ಬ್ರೇಕಿಂಗ್ ನ್ಯೂಸ್
16-03-22 08:34 pm Mangalore Correspondent ಕ್ರೈಂ
ಮಂಗಳೂರು, ಮಾ.16: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಜೀವ ಬಾಂಬ್ ಇಟ್ಟು ಭೀತಿ ಮೂಡಿಸಿದ್ದ ಆರೋಪಿ ಆದಿತ್ಯ ರಾವ್ ಗೆ ದ.ಕ. ಜಿಲ್ಲಾ ನ್ಯಾಯಾಲಯ 20 ವರ್ಷಗಳ ಶಿಕ್ಷೆಯನ್ನು ಘೋಷಿಸಿದೆ.
ಆರೋಪಿ ಆದಿತ್ಯ ರಾವ್ 2020ರ ಜನವರಿ 20 ರಂದು ಬಜ್ಪೆ ಏರ್ಪೋರ್ಟ್ ಹೊರಭಾಗದಲ್ಲಿ ಬಾಂಬ್ ಇಟ್ಟು ದೇಶದ ಗಮನ ಸೆಳೆದಿದ್ದ. ಬೆಳಗ್ಗೆ 9 ಗಂಟೆ ಸುಮಾರಿಗೆ ಸಿಐಎಸ್ಎಫ್ ಭದ್ರತಾ ಸಿಬಂದಿ ತಪಾಸಣೆ ಸಂದರ್ಭದಲ್ಲಿ ಬಾಂಬ್ ಪತ್ತೆಯಾಗಿತ್ತು. ಬಳಿಕ ಬಾಂಬ್ ನಿಷ್ಕ್ರಿಯ ತಂಡದಿಂದ ಕೆಂಜಾರು ಮೈದಾನದಲ್ಲಿ ಅದನ್ನು ಸ್ಫೋಟಿಸಿ ನಿಷ್ಕ್ರಿಯ ಮಾಡಲಾಗಿತ್ತು. ರಾಷ್ಟ್ರದ ಗಮನ ಸೆಳೆದಿದ್ದ ಈ ಪ್ರಕರಣದಲ್ಲಿ ಆರೋಪಿ ಬಗ್ಗೆ ಸಾಕಷ್ಟು ಕುತೂಹಲ ಉಂಟಾಗಿತ್ತು. ಭಯೋತ್ಪಾದಕ ಕೃತ್ಯ ಎನ್ನುವ ರೀತಿಯೂ ಬಿಂಬಿತವಾಗಿತ್ತು.
ಆರೋಪಿ ಆದಿತ್ಯ ರಾವ್, ಲಾರಿ ಮೂಲಕ ಬೆಂಗಳೂರಿಗೆ ಪ್ರಯಾಣಿಸಿ ಮರುದಿನ ಅಲ್ಲಿನ ಕಮಿಷನರ್ ಕಚೇರಿಗೆ ತೆರಳಿ ತಾನೇ ಮಂಗಳೂರಿನಲ್ಲಿ ಬಾಂಬ್ ಇಟ್ಟ ಆರೋಪಿ ಎಂದು ಹೇಳಿಕೊಂಡಿದ್ದ. ಅದಾಗಲೇ ಬಾಂಬ್ ಪ್ರಕರಣ ದೇಶದ ಗಮನ ಸೆಳೆದಿದ್ದರಿಂದ ಈತನ ಮಾತು ಕೇಳಿದ ಸಿಬಂದಿ, ಒಂದು ಕ್ಷಣ ನಂಬದಾಗಿದ್ದರು. ಅದಾಗಲೇ ಏರ್ಪೋರ್ಟ್ ಆವರಣದಲ್ಲಿ ಸಿಸಿಟಿವಿಯಲ್ಲಿ ದಾಖಲಾಗಿದ್ದ ಆರೋಪಿ ಚಹರೆ ಟಿವಿಗಳಲ್ಲೂ ಬಂದಿತ್ತು. ಈ ಹಿಂದಿನ ಕೃತ್ಯದ ಆರೋಪಿಗಳ ಬಗ್ಗೆ ತಾಳೆ ಹಾಕಿ ನೋಡುವ ಯತ್ನ ನಡೆದಿತ್ತು. ಅದಾಗಲೇ ಉಡುಪಿ ಮೂಲದ ಆದಿತ್ಯ ರಾವ್ ತನ್ನ ಕೃತ್ಯ ಒಪ್ಪಿಕೊಂಡಿದ್ದ. ತನಗೆ ಕೆಲಸ ಸಿಗದಂತೆ ಮಾಡಿ, ಏರ್ಪೋರ್ಟ್ ಸಿಬಂದಿ ಕಿರುಕುಳ ನೀಡಿದ್ದಾರೆಂದು ಹೇಳಿ ಈ ರೀತಿಯ ಕೃತ್ಯ ಎಸಗಿದ್ದಾಗಿ ಆದಿತ್ಯ ರಾವ್ ಹೇಳಿಕೊಂಡಿದ್ದ. ತನ್ನ ಕೃತ್ಯದ ಬಗ್ಗೆ ಯಾವುದೇ ಪಶ್ಚತ್ತಾಪವೂ ಆತನಿಗಿರಲಿಲ್ಲ.
