ಬ್ರೇಕಿಂಗ್ ನ್ಯೂಸ್
23-05-22 03:58 pm Bengalore Correspondent ಕ್ರೈಂ
ಬೆಂಗಳೂರು, ಮೇ 23: ಬೆಂಗಳೂರಿನ ಹತ್ತಕ್ಕೂ ಹೆಚ್ಚು ಶಾಲೆಗಳಿಗೆ ಒಂದೇ ದಿನ ಬಾಂಬ್ ಬೆದರಿಕೆ ಹಾಕಿದ್ದ ಪ್ರಕರಣದಲ್ಲಿ ಪೊಲೀಸರು ಮಹತ್ವದ ಮಾಹಿತಿ ಕಲೆಹಾಕಿದ್ದಾರೆ. ಹುಸಿ ಬಾಂಬ್ ಕರೆಗೆ ಬಳಸಿದ್ದ ಇಮೇಲ್ ಸಾಫ್ಟ್ ವೇರನ್ನು ಚೆನ್ನೈ ಮೂಲದ ಅಪ್ರಾಪ್ತ ಬಾಲಕನೊಬ್ಬ ರೆಡಿ ಮಾಡಿಕೊಟ್ಟಿದ್ದ ಎನ್ನುವ ಮಾಹಿತಿ ಲಭಿಸಿದೆ.
ಚೆನ್ನೈ ಮೂಲದ ಬಾಲಕನೇ ನಕಲಿ ಇ-ಮೇಲ್ ಸೃಷ್ಟಿಯ ಹಿಂದಿನ ಮಾಸ್ಟರ್ ಮೈಂಡ್ ಅನ್ನುವ ವಿಚಾರ ತಿಳಿದುಬಂದಿದೆ. ಸಾಫ್ಟ್ ವೇರ್ ಡೆವಲಪ್ ತಂತ್ರಜ್ಞಾನದಲ್ಲಿ ಚಾಣಾಕ್ಷನಾಗಿರುವ ಬಾಲಕ ನಕಲಿ ಇಮೇಲ್ ಕಳಿಸುವ ಜಾಲವೊಂದನ್ನು ಸೃಷ್ಟಿಸಿ ಅದನ್ನು ವಿದೇಶಿಯರಿಗೆ ಮಾರಾಟ ಮಾಡಿದ್ದ. ಸಾಫ್ವ್ ವೇರ್ ಕಂಪನಿ ಒಂದನ್ನು ಹುಟ್ಟುಹಾಕುವ ಉದ್ದೇಶದಲ್ಲಿ ಕಂಪ್ಯೂಟರ್ ಪ್ರೋಗ್ರಾಮ್ ರೆಡಿ ಮಾಡಿದ್ದ. ಪ್ರೋಗ್ರಾಂ ಅನ್ನು ಆನಂತರ ಹಣಕ್ಕಾಗಿ ವಿದೇಶಿಯರಿಗೆ ಮಾರಾಟ ಮಾಡಿದ್ದ. ಅದೇ ಸಾಫ್ವ್ ವೇರನ್ನು ಬಳಸ್ಕೊಂಡು ದುಷ್ಕರ್ಮಿಗಳು ಬೆಂಗಳೂರಿನ ಶಾಲೆಗಳಿಗೆ ಇಮೇಲ್ ಬೆದರಿಕೆ ಹಾಕಿದ್ದಾರೆ ಅನ್ನುವ ವಿಚಾರ ತಿಳಿದುಬಂದಿದೆ.
ಬಾಲಕ ತಯಾರಿಸಿ ಕೊಟ್ಟಿದ್ದ ಕಂಪ್ಯೂಟರ್ ಪ್ರೋಗ್ರಾಮ್ ಲಾಭ ಪಡೆದಿದ್ದವರೇ ವಿದೇಶದಲ್ಲಿ ಕುಳಿತುಕೊಂಡು ಈ ಜಾಲವನ್ನು ಆಪರೇಟ್ ಮಾಡಿದ್ದು ಬೆಂಗಳೂರು ಮತ್ತು ಮಧ್ಯಪ್ರದೇಶದ ರಾಜಧಾನಿ ಭೋಪಾಲ್ ನಲ್ಲಿರುವ ಪ್ರಮುಖ ಶಾಲೆಗಳಿಗೆ ಇಮೇಲ್ ಬೆದರಿಕೆ ಕಳಿಸಲಾಗಿತ್ತು. ಇತ್ತೀಚೆಗೆ ಶಾಲೆಯ ಆವರಣದಲ್ಲಿ ಬಾಂಬ್ ಇಡಲಾಗಿದೆ, ಕೂಡಲೇ ಹುಡುಕಿ ಪತ್ತೆ ಮಾಡಿ ಎಂದು ಹುಸಿ ಬಾಂಬ್ ಬೆದರಿಕೆ ಹಾಕಿದ್ದರಿಂದ ಶಾಲೆಯ ಸಿಬಂದಿ ಹೌಹಾರಿದ್ದರು. ಆನಂತರ ಇಮೇಲ್ ಸಂದೇಶದ ಬಗ್ಗೆ ಪೊಲೀಸರಿಗೂ ಮಾಹಿತಿ ನೀಡಿದ್ದರು.
