ಬ್ರೇಕಿಂಗ್ ನ್ಯೂಸ್
16-03-23 07:42 pm Source: Vijayakarnataka ಡಿಜಿಟಲ್ ಟೆಕ್
ಭಾರತದ ಮೊಬೈಲ್ ಮಾರುಕಟ್ಟೆಯು ಬಹುನಿರೀಕ್ಷೆಯಿಂದ ಎದುರುನೋಡುತ್ತಿದ್ದ Samsung Galaxy A54 5G ಮತ್ತು Samsung Galaxy A34 5G ಸ್ಮಾರ್ಟ್‌ಫೋನ್‌ಗಳು ದೇಶದಲ್ಲಿಂದು (16,ಮಾರ್ಚ್) ಭರ್ಜರಿಯಾಗಿ ಬಿಡುಗಡೆಯಾಗಿವೆ. ನೆನ್ನೆಯಷ್ಟೇ ಜಾಗತಿಕ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿದ್ದ Samsung Galaxy A54 5G ಮತ್ತು Samsung Galaxy A34 5G ಎರಡೂ ಸ್ಮಾರ್ಟ್‌ಫೋನ್‌ಗಳು ದೇಶದಲ್ಲಿ ಅದೇ ವೈಶಿಷ್ಟ್ಯಗಳಲ್ಲಿ ಪರಿಚಯಿಸಲಾಗಿದ್ದು, Samsung Galaxy A34 5G ಸ್ಮಾರ್ಟ್‌ಫೋನ್ 30,999 ರೂ.ಗಳ ಆರಂಭಿಕ ಬೆಲೆಯಲ್ಲಿ ಹಾಗೂ Samsung Galaxy A54 5G ಸ್ಮಾರ್ಟ್‌ಫೋನ್ 38,999 ರೂ.ಗಳ ಬೆಲೆಯಲ್ಲಿ ದೇಶದ ಮಾರುಕಟ್ಟೆಗೆ ಎಂಟ್ರಿ ನೀಡಿವೆ. ಹಾಗಾದರೆ, ದೇಶದಲ್ಲಿ Samsung Galaxy A54 5G ಮತ್ತು Samsung Galaxy A34 5G ಸ್ಮಾರ್ಟ್‌ಫೋನ್‌ಗಳು ಹೊಂದಿರುವ ಸಂಪೂರ್ಣ ಬೆಲೆಗಳು ಎಷ್ಟು ಮತ್ತು ಲಭ್ಯತೆ ಯಾವಾಗ ಹಾಗೂ ಈ ಎರಡೂ ಸ್ಮಾರ್ಟ್‌ಫೋನ್‌ಗಳು ಹೊಂದಿರುವ ಸಂಪೂರ್ಣ ವೈಶಿಷ್ಟ್ಯಗಳು ಯಾವುವು ಎಂಬುದನ್ನು ನೋಡೋಣ ಬನ್ನಿ.
