ಬ್ರೇಕಿಂಗ್ ನ್ಯೂಸ್
01-03-22 04:25 pm HK Desk news ಕ್ರೈಂ
ಕೋಲಾರ, ಮಾ.1: ಸಿಬಿಐ ಅಧಿಕಾರಿ ಸೋಗಿನಲ್ಲಿ ಮನೆ ಒಳಗೆ ಬಂದಿದ್ದ ತಂಡವೊಂದು ಉದ್ಯಮಿಯ ಮನೆಯನ್ನು ದರೋಡೆಗೈದ ಘಟನೆ ಕೋಲಾರ ನಗರದ ಸಿ.ಬೈರೇಗೌಡ ಬಡಾವಣೆಯಲ್ಲಿ ಭಾನುವಾರ ರಾತ್ರಿ ನಡೆದಿದೆ.
ಉದ್ಯಮಿ ರಮೇಶ್ ಎನ್ನುವರ ಮನೆಗೆ ಸಿ.ಬಿ.ಐ ಅಧಿಕಾರಿಗಳೆಂದು ಹೇಳಿ ಬಂದಿದ್ದ ದರೋಡೆಕೋರರು, ಸಿನಿಮೀಯ ರೀತಿಯಲ್ಲಿ ಲಕ್ಷಾಂತರ ರೂಪಾಯಿ ದೋಚಿದ್ದಾರೆ. ಬಡಾವಣೆಯ 2ನೇ ಕ್ರಾಸ್ ಮುಖ್ಯ ರಸ್ತೆಯಲ್ಲಿರುವ ಮೂರಂತಸ್ತಿನ ರಮೇಶ್ ಅವರ ಮನೆಗೆ, ರಾತ್ರಿ 8 ಗಂಟೆ ವೇಳೆಗೆ ನುಗ್ಗಿದ ಮೂವರಿದ್ದ ತಂಡ, ತಾವು ಸಿ.ಬಿ.ಐ ಅಧಿಕಾರಿಗಳು, ಪ್ರಕರಣ ಒಂದರಲ್ಲಿ ನಿಮ್ಮ ಸಹಿ ಬೇಕು, ಬಾಗಿಲು ತೆಗೆಯಿರಿ ಎಂದು ಹಿಂದಿಯಲ್ಲಿ ಕೇಳಿದ್ದಾರೆ. ಅನುಮಾನಗೊಂಡ ರಮೇಶ್ ಪತ್ನಿ ನಿಮ್ಮಲ್ಲಿ ಐಡಿ ಇದೆಯಾ ಎಂದು ಪ್ರಶ್ನೆ ಮಾಡಿದ್ದಾರೆ. ಆಗ ಮನೆಯ ಒಳಕ್ಕೆ ನುಗ್ಗಿದ ಮೂವರು, ರಮೇಶ್ ಹಾಗೂ ಪತ್ನಿ ಮತ್ತು ಪುತ್ರನನ್ನ ಕೊಠಡಿಯೊಳಗೆ ಕೂಡಿಹಾಕಿದ್ದಾರೆ.
ಆಬಳಿಕ ಮತ್ತೆ ಇಬ್ಬರು ಮನೆಯೊಳಗೆ ಆಗಮಿಸಿದ್ದು, ಮಾರಕಾಸ್ತ್ರಗಳನ್ನ ತೋರಿಸಿ ಮನೆಯಲ್ಲಿದ್ದ 25 ಲಕ್ಷ ರೂ. ನಗದು, ಒಂದು ಕೆಜಿಗೂ ಅಧಿಕ ಚಿನ್ನ, ಬೆಳ್ಳಿ ವಸ್ತುಗಳನ್ನ ಕದ್ದೊಯ್ದಿದ್ದಾರೆ. ದರೋಡೆ ನಂತರ ರಮೇಶ್, ಪತ್ನಿ ಹಾಗು ಮಗನನ್ನ ಕೊಠಡಿಯಲ್ಲಿ ಕೂಡಿಹಾಕಿ, ಬಾಯಿಗೆ ಪ್ಲಾಸ್ಟರ್ ಹಾಕಿ ಸ್ಥಳದಿಂದ ಪರಾರಿಯಾಗಿದ್ದಾರೆ.
ಸ್ವಲ್ಪ ಹೊತ್ತಿನಲ್ಲಿ ಕಟ್ಟಿದ ಹಗ್ಗವನ್ನು ಬಿಡಿಸಿಕೊಂಡು ಹೊರಗೆ ಬಂದ ಮನೆ ಮಾಲೀಕ ರಮೇಶ್, ಜೋರಾಗಿ ಕಿರುಚಾಡಿದ್ದು ಸ್ಥಳಕ್ಕೆ ನೆರೆಹೊರೆಯ ಜನರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಘಟನೆ ನಂತರ ಮನೆಗೆ ಅಳವಡಿಸಿದ್ದ ಸಿಸಿಟಿವಿ ದೃಶ್ಯ ರೆಕಾರ್ಡ್ ಆಗಿದ್ದ ಡಿ.ವಿ.ಆರ್ ಅನ್ನೂ ತೆಗೆದುಕೊಂಡು ಹೋಗಿದ್ದಾರೆ. ಉದ್ಯಮಿ ರಮೇಶ್ ಚೀಟಿ ವ್ಯವಹಾರ ಮಾಡ್ತಿದ್ದು, ಜೊತೆಗೆ ದೊಡ್ಡ ಮೊತ್ತದ ಪೈನಾನ್ಸ್ ವ್ಯವಹಾರ ಮಾಡುತ್ತಿದ್ದರು. ಹೀಗಾಗಿ ಮನೆಯಲ್ಲೇ ಲಕ್ಷಾಂತರ ನಗದು ಇರಿಸಿಕೊಂಡಿದ್ದರು. ಹೀಗಾಗಿ ಹಣದ ವ್ಯವಹಾರ ಅರಿತಿದ್ದವರೇ ಕೃತ್ಯ ಎಸಗಲಾಗಿದೆ.
