ಬ್ರೇಕಿಂಗ್ ನ್ಯೂಸ್
03-08-26 12:51 pm HK News Staffer ಕ್ರೈಂ
ನೆಲ್ಯಾಡಿ, ಆ. 3: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ರೆಖ್ಯಾ ಗ್ರಾಮದ ನೆಲ್ಯಡ್ಕ–ಇಡ್ಮಾಳ್ ನಿವಾಸಿ ಬಾಲಕೃಷ್ಣ ಗೌಡ ಎಂಬವರು ಶನಿವಾತ ಕಾಡಾನೆ ದಾಳಿಗೆ ಮೃತಪಟ್ಟಿದ್ದಾರೆ.
ಬಾಲಕೃಷ್ಣ ಅವರು ಶನಿವಾರ ದಿನಗೂಲಿ ಕೆಲಸ ಮುಗಿಸಿ ಸಂಜೆ ಮನೆಗೆ ಹಿಂತಿರುಗುತ್ತಿದ್ದ ವೇಳೆ ಕಾಡಾನೆ ದಾಳಿ ನಡೆಸಿದೆ. ರಾತ್ರಿಯಾದರೂ ಮನೆಗೆ ಮರಳದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಹುಡುಕಾಟ ನಡೆಸಿದ್ದರು. ಬಾಲಕೃಷ್ಣ ಗೌಡರ ಬಳಿಯಿದ್ದ ರೈನ್ ಕೋಟ್ ಹಾಗೂ ಟೋಪಿ ಹರಿದ ಸ್ಥಿತಿಯಲ್ಲಿ ದಾರಿ ಮಧ್ಯ ಬಿದ್ದಿತ್ತು. ಸಮೀಪದಲ್ಲಿ ಕಾಡಾನೆ ಹೆಜ್ಜೆ ಗುರುತು ಪತ್ತೆಯಾಗಿದ್ರಿಂದ ಸ್ಥಳೀಯರು ಹಾಗು ಅರಣ್ಯ ಇಲಾಖೆ ಸಿಬ್ಬಂದಿ ಶೋಧ ನಡೆಸಿದ್ದಾಗ ಚರಂಡಿ ಒಂದರಲ್ಲಿ ಅವರ ಮೃತದೇಹ ಪತ್ತೆಯಾಗಿದೆ.
ಘಟನಾ ಸ್ಥಳಕ್ಕೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ, ಅರಣ್ಯ ಇಲಾಖೆ ಹಾಗೂ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಮೃತರ ನಿವಾಸಕ್ಕೆ ತೆರಳಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿ ತುರ್ತು ಪರಿಹಾರದ ಚೆಕ್ ಹಸ್ತಾಂತರಿಸಲಾಯಿತು.
ಈ ಕುರಿತು ದಕ್ಷಿಣ ಕನ್ನಡ ಜಿಲ್ಲಾ ಉಪ ವಲಯ ಅರಣ್ಯ ಸಂರಕ್ಷಣಾಧಿಕಾರಿ ರವಿಶಂಕರ್ (ಐಎಫ್ಎಸ್) ಮಾತನಾಡಿ, "ಘಟನೆಯ ಮಾಹಿತಿ ದೊರೆತ ತಕ್ಷಣವೇ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇವೆ. ಮೃತ ಬಾಲಕೃಷ್ಣ ಗೌಡ ಅವರ ಕುಟುಂಬಕ್ಕೆ ₹5 ಲಕ್ಷ ತುರ್ತು ಪರಿಹಾರ ವಿತರಿಸಲಾಗಿದೆ. ಹೊಸ ನಿಯಮಗಳ ಅನ್ವಯ ₹20 ಲಕ್ಷ ಪರಿಹಾರ ಮಂಜೂರು ಮಾಡಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಜೊತೆಗೆ ಸರ್ಕಾರ ಹಾಗೂ ಅರಣ್ಯ ಇಲಾಖೆಯ ನಿಯಮಗಳಂತೆ ಕುಟುಂಬಕ್ಕೆ ಪ್ರತಿ ತಿಂಗಳು ₹5,000 ಮಾಸಾಶನವನ್ನೂ ನೀಡಲಾಗುತ್ತದೆ," ಎಂದು ತಿಳಿಸಿದ್ದಾರೆ.
ಸುಳ್ಯ, ಕಡಬ, ಬೆಳ್ತಂಗಡಿ ಹಾಗೂ ಪುತ್ತೂರು ತಾಲೂಕುಗಳಲ್ಲಿ ಇತ್ತೀಚಿನ ದಿನಗಳಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗಿದ್ದು, ದಾಳಿ ಮತ್ತು ಗ್ರಾಮಗಳಿಗೆ ನುಗ್ಗುವ ಘಟನೆಗಳು ಮರುಕಳಿಸುತ್ತಿವೆ. ಕಾಡಾನೆಗಳ ಹಾವಳಿ ನಿಯಂತ್ರಿಸಲು ಹಾಗೂ ಜನರ ಸುರಕ್ಷತೆಗೆ ಶಾಶ್ವತ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಸರ್ಕಾರವನ್ನು ಆಗ್ರಹಿಸಿದ್ದಾರೆ.
ಚಾರ್ಮಾಡಿ ಗ್ರಾಮದ ಮಠದಮಜಲು ಎಂಬಲ್ಲಿ ಅನಂತ ರಾವ್ ಎಂಬುವರ ತೋಟಕ್ಕೆ ಶನಿವಾರ ರಾತ್ರಿ ನುಗ್ಗಿದ ಕಾಡಾನೆಗಳ ಹಿಂಡು 50ಕ್ಕಿಂತ ಅಧಿಕ ಅಡಿಕೆ ಮರ, 10 ತೆಂಗಿನ ಮರ ಹಾಗೂ ಅಪಾರ ಪ್ರಮಾಣದಲ್ಲಿ ಬಾಳೆ ಕೃಷಿ ನಾಶ ಮಾಡಿವೆ.