ಈ ಬಗ್ಗೆ ಸಿಐಎಸ್ಎಫ್ ವಿಭಾಗದ ಇನ್ಸ್ ಪೆಕ್ಟರ್ ಮಾನಸ್ ನಾಯಕ್ ನೀಡಿದ ದೂರಿನಂತೆ ಬಜ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆಗಿನ ಮಂಗಳೂರು ಉತ್ತರ ಎಸಿಪಿ ಕೆಯು ಬೆಳ್ಳಿಯಪ್ಪ ತನಿಖೆ ನಡೆಸಿ, ಆರೋಪಿ ವಿರುದ್ಧ ವಿಚಾರಣೆ ನಡೆಸಿ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಎರಡು ವರ್ಷಗಳ ಕಾಲ ನಾಲ್ಕನೇ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ವಿಚಾರಣೆ ನಡೆದಿದ್ದು 107 ಮಂದಿಯ ಸಾಕ್ಷಿಗಳನ್ನು ಪರಿಗಣಿಸಿ ಆರೋಪಿ ತಪ್ಪಿತಸ್ಥ ಎಂದು ಘೋಷಿಸಲಾಗಿತ್ತು.
ಸ್ಫೋಟಕ ಕಾಯ್ದೆ ಪ್ರಕಾರ, 5 ವರ್ಷಗಳ ಕಠಿಣ ಶಿಕ್ಷೆ ಹಾಗೂ ಹತ್ತು ಸಾವಿರ ರೂ. ದಂಡ ವಿಧಿಸಲಾಗಿದೆ. ಅಲ್ಲದೆ, ಬಾಂಬ್ ಇಟ್ಟು ಭಯೋತ್ಪಾದಕ ಕೃತ್ಯ ನಡೆಸಿದ್ದಕ್ಕಾಗಿ ದೇಶ ದ್ರೋಹ ಕಾಯ್ದೆಯಡಿ 20 ವರ್ಷಗಳ ಶಿಕ್ಷೆ ಮತ್ತು ಹತ್ತು ಸಾವಿರ ದಂಡ ವಿಧಿಸಲಾಗಿದೆ. ಎರಡೂ ಶಿಕ್ಷೆಯನ್ನು ಒಂದೇ ಅವಧಿಯಲ್ಲಿ ಅನುಭವಿಸಲು ಅವಕಾಶ ನೀಡಲಾಗಿದೆ. ಈಗಾಗಲೇ ಎರಡು ವರ್ಷಗಳಿಂದ ಆರೋಪಿ ಆದಿತ್ಯ ರಾವ್ ಮಂಗಳೂರಿನ ಜಿಲ್ಲಾ ಕಾರಾಗೃಹದಲ್ಲಿದ್ದು, ಒಟ್ಟು ಶಿಕ್ಷೆಯ ಅವಧಿಯಲ್ಲಿ ಅದನ್ನು ಕಡಿತಗೊಳಿಸಬಹುದು.
ಕುಡ್ಲ ರೆಸ್ಟೋರೆಂಟ್ ನಲ್ಲಿ ರೆಡಿಯಾಗಿತ್ತು ಬಾಂಬ್ !
