ಬ್ರೇಕಿಂಗ್ ನ್ಯೂಸ್
09-05-22 01:35 pm Mangalore Correspondent ಕ್ರೈಂ
ಮಂಗಳೂರು, ಮೇ 9: ಎಮ್ಮೆಕೆರೆ ಮೈದಾನದಲ್ಲಿ ವಾರದ ಹಿಂದೆ ನಡೆದ ರೌಡಿಶೀಟರ್ ರಾಹುಲ್ ತಿಂಗಳಾಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಪಾಂಡೇಶ್ವರ ಪೊಲೀಸರು ಆರು ಮಂದಿಯನ್ನು ಬಂಧಿಸಿದ್ದಾರೆ.
ಮಹೇಂದ್ರ ಶೆಟ್ಟಿ(27), ಅಕ್ಷಯ್ ಕುಮಾರ್(25), ಸುಶಿತ್ (20), ದಿಲ್ಲೇಶ್ ಬಂಗೇರ(21), ಶುಭಂ ಶೆಟ್ಟಿ(26), ವಿಷ್ಣು (20) ಬಂಧಿತ ಆರೋಪಿಗಳು. ಇವರೆಲ್ಲ ಎಮ್ಮೆಕೆರೆ ಮತ್ತು ಬೋಳಾರ ಭಾಗದ ನಿವಾಸಿಗಳು. ಎಪ್ರಿಲ್ 28ರಂದು ಎಮ್ಮೆಕೆರೆ ಮೈದಾನದಲ್ಲಿ ಕೋಳಿ ಅಂಕಕ್ಕೆ ಬಂದಿದ್ದ ರಾಹುಲ್ ತಿಂಗಳಾಯ ಅಲಿಯಾಸ್ ಕಕ್ಕೆ ಎಂಬಾತನನ್ನು ಮಹೇಂದ್ರ ಶೆಟ್ಟಿ, ಅಕ್ಷಯ್ ಕುಮಾರ್, ಸುಶಿತ್ ಮತ್ತು ದಿಲ್ಲೇಶ್ ಬಂಗೇರ ಎಂಬ ನಾಲ್ವರು ಬೆನ್ನಟ್ಟಿಕೊಂಡು ಬಂದು ಮಾರಕಾಸ್ತ್ರಗಳಿಂದ ಹೊಡೆದು ಕೊಂದು ಹಾಕಿದ್ದರು. ಬಳಿಕ ಎಮ್ಮೆಕೆರೆ ಮೈದಾನದ ಮುಂದಿನ ಕೋಟೆದ ಬಬ್ಬುಸ್ವಾಮಿ ದೈವಸ್ಥಾನದ ಬಳಿಗೆ ಎಳೆದೊಯ್ದು ರಾಹುಲ್ ನನ್ನು ಹಾಕಿದ್ದರು. ಕೃತ್ಯದಲ್ಲಿ ನೇರ ಭಾಗಿಯಾದ ಈ ನಾಲ್ವರನ್ನು ಸುರತ್ಕಲ್ ರೈಲ್ವೇ ಸ್ಟೇಶನ್ ಬಳಿಯಿಂದ ಪೊಲೀಸರು ಬಂಧಿಸಿದ್ದಾರೆ.


