ಬ್ರೇಕಿಂಗ್ ನ್ಯೂಸ್
16-03-22 05:02 pm Bengaluru Correspondent ಕ್ರೈಂ
ಬೆಂಗಳೂರು, ಮಾ.16 : ನಕಲಿ ಛಾಪಾ ಕಾಗದ ಹಾಗು ಸಬ್ ರಿಜಿಸ್ಟ್ರಾರ್ ಕಚೇರಿಯ ನಕಲಿ ಸೀಲು ಬಳಸಿ ಕೋಟಿ ಬೆಲೆಯ ಸೈಟ್ ಗಳ ನಕಲಿ ದಾಖಲಾತಿಗಳನ್ನು ಸೃಷ್ಟಿಸಿ ಮಾರಾಟ ಮಾಡುತ್ತಿದ್ದ ಜಾಲವನ್ನು ಯಲಹಂಕ ಉಪನಗರ ಪೊಲೀಸರು ಪತ್ತೆಹಚ್ಚಿದ್ದು ಎಂಟು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.
ಪ್ರದೀಪ್, ಧರ್ಮಲಿಂಗಂ, ಮಂಜುನಾಥ್, ಯಾರಬ್, ವೈ. ಆರ್ ಮಂಜುನಾಥ್, ಅಬ್ದುಲ್ ಹಾಗೂ ಶಬಾನ ಬಂಧಿತರು. ಇವರು ಗ್ಯಾಂಗ್ ಕಟ್ಟಿಕೊಂಡು ನಕಲಿ ಸೀಲ್ ಮತ್ತು ದಾಖಲಾತಿಗಳನ್ನು ಸೃಷ್ಟಿಸಿ ಸೈಟ್ ಗಳನ್ನು ಅದರ ಅಸಲಿ ಮಾಲೀಕರಿಗೆ ತಿಳಿಯದಂತೆ ಮಾರಾಟ ಮಾಡ್ತಿದ್ದರು. ಬಂಧಿತರಿಂದ ಒಟ್ಟು ಎಂಟು ಪ್ರಕರಣಗಳು ಬಯಲಿಗೆ ಬಂದಿದ್ದು ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಆರೋಪಿಗಳು ರಾಜಾರೋಷವಾಗಿ ಹಗಲು ದರೋಡೆ ನಡೆಸಲು ಇವರಿಗೆ ಬೆಂಗಾವಲಾಗಿ ನಟೋರಿಯಸ್ ರೌಡಿ ಶೀಟರ್ ರಾಮಯ್ಯ ಅಲಿಯಾಸ್ ಆಟೋ ರಾಮ ಬೆನ್ನಿಗೆ ನಿಂತಿದ್ದ. ಆರೋಪಿಗಳ ವಿಚಾರಣೆಯಲ್ಲಿ ಎರಡು ಕೋಟಿ ಹಣದ ವ್ಯವಹಾರ ಬೆಳಕಿಗೆ ಬಂದಿದೆ. ವಿದೇಶದಲ್ಲಿ ಇರುವ ಸೈಟ್ ಮಾಲೀಕರನ್ನು ಗುರುತಿಸುತ್ತಿದ್ದ ಗ್ಯಾಂಗ್, ಅದಕ್ಕೆ ಸಂಬಂಧಿಸಿದ 50 ವರ್ಷದ ಹಿಂದಿನ ಹಳೆ ದಾಖಲೆ, ಛಾಪಾ ಕಾಗದಗಳನ್ನು ತಯಾರಿಸುತ್ತಿದ್ದರು. ಸೈಟ್ ಯಾರ ಹೆಸರಿನಲ್ಲಿ ಇದೆ, ಅವರಿಗೆ ಯಾರ ಹೆಸರಿನಿಂದ ಸೈಟ್ ಬಂದಿತ್ತು ಎಂಬುದನ್ನು ಗುರುತಿಸಿ, ಬಳಿಕ ಈ ಸೈಟ್ ಅನ್ನು ಮೂಲ ಮಾಲೀಕರು ನಮಗೆ ವೀಲು ಮಾಡಿದ್ದಾರೆ ಎಂದು ಹೇಳಿ ಯಾಮಾರಿಸುತ್ತಿದ್ದರು. ನಕಲಿ ದಾಖಲೆಗಳನ್ನೇ ಇಟ್ಟುಕೊಂಡು ಸೈಟ್ ಮಾರಾಟ ಮಾಡುತ್ತಿದ್ದರು. ನಕಲಿ ದಾಖಲೆಗಳನ್ನೇ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಅಸಲಿ ಎಂದು ಬಿಂಬಿಸಿ, ಹಣ ಕೊಟ್ಟು ಅಧಿಕೃತವಾಗಿ ರಿಜಿಸ್ಟರ್ ಮಾಡಿಸುತ್ತಿದ್ದರು. ಇವೆಲ್ಲ ದಲ್ಲಾಳಿ ಕೆಲಸಗಳಿಗೆ ರೌಡಿ ಆಟೋ ರಾಮ ಬೆಂಬಲ ನೀಡುತ್ತಿದ್ದ.