Samsung Galaxy A54 5G ಮತ್ತು Galaxy A34 5G ಸ್ಮಾರ್ಟ್‌ಫೋನ್‌ಗಳ ವೈಶಿಷ್ಟ್ಯಗಳು
ಭಾರತದಲ್ಲಿಂದು ಬಿಡುಗಡೆಯಾಗಿರುವ ನೂತನ Samsung Galaxy A54 5G ಮತ್ತು Galaxy A34 5G ಎರಡೂ ಸ್ಮಾರ್ಟ್‌ಫೋನ್‌ಗಳು ಇತ್ತೀಚಿನ Android 13 ನಲ್ಲಿ UI 5.1 ಜೊತೆಗೆ ರನ್ ಆಗುತ್ತವೆ ಮತ್ತು ನಾಲ್ಕು ತಲೆಮಾರುಗಳ OS ಅಪ್‌ಡೇಟ್‌ಗಳು ಮತ್ತು ಐದು ವರ್ಷಗಳ ಭದ್ರತಾ ನವೀಕರಣಗಳನ್ನು ಸ್ವೀಕರಿಸುತ್ತವೆ ಎಂದು Samsung ತಿಳಿಸಿದೆ. ಈ ಎರಡೂ ಸ್ಮಾರ್ಟ್‌ಫೋನ್‌ಗಳು ಫುಲ್-HD+ ರೆಸಲ್ಯೂಶನ್, 120Hz ರಿಫ್ರೆಶ್ ರೇಟ್ ಇರುವ ಮತ್ತು ಸೂರ್ಯನ ಬೆಳಕಿನಲ್ಲಿ ಹೆಚ್ಚಿನ ಗೋಚರತೆಗಾಗಿ 'ಐ ಬೂಸ್ಟರ್' ಬೆಂಬಲದೊಂದಿಗೆ ಸೂಪರ್ AMOLED ಡಿಸ್‌ಪ್ಲೇಗಳನ್ನು ಒಳಗೊಂಡಿವೆ. ಆದರೆ, ಇವುಗಳಲ್ಲಿ Galaxy A54 5G ಸ್ಮಾರ್ಟ್‌ಫೋನ್ 6.4-ಇಂಚಿನ ಡಿಸ್‌ಪ್ಲೇ ಹೊಂದಿದ್ದರೆ, Galaxy A34 5G ಸ್ಮಾರ್ಟ್‌ಫೋನ್ ಸ್ವಲ್ಪ ದೊಡ್ಡದಾದ 6.6-ಇಂಚಿನ ಡಿಸ್‌ಪ್ಲೇ ಹೊಂದಿದೆ.
ಕ್ಯಾಮೆರಾ ವಿಭಾಗದಲ್ಲಿ, Galaxy A54 5G ಸ್ಮಾರ್ಟ್‌ಫೋನ್ f/1.8 ಲೆನ್ಸ್ ಮತ್ತು ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (OIS) ಬೆಂಬಲದೊಂದಿಗೆ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದೆ. ಇದು 50-ಮೆಗಾಪಿಕ್ಸೆಲ್ ಪ್ರಾಥಮಿಕ ಲೆನ್ಸ್, 12-ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಶೂಟರ್ ಮತ್ತು 5-ಮೆಗಾಪಿಕ್ಸೆಲ್ ಮ್ಯಾಕ್ರೋ ಲೆನ್ಸ್‌ಗಳನ್ನು ಒಳಗೊಂಡಿದೆ. ಸೆಲ್ಫಿಗಳು ಮತ್ತು ವೀಡಿಯೊ ಚಾಟ್‌ಗಳಿಗಾಗಿ, ಮುಂಭಾಗದಲ್ಲಿ 32-ಮೆಗಾಪಿಕ್ಸೆಲ್ ಕ್ಯಾಮೆರಾ ನೀಡಲಾಗಿದೆ. ಇತ್ತ Galaxy A34 5G ಸ್ಮಾರ್ಟ್‌ಫೋನ್ ಕೂಡ OIS ಮತ್ತು f/1.8 ಲೆನ್ಸ್‌ನೊಂದಿಗೆ 48-ಮೆಗಾಪಿಕ್ಸೆಲ್ ಪ್ರಾಥಮಿಕ ಲೆನ್ಸ್, 8-ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್-ಆಂಗಲ್ ಲೆನ್ಸ್ ಮತ್ತು 5-ಮೆಗಾಪಿಕ್ಸೆಲ್ ಮ್ಯಾಕ್ರೋ ಲೆನ್ಸ್‌ಗಳನ್ನು ಒಳಗೊಂಡಿದೆ. ಸೆಲ್ಫಿಗಳಿಗಾಗಿ, ಇದು 13-ಮೆಗಾಪಿಕ್ಸೆಲ್ ಸಾಮರ್ಥ್ಯದ ಕ್ಯಾಮೆರಾವನ್ನು ಒಳಗೊಂಡಿದೆ.
