ಬ್ರೇಕಿಂಗ್ ನ್ಯೂಸ್
19-05-22 12:09 pm Mangalore Correspondent ಕ್ರೈಂ
ಮಂಗಳೂರು, ಮೇ 19: ಮುಂಬೈ ಮೂಲದ ಸಿರಿವಂತ ಮಹಿಳೆಯೊಬ್ಬರನ್ನು ಮದುವೆಯಾಗುವ ಭರವಸೆ ನೀಡಿ, ಲೈಂಗಿಕವಾಗಿ ಬಳಸಿಕೊಂಡಿದ್ದಲ್ಲದೆ ಆಕೆಯಿಂದಲೇ ಒಂದೂವರೆ ಕೋಟಿ ರೂಪಾಯಿ ಪಡೆದು ವಂಚಿಸಿದ ಬಗ್ಗೆ ಮಂಗಳೂರಿನ ಮಹಿಳಾ ಠಾಣೆಯಲ್ಲಿ ದೂರು ದಾಖಲಾಗಿದ್ದು ವಿಟ್ಲ ಮೂಲದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಮಂಗಳೂರಿನ ಪ್ರತಿಷ್ಠಿತ ಅಪಾರ್ಟ್ಮೆಂಟ್ ಒಂದರಲ್ಲಿ ಮಹಿಳೆ ತನ್ನ ಮೂವರು ಸಣ್ಣ ಮಕ್ಕಳೊಂದಿಗೆ ವಾಸವಿದ್ದು ಗಂಡ ದುಬೈನಲ್ಲಿ ಉದ್ಯಮಿಯಾಗಿದ್ದಾನೆ. ಕೋಟ್ಯಂತರ ರೂಪಾಯಿ ಆಸ್ತಿಯನ್ನು ಹೊಂದಿದ್ದು ಗಂಡ ವಿದೇಶದಲ್ಲಿದ್ದರೆ, ಪತ್ನಿ ತನ್ನ ಸಣ್ಣ ಮಕ್ಕಳೊಂದಿಗೆ ಮಂಗಳೂರಿನಲ್ಲಿ ನೆಲೆಸಿದ್ದಾರೆ. ಗಂಡ- ಹೆಂಡತಿ ಇಬ್ಬರು ಕೂಡ ಮುಂಬೈ ಮೂಲದವರು. ಈ ವೇಳೆ, ಆಕೆಗೆ ವಿಟ್ಲ ಸಮೀಪದ ಬೈರಿಕಟ್ಟೆಯ ಫಯಾಜ್ ಎಂಬಾತ ಸಂಪರ್ಕವಾಗಿದ್ದು, ಹಲವಾರು ತಿಂಗಳುಗಳಿಂದ ಮಹಿಳೆಯ ಜೊತೆ ನಂಟು ಬೆಳೆಸಿಕೊಂಡಿದ್ದ. ಆಕೆಯನ್ನು ಮದುವೆಯಾಗುವುದಾಗಿ ನಂಬಿಸಿ, ನಿರಂತರ ಲೈಂಗಿಕವಾಗಿ ಬಳಸಿಕೊಂಡಿದ್ದಲ್ಲದೆ, ಗಂಡನಿಗೆ ಡೈವೋರ್ಸ್ ನೀಡುವಂತೆ ಮಾಡಿದ್ದ. ಹೀಗಾಗಿ ಮಹಿಳೆಯು ಗಂಡನಿಗೆ ಡೈವೋರ್ಸ್ ನೋಟೀಸ್ ನೀಡಿದ್ದಳು.
ಹೀಗಿದ್ದರೂ, ಫಯಾಜ್(30) ಮಹಿಳೆಯನ್ನು ಮದುವೆಯಾಗುವ ಬದಲು ವಂಚಿಸಿದ್ದಾನೆ. ಬೈರಿಕಟ್ಟೆಯ ಮಸೀದಿಯೊಂದರ ಅಧ್ಯಕ್ಷನ ಪುತ್ರನಾಗಿರುವ ಫಯಾಜ್, ಅಣ್ಣಂದಿರು ದುಬೈನಲ್ಲಿದ್ದಾರೆ. ಇವನೂ ಶ್ರೀಮಂತ ಮತ್ತು ಊರಲ್ಲಿ ಮರ್ಯಾದಸ್ಥ ಪಾರ್ಟಿಯಾಗಿದ್ದು ಇದೇ ಮೇ 22ಕ್ಕೆ ಬೇರೊಬ್ಬ ಹುಡುಗಿಯ ಜೊತೆಗೆ ಮದುವೆಗೆ ರೆಡಿಯಾಗಿದ್ದ. ಪಯಾಜ್ ಮದುವೆಯಾಗುತ್ತಿರುವುದನ್ನು ತಿಳಿದ ಮಹಿಳೆಯು ಮಂಗಳೂರು ಪೊಲೀಸ್ ಕಮಿಷನರ್ ಗೆ ದೂರು ನೀಡಿದ್ದು, ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಎರಡು ದಿನಗಳ ಹಿಂದೆ ಪೊಲೀಸರು ಫಯಾಜ್ ನನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.
