ಬ್ರೇಕಿಂಗ್ ನ್ಯೂಸ್
08-04-22 05:01 pm HK Desk news ಕ್ರೈಂ
ಲಕ್ನೋ, ಎ.8: ಗೋರಖಪುರದ ಗೋರಖನಾಥ ದೇವಸ್ಥಾನಕ್ಕೆ ನುಗ್ಗಿ ಪೊಲೀಸರಿಗೆ ತಲವಾರಿನಲ್ಲಿ ಹಲ್ಲೆಗೆ ಯತ್ನಿಸಿದ್ದ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಪೊಲೀಸರ ಮೇಲೆ ತಲವಾರು ಬೀಸಿದ್ದ ಆರೋಪಿ ಅಹ್ಮದ್ ಮುರ್ತಾಜಾ ಅಬ್ಬಾಸಿ ಐಸಿಸ್ ಉಗ್ರರಿಂದ ಹನಿಟ್ರ್ಯಾಪ್ ಗೆ ಒಳಗಾಗಿದ್ದ ಎನ್ನುವ ಮಾಹಿತಿ ತನಿಖಾಧಿಕಾರಿಗಳಿಗೆ ಸಿಕ್ಕಿದೆ. ಹೀಗಾಗಿ ಪ್ರಕರಣದ ತನಿಖೆ ಆತನ ಭಯೋತ್ಪಾದನ ಸಂಘಟನೆ ಜೊತೆಗಿನ ನಂಟಿನತ್ತ ತಿರುಗಿದೆ.
ಇಸ್ಲಾಮಿಕ್ ಸ್ಟೇಟ್ ಉಗ್ರರು ಮುರ್ತಾಜಾ ಅಬ್ಬಾಸಿಯನ್ನು ಹನಿ ಟ್ರ್ಯಾಪ್ ಮಾಡಿದ್ದರು ಎನ್ನಲಾಗಿದೆ. ಯುವತಿಯೊಬ್ಬಳು ತನ್ನನ್ನು ಐಎಸ್ ಉಗ್ರರು ಹಿಡಿದಿಟ್ಟಿದ್ದು, ನಿನ್ನ ಸಹಾಯ ಬೇಕೆಂದು ಮೈಲ್ ಮಾಡಿದ್ದಳು. ಅದರಂತೆ, ಅಬ್ಬಾಸಿ 40 ಸಾವಿರ ರೂ. ಹಣವನ್ನು ಆಕೆಗೆ ಕಳಿಸಿದ್ದ. ಆನಂತರ ಇಬ್ಬರ ಇಮೇಲ್ ಸಂಭಾಷಣೆ ಮುಂದುವರಿದಿತ್ತು. ಅಲ್ಲದೆ, ಯುವತಿಯು ಭಾರತಕ್ಕೆ ಬಂದು ಭೇಟಿಯಾಗುವುದಾಗಿ ಹೇಳಿದ್ದಳು.

ಯುವತಿಗೆ ಮೂರು ಬಾರಿ ಹಣ ಕಳಿಸಿದ್ದನ್ನು ಅಬ್ಬಾಸಿ ಒಪ್ಪಿಕೊಂಡಿದ್ದಾನೆ. ಐಸಿಸ್ ವಿಚಾರಗಳಿಂದ ಪ್ರೇರಿತನಾಗಿದ್ದಲ್ಲದೆ, ಸದ್ಯದಲ್ಲೇ ಸಂಘಟನೆ ಸೇರುವುದಾಗಿ ಭರವಸೆ ನೀಡಿದ್ದ. ಅದಕ್ಕೆ ತಯಾರಿಯನ್ನೂ ನಡೆಸಿದ್ದ. ಮುಸ್ಲಿಮರ ಮೇಲಿನ ಹಲ್ಲೆ ಘಟನೆಗಳಿಂದ ಪ್ರಚೋದನೆಗೊಂಡು ಭಾರತ ಸರಕಾರದ ವಿರುದ್ಧ ನಿಂತಿದ್ದ. ಅಲ್ಲದೆ, ಕೇಂದ್ರ ಸರಕಾರ ತರಲುದ್ದೇಶಿಸಿದ್ದ ಸಿಎಎ ಕಾಯ್ದೆಯನ್ನೂ ವಿರೋಧಿಸಿದ್ದ. ಪೊಲೀಸರ ವಿಚಾರಣೆ ವೇಳೆ ಈ ಬಗ್ಗೆ ಅಬ್ಬಾಸಿ ಹೇಳಿದ್ದಾನೆ.