ಕೋಲಾರ ನಗರ ಪೊಲೀಸರು ಕೂಡಲೇ ಸ್ಥಳಕ್ಕೆ ಭೇಟಿ ನೀಡಿದ್ದು, ಕೋಲಾರ ಎಸ್ಪಿ ದೇವರಾಜ್ ಭೇಟಿ ನೀಡಿ, ವಿಚಾರಣೆ ನಡೆಸಿದ್ದಾರೆ. ರಾತ್ರಿ 2 ಗಂಟೆವರೆಗೂ ಬಡಾವಣೆಯ ನಿವಾಸದ ಸುತ್ತಮುತ್ತಲ ಮನೆಗಳ ಸಿ.ಸಿ.ಟಿವಿ ಪರಿಶೀಲನೆ ನಡೆಸಿದ ಪೊಲೀಸರು, ಮೂವರು ವ್ಯಕ್ತಿಗಳು ಅನುಮಾನಾಸ್ಪದ ಓಡಾಡುವುದು ಹಾಗು ಘಟನೆ ನಡೆದಾಗ ತೆರಳಿದ ಒಂದು ಹುಂಡೈ ಕಾರಿನ ದೃಶ್ಯಗಳು ಸಿಸಿ ಟಿವಿಯಲ್ಲಿ ಸೆರೆಯಾಗಿದೆ.
ಆರೋಪಿಗಳ ಪತ್ತೆಗೆ ನಾಲ್ಕು ಸರ್ಕಲ್ ಇನ್ಸ್‌ಪೆಕ್ಟರ್ ನೇತೃತ್ವದಲ್ಲಿ ತಂಡಗಳನ್ನ ರಚಿಸಲಾಗಿದ್ದು ಆದಷ್ಟು ಬೇಗನೇ ಆರೋಪಿಗಳನ್ನ ಪತ್ತೆಹಚ್ಚಲಾಗುವುದು ಎಂದು ಎಸ್ಪಿ ದೇವರಾಜ್ ತಿಳಿಸಿದ್ದಾರೆ.
A CBI officer allegedly robbed a businessman's home in Kolar city on Sunday night.
26-08-25 02:04 pm
Bangalore Correspondent
SIT Issues Notice, Sujatha Bhat: ಸುಳ್ಳಜ್ಜಿ ಸು...
25-08-25 10:55 pm
K N Rajanna, Dk Shivakumar: ಅವ್ರು ಆರೆಸ್ಸೆಸ್ ಗ...
25-08-25 06:07 pm
DK Shivakumar, BK Hariprasad: ಕೆಪಿಸಿಸಿ ಅಧ್ಯಕ್...
25-08-25 03:02 pm
Satish Jarkiholi, Dharmasthala, SIT: ಧರ್ಮಸ್ಥಳ...
25-08-25 10:37 am
24-08-25 01:47 pm
HK News Desk
Actor Vijay, Thalapathy; ಟಿವಿಕೆ ಮುಖ್ಯಸ್ಥ, ನಟ...
23-08-25 04:58 pm
Mp Brijesh Chowta, Mangalore: ಆನ್ಲೈನ್ ಗೇಮಿಂಗ್...
22-08-25 10:00 pm
ಪತ್ನಿಯ ಪದವಿ ಪ್ರದಾನ ಸಮಾರಂಭಕ್ಕೆ ಬ್ರಿಟನ್ ತೆರಳಲು...
22-08-25 08:07 pm
Another Security, Parliament, Arrest: ಸಂಸತ್ತಿ...
22-08-25 02:00 pm
26-08-25 10:36 am
Mangalore Correspondent
Mangalore, Rushabh Rao: ವಿಯಟ್ನಾಂ ಫ್ಯಾಷನ್ ಶೋ ಸ...
25-08-25 10:59 pm
Mangalore, Esyasoft, AI, Bajpe: ಬಜ್ಪೆ ; ಎಸ್ಯಾ...
25-08-25 10:44 pm
Sameer MD, Latest News: ಬುರುಡೆ ರಹಸ್ಯ ; ಬೆಳ್ತಂ...
25-08-25 10:28 pm
Elevate Brand Mangalore 2025: 'ಎಲಿವೇಟ್ ಬ್ರ್ಯಾ...
25-08-25 05:24 pm
25-08-25 08:29 pm
HK News Desk
ಶಿಕ್ಷಣ ಸಚಿವ ಮಧು ಬಂಗಾರಪ್ಪ ಪಿಎ ಹೆಸರಲ್ಲಿ ವಸೂಲಿ ;...
25-08-25 07:42 pm
How Did Pastor John Shamine and Criminal Mada...
25-08-25 07:31 pm
Online Fraud, cyber, Mangalore : ರಸಗೊಬ್ಬರ ಕಂಪ...
25-08-25 04:39 pm
Dharmasthala Case, Pastor John Shamine and No...
25-08-25 02:29 am