Bangalore Eighth arrested for creating fake government seal and selling properties. The operation was lead by Yelankha police.
26-08-25 06:06 pm
Bangalore Correspondent
Dharmasthala Case SIT Officer M.N. Anucheth:...
26-08-25 04:48 pm
DK Shivakumar, BBMP, Potholea: ಬೆಂಗಳೂರಿನಲ್ಲಿ...
26-08-25 02:04 pm
SIT Issues Notice, Sujatha Bhat: ಸುಳ್ಳಜ್ಜಿ ಸು...
25-08-25 10:55 pm
K N Rajanna, Dk Shivakumar: ಅವ್ರು ಆರೆಸ್ಸೆಸ್ ಗ...
25-08-25 06:07 pm
24-08-25 01:47 pm
HK News Desk
Actor Vijay, Thalapathy; ಟಿವಿಕೆ ಮುಖ್ಯಸ್ಥ, ನಟ...
23-08-25 04:58 pm
Mp Brijesh Chowta, Mangalore: ಆನ್ಲೈನ್ ಗೇಮಿಂಗ್...
22-08-25 10:00 pm
ಪತ್ನಿಯ ಪದವಿ ಪ್ರದಾನ ಸಮಾರಂಭಕ್ಕೆ ಬ್ರಿಟನ್ ತೆರಳಲು...
22-08-25 08:07 pm
Another Security, Parliament, Arrest: ಸಂಸತ್ತಿ...
22-08-25 02:00 pm
26-08-25 10:36 am
Mangalore Correspondent
Mangalore, Rushabh Rao: ವಿಯಟ್ನಾಂ ಫ್ಯಾಷನ್ ಶೋ ಸ...
25-08-25 10:59 pm
Mangalore, Esyasoft, AI, Bajpe: ಬಜ್ಪೆ ; ಎಸ್ಯಾ...
25-08-25 10:44 pm
Sameer MD, Latest News: ಬುರುಡೆ ರಹಸ್ಯ ; ಬೆಳ್ತಂ...
25-08-25 10:28 pm
Elevate Brand Mangalore 2025: 'ಎಲಿವೇಟ್ ಬ್ರ್ಯಾ...
25-08-25 05:24 pm
26-08-25 05:24 pm
HK News Desk
ದುಬೈನಲ್ಲಿ ಗಂಡ, ಮೈಸೂರಿನಲ್ಲಿ ಪತ್ನಿಯ ಲವ್ವಿ ಡವ್ವಿ...
25-08-25 08:29 pm
ಶಿಕ್ಷಣ ಸಚಿವ ಮಧು ಬಂಗಾರಪ್ಪ ಪಿಎ ಹೆಸರಲ್ಲಿ ವಸೂಲಿ ;...
25-08-25 07:42 pm
How Did Pastor John Shamine and Criminal Mada...
25-08-25 07:31 pm
Online Fraud, cyber, Mangalore : ರಸಗೊಬ್ಬರ ಕಂಪ...
25-08-25 04:39 pm