ಬ್ರೇಕಿಂಗ್ ನ್ಯೂಸ್
05-05-22 09:58 pm HK Desk News ಕ್ರೈಂ
ಹೈದರಾಬಾದ್, ಮೇ 5: ಮುಸ್ಲಿಂ ಹುಡುಗಿಯನ್ನು ಪ್ರೀತಿಸಿ ಮದುವೆಯಾಗಿದ್ದ ಹಿಂದು ಯುವಕನನ್ನು ಹುಡುಗಿಯ ಸೋದರರೇ ಸೇರಿ ನಡುರಸ್ತೆಯಲ್ಲಿ ಪತ್ನಿಯ ಎದುರಲ್ಲೇ ಕೊಚ್ಚಿ ಕೊಲೆಗೈದ ಘಟನೆ ಹೈದ್ರಾಬಾದಿನ ಸರೂರ್ ನಗರ್ ಎಂಬಲ್ಲಿ ನಡೆದಿದೆ. ನಾಗರಾಜು(25) ಕೊಲೆಯಾದ ದುರ್ದೈವಿ.
ಕಾಲೇಜು ದಿನಗಳಿಂದಲೂ ಪ್ರೀತಿಸುತ್ತಿದ್ದ ಯುವ ಜೋಡಿ ಕಳೆದ ಜನವರಿ ಕೊನೆಯಲ್ಲಿ ತಮ್ಮ ಮನೆಯವರ ವಿರೋಧದ ಮಧ್ಯೆಯೂ ಮದುವೆಯಾಗಿ ಪ್ರತ್ಯೇಕವಾಗಿ ವಾಸವಿದ್ದರು. ಮರೇದ್ ಪಳ್ಳಿ ನಿವಾಸಿ ಬಿಲ್ಲಾಪುರಂ ನಾಗರಾಜು ಸಿಕಂದರಾಬಾದ್ ನಲ್ಲಿ ಕಾರು ಶೋರೂಂ ಒಂದರಲ್ಲಿ ಎಕ್ಸಿಕ್ಯುಟಿವ್ ಆಗಿದ್ದು ಬುಧವಾರ ರಾತ್ರಿ ಪತ್ನಿ ಆಶ್ರಿತ್ ಸುಲ್ತಾನಾ ಅಲಿಯಾಸ್ ಪಲ್ಲವಿ ಜೊತೆಗೆ ಬೈಕಿನಲ್ಲಿ ಬರುತ್ತಿದ್ದಾಗ ಅಪರಿಚಿತ ವ್ಯಕ್ತಿ ತಡೆದು ನಿಲ್ಲಿಸಿದ್ದಾನೆ.
ಸರೂರ್ ನಗರ್ ಪ್ರದೇಶದ ತಹಸೀಲ್ದಾರ್ ಕಚೇರಿಯ ಮುಂಭಾಗದಲ್ಲಿ ಘಟನೆ ನಡೆದಿದ್ದು, ಬೈಕ್ ನಿಲ್ಲಿಸುತ್ತಲೇ ರಾಡ್ ನಲ್ಲಿ ಹೊಡೆದು ಹಲ್ಲೆ ನಡೆಸಿದ್ದಾರೆ. ಪತ್ನಿಯ ಎದುರಲ್ಲೇ ಇಬ್ಬರು ಸೇರಿ ಹಲ್ಲೆ ನಡೆಸಿದ್ದು ಆನಂತರ ಚಾಕುವಿನಿಂದ ತಿವಿದು ಸ್ಥಳದಲ್ಲೇ ನಾಗರಾಜುವನ್ನು ಹತ್ಯೆ ಮಾಡಿದ್ದಾರೆ. ಈ ವೇಳೆ, ಪತ್ನಿ ಆಶ್ರಿತ್ ಸುಲ್ತಾನಾ ಮೇಲೂ ಪೆಟ್ಟು ಬಿದ್ದಿದ್ದು ಗಾಯಗೊಂಡಿದ್ದಾಳೆ. ಆನಂತರ ಸ್ಥಳೀಯರು ಮತ್ತು ನಾಗರಾಜು ಕುಟುಂಬಸ್ಥರು ಸ್ಥಳದಲ್ಲಿ ಜಮಾಯಿಸಿ ಪ್ರತಿಭಟನೆ ನಡೆಸಿದ್ದಾರೆ. ಆಶ್ರಿತ್ ಸುಲ್ತಾನಾ ಕುಟುಂಬಸ್ಥರೇ ದ್ವೇಷದಿಂದ ಹತ್ಯೆ ಮಾಡಿದ್ದಾರೆಂದು ಆರೋಪ ಮಾಡಿದ್ದಾರೆ.
