ಬ್ರೇಕಿಂಗ್ ನ್ಯೂಸ್
17-03-22 06:54 pm Mangalore Correspondent ಕ್ರೈಂ
ಕೊಣಾಜೆ, ಮಾ.17: ಅಂಗನವಾಡಿಯ ಗ್ಯಾಸ್ ಸ್ಟೌವ್ ರಿಪೇರಿಗೆಂದು ಬಂದಾತ ಅಂಗನವಾಡಿ ಸಹಾಯಕಿ ಮಹಿಳೆಯ ಕೈ ಎಳೆದು ಮಾನಭಂಗಕ್ಕೆ ಯತ್ನಿಸಿದ್ದು ಆರೋಪಿಯನ್ನ ಕೊಣಾಜೆ ಪೊಲೀಸರು ಬಂಧಿಸಿದ್ದಾರೆ.
ಹರೇಕಳ ಗ್ರಾಮದ ಅಂಗನವಾಡಿಯ ಸಹಾಯಕಿ ಅವಿವಾಹಿತ ಮಹಿಳೆಗೆ ಅದೇ ಗ್ರಾಮದ ಆಲಡ್ಕ ನಿವಾಸಿ ನಿಝಾಮುದ್ದೀನ್(31) ಎಂಬಾತ ಕೈ ಎಳೆದು ಮಾನಭಂಗಕ್ಕೆ ಯತ್ನಿಸಿದ್ದಾನೆ. ಈ ಬಗ್ಗೆ ಪೊಲೀಸ್ ದೂರು ದಾಖಲಾಗಿದ್ದರಿಂದ ಆರೋಪಿಯನ್ನ ಕೊಣಾಜೆ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.
ಅಂಗನವಾಡಿಯಲ್ಲಿದ್ದ ಗ್ಯಾಸ್ ಸ್ಟೌವ್ ಕೆಟ್ಟು ದುರಸ್ತಿಗೆ ಬಂದ ಕಾರಣ ಅಂಗನವಾಡಿ ಟೀಚರ್ ಸಲಹೆಯಂತೆ ಸಹಾಯಕಿ ಗ್ಯಾಸ್ ಸ್ಟೌವ್ ರಿಪೇರಿ ಮಾಡುವ ಪರಿಚಯದ ಯುವಕ ನಿಝಾಮ್ ಅಂಗಡಿಗೆ ಕರೆ ಮಾಡಿ ತಿಳಿಸಿದ್ದರು. ಅದರಂತೆ ಬುಧವಾರ ಮಧ್ಯಾಹ್ನ ಆತ ಅಂಗನವಾಡಿಗೆ ಬಂದಿದ್ದಾನೆ. ಶಿಕ್ಷಕಿ ಆತನಿಗೆ ಅಡುಗೆ ಕೊಣೆಯಲ್ಲಿದ್ದ ಗ್ಯಾಸ್ ಸ್ಟೌವ್ ತೋರಿಸಿ ದುರಸ್ತಿ ಮಾಡಿ ತಾ ಎಂದು ಹೇಳಿ ಮಕ್ಕಳಿರುವ ಕೊಠಡಿಗೆ ತೆರಳಿದ್ದಾರೆ. ಆರೋಪಿ ನಿಝಾಮ್ ಚೀಲದಲ್ಲಿ ಗ್ಯಾಸ್ ಸ್ಟೌವ್ ತುಂಬಿಸುವಾಗ ಪಕ್ಕದಲ್ಲಿದ್ದ ಅಡುಗೆ ಸಹಾಯಕಿಯ ಕೈ ಹಿಡಿದು ಎಳೆದಿದ್ದು ಆಕೆ ಆತನ ಕೈಯಿಂದ ತಪ್ಪಿಸಿಕೊಂಡಿದ್ದಾರೆ. ಆಬಳಿಕ ಬೇಸರ ಮಾಡಬೇಡ ಎಂದು ಹೇಳಿದ್ದಾಗಿ ಯುವತಿ ದೂರಿದ್ದಾರೆ. ಆತ ತೆರಳಿದ ತಕ್ಷಣ ನಡೆದ ವಿಷಯವನ್ನು ಸಂತ್ರಸ್ತೆ ಶಿಕ್ಷಕಿಯ ಗಮನಕ್ಕೆ ತಂದಿದ್ದು ಶಿಕ್ಷಕಿ ಅಣ್ಣಂದಿರಿಗೆ ತಿಳಿಸುವಂತೆ ಸೂಚಿಸಿದ್ದರು. ಇಂದು ಸಂತ್ರಸ್ತೆ ಅಂಗನವಾಡಿ ಸಹಾಯಕಿ ಕೊಣಾಜೆ ಠಾಣೆಗೆ ತೆರಳಿ ದೂರು ನೀಡಿದ್ದು ಆರೋಪಿಯನ್ನ ಕೊಣಾಜೆ ಠಾಣೆ ಪೊಲೀಸರು ಕ್ಷಿಪ್ರವಾಗಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.