ಇದೀಗ ಬೆಂಗಳೂರು ಮತ್ತು ಭೋಪಾಲದ ತಂತ್ರಜ್ಞರು ಇಮೇಲ್ ಸಂದೇಶದ ಹಿಂದಿನ ಅಸಲಿಯತ್ತನ್ನು ಭೇದಿಸಿದ್ದು ಆ ಪ್ರೋಗ್ರಾಮ್ ಅನ್ನು ತಮಿಳುನಾಡಿನ ಬಾಲಕನೊಬ್ಬ ತಯಾರಿಸಿದ್ದ ಅನ್ನುವ ವಿಚಾರವನ್ನು ಪತ್ತೆ ಮಾಡಿದ್ದಾರೆ. ಬೋಟ್ ಸಾಫ್ಟ್ ವೇರ್ ಹೆಸರಲ್ಲಿ ಪ್ರೋಗ್ರಾಮ್ ರೆಡಿ ಮಾಡಿದ್ದ ಬಾಲಕ, ಅದರಿಂದ ಮಲ್ಟಿಪಲ್ ರೂಪದಲ್ಲಿ ಏಕಕಾಲದಲ್ಲಿ ವಿವಿಧೆಡೆಗೆ ಮೇಲ್ ಕಳುಹಿಸುವಂತೆ ತಂತ್ರಜ್ಞಾನ ರೂಪಿಸಿದ್ದ. ಕೊನೆಗೆ, ಅದನ್ನು ಹಣ ಗಳಿಸುವ ಉದ್ದೇಶದಿಂದ ಟೆಲಿಗ್ರಾಮ್ ಏಪ್ ಮೂಲಕ ವಿದೇಶಿಯರಿಗೆ ಮಾರಾಟ ಮಾಡಿದ್ದ. ಇದಕ್ಕಾಗಿ ಬಾಲಕ ಬಿಟ್ ಕಾಯಿನ್ ರೂಪದಲ್ಲಿ ದೊಡ್ಡ ಮೊತ್ತದ ಹಣವನ್ನು ಪಡೆದಿದ್ದಾನೆಂಬ ಮಾಹಿತಿ ಇದೆ.
ಬಾಲಕನ ತಂದೆ ಕಾಲೇಜು ಒಂದರಲ್ಲಿ ಲೈಬ್ರೇರಿಯನ್ ಆಗಿ ಕೆಲಸ ಮಾಡ್ತಿದ್ದಾರೆ ಎನ್ನಲಾಗುತ್ತಿದೆ. ಇದೀಗ ಆ ಹುಡುಗನ ಸಹಾಯ ಪಡೆದು ದುಷ್ಕರ್ಮಿಗಳು ಎಲ್ಲಿ ಅಡಗಿದ್ದಾರೆ ಎಂದು ಪತ್ತೆ ಮಾಡಲು ಪೊಲೀಸರು ಮುಂದಾಗಿದ್ದಾರೆ. ದುಷ್ಕರ್ಮಿಗಳು ಭಾರತದಲ್ಲಿಯೇ ಇದ್ದಾರೆಯೇ, ವಿದೇಶದಲ್ಲಿ ಕುಳಿತು ಆಪರೇಟ್ ಮಾಡುತ್ತಿದ್ದಾರೆಯೇ ಎಂಬ ಬಗ್ಗೆಯೂ ತನಿಖೆ ನಡೆಸುತ್ತಿದ್ದಾರೆ. ಆರಂಭಿಕ ತನಿಖೆಯಲ್ಲಿ ಪಾಕಿಸ್ಥಾನ ಅಥವಾ ಗಲ್ಫ್ ದೇಶಗಳಿಂದ ಇ-ಮೇಲ್ ರವಾನೆಯಾಗಿತ್ತು ಅನ್ನೋ ಮಾಹಿತಿಗಳಿದ್ದವು.