ಆರೋಪಿ ಆದಿತ್ಯ ರಾವ್, ಬಾಂಬ್ ಇಡುವುದಕ್ಕಾಗಿ ಇಂಟರ್ನೆಟ್ ನಲ್ಲಿ ಸಾಕಷ್ಟು ಹುಡುಕಾಟ ನಡೆಸಿದ್ದ. ಅಮೆಜಾನ್ ಮೂಲಕ ಡಿಟೋನೇಟರ್, ಬಾಂಬ್ ತಯಾರಿಗೆ ಬಳಸುವ ಪೌಡರನ್ನು ತರಿಸಿಕೊಂಡಿದ್ದ. ಮಂಗಳೂರಿನ ಕುಡ್ಲ ರೆಸ್ಟೋರೆಂಟ್ ನಲ್ಲಿ ಅಡುಗೆ ತಯಾರಿ ಸಹಾಯಕನಾಗಿ ಕೆಲಸ ಮಾಡುತ್ತಿದ್ದಾಗಲೇ ಇದೆಲ್ಲವನ್ನೂ ಮಾಡಿದ್ದು ಅಲ್ಲಿದ್ದುಕೊಂಡೇ ಬಾಂಬ್ ಜೋಡಣೆ ಮಾಡಿದ್ದ. ಅಲ್ಲಿಂದ ಕಪ್ಪು ಬ್ಯಾಗಿನಲ್ಲಿರಿಸಿ ಆಟೋದಲ್ಲಿ ಏರ್ಪೋರ್ಟ್ ಬಳಿಯ ಕೆಂಜಾರಿನ ವರೆಗೆ ತೆರಳಿದ್ದು ಅಲ್ಲಿಂದ ಮತ್ತೊಂದು ಆಟೋದಲ್ಲಿ ಹೋಗಿ ಏರ್ಪೋರ್ಟ್ ನಿಂದ ಹೊರಗೆ ಬರುವ ಮೆಟ್ಟಿಲ ಬಳಿ ಬಾಂಬ್ ಇದ್ದ ಬ್ಯಾಗನ್ನು ಇರಿಸಿ ಬಂದಿದ್ದ.

ಬೆಂಗಳೂರು ಏರ್ಪೋರ್ಟ್ ನಲ್ಲಿ ಕೆಲಸಕ್ಕೆ ಸಿಗದ್ದಕ್ಕೆ ಹಗೆತನ !
ಅದಕ್ಕೂ ಹಿಂದೆ, ಬೆಂಗಳೂರು ಏರ್ಪೋರ್ಟ್ ನಲ್ಲಿ ಸೆಕ್ಯುರಿಟಿ ಸುಪರ್ ವೈಸರ್ ಕೆಲಸಕ್ಕಾಗಿ ಆದಿತ್ಯ ರಾವ್ ಅರ್ಜಿ ಹಾಕಿದ್ದ. ಆದರೆ ಅಲ್ಲಿ ಕೆಲಸ ಸಿಗದೆ ಅರ್ಜಿ ತಿರಸ್ಕೃತ ಆಗಿತ್ತು. ಇದರಿಂದ ಸಿಟ್ಟಾಗಿದ್ದ ಆದಿತ್ಯ ರಾವ್, ಬೆಂಗಳೂರು ವಿಮಾನ ನಿಲ್ದಾಣ ಮತ್ತು ರೈಲು ನಿಲ್ದಾಣದಲ್ಲಿ ಬಾಂಬ್ ಇದೆಯೆಂದು ಹುಸಿ ಕರೆ ಮಾಡಿ ಬೆಂಗಳೂರಿನ ಪೊಲೀಸರಿಗೆ ಸಿಕ್ಕಿಬಿದ್ದಿದ್ದ. ಅದಕ್ಕಾಗಿ ಆ ಪ್ರಕರಣದಲ್ಲಿ ಆರೋಪಿ ಆದಿತ್ಯ ರಾವ್ ಒಂದು ವರ್ಷ ಜೈಲು ಶಿಕ್ಷೆಯನ್ನೂ ಅನುಭವಿಸಿದ್ದ. ಜೈಲಿನಿಂದ ಹೊರಬಂದ ಆದಿತ್ಯ, ಆಬಳಿಕ ಸರಕಾರ ಮತ್ತು ಆಡಳಿತದ ವಿರುದ್ಧ ಸಿಟ್ಟು ಮತ್ತು ಹಗೆತನ ಇಟ್ಟುಕೊಂಡಿದ್ದ. ತನಗೆ ಕೆಲಸ ಆಗಿದ್ದರೂ, ಬೇಕೆಂದೇ ನಿರಾಕರಿಸಿ ಏರ್ಪೋರ್ಟ್ ಸಿಬಂದಿ ಅನ್ಯಾಯ ಮಾಡಿದ್ದಾರೆ, ಅವರಿಗೆ ಒಂದು ಗತಿ ಕಾಣಿಸಬೇಕೆಂದು ಬಾಂಬ್ ಇಡುವ ಯೋಜನೆ ಹಾಕಿದ್ದ. ಹೊಟೇಲ್ ಸೇರಿದಂತೆ ಬೇರೆ ಬೇರೆ ಕಡೆ ಕೆಲಸದಲ್ಲಿದ್ದಾಗ ಇದನ್ನೇ ತಲೆಯಲ್ಲಿ ಯೋಚಿಸಿ, ಬಾಂಬ್ ತಯಾರಿ ಬಗ್ಗೆ ಕಲಿತು ಯೋಜನೆ ಕಾರ್ಯಗತ ಮಾಡಿದ್ದ.