A government teacher from Konaje in Mangalore was sexually harassed by a Gas repair guy who came to the house to repair the gas has been arrested by Konaje Police. The arrested has been identified as Nizamuddin (31).
19-09-26 05:44 pm
HK News Staffer
B K Hariprasad: ಉಮರ್ ಖಾಲಿದ್ ರಾಷ್ಟ್ರೀಯವಾದಿ ದೇಶ...
17-09-26 04:13 pm
ಚಿತ್ರರಂಗದ ಸಾರ್ವಕಾಲಿಕ ಶ್ರೇಷ್ಠ ನಟ ಅನಂತನಾಗ್ ಗೆ '...
16-09-26 10:40 pm
Tulu Language, Shivraj Tangadagi: ತುಳುವಿಗೆ 2ನ...
16-09-26 01:51 pm
Pradeep Eshwar, Pratap Simha: ಪೊಲೀಸ್ ಠಾಣೆಗೆ...
15-09-26 09:13 pm
19-09-26 05:40 pm
HK News Staffer
Mamata Banerjee, Sanchita Pradhan, Rejinagar:...
19-09-26 03:37 pm
ಮುಂಬೈನಲ್ಲಿ ಕುಡಿಯುವ ನೀರಿಗೆ ತೀವ್ರ ಬರ ; ಸಮುದ್ರದ...
13-09-26 09:00 pm
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
19-09-26 09:54 pm
HK News Staffer
ಬೆಳ್ಳಂಬೆಳಗ್ಗೆ ಮೀನುಗಾರಿಕಾ ಬಂದರಿಗೆ ಸಿಎಂ ಡಿಕೆಶಿ...
19-09-26 10:11 am
ಮಂಗಳೂರಿನಲ್ಲಿ ಮೊದಲ ಸಚಿವ ಸಂಪುಟ ಸಭೆ ; 32,611 ಕೋಟ...
18-09-26 07:30 pm
Puttur Medical College, Dakshina Kannada, Man...
18-09-26 06:08 pm
Tulu second official language: ತುಳುನಾಡಿನ ದಶಕಗ...
18-09-26 04:46 pm
19-09-26 09:57 pm
HK News Staffer
ಕೋಕಾ ಜಾಮೀನು ಬೆನ್ನಲ್ಲೇ ರೌಡಿಶೀಟರ್ ಭರತ್ ಕುಮ್ಡೇಲು...
19-09-26 09:48 pm
Bangalore,Crime: ಕೋರ್ಟ್ ಕೊಠಡಿಯಲ್ಲೇ ಕುಡಿದು ರಂಪ...
17-09-26 02:22 pm
Bangalore Murder, Crime: ಪ್ರೀತಿಸಿ ಮದುವೆಯಾಗಿದ್...
17-09-26 01:56 pm
Bangalore kidnap, Crime: ಬೆಂಗಳೂರಿನಲ್ಲಿ ಶಾಕ್...
17-09-26 12:35 pm