ಮಠದ ಮಜಲು ಪರಿಸರ ಚಾರ್ಮಾಡಿ ಅರಣ್ಯದ ಅಂಚಿನಲ್ಲಿದ್ದು, ಇಲ್ಲಿನ ಸುತ್ತಮುತ್ತಲ ಪ್ರದೇಶಗಳಲ್ಲಿ ಕಾಡಾನೆಗಳು ಆಗಾಗ ದಾಳಿ ನಡೆಸುತ್ತಿವೆ. ಆನೆ ಹಾವಳಿಗೆ ಇಲಾಖೆ ಕಡಿವಾಣ ಹಾಕುವ ಅಗತ್ಯವಿದೆ ಎಂದು ಸ್ಥಳೀಯ ಕೃಷಿಕ ಪ್ರಕಾಶ ನಾರಾಯಣ ಆಗ್ರಹಿಸಿದ್ದಾರೆ.
ಇನ್ನು ಚಾರ್ಮಾಡಿ ಘಾಟ್ನ 9ನೇ ತಿರುವಿನ ಬಳಿ ಇಂದು ಒಂಟಿ ಕಾಡಾನೆಯೊಂದು ಪ್ರತ್ಯಕ್ಷಗೊಂಡು, ರಸ್ತೆಯ ಮಧ್ಯೆ ಕೆಲಕಾಲ ನಿಂತಿದ್ದರಿಂದ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.
01-08-26 04:26 pm
HK News Staffer
ಪ್ರಶ್ನೆಪತ್ರಿಕೆ ಸೋರಿಕೆ ಜಾಲಕ್ಕೆ ಶಾಶ್ವತ ಬ್ರೇಕ್ ;...
31-07-26 01:22 pm
ಶಟರ್ ಮುರಿದಿಲ್ಲ, ಕಳ್ಳನ ಸುಳಿವಿಲ್ಲ... CCTV ನೋಡಿದ...
30-07-26 09:27 pm
"ಸಿದ್ದರಾಮಯ್ಯ ರಾಜಕೀಯದಿಂದ ನಿವೃತ್ತಿಯಾಗಲಿ, ಕಾಂಗ್ರ...
30-07-26 10:28 am
ಎಸ್ಐಆರ್ ವ್ಯಾಪ್ತಿಗೆ ಬಾರದ 84.31 ಲಕ್ಷ ಮಂದಿ ; ಆ.8...
29-07-26 09:54 pm
01-08-26 05:17 pm
HK News Staffer
ಕೆಲವರ ಪ್ರಭಾವಕ್ಕೊಳಗಾಗಿ ಪ್ರಧಾನಿ ಬಗ್ಗೆ ಕೆಟ್ಟ ಮಾತ...
01-08-26 02:48 pm
ದೇಶದ ಅತ್ಯಂತ ಶ್ರೀಮಂತ ಮುಖ್ಯಮಂತ್ರಿ ಡಿ.ಕೆ. ಶಿವಕುಮ...
31-07-26 01:26 pm
ಕಾಕ್ರೋಚ್ ಗೆ ಉಚಿತ ಕಾನೂನು ನೆರವು ; 1 ಕೋಟಿ ರೂ. ದೇ...
28-07-26 11:56 am
NEET ಬಿರುಗಾಳಿಯ ಬಳಿಕ ಕೇಂದ್ರ ಸಚಿವ ಸಂಪುಟದಲ್ಲಿ ಮಹ...
26-07-26 01:32 pm
03-08-26 11:42 am
HK News Staffer
Mangalore Rain: ಭಾರೀ ಮಳೆಯ ನಡುವೆ ಬಂಟ್ವಾಳದಲ್ಲಿ...
02-08-26 09:42 pm
ಎಡಕುಮೇರಿ - ಸಿರಿಬಾಗಿಲು ನಡುವೆ ರೈಲ್ವೇ ಹಳಿಗೆ ಭೂಕು...
02-08-26 11:42 am
Mangalore Rain, Flood: ಕರಾವಳಿಯಲ್ಲಿ ಕೊನೆಗೂ ಮುಂ...
01-08-26 10:25 pm
ಪೊಲೀಸರನ್ನು ನಾಯಿಗೆ ಹೋಲಿಸಿದ ಶಾಸಕ ಭರತ್ ಶೆಟ್ಟಿ ವಿ...
31-07-26 10:58 pm
03-08-26 12:51 pm
HK News Staffer
ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ವೆನ್ಲಾಕ್ ಆಸ್ಪತ್...
03-08-26 12:26 pm
ಉಳ್ಳಾಲ ಚೀರುಂಭ ಭಗವತೀ ಕ್ಷೇತ್ರದ ಆಡಳಿತ ವಿವಾದ ; ಅಧ...
01-08-26 08:44 pm
ಉಡುಪಿ ಲಯನ್ಸ್ ಸರ್ಕಲ್ ಬಳಿ ಭೀಕರ ಅಪಘಾತ ; ರಸ್ತೆ ಬ...
01-08-26 04:27 pm
ಪತ್ನಿಯ ಕಿರುಕುಳ ; ಅಕ್ಕನಿಗೆ ವಿಡಿಯೋ ಕಾಲ್ ಮಾಡಿ ಮ...
01-08-26 02:50 pm