ಬ್ರೇಕಿಂಗ್ ನ್ಯೂಸ್
04-03-22 12:33 pm Mangalore Correspondent ಕ್ರೈಂ
ಪುತ್ತೂರು, ಮಾ.4: ತಾಯಿ, ಮಕ್ಕಳು ಉರೂಸು ಕಾರ್ಯಕ್ರಮಕ್ಕೆ ಹೋಗಿದ್ದ ಸಂದರ್ಭದಲ್ಲಿ ಮನೆಗೆ ನುಗ್ಗಿದ ಕಳ್ಳರು ಕಪಾಟು ಒಡೆದು ಚಿನ್ನಾಭರಣ, ನಗದು ಲೂಟಿಗೈದ ಘಟನೆ ಕಡಬ ತಾಲೂಕಿನ ಕೊಯ್ಲ ಗ್ರಾಮದ ಗಂಡಿಬಾಗಿಲು ಎಂಬಲ್ಲಿ ನಡೆದಿದೆ.
ಅಬುಬಕ್ಕರ್ ಎಂಬವರ ಪತ್ನಿ ಮರಿಯಮ್ಮ ತನ್ನ ಇಬ್ಬರು ಹೆಣ್ಣು ಮಕ್ಕಳೊಂದಿಗೆ ಮನೆಯಲ್ಲಿ ವಾಸವಿದ್ದು ಗಂಡ ಮತ್ತು ಮೂವರು ಹೊರ ಜಿಲ್ಲೆಗಳಲ್ಲಿ ಕೆಲಸ ಮಾಡಿಕೊಂಡಿದ್ದಾರೆ. ನಿನ್ನೆ ಸಂಜೆ 6 ಗಂಟೆಗೆ ಮರಿಯಮ್ಮ ತನ್ನ ಇಬ್ಬರು ಹೆಣ್ಣು ಮಕ್ಕಳೊಂದಿಗೆ ರಾಮಕುಂಜ ಗ್ರಾಮದ ಆತೂರು ಎಂಬಲ್ಲಿ ಬದ್ರಿಯಾ ಜುಮ್ಮಾ ಮಸೀದಿಯಲ್ಲಿ ನಡೆಯುತ್ತಿದ್ದ ದ್ಸಿಕ್ರ್ ಹಲ್ಕಾ ವಾರ್ಷಿಕ ಉತ್ಸವಕ್ಕೆಂದು ತೆರಳಿದ್ದರು. ರಾತ್ರಿ 11 ಗಂಟೆಗೆ ಮರಳಿ, ಮನೆಯ ಬೀಗ ತೆಗೆದು ನೋಡಿದಾಗ ಬಟ್ಟೆ ಬರೆಗಳು ಚೆಲ್ಲಾಪಿಲ್ಲಿಯಾಗಿದ್ದವು. ಮನೆಯ ಮೇಲಿನ ಸಿಮೆಂಟ್ ಶೀಟನ್ನು ತೆಗೆದು ಯಾರೋ ಮನೆಗೆ ನುಗ್ಗಿದ್ದು ಕಪಾಟಿನಲ್ಲಿದ್ದ 40 ಗ್ರಾಮ್ ತೂಕದ ಚಿನ್ನದ ನೆಕ್ಲೆಸ್, 20 ಗ್ರಾಂ ತೂಕದ ಚಿನ್ನದ ಫಿಟ್ ನೆಕ್ಲೆಸ್, 10 ಗ್ರಾಮ್ ತೂಕದ ಐದು ಚಿನ್ನದ ಉಂಗುರಗಳು ಹಾಗೂ 20 ಗ್ರಾಮ್ ತೂಕದ ಹೊಸ ಚಿನ್ನದ ನೆಕ್ಲೆಸ್ ಒಟ್ಟು 93 ಗ್ರಾಮ್ ಚಿನ್ನಾಭರಣ ಮತ್ತು 10,700 ರೂಪಾಯಿ ನಗದನ್ನು ಕಳವು ಮಾಡಿದ್ದಾರೆ.
ಈ ಬಗ್ಗೆ ಮರಿಯಮ್ಮ ಇಂದು ಬೆಳಗ್ಗೆ 6 ಗಂಟೆಗೆ ಕಡಬ ಠಾಣೆಗೆ ಬಂದು ದೂರು ನೀಡಿದ್ದಾರೆ. ಕಳವಾದ ಚಿನ್ನದ ಒಟ್ಟು ಮೌಲ್ಯ 3.27 ಲಕ್ಷ ಆಗಬಹುದೆಂದು ಪೊಲೀಸರು ಅಂದಾಜಿಸಿದ್ದಾರೆ. ಮನೆಮಂದಿ ಸಂಜೆ ಉರೂಸಿಗೆ ತೆರಳಿರುವ ವಿಚಾರ ತಿಳಿದಿರುವ ವ್ಯಕ್ತಿಗಳೇ ಕಳವು ಕೃತ್ಯ ನಡೆಸಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ.