ಕಾರ್ಯನಿರ್ವಹಣೆ ವಿಭಾಗದಲ್ಲಿ, Samsung Galaxy A54 5G ಮತ್ತು Galaxy A34 5G ಎರಡು ಸ್ಮಾರ್ಟ್‌ಫೋನ್‌ಗಳು 8GB RAM ಮತ್ತು 256GB ಆನ್‌ಬೋರ್ಡ್ ಮೆಮೊರಿಯೊಂದಿಗೆ ಜೋಡಿಸಲಾದ ಆಕ್ಟಾ-ಕೋರ್ ಪ್ರೊಸೆಸರ್‌ಗಳಿಂದ (ಪ್ರೊಸೆಸರ್ ಹೆಸರು ಬಹಿರಂಗವಾಗಿಲ್ಲ) ಚಾಲಿತವಾಗಿವೆ. Samsung ಕಂಪೆನಿಯ ಸ್ವಂತ ಮತ್ತು ಹೆಚ್ಚು ಸುರಕ್ಷಿತವಾದ ನಾಕ್ಸ್ ಭದ್ರತಾ ವ್ಯವಸ್ಥೆಯನ್ನು ಈ ಎರಡೂ ಸ್ಮಾರ್ಟ್‌ಫೋನ್‌ಗಳು ಮೈಕ್ರೋ SD ಕಾರ್ಡ್ ಸಹಾಯದಿಂದ 1TB ವರೆಗೆ ಆಂತರಿಕ ಮೆಮೊರಿ ವಿಸ್ತರಣೆಗೆ ಅವಕಾಶ ಹೊಂದಿವೆ. ಸಂಪರ್ಕ ಆಯ್ಕೆಗಳಲ್ಲಿ, ಈ ಎರಡೂ ಸ್ಮಾರ್ಟ್‌ಫೋನ್‌ಗಳಲ್ಲಿ 5G, Wi-Fi 802.11 a/b/g/n/ac, ಬ್ಲೂಟೂತ್ 5.3, GPS/ A-GPS, GPS, Glonas, Beidou, Galileo, QZSS ಮತ್ತು USB ಟೈಪ್-C ಪೋರ್ಟ್ ನಂತಹ ವೈಶಿಷ್ಟ್ಯಗಳಿವೆ.
ಬ್ಯಾಟರಿ ವಿಭಾಗದಲ್ಲಿ, Samsung Galaxy A54 5G ಮತ್ತು Galaxy A34 5G ಸ್ಮಾರ್ಟ್‌ಫೋನ್‌ಗಳು 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿವೆ. ಒಂದೇ ಚಾರ್ಜ್‌ನಲ್ಲಿ ಬ್ಯಾಟರಿಯು ಎರಡು ದಿನಗಳ ಬ್ಯಾಟರಿ ಅವಧಿಯನ್ನು ನೀಡುತ್ತದೆ ಎಂದು ಕಂಪೆನಿ ಹೇಳಿಕೊಂಡಿದೆ. ಇನ್ನುಳಿಂದತೆ, ಈ ಎರಡೂ ಮಾದರಿ ಸ್ಮಾರ್ಟ್‌ಫೋನ್‌ಗಳು IP67-ಪ್ರಮಾಣೀಕೃತ ನಿರ್ಮಾಣವನ್ನು ಹೊಂದಿವೆ. ಜೊತೆಗೆ ಡಾಲ್ಬಿ ತಂತ್ರಜ್ಞಾನದಿಂದ ವರ್ಧಿಸಲ್ಪಟ್ಟ ಸ್ಟಿರಿಯೊ ಸ್ಪೀಕರ್‌ಗಳು, ಕಡಿಮೆ ಬೆಳಕಿನಲ್ಲಿ ಪ್ರಕಾಶಮಾನವಾದ ಫೋಟೋಗಳು ಮತ್ತು ವೀಡಿಯೊಗಳನ್ನು ಚಿತ್ರೀಕರಿಸಲು ಕ್ಯಾಮರಾ ಘಟಕಗಳು ನೈಟೋಗ್ರಫಿ ವೈಶಿಷ್ಟ್ಯದ ಬೆಂಬಲ, ಅಕ್ಸೆಲೆರೊಮೀಟರ್, ಲೈಟ್, ಫಿಂಗರ್‌ಪ್ರಿಂಟ್, ಗೈರೊ, ಮ್ಯಾಗ್ನೆಟೋಮೀಟರ್ ಮತ್ತು ಸಾಮೀಪ್ಯ ಸಂವೇದಕವನ್ನು ಈ ಎರಡೂ ಸ್ಮಾರ್ಟ್‌ಫೋನ್‌ಗಳು ಒಳಗೊಂಡಿವೆ.