The fourth judicial district court has sentenced Aditya Rao to 20 years rigorous imprisonment and slapped on him a fine of Rs 10,000 in the airport bomb planting case.
02-02-26 11:02 pm
HK News Desk
ಮುಖಂಡರ ಬಳಿಕ ಮಕ್ಕಳ ದರ್ಬಾರ್! ದಾವಣಗೆರೆಯಲ್ಲಿ ಕಾಂಗ...
02-02-26 09:52 pm
Manjeshwar Murder: ಆಸ್ತಿ ವಿಚಾರದಲ್ಲಿ ಗಲಾಟೆ ; ಬ...
02-02-26 08:14 pm
ಪೊಲೀಸರಿಗೇ ಸಡ್ಡು ; ಹಾಡಹಗಲೇ ಸಿಲಿಕಾನ್ ಸಿಟಿಯಲ್ಲಿ...
02-02-26 05:12 pm
ಮೂರು ದಶಕ ಕಳೆದರೂ ಮತ್ತೆ ಎಂಡೋ ಭೀತಿ ; ಉತ್ತರ ಕನ್ನಡ...
02-02-26 04:06 pm
02-02-26 10:40 pm
HK News Desk
ಎಪ್ರಿಲ್ 1ರಿಂದ ಹೊಸ ಆದಾಯ ತೆರಿಗೆ ಕಾಯ್ದೆ ಜಾರಿ ; ಐ...
02-02-26 11:59 am
ಕೇಂದ್ರ ಬಜೆಟ್ ; ಏಳು ಹೈಸ್ಪೀಡ್ ರೈಲು ಕಾರಿಡಾರ್ ಘೋಷ...
01-02-26 02:00 pm
ಫೆಬ್ರವರಿ 1ಕ್ಕೆ ದೇಶದ ಕಣ್ಣು ದೆಹಲಿ ಕಡೆ! ಟ್ಯಾಕ್ಸ್...
31-01-26 10:20 pm
ಅಕ್ರಮ ಸಂಬಂಧಕ್ಕೆ ಅಡ್ಡಿಯಾದ ಮಾವ ; ಪೆಟ್ರೋಲ್ ಸುರಿ...
31-01-26 09:38 pm
02-02-26 07:36 pm
Udupi Correspondent
ವಿಜಯೇಂದ್ರ ಕಾರ್ಯಶೈಲಿಗೆ ಮಾಜಿ ಸಂಸದ ನಳಿನ್ ಕುಮಾರ್...
02-02-26 05:09 pm
'ನನ್ನ ಭಾಷಣದ ಕಾರಣಕ್ಕೆ ಗಲಾಟೆ, ಸಂಘರ್ಷ ಆಗಿದ್ದಿದೆಯ...
01-02-26 10:29 pm
Karnataka High Court, Mahesh Shetty Timarodi:...
01-02-26 07:52 pm
ಸಿಜೆ ರಾಯ್ ಆತ್ಮಹತ್ಯೆ ಪ್ರಕರಣ ; ಐಟಿ ರಾಜಕೀಯ ಕಾರಣಕ...
31-01-26 08:40 pm
02-02-26 10:37 pm
Bangalore Correspondent
ಉಡುಪಿಯಲ್ಲಿ ಕಾಂಗ್ರೆಸ್ ಮುಖಂಡನ ಮೇಲೆ ತಲ್ವಾರು ದಾಳಿ...
02-02-26 12:16 pm
Kishor Salve Arrest: ಚೋರ್ಲಾ ಘಾಟ್ 400 ಕೋಟಿ ದರೋ...
01-02-26 03:41 pm
ಅಂದು ರೀಟಾ, ಇಂದು ಸಾದಿಯಾ! ಮದುವೆ ಬಳಿಕ ಬಲವಂತದ ಮತ...
31-01-26 01:33 pm
ಸಾವಿರಾರು ಕೋಟಿಗಳ ಒಡೆಯ ಸಿ.ಜೆ. ರಾಯ್ ಯಾರು?ಕಾನ್ಫಿಡ...
31-01-26 12:12 pm