ಎಪ್ರಿಲ್ 3ರಂದು ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರಿಗೆ ಸೇರಿದ ಗೋರಖನಾಥ ದೇವಸ್ಥಾನಕ್ಕೆ ನುಗ್ಗಿದ್ದ ಅಹ್ಮದ್ ಮುರ್ತಾಜ ಅಬ್ಬಾಸಿ ಅಲ್ಲಿದ್ದ ಇಬ್ಬರು ಪೊಲೀಸರಿಗೆ ಹಲ್ಲೆ ಮಾಡಿದ್ದ. ಆಬಳಿಕ ಇತರೇ ಪೊಲೀಸರು ಸೇರಿ ಅಬ್ಬಾಸಿಯನ್ನು ಹಿಡಿದು ಬಂಧಿಸಿದ್ದರು. ಸಿಎಂ ಯೋಗಿ ಆದಿತ್ಯನಾಥ್ ಘಟನೆ ಬಗ್ಗೆ ವಿಶೇಷ ತನಿಖೆಗೆ ಆದೇಶ ಮಾಡಿದ್ದರು. ಅಲ್ಲದೆ, ಘಟನೆಯನ್ನು ಭಯೋತ್ಪದನಾ ಕೃತ್ಯ ಎಂದು ಹೇಳಿದ್ದರು. ಭಯೋತ್ಪಾದನಾ ವಿರೋಧಿ ದಳಕ್ಕೆ ತನಿಖೆಯ ಹೊಣೆಯನ್ನು ಒಪ್ಪಿಸಿದ್ದರು.
A new twist has come up in the Gorakhnath temple attack case after the Uttar Pradesh Police’s anti-terrorist squad uncovered a honey-trap angle.The Gorakhnath temple attacker, Ahmed Murtaza Abbasi, was allegedly honey-trapped by the Islamic State. According to police sources, Abbasi had first received a mail, presumably from a woman.
02-02-26 11:02 pm
HK News Desk
ಮುಖಂಡರ ಬಳಿಕ ಮಕ್ಕಳ ದರ್ಬಾರ್! ದಾವಣಗೆರೆಯಲ್ಲಿ ಕಾಂಗ...
02-02-26 09:52 pm
Manjeshwar Murder: ಆಸ್ತಿ ವಿಚಾರದಲ್ಲಿ ಗಲಾಟೆ ; ಬ...
02-02-26 08:14 pm
ಪೊಲೀಸರಿಗೇ ಸಡ್ಡು ; ಹಾಡಹಗಲೇ ಸಿಲಿಕಾನ್ ಸಿಟಿಯಲ್ಲಿ...
02-02-26 05:12 pm
ಮೂರು ದಶಕ ಕಳೆದರೂ ಮತ್ತೆ ಎಂಡೋ ಭೀತಿ ; ಉತ್ತರ ಕನ್ನಡ...
02-02-26 04:06 pm
02-02-26 10:40 pm
HK News Desk
ಎಪ್ರಿಲ್ 1ರಿಂದ ಹೊಸ ಆದಾಯ ತೆರಿಗೆ ಕಾಯ್ದೆ ಜಾರಿ ; ಐ...
02-02-26 11:59 am
ಕೇಂದ್ರ ಬಜೆಟ್ ; ಏಳು ಹೈಸ್ಪೀಡ್ ರೈಲು ಕಾರಿಡಾರ್ ಘೋಷ...
01-02-26 02:00 pm
ಫೆಬ್ರವರಿ 1ಕ್ಕೆ ದೇಶದ ಕಣ್ಣು ದೆಹಲಿ ಕಡೆ! ಟ್ಯಾಕ್ಸ್...
31-01-26 10:20 pm
ಅಕ್ರಮ ಸಂಬಂಧಕ್ಕೆ ಅಡ್ಡಿಯಾದ ಮಾವ ; ಪೆಟ್ರೋಲ್ ಸುರಿ...
31-01-26 09:38 pm
02-02-26 07:36 pm
Udupi Correspondent
ವಿಜಯೇಂದ್ರ ಕಾರ್ಯಶೈಲಿಗೆ ಮಾಜಿ ಸಂಸದ ನಳಿನ್ ಕುಮಾರ್...
02-02-26 05:09 pm
'ನನ್ನ ಭಾಷಣದ ಕಾರಣಕ್ಕೆ ಗಲಾಟೆ, ಸಂಘರ್ಷ ಆಗಿದ್ದಿದೆಯ...
01-02-26 10:29 pm
Karnataka High Court, Mahesh Shetty Timarodi:...
01-02-26 07:52 pm
ಸಿಜೆ ರಾಯ್ ಆತ್ಮಹತ್ಯೆ ಪ್ರಕರಣ ; ಐಟಿ ರಾಜಕೀಯ ಕಾರಣಕ...
31-01-26 08:40 pm
02-02-26 10:37 pm
Bangalore Correspondent
ಉಡುಪಿಯಲ್ಲಿ ಕಾಂಗ್ರೆಸ್ ಮುಖಂಡನ ಮೇಲೆ ತಲ್ವಾರು ದಾಳಿ...
02-02-26 12:16 pm
Kishor Salve Arrest: ಚೋರ್ಲಾ ಘಾಟ್ 400 ಕೋಟಿ ದರೋ...
01-02-26 03:41 pm
ಅಂದು ರೀಟಾ, ಇಂದು ಸಾದಿಯಾ! ಮದುವೆ ಬಳಿಕ ಬಲವಂತದ ಮತ...
31-01-26 01:33 pm
ಸಾವಿರಾರು ಕೋಟಿಗಳ ಒಡೆಯ ಸಿ.ಜೆ. ರಾಯ್ ಯಾರು?ಕಾನ್ಫಿಡ...
31-01-26 12:12 pm