್ನಷ್ಟು ಪುಳಕಿತರನ್ನಾಗಿಸುತ್ತದೆ.
ಇಷ್ಟೆಲ್ಲಾ ಫೀಚರ್ಸ್ ಇರುವ ಈ ಬ್ಲೂಪಂಕ್ಟ್ BTW20 ಇಯರ್‌ಬಡ್ಸ್ ಬ್ಯಾಟರಿ ಸಾಮರ್ಥ್ಯ ದಲ್ಲೂ ಒಂದು ಕೈ ಮೇಲಿದೆ. ಈ ಇಯರ್‌ಬಡ್ಸ್ 30 ಗಂಟೆಗಳ ಒಟ್ಟು ಪ್ಲೇಬ್ಯಾಕ್ ಸಮಯ ನೀಡಲಿದ್ದು, ಚಾರ್ಜಿಂಗ್ ಆಯ್ಕೆಗಾಗಿ ಯುಎಸ್‌ಬಿ - C ಪೋರ್ಟ್ ಆಯ್ಕೆ ಪಡೆದುಕೊಂಡಿದೆ. ಹಾಗೆಯೇ ಇದು ಪಾಸ್ಟ್ ಚಾರ್ಜಿಂಗ್ ಬೆಂಬಲ ಪಡೆದಿದೆ. ಇನ್ನು 10 ನಿಮಿಷ ಚಾರ್ಜ್ ಮಾಡಿದರೆ 30 ನಿಮಿಷಗಳ ವರೆಗೆ ರನ್‌ಟೈಮ್ ನೀಡಲಿದೆ ಎಂದು ಕಂಪೆನಿ ಹೇಳಿಕೊಂಡಿದೆ.
ಬ್ಲೂಪಂಕ್ಟ್ BTW20 ಇಯರ್‌ಬಡ್ಸ್ ಡಿವೈಸ್ ವಾಯಿಸ್ ಅಸಿಸ್ಟಂಟ್ ಸಪೋರ್ಟ್ ಪಡೆದಿದ್ದು, ಗೂಗಲ್ ಅಸಿಸ್ಟೆಂಟ್ ಹಾಗೂ ಸಿರಿ ಎರಡನ್ನು ಬೆಂಬಲಿಸುತ್ತದೆ. ಅಮೆಜಾನ್ ತಾಣದಲ್ಲಿ ಈಗ 70% ನಷ್ಟು ರಿಯಾಯಿತಿ ಪಡೆದಿದೆ. ಇನ್ನು ಈ ಡಿವೈಸ್ ಬಿಳಿ, ಕಪ್ಪು, ನೀಲಿ ಮತ್ತು ಹಸಿರು ಬಣ್ಣದ ನಾಲ್ಕು ವೇರಿಯಂಟ್ ನಲ್ಲಿ ಖರೀದಿಗೆ ಲಭ್ಯ.
blaupunkt btw20 price drop on amazon check offer price and specifications.
15-09-25 03:39 pm
HK News Desk
Bommai, SIT, Dharmasthala, Bommai: ನಿರೀಕ್ಷೆಗೆ...
14-09-25 05:18 pm
ವಾಹನ ಸವಾರರಿಗೆ ಶೇ.50 ರಿಯಾಯಿತಿ ಆಫರ್ ಎಫೆಕ್ಟ್ ...
13-09-25 10:38 pm
ಕುರುಬ ಕ್ರಿಶ್ಚಿಯನ್, ಕುಂಬಾರ ಕ್ರಿಶ್ಚಿಯನ್ ಇದೆಯೇ?...
13-09-25 08:46 pm
Caste Cenus News, Karnataka; ಸೆ.22ರಿಂದ ಅ.7ರ ವ...
13-09-25 07:50 pm
14-09-25 10:49 pm
HK News Desk
ಪ್ರಧಾನಿ ಮೋದಿ ಅಸ್ಸಾಂನಲ್ಲಿ ಇರುವಾಗಲೇ 5.8ರ ತೀವ್ರತ...
14-09-25 07:31 pm
ಮಿಜೋರಾಂ ರಾಜ್ಯದಲ್ಲಿ ಮೊದಲ ರೈಲು ಮಾರ್ಗ ಪ್ರಧಾನಿ ಮೋ...
13-09-25 03:25 pm
ವಾಷಿಂಗ್ ಮೆಷಿನ್ ವಿಷಯದಲ್ಲಿ ವಾಗ್ವಾದ ; ಅಮೆರಿಕದಲ...
12-09-25 11:33 am
ನೇಪಾಳದಲ್ಲಿ ಕಮ್ಯುನಿಸ್ಟ್ ಸರಕಾರ ಪತನ ; ಹೊಸ ನಾಯಕ ಯ...
10-09-25 04:22 pm
15-09-25 02:08 pm
Mangalore Correspondent
ಬಂಗ್ಲೆಗುಡ್ಡೆ ಕಾಡಿನಲ್ಲಿ ಸ್ಥಳ ಶೋಧಕ್ಕೆ ಎಸ್ಐಟಿ ಸಿ...
15-09-25 01:58 pm
Mangalore, Ullal News, Boat: ಕೈಕೊಟ್ಟ ಇಂಜಿನ್ ;...
15-09-25 11:27 am
Vittal Gowda, Mangalore, Dharmasthala: ವಿಠಲ ಗ...
14-09-25 10:55 pm
Mangalore Protest: ರಸ್ತೆ ನಮ್ಮ ಹಕ್ಕು, ಭಿಕ್ಷೆಯಲ...
14-09-25 10:34 pm
14-09-25 06:01 pm
HK News Desk
Mangalore Fake Aadhar, RTC Scam, Police: ಆರೋಪ...
13-09-25 11:36 am
ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರಗೈದು ಹತ್ಯೆ ; ಬೆಳಗ...
12-09-25 11:07 pm
Ullal Police, Mangalore, Gold Robbery: ತೊಕ್ಕೊ...
12-09-25 10:48 pm
Udupi, Brahmavar Stabbing, Crime: ಬ್ರಹ್ಮಾವರ ;...
12-09-25 05:31 pm