ಬ್ರೇಕಿಂಗ್ ನ್ಯೂಸ್
30-04-22 01:37 pm Mangalore Correspondent ಕ್ರೈಂ
ಮಂಗಳೂರು, ಎ.30: ತೊಕ್ಕೊಟ್ಟು ಜಂಕ್ಷನ್ನಲ್ಲಿರುವ ಮಸ್ಜಿದುಲ್ ಹುದಾ ಜುಮ್ಮಾ ಮಸೀದಿಯಲ್ಲಿ ಎ.28ರ ರಾತ್ರಿ ವಿಶೇಷ ಕಾರ್ಯಕ್ರಮ ನಡೆಯುತ್ತಿದ್ದಾಗ ಅನ್ಯಮತೀಯನೊಬ್ಬ ಅಕ್ರಮವಾಗಿ ನುಗ್ಗಿ ಮಹಿಳೆಯರ ಜೊತೆ ಅಸಭ್ಯವಾಗಿ ವರ್ತಿಸಿದ ಘಟನೆ ನಡೆದಿದ್ದು, ಉಳ್ಳಾಲ ಪೊಲೀಸರು ಆರೋಪಿ ಯುವಕನನ್ನು ಬಂಧಿಸಿದ್ದಾರೆ.
ಬಂಧಿತ ಯುವಕನನ್ನು ಕಾರ್ಕಳ ತಾಲೂಕಿನ ನಿಟ್ಟೆ ಮೂಲದ ನಿವಾಸಿ ಸುಜಿತ್ ಶೆಟ್ಟಿ(26) ಎಂದು ಗುರುತಿಸಲಾಗಿದೆ. ಮಸೀದಿಯಲ್ಲಿ ಲೈಲಾತುಲ ಖದರ್ ಎನ್ನುವ ವಿಶೇಷ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ತಡರಾತ್ರಿ 2 ಗಂಟೆ ವೇಳೆಗೆ ಮಹಿಳೆಯರು ನಮಾಜ್ ಮಾಡುವ ಕೊಠಡಿಗೆ ಯುವಕ ನುಗ್ಗಿದ್ದು, ಅಸಭ್ಯವಾಗಿ ವರ್ತಿಸಿದ್ದಾನೆ. ಹೆಣ್ಣು ಮಕ್ಕಳ ಕೈಹಿಡಿದೆಳೆದು ಅವಮಾನಕಾರಿ ರೀತಿಯಲ್ಲಿ ವರ್ತಿಸಿದ್ದಾನೆ ಎಂದು ಫಾಯಿಸಾ ತಮೀಮ್ ಎಂಬವರು ಉಳ್ಳಾಲ ಠಾಣೆಗೆ ದೂರು ನೀಡಿದ್ದಾರೆ.
ಫಾಯಿಸಾ ತಮೀಮ್, ಬಿಫಾತಿಮಾ, ಆಯೆಷಾ ನಾಝ್ ಮತ್ತಿತರ ಮಹಿಳೆಯರು ಜೊತೆಗಿದ್ದಾಗ ಕೊಠಡಿಗೆ ಅಪರಿಚಿತ ವ್ಯಕ್ತಿ ಅಸಭ್ಯವಾಗಿ ವರ್ತಿಸಿದ್ದಾಗಿ ಎ.29ರ ಮಧ್ಯಾಹ್ನ ಉಳ್ಳಾಲ ಠಾಣೆಗೆ ದೂರು ನೀಡಿದ್ದರು. ಘಟನೆ ಸಂಬಂಧಿಸಿ ಪೊಲೀಸರು ತನಿಖೆ ನಡೆಸಿ ಸುಜಿತ್ ಶೆಟ್ಟಿ ಎಂಬಾತನನ್ನು ಬಂಧಿಸಿದ್ದಾರೆ.