ಫಯಾಜ್ ಜೊತೆಗೆ ಆತನ ಭಾವ ಮಂಗಳೂರಿನಲ್ಲಿ ಬಟ್ಟೆ ಮಳಿಗೆ ಹೊಂದಿರುವ ಅಬ್ದುಲ್ ರಹಿಮಾನ್ ಎಂಬಾತ ಸೇರಿಕೊಂಡು ತನ್ನಿಂದ 1.50 ಕೋಟಿ ರೂಪಾಯಿ ಪಡೆದು ವಂಚಿಸಿದ್ದಾರೆಂದು ಮಹಿಳೆ ದೂರಿನಲ್ಲಿ ತಿಳಿಸಿದ್ದರು. ಸದ್ಯಕ್ಕೆ ಪೊಲೀಸರು ಫಯಾಜ್ ನನ್ನು ಬಂಧಿಸಿದ್ದಾರೆ ಎನ್ನುವ ಮಾಹಿತಿಯಿದೆ. ಇತ್ತ ಬೈರಿಕಟ್ಟೆಯಲ್ಲಿ ಮದುವೆಗೆ ಸಿದ್ಧತೆ ನಡೆದಿರುವಾಗಲೇ ಫಯಾಜ್ ನನ್ನು ಬಂಧಿಸಿದ್ದು ಭಾರೀ ಸುದ್ದಿಗೆ ಗ್ರಾಸವಾಗಿದೆ. ಮಸೀದಿ ಕಮಿಟಿ ಅಧ್ಯಕ್ಷರ ಮಗನನ್ನು ಬಂಧಿಸಿದ್ದಾರೆಂಬ ಸುದ್ದಿಯಿಂದಾಗಿ ಪರಿಸರದಲ್ಲಿ ಗುಸು ಗುಸು ಕೇಳಿಬಂದಿದೆ. ಮಹಿಳೆಯು ಗಂಡನ ಕಾರಣದಿಂದ ಭಾರೀ ಶ್ರೀಮಂತೆಯಾಗಿದ್ದು ಕೋಟ್ಯಂತರ ಆಸ್ತಿಯಿಂದಾಗಿ ಮಂಗಳೂರಿನಲ್ಲಿ ಐಷಾರಾಮಿ ಜೀವನ ನಡೆಸುತ್ತಿರುವಾಕೆ. ಐಷಾರಾಮಿ ಕಾರಿನಲ್ಲಿ ತಿರುಗಾಡುತ್ತಿದ್ದಾಕೆಗೆ ಫಯಾಜ್ ತಗ್ಲಾಕ್ಕೊಂಡಿದ್ದು ಈಗ ಜೈಲು ಸೇರುವಂತಾಗಿದೆ.
Vitla Man arrested by Women Police Station in Mangalore for cheating Mumbai women of marriage and duping 1.5 crores. The arrested has been identified as Fiaz (30). It is said Fiaz promised her Marriage and then had physical contact and then duped her by taking 1.5 crores from her.
26-08-25 10:47 pm
HK News Desk
ನನ್ನ ಪಕ್ಷ ನಿಷ್ಠೆಯನ್ನು ಪ್ರಶ್ನಿಸುವವರು ಮೂರ್ಖರು ;...
26-08-25 07:07 pm
Dharmasthala, SIT, NIA, Home Minister: ಧರ್ಮಸ್...
26-08-25 06:06 pm
Dharmasthala Case SIT Officer M.N. Anucheth:...
26-08-25 04:48 pm
DK Shivakumar, BBMP, Potholea: ಬೆಂಗಳೂರಿನಲ್ಲಿ...
26-08-25 02:04 pm
26-08-25 09:02 pm
HK News Desk
ಜಮ್ಮು ಭಾರಿ ಮಳೆಗೆ ಒಂಬತ್ತು ಮಂದಿ ಬಲಿ ; ಹಲವೆಡೆ ಭೂ...
26-08-25 07:39 pm
Trump Immigrant Population: ಟ್ರಂಪ್ ಸಾಮ್ರಾಜ್ಯದ...
24-08-25 01:47 pm
Actor Vijay, Thalapathy; ಟಿವಿಕೆ ಮುಖ್ಯಸ್ಥ, ನಟ...
23-08-25 04:58 pm
Mp Brijesh Chowta, Mangalore: ಆನ್ಲೈನ್ ಗೇಮಿಂಗ್...
22-08-25 10:00 pm
26-08-25 10:57 pm
Mangalore Correspondent
Vasanth Giliyar Hate speech, Case: ಬೆಳ್ತಂಗಡಿ...
26-08-25 10:18 pm
Dharmasthala case, Chinmaya, Mahesh Shetty: ದ...
26-08-25 10:36 am
Mangalore, Rushabh Rao: ವಿಯಟ್ನಾಂ ಫ್ಯಾಷನ್ ಶೋ ಸ...
25-08-25 10:59 pm
Mangalore, Esyasoft, AI, Bajpe: ಬಜ್ಪೆ ; ಎಸ್ಯಾ...
25-08-25 10:44 pm
26-08-25 10:39 pm
HK News Desk
ಟೆಕ್ನಾಲಜಿಯಲ್ಲಿ ಮುಂದಿರುವ ಅಮೆರಿಕದ ಪ್ರಜೆಗಳನ್ನೇ ಯ...
26-08-25 05:24 pm
ದುಬೈನಲ್ಲಿ ಗಂಡ, ಮೈಸೂರಿನಲ್ಲಿ ಪತ್ನಿಯ ಲವ್ವಿ ಡವ್ವಿ...
25-08-25 08:29 pm
ಶಿಕ್ಷಣ ಸಚಿವ ಮಧು ಬಂಗಾರಪ್ಪ ಪಿಎ ಹೆಸರಲ್ಲಿ ವಸೂಲಿ ;...
25-08-25 07:42 pm
How Did Pastor John Shamine and Criminal Mada...
25-08-25 07:31 pm