On May 13, eleven schools in Madhya Pradesh received threatening emails that they would be blown up with explosives. Thorough checking had been made by police teams, after which the information was found to be fake. On Saturday, May 21, it has come to light that the hoax emails have been tracked down to a teen in Tamil Nadu
11-06-26 08:31 pm
HK News Staffer
ಹಳಸಿತೇ ಜಮೀರ್ - ಸಿದ್ದು ಸ್ನೇಹ ಸಂಬಂಧ? ನಿಮ್ಮ ಆಪ್ತ...
11-06-26 07:36 pm
ಮಗು ಕರುಣಿಸಿದ ಪ್ರಕರಣ; ಕೊನೆಗೂ ರಾಜಿ ಸಂಧಾನಕ್ಕಿಳಿದ...
11-06-26 01:53 pm
ಬಿಟ್ಕಾಯಿನ್ ಹಗರಣ ; ಹ್ಯಾರಿಸ್ ನಲಪಾಡ್ ಹೆಸ್ರು ಚಾರ...
10-06-26 10:40 pm
ನಿಮ್ಮಪ್ಪನಿಂದಲೇ ಆರ್ಎಸ್ಎಸ್ಗೆ ಏನು ಮಾಡೋಕೆ ಆಗಿಲ...
09-06-26 07:04 pm
10-06-26 06:42 pm
HK News Staffer
ಮಧ್ಯಪ್ರಾಚ್ಯದಲ್ಲಿ ಮತ್ತೆ ಉದ್ವಿಗ್ನ ಸ್ಥಿತಿ; ಕೂಡಲೇ...
08-06-26 09:11 pm
ದೇಲಂಪಾಡಿ ; ಭಾರೀ ಮಳೆಗೆ ಕಲ್ಲಿನ ತಡೆಗೋಡೆ ಕುಸಿದು ಬ...
06-06-26 10:42 pm
ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ; ಜಿರಳೆಗಳ ಮುಖವಾಡ ಧ...
06-06-26 05:48 pm
ತಮಿಳುನಾಡಿನಲ್ಲಿ ಅಣ್ಣಾಮಲೈ ಸಂಚಲನ ; ಬಿಜೆಪಿಗೆ ಗುಡ್...
05-06-26 02:34 pm
11-06-26 06:37 pm
HK News Staffer
26 ವರ್ಷಗಳ ಬಳಿಕ ತಾಯಿ ಮಡಿಲು ಸೇರಿದ ಮಗ ! ಧರ್ಮಸ್ಥಳ...
11-06-26 04:21 pm
ಕರಾವಳಿಯಲ್ಲಿ ಮುಂಗಾರು ಅಬ್ಬರ; ಮಂಗಳೂರಿನ ಬೀಚ್ಗಳಲ...
11-06-26 02:47 pm
ಮಂಗಳೂರು ನಗರದಲ್ಲಿ ಅಕ್ರಮ ಫ್ಲೆಕ್ಸ್ , ಬ್ಯಾನರ್ ತ...
10-06-26 10:03 pm
ಅಡಿಕೆ ಎಲೆ ಚುಕ್ಕಿ, ಹಳದಿ ಎಲೆ ರೋಗ ; ರೈತರ ಕಷ್ಟಕ್ಕ...
10-06-26 05:07 pm
11-06-26 08:44 pm
HK News Staffer
ಮಾಣಿ ; ಡಿವೈಡರ್ಗೆ ಡಿಕ್ಕಿ ಹೊಡೆದ ಕಾರು, ಗಾಡಿ ಪಲ್...
11-06-26 11:43 am
ಬ್ರಹ್ಮಾವರ; ತಾಯಿಯ ಮಡಿಲಲ್ಲೇ ವಿಧಿಯ ಅಟ್ಟಹಾಸ..! 40...
11-06-26 11:40 am
ಬೀಗ ಹಾಕಿದ ಮನೆಗಳೇ ಟಾರ್ಗೆಟ್; ತಮಿಳುನಾಡು, ಆಂಧ್ರಪ್...
10-06-26 01:48 pm
Udupi Fight, Temple Parking: ಗಾಡಿಗೆ ಸೈಡ್ ಕೊಡು...
10-06-26 12:09 pm