ಅಸಭ್ಯವಾಗಿ ವರ್ತಿಸಿಲ್ಲ , ಸಿಸಿಟಿವಿ ಚೆಕ್ ಮಾಡಿ
ನಿಟ್ಟೆ ಮೂಲದ ಸುಜಿತ್, ತೊಕ್ಕೊಟ್ಟಿನ ಸೀಶೆಲ್ ಬಾರ್ ಅಂಡ್ ರೆಸ್ಟೋರೆಂಟ್ ನಲ್ಲಿ ಕೆಲಸಕ್ಕಿದ್ದ. ಮಸೀದಿಗೆ ಬಂದಿದ್ದ ವ್ಯಕ್ತಿಗಳು ಬಾರ್ ಮುಂಭಾಗದಲ್ಲಿ ಕಾರು ಪಾರ್ಕಿಂಗ್ ಮಾಡಿದ್ದು ಈ ವೇಳೆ ಅಲ್ಲಿದ್ದ ಸುಜಿತ್ ಬಳಿ, ಇದಕ್ಕಾಗಿ ಹಣ ಕೊಡುತ್ತೇನೆ, ಮತ್ತೆ ಮಸೀದಿಗೆ ಬರುವಂತೆ ಹೇಳಿದ್ದರಂತೆ. ಅದರಂತೆ, ಕೆಲಹೊತ್ತಿನ ಬಳಿಕ ಹಣದಾಸೆಯಿಂದ ಸುಜಿತ್ ಮಸೀದಿ ಬಳಿಗೆ ತೆರಳಿದ್ದು ಹಣ ಕೊಡುತ್ತೇನೆ ಎಂದಿದ್ದವರನ್ನು ಹುಡುಕಾಡಿದ್ದ. ಅಲ್ಲಿ ಯುವತಿಯರು, ಮಹಿಳೆಯರು ಇದ್ದುದರಿಂದ ಮುಜುಗರಕ್ಕೊಳಗಾಗಿ ಹಿಂತಿರುಗಿ ಬಂದಿದ್ದನಂತೆ.
ಈ ಬಗ್ಗೆ ಮಹಿಳೆಯರ ಮೂಲಕ ಉಳ್ಳಾಲದಲ್ಲಿ ದೂರು ದಾಖಲಿಸಿದ್ದಲ್ಲದೆ, ಅಸಭ್ಯವಾಗಿ ವರ್ತಿಸಿದ್ದಾಗಿ ಆರೋಪ ಮಾಡಿದ್ದಾರೆ. ಯುವಕ ಉಳ್ಳಾಲ ಪೊಲೀಸರಲ್ಲಿ ನಾನು ಯಾವುದೇ ತಪ್ಪು ಮಾಡಿಲ್ಲ. ಅಸಭ್ಯವಾಗಿ ವರ್ತಿಸಿದ್ದರೆ ಬೇಕಾದ್ರೆ ಅಲ್ಲಿನ ಸಿಸಿಟಿವಿ ಚೆಕ್ ಮಾಡಿ ಎಂದು ಗೋಗರೆದಿದ್ದಾನೆ. ಆದರೆ ಪೊಲೀಸರು ಯುವಕನ ಮಾತು ಕೇಳದೆ ಕೋರ್ಟಿಗೆ ಹಾಜರು ಪಡಿಸಲು ಕರೆದೊಯ್ದಿದ್ದಾರೆ. ಅಷ್ಟರಲ್ಲೇ ಪೊಲೀಸ್ ಕಮಿಷನರ್ ಯುವಕನ ಫೋಟೋ ಮತ್ತು ಎಫ್ಐಆರ್ ಕಾಪಿಯನ್ನು ಮೀಡಿಯಾ ಗ್ರೂಪಿನಲ್ಲಿ ಷೇರ್ ಮಾಡಿದ್ದಾರೆ.
Police arrested a youth for behaving indecently with women at Thokottu. The arrested person is identified as Sujith Shetty (26), a resident of Nitte, Karkala. As per the complaint filed by the victim, she and two other women were attending a special programme organised by the Huda Jumma Masjid in Thokottu at around 11.30 pm on Thursday April 28.