Samsung Galaxy A54 5G ಮತ್ತು Galaxy A34 5G ಸ್ಮಾರ್ಟ್‌ಫೋನ್‌ಗಳ ಬೆಲೆಗಳು.
ನಾವು ಮೊದಲೇ ಹೇಳಿದಂತೆ, ದೇಶದಲ್ಲಿ Samsung Galaxy A34 5G ಸ್ಮಾರ್ಟ್‌ಫೋನ್ 30,999 ರೂ.ಗಳ ಆರಂಭಿಕ ಬೆಲೆಯಲ್ಲಿ ಹಾಗೂ Samsung Galaxy A54 5G ಸ್ಮಾರ್ಟ್‌ಫೋನ್ 38,999 ರೂ.ಗಳ ಬೆಲೆಯಲ್ಲಿ ದೇಶದ ಮಾರುಕಟ್ಟೆಗೆ ಎಂಟ್ರಿ ನೀಡಿವೆ. ಇವುಗಳಲ್ಲಿ Samsung Galaxy A54 5G ಸ್ಮಾರ್ಟ್‌ಫೋನಿನ 8 GB RAM + 128GB ಸ್ಟೋರೇಜ್ ಮಾದರಿಯು 38,999 ರೂ.ಬೆಲೆಯಲ್ಲಿ, ಇದರ ಟಾಪ್-ಆಫ್-ಲೈನ್ 8GB RAM + 256GB ಸ್ಟೋರೇಜ್ ಮಾದರಿಯು 40,999 ರೂ. ಬೆಲೆಯಲ್ಲಿ ಅದ್ಭುತ ಲೈಮ್, ಅದ್ಭುತ ಗ್ರ್ಯಾಫೈಟ್ ಮತ್ತು ಅದ್ಭುತ ನೇರಳೆ ಬಣ್ಣ ಆಯ್ಕೆಗಳಲ್ಲಿ ಬಂದಿದೆ. ಇತ್ತ Samsung Galaxy A34 5G ಸ್ಮಾರ್ಟ್‌ಫೋನಿನ 8GB RAM + 128GB ಸ್ಟೋರೇಜ್ ಮಾದರಿಯು 30,999 ರೂ. ಬೆಲೆಯಲ್ಲಿ, ಇದರ ಟಾಪ್-ಆಫ್-ಲೈನ್ 8GB RAM +256 GB ಸ್ಟೋರೇಜ್ ಮಾದರಿಯು 32,999 ರೂ. ಬೆಲೆಯಲ್ಲಿ ಅದ್ಭುತ ಲೈಮ್, ಅದ್ಭುತ ಗ್ರ್ಯಾಫೈಟ್ ಮತ್ತು ಅದ್ಭುತ ಸಿಲ್ವರ್ ಬಣ್ಣದ ಆಯ್ಕೆಗಳಲ್ಲಿ ಬಿಡುಗಡೆಯಾಗಿದೆ. ಇನ್ನು ಇಂದಿನಿಂದಲೇ ಕಂಪನಿಯ ವೆಬ್‌ಸೈಟ್ ಮೂಲಕ ಮುಂಗಡ-ಆರ್ಡರ್‌ಗಳಿಗೆ ಲಭ್ಯವಿರುವ ಈ ಎರಡೂ ಸ್ಮಾರ್ಟ್‌ಫೋನ್‌ಗಳ ಮೇಲೆ ಆಯ್ದ ಬ್ಯಾಂಕ್ ಕಾರ್ಡ್ ಗ್ರಾಹಕರಿಗೆ 3,000 ಕ್ಯಾಶ್‌ಬ್ಯಾಕ್ ಒದಗಿಸುವುದಾಗಿ Samsung ಕಂಪೆನಿ ತಿಳಿಸಿದೆ.