The court here has sentenced one of the two thieves who broke open the door latch of the residence of one Mahendra Kumar in Kemminje village, Puttur taluk between March 14 and 6, 2006 and stole jewellery worth Rs 43,000 weighing 50.930 gram from the suitcase in the house.
11-06-26 08:31 pm
HK News Staffer
ಹಳಸಿತೇ ಜಮೀರ್ - ಸಿದ್ದು ಸ್ನೇಹ ಸಂಬಂಧ? ನಿಮ್ಮ ಆಪ್ತ...
11-06-26 07:36 pm
ಮಗು ಕರುಣಿಸಿದ ಪ್ರಕರಣ; ಕೊನೆಗೂ ರಾಜಿ ಸಂಧಾನಕ್ಕಿಳಿದ...
11-06-26 01:53 pm
ಬಿಟ್ಕಾಯಿನ್ ಹಗರಣ ; ಹ್ಯಾರಿಸ್ ನಲಪಾಡ್ ಹೆಸ್ರು ಚಾರ...
10-06-26 10:40 pm
ನಿಮ್ಮಪ್ಪನಿಂದಲೇ ಆರ್ಎಸ್ಎಸ್ಗೆ ಏನು ಮಾಡೋಕೆ ಆಗಿಲ...
09-06-26 07:04 pm
10-06-26 06:42 pm
HK News Staffer
ಮಧ್ಯಪ್ರಾಚ್ಯದಲ್ಲಿ ಮತ್ತೆ ಉದ್ವಿಗ್ನ ಸ್ಥಿತಿ; ಕೂಡಲೇ...
08-06-26 09:11 pm
ದೇಲಂಪಾಡಿ ; ಭಾರೀ ಮಳೆಗೆ ಕಲ್ಲಿನ ತಡೆಗೋಡೆ ಕುಸಿದು ಬ...
06-06-26 10:42 pm
ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ; ಜಿರಳೆಗಳ ಮುಖವಾಡ ಧ...
06-06-26 05:48 pm
ತಮಿಳುನಾಡಿನಲ್ಲಿ ಅಣ್ಣಾಮಲೈ ಸಂಚಲನ ; ಬಿಜೆಪಿಗೆ ಗುಡ್...
05-06-26 02:34 pm
11-06-26 06:37 pm
HK News Staffer
26 ವರ್ಷಗಳ ಬಳಿಕ ತಾಯಿ ಮಡಿಲು ಸೇರಿದ ಮಗ ! ಧರ್ಮಸ್ಥಳ...
11-06-26 04:21 pm
ಕರಾವಳಿಯಲ್ಲಿ ಮುಂಗಾರು ಅಬ್ಬರ; ಮಂಗಳೂರಿನ ಬೀಚ್ಗಳಲ...
11-06-26 02:47 pm
ಮಂಗಳೂರು ನಗರದಲ್ಲಿ ಅಕ್ರಮ ಫ್ಲೆಕ್ಸ್ , ಬ್ಯಾನರ್ ತ...
10-06-26 10:03 pm
ಅಡಿಕೆ ಎಲೆ ಚುಕ್ಕಿ, ಹಳದಿ ಎಲೆ ರೋಗ ; ರೈತರ ಕಷ್ಟಕ್ಕ...
10-06-26 05:07 pm
11-06-26 08:44 pm
HK News Staffer
ಮಾಣಿ ; ಡಿವೈಡರ್ಗೆ ಡಿಕ್ಕಿ ಹೊಡೆದ ಕಾರು, ಗಾಡಿ ಪಲ್...
11-06-26 11:43 am
ಬ್ರಹ್ಮಾವರ; ತಾಯಿಯ ಮಡಿಲಲ್ಲೇ ವಿಧಿಯ ಅಟ್ಟಹಾಸ..! 40...
11-06-26 11:40 am
ಬೀಗ ಹಾಕಿದ ಮನೆಗಳೇ ಟಾರ್ಗೆಟ್; ತಮಿಳುನಾಡು, ಆಂಧ್ರಪ್...
10-06-26 01:48 pm
Udupi Fight, Temple Parking: ಗಾಡಿಗೆ ಸೈಡ್ ಕೊಡು...
10-06-26 12:09 pm