ಬಂಧಿತರಿಂದ ಮೂರು ತಲವಾರು, ಕತ್ತಿ ನಾಲ್ಕು, ಚೂರಿ ಮೂರು, ಎರಡು ಸ್ಕೂಟರ್, ರಾಯಲ್ ಎನ್ ಫೀಲ್ಡ್ ಬುಲೆಟ್, ಐದು ಮೊಬೈಲ್ ಹ್ಯಾಂಡ್ ಸೆಟ್ ವಶಕ್ಕೆ ಪಡೆಯಲಾಗಿದೆ. ಶುಭಮ್ ಶೆಟ್ಟಿ ಎಂಬಾತ, ರಾಹುಲ್ ಮೇಲಿನ ದ್ವೇಷದಿಂದ ಆತನನ್ನು ಮುಗಿಸಲು ಸಂಚು ಹೂಡಿದ್ದ. ಇದಕ್ಕಾಗಿ ಕಾರ್ತಿಕ್ ಮತ್ತು ಆತನ ತಮ್ಮ ಭರತ್ ಶೆಟ್ಟಿಯನ್ನು ಎಮ್ಮೆಕೆರೆಗೆ ಕರೆದುಕೊಂಡು ಬಂದು ತಂಡದ ಇತರ ಯುವಕರಿಗೆ ಪರಿಚಯ ಮಾಡಿಸಿದ್ದ. ಅಲ್ಲದೆ, ಎರಡೂ ತಂಡದವರಿಗೆ ಹಲ್ಲೆಗೈದಿರುವ ರಾಹುಲ್ ತಿಂಗಳಾಯ ಎಲ್ಲಿ ಸಿಕ್ಕಿದರೂ, ಕೊಲೆ ಮಾಡಬೇಕು ಎಂದು ಟಾರ್ಗೆಟ್ ಕೊಟ್ಟಿದ್ದ. ಘಟನೆ ನಡೆಸಿದ ಬಳಿಕ ಅಕ್ಷಯ್ ಕುಮಾರ್ ಎಂಬಾತನ ಜೊತೆ ಸೇರಿ ಕೃತ್ಯ ಎಸಗಿದ ಆರೋಪಿಗಳಿಗೆ ತಲೆಮರೆಸಿಕೊಳ್ಳಲು ಸಹಕಾರ ನೀಡಿದ್ದ. ಆರೋಪಿ ವಿಷ್ಣು ಇತರರ ಜೊತೆ ಸೇರಿ ಕೃತ್ಯಕ್ಕೆ ಒಳಸಂಚು ರೂಪಿಸಿದ್ದು ಹಾಗೂ ಆರೋಪಿಗಳಿಗೆ ತಲೆಮರೆಸಿಕೊಳ್ಳಲು ನೆರವು ನೀಡಿದ್ದ. ಆರೋಪಿ ಸುಶಿತ್ ಗೆ ಸೇರಿದ ಮೊಬೈಲನ್ನು ತನ್ನ ಜೊತೆಗಿಟ್ಟುಕೊಂಡು ಪರಾರಿಯಾಗಲು ಸಹಕರಿಸಿದ್ದ.


ಇದುವರೆಗಿನ ತನಿಖೆಯಲ್ಲಿ ಪ್ರಕರಣದಲ್ಲಿ 13 ಜನ ಆರೋಪಿಗಳು ಭಾಗಿಯಾಗಿರುವುದು ಕಂಡುಬಂದಿದೆ. ಈ ಪೈಕಿ ಎಂಟು ಮಂದಿ ಕ್ರಿಮಿನಲ್ ಹಿನ್ನೆಲೆ ಉಳ್ಳವರಾಗಿದ್ದಾರೆ. ಸುಶಿತ್ ಮೇಲೆ ಕೊಲೆಯತ್ನ ಹಾಗೂ ಅಕ್ಷಯ್ ಕುಮಾರ್ ವಿರುದ್ಧ ಹಲ್ಲೆ ಪ್ರಕರಣ ಈ ಹಿಂದೆ ಪಾಂಡೇಶ್ವರ ಠಾಣೆಯಲ್ಲಿ ದಾಖಲಾಗಿತ್ತು.
Six persons were arrested in connection to the murder of rowdy sheeter Rahul alias Kakke Rahul. The 27-year-old rowdy sheeter was hacked to death at Yemmekere ground on April 28. The arrested are identified as Mahendra Shetty (27), Sushith (20) and Vishnu (20) from Yemmekere, Akshay Kumar (25) and Shubam (26) from Bolar, and Dilesh Bangera (21) from Morgansgate.