11-06-26 08:31 pm
HK News Staffer
ಹಳಸಿತೇ ಜಮೀರ್ - ಸಿದ್ದು ಸ್ನೇಹ ಸಂಬಂಧ? ನಿಮ್ಮ ಆಪ್ತ...
11-06-26 07:36 pm
ಮಗು ಕರುಣಿಸಿದ ಪ್ರಕರಣ; ಕೊನೆಗೂ ರಾಜಿ ಸಂಧಾನಕ್ಕಿಳಿದ...
11-06-26 01:53 pm
ಬಿಟ್ಕಾಯಿನ್ ಹಗರಣ ; ಹ್ಯಾರಿಸ್ ನಲಪಾಡ್ ಹೆಸ್ರು ಚಾರ...
10-06-26 10:40 pm
ನಿಮ್ಮಪ್ಪನಿಂದಲೇ ಆರ್ಎಸ್ಎಸ್ಗೆ ಏನು ಮಾಡೋಕೆ ಆಗಿಲ...
09-06-26 07:04 pm
10-06-26 06:42 pm
HK News Staffer
ಮಧ್ಯಪ್ರಾಚ್ಯದಲ್ಲಿ ಮತ್ತೆ ಉದ್ವಿಗ್ನ ಸ್ಥಿತಿ; ಕೂಡಲೇ...
08-06-26 09:11 pm
ದೇಲಂಪಾಡಿ ; ಭಾರೀ ಮಳೆಗೆ ಕಲ್ಲಿನ ತಡೆಗೋಡೆ ಕುಸಿದು ಬ...
06-06-26 10:42 pm
ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ; ಜಿರಳೆಗಳ ಮುಖವಾಡ ಧ...
06-06-26 05:48 pm
ತಮಿಳುನಾಡಿನಲ್ಲಿ ಅಣ್ಣಾಮಲೈ ಸಂಚಲನ ; ಬಿಜೆಪಿಗೆ ಗುಡ್...
05-06-26 02:34 pm
11-06-26 06:37 pm
HK News Staffer
26 ವರ್ಷಗಳ ಬಳಿಕ ತಾಯಿ ಮಡಿಲು ಸೇರಿದ ಮಗ ! ಧರ್ಮಸ್ಥಳ...
11-06-26 04:21 pm
ಕರಾವಳಿಯಲ್ಲಿ ಮುಂಗಾರು ಅಬ್ಬರ; ಮಂಗಳೂರಿನ ಬೀಚ್ಗಳಲ...
11-06-26 02:47 pm
ಮಂಗಳೂರು ನಗರದಲ್ಲಿ ಅಕ್ರಮ ಫ್ಲೆಕ್ಸ್ , ಬ್ಯಾನರ್ ತ...
10-06-26 10:03 pm
ಅಡಿಕೆ ಎಲೆ ಚುಕ್ಕಿ, ಹಳದಿ ಎಲೆ ರೋಗ ; ರೈತರ ಕಷ್ಟಕ್ಕ...
10-06-26 05:07 pm
11-06-26 08:44 pm
HK News Staffer
ಮಾಣಿ ; ಡಿವೈಡರ್ಗೆ ಡಿಕ್ಕಿ ಹೊಡೆದ ಕಾರು, ಗಾಡಿ ಪಲ್...
11-06-26 11:43 am
ಬ್ರಹ್ಮಾವರ; ತಾಯಿಯ ಮಡಿಲಲ್ಲೇ ವಿಧಿಯ ಅಟ್ಟಹಾಸ..! 40...
11-06-26 11:40 am
ಬೀಗ ಹಾಕಿದ ಮನೆಗಳೇ ಟಾರ್ಗೆಟ್; ತಮಿಳುನಾಡು, ಆಂಧ್ರಪ್...
10-06-26 01:48 pm
Udupi Fight, Temple Parking: ಗಾಡಿಗೆ ಸೈಡ್ ಕೊಡು...
10-06-26 12:09 pm