ಬ್ರೇಕಿಂಗ್ ನ್ಯೂಸ್
11-04-22 01:08 pm Mangalore Correspondent ಕ್ರೈಂ
ಮಂಗಳೂರು, ಎ.11: ನಗರದ ವೆಲೆನ್ಸಿಯಾದಲ್ಲಿ ಚಿಕನ್ ಅಂಗಡಿಯ ಸಿಬಂದಿಗೆ ಹಲ್ಲೆಗೈದು ಸಾರ್ವಜನಿಕರಿಗೆ ಬೆದರಿಕೆ ಹಾಕಿದ ಪ್ರಕರಣ ನಡೆದಿದ್ದು, ಘಟನೆ ಸಂಬಂಧಿಸಿ ಪೊಲೀಸರು ಇಬ್ಬರು ರೌಡಿಗಳನ್ನು ಬಂಧಿಸಿದ್ದಾರೆ.
ಕಂಕನಾಡಿ ನಗರ ಠಾಣೆ ವ್ಯಾಪ್ತಿಯ ರೌಡಿ ಶೀಟರ್ ಗಳಾದ ಪ್ರೀತಂ ಅಲಿಯಾಸ್ ಪ್ರೀತಂ ಪೂಜಾರಿ ಮತ್ತು ಧೀರಜ್ ಕುಮಾರ್ ಅಲಿಯಾಸ್ ಧೀರು ಬಂಧಿತರು. ಭಾನುವಾರ ಸಂಜೆ ವೆಲೆನ್ಸಿಯಾದ ಕೋಳಿ ಅಂಗಡಿಯ ಮುಂದೆ ಇವರಿಬ್ಬರು ಸೇರಿ ವ್ಯಕ್ತಿಯೊಬ್ಬನಿಗೆ ಹಲ್ಲೆ ನಡೆಸುತ್ತಿದ್ದರು. ಈ ವೇಳೆ, ಕೋಳಿ ಅಂಗಡಿಯಲ್ಲಿದ್ದ ಸಿಬಂದಿ ಪ್ರಶ್ನೆ ಮಾಡಿದ್ದು, ಇಲ್ಲಿ ರಂಪ ಮಾಡದಂತೆ ಸೂಚಿಸಿದ್ದಾರೆ.
ಇದರಿಂದ ಸಿಟ್ಟಿಗೆದ್ದ ರೌಡಿಗಳು ಚಿಕನ್ ಸೆಂಟರಿನಲ್ಲಿದ್ದ ಸುನಿಲ್, ಅನಂತ ಮತ್ತು ಜೀವನ್ ಎಂಬ ಮೂವರು ಸಿಬಂದಿ ಮೇಲೆ ಹಲ್ಲೆ ನಡೆಸಿದ್ದಾರೆ. ಅಲ್ಲದೆ, ಚೂರಿಯಿಂದ ಇರಿಯಲು ಯತ್ನಿಸಿದ್ದಾರೆ. ಅಷ್ಟರಲ್ಲಿ ಇತರ ಸಾರ್ವಜನಿಕರು ಸೇರಿದ್ದು, ಚೂರಿಯಿಂದ ಇರಿಯುವುದನ್ನು ತಪ್ಪಿಸಿದ್ದಾರೆ. ಆನಂತರ ಸಾರ್ವಜನಿಕರಿಗೂ ಚೂರಿ ತೋರಿಸಿ ಬೆದರಿಸಿದ್ದು ಯಾರಾದ್ರೂ ಹತ್ತಿರ ಬಂದಲ್ಲಿ ತಲೆ ತೆಗೀತೀವಿ ಎಂದು ಬೆದರಿಕೆ ಹಾಕಿದ್ದಾರೆ. ಇಷ್ಟರಲ್ಲೇ ಪೊಲೀಸರ ಕಂಟ್ರೋಲ್ ರೂಂಗೆ ಫೋನ್ ಹೋಗಿತ್ತು. ಸಂಜೆ 7 ಗಂಟೆ ಸುಮಾರಿಗೆ ಬೀದಿ ರಂಪ ಮಾಡುತ್ತಿದ್ದ ಜಾಗಕ್ಕೆ ಪೊಲೀಸರು ಬಂದಿದ್ದು ಸಾರ್ವಜನಿಕರ ಸಹಾಯದಿಂದ ಇಬ್ಬರು ರೌಡಿಗಳನ್ನೂ ಹಿಡಿದು ಬಂಧಿಸಿದ್ದಾರೆ. ಹೆಲ್ಮೆಟ್, ಕಲ್ಲುಗಳನ್ನು ಬಳಸಿ ಚಿಕನ್ ಸೆಂಟರ್ ಸಿಬಂದಿಗೆ ಹಲ್ಲೆ ನಡೆಸಿದ್ದರು.