samsung galaxy a54 5g, galaxy a34 5g smartphone launched in india.
01-08-25 11:34 pm
Mangaluru Correspondent
‘Comedy Kiladigalu’, Chandrashekhar Siddi Sui...
01-08-25 10:45 pm
Kannada Producer Ganesh, Film Dharmasthala Fi...
01-08-25 09:09 pm
Rape Case, Prajwal Revanna Verdict : ಮೈಸೂರಿನ...
01-08-25 02:55 pm
ಧರ್ಮ 'ಸ್ಥಳ' ಕೇಸ್ ; ಪಾಯಿಂಟ್ ನಂ.1ರಲ್ಲಿ ಸಿಕ್ಕ...
01-08-25 01:31 pm
01-08-25 10:48 pm
HK News Desk
ಭಾರತ, ರಷ್ಯಾದ್ದು ಸತ್ತ ಆರ್ಥಿಕತೆ, ಒಟ್ಟಿಗೇ ನಾಶವಾಗ...
01-08-25 11:44 am
2008ರ ಮಾಲೆಗಾಂವ್ ಸ್ಫೋಟ ಪ್ರಕರಣ ; ಸಾಧ್ವಿ ಪ್ರಜ್ಞ...
31-07-25 10:08 pm
Trump, Modi, Export Tariff: ಸ್ನೇಹಿತ ಎನ್ನುತ್ತಲ...
31-07-25 09:51 am
ಪಾಕಿಸ್ತಾನದ ಡಿಜಿಎಂಒ ಕರೆ ಮಾಡಿ ದಾಳಿ ನಿಲ್ಲಿಸಲು ಮನ...
30-07-25 09:06 am
01-08-25 10:02 pm
Mangalore Correspondent
Mangalore News; ಕನಸು ಕಮರಿಸಿದ ಅಪಘಾತ ; ವೈದ್ಯರ ಎ...
01-08-25 09:38 pm
Mangalore Ammonia Leak, Baikampady: ಬೈಕಂಪಾಡಿ...
01-08-25 11:45 am
ಬಂಟ್ವಾಳ ಪಿಎಸ್ಐ ಕೀರಪ್ಪ ಕಾಂಬಳೆ ಆತ್ಮಹತ್ಯೆ ಪ್ರಕರಣ...
31-07-25 11:16 pm
MCC Bank to Inaugurate 20th Branch in Byndoor...
31-07-25 10:14 pm
01-08-25 05:05 pm
Mangalore Correspondent
13 ವರ್ಷದ ಬಾಲಕನ ಕಿಡ್ನಾಪ್ ; 5 ಲಕ್ಷ ರೂ. ಹಣ ತರುವಷ...
01-08-25 04:27 pm
Tumakuru Crime, Principal Arrest: ತುಮಕೂರು ; ಹ...
01-08-25 02:31 pm
Mangalore Crime, Police: ಅಪ್ರಾಪ್ತ ಬಾಲಕಿಯನ್ನು...
31-07-25 06:04 pm
Bangalore Cyber Fraud: ಉದ್ಯೋಗಿಯನ್ನ ನಂಬಿ ಲ್ಯಾಪ...
30-07-25 10:42 pm