ಘಟನೆ ಸಂಬಂಧಿಸಿ ಪೊಲೀಸರು ಆಶ್ರಿತ್ ಸುಲ್ತಾನಾಳ ಸೋದರ ಸೈಯದ್ ಮೋಬಿನ್ ಅಹ್ಮದ್ ಮತ್ತು ಮೊಹಮ್ಮದ್ ಮಸೂದ್ ಅಹ್ಮದ್ ಎಂಬವರನ್ನು ಬಂಧಿಸಿದ್ದಾರೆ. ಮನೆಯವರ ವಿರೋಧದ ನಡುವೆಯೂ ಆರ್ಯ ಸಮಾಜದಲ್ಲಿ ಮದುವೆಯಾಗಿದ್ದ ದ್ವೇಷದಿಂದ ಹಿಂದು ಯುವಕನನ್ನು ಕೊಂದು ಹಾಕಿದ್ದಾರೆ ಎನ್ನಲಾಗುತ್ತಿದೆ. ಒಂದು ತಿಂಗಳ ಹಿಂದೆಯೂ ನಾಗರಾಜುವನ್ನು ಕೊಲೆ ಮಾಡಲು ತಂಡ ಸಂಚು ನಡೆಸಿತ್ತು. ಆದರೆ, ಸಂಚು ಹೂಡಿದ್ದ ಜಾಗದಲ್ಲಿ ನಾಗರಾಜು ಸಿಕ್ಕಿರಲಿಲ್ಲ. ಮೇ 4ರಂದು ರಾತ್ರಿ ಮತ್ತೆ ಸ್ಕೆಚ್ ಹಾಕಿದ್ದು, ಬೈಕಿನಲ್ಲಿ ಪತಿ-ಪತ್ನಿ ಜೊತೆಯಾಗಿ ಬರುತ್ತಿದ್ದಾಗಲೇ ಹೊಡೆದು ಕೊಂದಿದ್ದಾರೆ.
ಈ ಬಗ್ಗೆ ಬಿಜೆಪಿ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದು, ಇಸ್ಲಾಮೋಫೋಬಿಯಾಕ್ಕೆ ಇದೇ ಉದಾಹರಣೆ ಎಂದು ಹೇಳಿದ್ದಾರೆ. ಘಟನೆ ಬಗ್ಗೆ ಸಮಗ್ರ ತನಿಖೆ ನಡೆಸಿ, ಆರೋಪಿಗಳನ್ನು ಬಂಧಿಸಿ ಶಿಕ್ಷಿಸಬೇಕು ಎಂದು ಒತ್ತಾಯಿಸಿದ್ದಾರೆ. ಇತ್ತೀಚೆಗೆ ದೆಹಲಿಯಲ್ಲೂ ಇದೇ ರೀತಿ ಮುಸ್ಲಿಂ ಹುಡುಗಿಯನ್ನು ಪ್ರೀತಿಸಿದ ಕಾರಣಕ್ಕೆ ಹಿಂದು ಯುವಕನ ಹತ್ಯೆ ಆಗಿತ್ತು. ಕೊಲ್ಲುವುದನ್ನೇ ಇವರು ರೂಢಿ ಮಾಡಿಕೊಂಡಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಷೆಹ್ಸಾದ್ ಪೂನಾವಾಲಾ ಟ್ವೀಟ್ ಮಾಡಿದ್ದಾರೆ.
A man was stabbed to death by an assailant on a bike at Saroornagar Tehsildar office in Hyderabad on Wednesday, May 4. Police have confirmed that a few of the suspects have been arrested, and that they all belong to the girl's family.
26-08-25 10:47 pm
HK News Desk
ನನ್ನ ಪಕ್ಷ ನಿಷ್ಠೆಯನ್ನು ಪ್ರಶ್ನಿಸುವವರು ಮೂರ್ಖರು ;...
26-08-25 07:07 pm
Dharmasthala, SIT, NIA, Home Minister: ಧರ್ಮಸ್...
26-08-25 06:06 pm
Dharmasthala Case SIT Officer M.N. Anucheth:...
26-08-25 04:48 pm
DK Shivakumar, BBMP, Potholea: ಬೆಂಗಳೂರಿನಲ್ಲಿ...
26-08-25 02:04 pm
26-08-25 09:02 pm
HK News Desk
ಜಮ್ಮು ಭಾರಿ ಮಳೆಗೆ ಒಂಬತ್ತು ಮಂದಿ ಬಲಿ ; ಹಲವೆಡೆ ಭೂ...
26-08-25 07:39 pm
Trump Immigrant Population: ಟ್ರಂಪ್ ಸಾಮ್ರಾಜ್ಯದ...
24-08-25 01:47 pm
Actor Vijay, Thalapathy; ಟಿವಿಕೆ ಮುಖ್ಯಸ್ಥ, ನಟ...
23-08-25 04:58 pm
Mp Brijesh Chowta, Mangalore: ಆನ್ಲೈನ್ ಗೇಮಿಂಗ್...
22-08-25 10:00 pm
26-08-25 10:57 pm
Mangalore Correspondent
Vasanth Giliyar Hate speech, Case: ಬೆಳ್ತಂಗಡಿ...
26-08-25 10:18 pm
Dharmasthala case, Chinmaya, Mahesh Shetty: ದ...
26-08-25 10:36 am
Mangalore, Rushabh Rao: ವಿಯಟ್ನಾಂ ಫ್ಯಾಷನ್ ಶೋ ಸ...
25-08-25 10:59 pm
Mangalore, Esyasoft, AI, Bajpe: ಬಜ್ಪೆ ; ಎಸ್ಯಾ...
25-08-25 10:44 pm
26-08-25 10:39 pm
HK News Desk
ಟೆಕ್ನಾಲಜಿಯಲ್ಲಿ ಮುಂದಿರುವ ಅಮೆರಿಕದ ಪ್ರಜೆಗಳನ್ನೇ ಯ...
26-08-25 05:24 pm
ದುಬೈನಲ್ಲಿ ಗಂಡ, ಮೈಸೂರಿನಲ್ಲಿ ಪತ್ನಿಯ ಲವ್ವಿ ಡವ್ವಿ...
25-08-25 08:29 pm
ಶಿಕ್ಷಣ ಸಚಿವ ಮಧು ಬಂಗಾರಪ್ಪ ಪಿಎ ಹೆಸರಲ್ಲಿ ವಸೂಲಿ ;...
25-08-25 07:42 pm
How Did Pastor John Shamine and Criminal Mada...
25-08-25 07:31 pm