ಪೊಲೀಸರು ಅವರಲ್ಲಿದ್ದ ಎರಡು ಚೂರಿಯನ್ನು ವಶಕ್ಕೆ ಪಡೆದಿದ್ದಾರೆ. ಇಬ್ಬರನ್ನೂ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದು ಕುಡಿದ ಮತ್ತಿನಲ್ಲಿದ್ದು, ಪ್ರೀತಂ ಗಾಂಜಾ ವ್ಯಸನಿಯೂ ಆಗಿದ್ದ. ಪ್ರೀತಂ ಬಜಾಲ್ ಜಲ್ಲಿಗುಡ್ಡೆ ನಿವಾಸಿಯಾಗಿದ್ದು, ಡಕಾಯಿತಿ, ಸುಲಿಗೆ, ಕೊಲೆಯತ್ನ ಸೇರಿ ಎಂಟು ಪ್ರಕರಣ ಎದುರಿಸುತ್ತಿದ್ದಾನೆ. ಕಂಕನಾಡಿ ನಗರ, ಗ್ರಾಮಾಂತರ ಮತ್ತು ಕದ್ರಿ ಠಾಣೆಯಲ್ಲಿ ಕೇಸುಗಳಿವೆ. ಧೀರಜ್ ಕುಮಾರ್ ಕೊಲೆಯತ್ನ, ರಾಬರಿ ಸೇರಿ ಹತ್ತು ಪ್ರಕರಣಗಳನ್ನು ಎದುರಿಸುತ್ತಿದ್ದಾನೆ. ಮಂಗಳೂರಿನ ನಾಲ್ಕು ಠಾಣೆಗಳ ವ್ಯಾಪ್ತಿಯಲ್ಲಿ ಈತನ ವಿರುದ್ಧ ಕೇಸುಗಳಿವೆ.
City south police station personnel arrested rowdy sheeters Preetam alias Preetam Poojary and Dheeraj Kumar alias Dheeru on Sunday April 10 evening for creating fear among the public and hitting staff working at Ideal Chicken stall of Valencia in the city.According to the details of the incident, accused Preetam and Dheeraj were beating a person with their fist in front of Ideal Chicken stall at Valencia at around 6.30 pm on Sunday.
26-08-25 10:47 pm
HK News Desk
ನನ್ನ ಪಕ್ಷ ನಿಷ್ಠೆಯನ್ನು ಪ್ರಶ್ನಿಸುವವರು ಮೂರ್ಖರು ;...
26-08-25 07:07 pm
Dharmasthala, SIT, NIA, Home Minister: ಧರ್ಮಸ್...
26-08-25 06:06 pm
Dharmasthala Case SIT Officer M.N. Anucheth:...
26-08-25 04:48 pm
DK Shivakumar, BBMP, Potholea: ಬೆಂಗಳೂರಿನಲ್ಲಿ...
26-08-25 02:04 pm
26-08-25 09:02 pm
HK News Desk
ಜಮ್ಮು ಭಾರಿ ಮಳೆಗೆ ಒಂಬತ್ತು ಮಂದಿ ಬಲಿ ; ಹಲವೆಡೆ ಭೂ...
26-08-25 07:39 pm
Trump Immigrant Population: ಟ್ರಂಪ್ ಸಾಮ್ರಾಜ್ಯದ...
24-08-25 01:47 pm
Actor Vijay, Thalapathy; ಟಿವಿಕೆ ಮುಖ್ಯಸ್ಥ, ನಟ...
23-08-25 04:58 pm
Mp Brijesh Chowta, Mangalore: ಆನ್ಲೈನ್ ಗೇಮಿಂಗ್...
22-08-25 10:00 pm
26-08-25 10:57 pm
Mangalore Correspondent
Vasanth Giliyar Hate speech, Case: ಬೆಳ್ತಂಗಡಿ...
26-08-25 10:18 pm
Dharmasthala case, Chinmaya, Mahesh Shetty: ದ...
26-08-25 10:36 am
Mangalore, Rushabh Rao: ವಿಯಟ್ನಾಂ ಫ್ಯಾಷನ್ ಶೋ ಸ...
25-08-25 10:59 pm
Mangalore, Esyasoft, AI, Bajpe: ಬಜ್ಪೆ ; ಎಸ್ಯಾ...
25-08-25 10:44 pm
26-08-25 10:39 pm
HK News Desk
ಟೆಕ್ನಾಲಜಿಯಲ್ಲಿ ಮುಂದಿರುವ ಅಮೆರಿಕದ ಪ್ರಜೆಗಳನ್ನೇ ಯ...
26-08-25 05:24 pm
ದುಬೈನಲ್ಲಿ ಗಂಡ, ಮೈಸೂರಿನಲ್ಲಿ ಪತ್ನಿಯ ಲವ್ವಿ ಡವ್ವಿ...
25-08-25 08:29 pm
ಶಿಕ್ಷಣ ಸಚಿವ ಮಧು ಬಂಗಾರಪ್ಪ ಪಿಎ ಹೆಸರಲ್ಲಿ ವಸೂಲಿ ;...
25-08-25 07:42 pm
How Did Pastor John Shamine and Criminal Mada...
25-08-25 07:31 pm