02-02-26 11:02 pm
HK News Desk
ಮುಖಂಡರ ಬಳಿಕ ಮಕ್ಕಳ ದರ್ಬಾರ್! ದಾವಣಗೆರೆಯಲ್ಲಿ ಕಾಂಗ...
02-02-26 09:52 pm
Manjeshwar Murder: ಆಸ್ತಿ ವಿಚಾರದಲ್ಲಿ ಗಲಾಟೆ ; ಬ...
02-02-26 08:14 pm
ಪೊಲೀಸರಿಗೇ ಸಡ್ಡು ; ಹಾಡಹಗಲೇ ಸಿಲಿಕಾನ್ ಸಿಟಿಯಲ್ಲಿ...
02-02-26 05:12 pm
ಮೂರು ದಶಕ ಕಳೆದರೂ ಮತ್ತೆ ಎಂಡೋ ಭೀತಿ ; ಉತ್ತರ ಕನ್ನಡ...
02-02-26 04:06 pm
02-02-26 10:40 pm
HK News Desk
ಎಪ್ರಿಲ್ 1ರಿಂದ ಹೊಸ ಆದಾಯ ತೆರಿಗೆ ಕಾಯ್ದೆ ಜಾರಿ ; ಐ...
02-02-26 11:59 am
ಕೇಂದ್ರ ಬಜೆಟ್ ; ಏಳು ಹೈಸ್ಪೀಡ್ ರೈಲು ಕಾರಿಡಾರ್ ಘೋಷ...
01-02-26 02:00 pm
ಫೆಬ್ರವರಿ 1ಕ್ಕೆ ದೇಶದ ಕಣ್ಣು ದೆಹಲಿ ಕಡೆ! ಟ್ಯಾಕ್ಸ್...
31-01-26 10:20 pm
ಅಕ್ರಮ ಸಂಬಂಧಕ್ಕೆ ಅಡ್ಡಿಯಾದ ಮಾವ ; ಪೆಟ್ರೋಲ್ ಸುರಿ...
31-01-26 09:38 pm
02-02-26 07:36 pm
Udupi Correspondent
ವಿಜಯೇಂದ್ರ ಕಾರ್ಯಶೈಲಿಗೆ ಮಾಜಿ ಸಂಸದ ನಳಿನ್ ಕುಮಾರ್...
02-02-26 05:09 pm
'ನನ್ನ ಭಾಷಣದ ಕಾರಣಕ್ಕೆ ಗಲಾಟೆ, ಸಂಘರ್ಷ ಆಗಿದ್ದಿದೆಯ...
01-02-26 10:29 pm
Karnataka High Court, Mahesh Shetty Timarodi:...
01-02-26 07:52 pm
ಸಿಜೆ ರಾಯ್ ಆತ್ಮಹತ್ಯೆ ಪ್ರಕರಣ ; ಐಟಿ ರಾಜಕೀಯ ಕಾರಣಕ...
31-01-26 08:40 pm
02-02-26 10:37 pm
Bangalore Correspondent
ಉಡುಪಿಯಲ್ಲಿ ಕಾಂಗ್ರೆಸ್ ಮುಖಂಡನ ಮೇಲೆ ತಲ್ವಾರು ದಾಳಿ...
02-02-26 12:16 pm
Kishor Salve Arrest: ಚೋರ್ಲಾ ಘಾಟ್ 400 ಕೋಟಿ ದರೋ...
01-02-26 03:41 pm
ಅಂದು ರೀಟಾ, ಇಂದು ಸಾದಿಯಾ! ಮದುವೆ ಬಳಿಕ ಬಲವಂತದ ಮತ...
31-01-26 01:33 pm
ಸಾವಿರಾರು ಕೋಟಿಗಳ ಒಡೆಯ ಸಿ.ಜೆ. ರಾಯ್ ಯಾರು?ಕಾನ್ಫಿಡ...
31-01-26 12:12 pm